ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಾರ್ಕ್ ಚಾಕೊಲೇಟ್ ಜತೆ ಈ 4 ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಡಬಲ್ ಲಾಭ

Diet and Health Tips: ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದನ್ನು ಕೇವಲ ಹಾಗೆಯೇ ತಿನ್ನುವ ಬದಲು ಕೆಲವು ನಿರ್ದಿಷ್ಟ ಆರೋಗ್ಯಕರ ಆಹಾರಗಳೊಂದಿಗೆ ಸೇರಿಸಿದರೆ ಅದರಿಂದ ದೇಹಕ್ಕೆ ಸಿಗುವ ಪೋಷಕಾಂಶಗಳ ಲಾಭ ದ್ವಿಗುಣವಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಡಾರ್ಕ್ ಚಾಕೊಲೇಟ್ ಜತೆಗೆ ಯಾವ 4 ಆಹಾರಗಳನ್ನು ಜೋಡಿಯಾಗಿ ಸೇವಿಸಬೇಕು ಇಲ್ಲಿದೆ ನೋಡಿ.

ಡಾರ್ಕ್ ಚಾಕೊಲೇಟ್ ತಿನ್ನುತ್ತೀರಾ? ಈ 4 ಕಾಂಬಿನೇಷನ್ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ -

Profile
Jyoti S Nov 19, 2026 7:00 AM

ಬೆಂಗಳೂರು: ಆರೋಗ್ಯ ಪ್ರಿಯರ ನೆಚ್ಚಿನ ತಿನಿಸಾಗಿರುವ ಡಾರ್ಕ್ ಚಾಕೊಲೇಟ್ (Dark Chocolate) ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಆದರೆ ಡಾರ್ಕ್ ಚಾಕೊಲೇಟ್ ಅನ್ನು ಸರಿಯಾದ ಆಹಾರಗಳೊಂದಿಗೆ ಕಾಂಬಿನೇಷನ್ ಮಾಡಿ ತಿಂದರೆ ಅದರ ನಿಜವಾದ ಆರೋಗ್ಯ ಪ್ರಯೋಜನಗಳನ್ನು ಸಂಪೂರ್ಣವಾಗಿ ಪಡೆಯಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

ಪೌಷ್ಟಿಕತಜ್ಞರ ಪ್ರಕಾರ, ಡಾರ್ಕ್ ಚಾಕೊಲೇಟ್‌ನಲ್ಲಿರುವ ಕಬ್ಬಿಣಾಂಶ ದೇಹಕ್ಕೆ ಸರಿಯಾಗಿ ಸೇರಬೇಕಾದರೆ ವಿಟಮಿನ್ ಸಿ ಇರುವ ಕಿತ್ತಳೆ ಅಥವಾ ಸ್ಟ್ರಾಬೆರಿಯಂತಹ ಸಿಟ್ರಸ್ ಹಣ್ಣುಗಳೊಂದಿಗೆ ಇದನ್ನು ಸೇವಿಸಬೇಕು. ಹಾಗೆಯೇ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದನ್ನು ತಡೆಯಲು ಮತ್ತು ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡಲು ಬಾದಾಮಿ ಅಥವಾ ವಾಲ್‌ನಟ್ಸ್‌ನಂತಹ ಡ್ರೈ ಫ್ರೂಟ್ಸ್ ಜತೆ ಸೇವಿಸುವುದು ಉತ್ತಮ. ಇದಲ್ಲದೆ, ಹೊಟ್ಟೆಯ ಆರೋಗ್ಯಕ್ಕೆ ಗ್ರೀಕ್ ಯೋಗರ್ಟ್ನೊಂದಿಗೆ ಹಾಗೂ ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ದಾಲ್ಚಿನ್ನಿ ಪುಡಿ ಜತೆ ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ಒಳ್ಳೆಯ ಆರೋಗ್ಯ ಲಾಭಗಳನ್ನು ಪಡೆಯಬಹುದು.

ಸಕ್ಕರೆ ಬಿಟ್ಟು ಬೆಲ್ಲ ತಿನ್ನುತ್ತಿದ್ದೀರಾ? ಇದರಿಂದ ನಿಜಕ್ಕೂ ತೂಕ ಇಳಿಯುತ್ತಾ?

ಡಾರ್ಕ್ ಚಾಕೊಲೇಟ್ ಜೊತೆ ಸೇರಿಸಬಹುದಾದ ಆಹಾರಗಳು

ಬ್ಲೂಬೆರ್ರಿ ಹಣ್ಣುಗಳು: ಡಾರ್ಕ್ ಚಾಕೊಲೇಟ್ ಜತೆ ಬ್ಲೂಬೆರ್ರಿ ಹಣ್ಣುಗಳನ್ನು ಸೇವಿಸುವುದು ದೇಹದ ಉರಿಯೂತವನ್ನು ಕಡಿಮೆ ಮಾಡಲು ಬಹಳ ಒಳ್ಳೆಯದು. ಬ್ಲೂಬೆರ್ರಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಚಾಕೊಲೇಟ್‌ನಲ್ಲಿ ಫ್ಲೇವನಾಯ್ಡ್‌ಗಳು ಸಮೃದ್ಧವಾಗಿದ್ದು, ಇದು ಮೆದುಳಿನ ಆರೋಗ್ಯವನ್ನು ವೃದ್ಧಿಸಲು ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

ಬ್ಲ್ಯಾಕ್ ಕಾಫಿ: ಸಕ್ಕರೆ ಅಥವಾ ಬ್ಲಾಕ್‌ ಕಾಫಿಯೊಂದಿಗೆ ಡಾರ್ಕ್ ಚಾಕೊಲೇಟ್ ತಿನ್ನುವುದು ರುಚಿಯ ಜತೆಗೆ ಉತ್ತಮ ಆರೋಗ್ಯ ಪ್ರಯೋಜನ ನೀಡುತ್ತದೆ. ಬ್ಲ್ಯಾಕ್ ಕಾಫಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕರುಳಿನ ಆರೋಗ್ಯವನ್ನು ಕಾಪಾಡಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಅತ್ಯಂತ ಸಹಕಾರಿಯಾಗಿದೆ.

ಬಾದಾಮಿ ಅಥವಾ ಪಿಸ್ತಾ: ರಾತ್ರಿ ಮಲಗುವ ಮುನ್ನ ಅಥವಾ ಸಂಜೆಯ ವೇಳೆಗೆ ಡಾರ್ಕ್ ಚಾಕೊಲೇಟ್ ಜತೆ ಕೆಲವೇ ಕೆಲವು ಬಾದಾಮಿ ಅಥವಾ ಪಿಸ್ತಾ ಬೀಜಗಳನ್ನು ಸೇರಿಸಿ ತಿನ್ನಬಹುದು. ಇವುಗಳಲ್ಲಿ ಮೆಗ್ನೀಸಿಯಮ್ ಅಂಶವಿದ್ದು, ನರಗಳ ವಿಶ್ರಾಂತಿಗೆ ಹಾಗೂ ನೆಮ್ಮದಿಯ ನಿದ್ರೆ ಬರುವುದಕ್ಕೆ ಇದು ಅತ್ಯಂತ ಉತ್ತಮವಾದ ಆಹಾರ ಜೋಡಿಯಾಗಿದೆ.

ಚೀಸ್: ಕೇಳಲು ಸ್ವಲ್ಪ ವಿಚಿತ್ರವೆನಿಸಿದರೂ, ಡಾರ್ಕ್ ಚಾಕೊಲೇಟ್ ಜತೆ ಚೀಸ್ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಚೀಸ್‌ನಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಸಿಕ್ಕರೆ, ಡಾರ್ಕ್ ಚಾಕೊಲೇಟ್ ಆ್ಯಂಟಿಆಕ್ಸಿಡೆಂಟ್ ಹಾಗೂ ನಾರಿನಾಂಶವನ್ನು ಒದಗಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಚ್ಚುಕಟ್ಟಾಗಿ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.