ಅಡ್ವಾನ್ಸ್ಡ್ ಶೋಲ್ಡರ್ ರಿಪ್ಲೇಸ್‌ಮೆಂಟ್ ಚಿಕಿತ್ಸೆಯ ನಂತರ ಸಮಸ್ಯೆಗೆ ಪರಿಹಾರ ಕಂಡುಕೊಂಡ 78 ವರ್ಷ ವಯಸ್ಸಿನ ಮಹಿಳೆ
ರೋಗಿಯು ಕಳೆದ ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಎಡಭಾಗದ ಭುಜದಲ್ಲಿ ತೀವ್ರ ನೋವು ಅನುಭವಿಸುತ್ತಿದ್ದರು, ಅವರ ಭುಜವು ಗಟ್ಟಿಯಾಗಿ ಹಿಡಿದುಕೊಂಡಂತೆ ಆಗಿತ್ತು. ಇದರಿಂದಾಗಿ ಅವರ ನಿತ್ಯದ ಕೆಲಸಗಳಿಗೆ ತೊಂದರೆ ಆಗುತ್ತಿತ್ತು. ನಗರದಲ್ಲಿ ಹಲವು ಆಸ್ಪತ್ರೆಗಳಲ್ಲಿ ಇದನ್ನು ತೋರಿಸಿ ದರೂ, ನೋವನ್ನು ಒಂದುಹಂತದವರೆಗೆ ನಿರ್ವಹಣೆ ಮಾಡುವ ಹಾಗೂ ಕೆಲವು ಔಷಧಗಳನ್ನು ತೆಗೆದುಕೊಳ್ಳುವ ಸಲಹೆಯನ್ನು ಅವರಿಗೆ ನೀಡಲಾಗಿತ್ತು
-
ಬೆಂಗಳೂರು: ವಿಶೇಷ ಪರಿಣತಿಯ ಅಸ್ಥಿಚಿಕಿತ್ಸೆಯ ಮಹತ್ವವನ್ನು ಹೇಳುವ ಪ್ರಕರಣವೊಂದರಲ್ಲಿ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು, ತೀವ್ರ ಪ್ರಮಾಣದ ಭುಜದ ನೋವಿನಿಂದ ಬಳಲುತ್ತಿದ್ದ 78 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಈ ಮಹಿಳೆಗೆ ಭುಜವನ್ನು ಸರಿಯಾಗಿ ಅತ್ತಿತ್ತ ಚಲಿಸಲು ಕೂಡ ಆಗುತ್ತಿರಲಿಲ್ಲ. ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ರಿವರ್ಸ್ ಶೋಲ್ಡರ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ.
ಮೂಳೆಯ ಕೀಲುಗಳನ್ನು ಬದಲಿಸುವ ಚಿಕಿತ್ಸೆಯಲ್ಲಿ ಹಾಗೂ ಶೋಲ್ಡರ್ ರಿಪ್ಲೇಸ್‌ಮೆಂಟ್ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಪಡೆದಿರುವ ಡಾ. ಮಂಜುನಾಥ ಕೋಡಿಹಳ್ಳಿ ಅವರು ಇಡೀ ಪ್ರಕ್ರಿಯೆಯನ್ನು ನಡೆಸಿದರು. ಇವರು ಅಸ್ಥಿಚಿಕಿತ್ಸೆ ವಿಭಾಗದಲ್ಲಿ ಹಿರಿಯ ಕನ್ಸಲ್ಟೆಂಟ್ ಆಗಿದ್ದಾರೆ.
ರೋಗಿಯು ಕಳೆದ ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಎಡಭಾಗದ ಭುಜದಲ್ಲಿ ತೀವ್ರ ನೋವು ಅನುಭವಿಸುತ್ತಿದ್ದರು, ಅವರ ಭುಜವು ಗಟ್ಟಿಯಾಗಿ ಹಿಡಿದುಕೊಂಡಂತೆ ಆಗಿತ್ತು. ಇದರಿಂದಾಗಿ ಅವರ ನಿತ್ಯದ ಕೆಲಸಗಳಿಗೆ ತೊಂದರೆ ಆಗುತ್ತಿತ್ತು. ನಗರದಲ್ಲಿ ಹಲವು ಆಸ್ಪತ್ರೆಗಳಲ್ಲಿ ಇದನ್ನು ತೋರಿಸಿದರೂ, ನೋವನ್ನು ಒಂದುಹಂತದವರೆಗೆ ನಿರ್ವಹಣೆ ಮಾಡುವ ಹಾಗೂ ಕೆಲವು ಔಷಧಗಳನ್ನು ತೆಗೆದುಕೊಳ್ಳುವ ಸಲಹೆಯನ್ನು ಅವರಿಗೆ ನೀಡಲಾಗಿತ್ತು.
ಇದನ್ನೂ ಓದಿ: Health Tips: ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!
ಇದರಿಂದಾಗಿ ಸಮಸ್ಯೆಯ ಪತ್ತೆ ಹಾಗೂ ಅದರ ಚಿಕಿತ್ಸೆ ಸಾಧ್ಯವಾಗಿರಲಿಲ್ಲ. ಆದರೆ ಅವರನ್ನು ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಿದ ನಂತರದ̧ಲ್ಲಿ ಅವರನ್ನು ಕಾಡುತ್ತಿರುವುದು ಆಸ್ಟಿಯೊಆರ್ಥೈಟಿಸ್ ಸಮಸ್ಯೆ ಎಂಬುದು ಖಚಿತವಾಯಿತು. ಈ ಸಮಸ್ಯೆಯನ್ನು ಎದುರಿಸುತ್ತಿರುವವರ ಕೀಲುಗಳ ಮೃದ್ವಸ್ಥಿಯು ಕಾಲಕ್ರಮೇಣ ಹರಿಯುತ್ತದೆ. ಇದರಿಂದಾಗಿ ನೋವು ಉಂಟಾಗುತ್ತದೆ, ಕೀಲುಗಳಲ್ಲಿ ಸೆಟೆದುಕೊಂಡಂತಹ ಅನುಭವ ಆಗುತ್ತದೆ, ಇದು ಹಿರಿಯ ನಾಗರಿಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ.
ಭುಜವು ಮೊದಲಿನಂತೆಯೇ ಕೆಲಸ ಮಾಡಬೇಕು, ನೋವು ಕಡಿಮೆ ಆಗಬೇಕು ಎಂಬ ಉದ್ದೇಶದಿಂದ ರೋಗಿಗೆ ರಿವರ್ಸ್ ಶೋಲ್ಡರ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಚಿಕಿತ್ಸೆಯಲ್ಲಿ, ಹಾನಿಗೆ ಒಳಗಾಗಿರುವ ಭಾಗಗಳನ್ನು ಬದಲಿಸಲಾಗುತ್ತದೆ. ಈ ಬಗೆಯ ಚಿಕಿತ್ಸೆ ಬಹಳ ಅಪರೂಪದ್ದು. ಶೋಲ್ಡರ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಗಳ ಪೈಕಿ 2-3% ಮಾತ್ರ ಈ ಬಗೆಯಲ್ಲಿ ನಡೆಯುತ್ತವೆ. ಈ ಬಗೆಯ ಶಸ್ತ್ರಚಿಕಿತ್ಸೆಯು ಹಿರಿಯ ನಾಗರಿಕರಲ್ಲಿ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಹಾಗೂ ರೊಟೇಟರ್ ಕಫ್‌ನ ಸ್ನಾಯುಗಳಲ್ಲಿ ಆಗಿರುವ ಹಾನಿಯು ಸರಿಪಡಿಸಲು ಆಗದಂತಹ ಮಟ್ಟದ್ದಾಗಿದ್ದರೆ ಈ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಈ ಬಗೆಯ ಶಸ್ತ್ರಚಿಕಿತ್ಸೆಯಲ್ಲಿ ಇತರ ಸ್ನಾಯುಗಳು ಭುಜದ ಕೆಲಸಗಳಿಗೆ ನೆರವಾಗುತ್ತವೆ.
ಈ ಶಸ್ತ್ರಚಿಕಿತ್ಸೆಯು ಸರಿಸುಮಾರು ಒಂದು ತಾಸಿನಲ್ಲಿ ಪೂರ್ಣಗೊಂಡಿತು, ಸಾಮಾನ್ಯವಾದ ಅರಿವಳಿಕೆ ಮದ್ದನ್ನು ನೀಡಲಾಗಿತ್ತು, ನರ್ವ್ ಬ್ಲಾಕ್ ಮಾರ್ಗ ಅನುಸರಿಸಲಾಗಿತ್ತು. ಯಾವುದೇ ತೊಂದರೆಗಳು ಎದುರಾಗದೆ ಇದನ್ನು ಪೂರ್ಣಗೊಳಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಬಹಳ ಸುಲಲಿತವಾಗಿ ಚೇತರಿಸಿಕೊಂಡರು, ಅವರನ್ನು ಮೂರು ದಿನಗಳಲ್ಲಿ ಆಸ್ಪತ್ರೆ ಯಿಂದ ಬಿಡುಗಡೆ ಮಾಡಲಾಯಿತು. ರೋಗಿಯ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು, ಅವರು ಮೂರು ವಾರಗಳಲ್ಲಿ ಗಣನೀಯ ಪ್ರಮಾಣದ ಸುಧಾರಣೆ ಕಂಡುಕೊಂಡರು. ಆಗ ಅವರ ಭುಜದ ಚಲನೆಯು ಬಹಳಷ್ಟು ಸುಧಾರಣೆ ಕಂಡಿತು, ನೋವು ಕಡಿಮೆ ಆಯಿತು.
ಶಸ್ತ್ರಚಿಕಿತ್ಸೆಯ ಬಗ್ಗೆ ವಿವರ ಒದಗಿಸಿದ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಅಸ್ಥಿಚಿಕಿತ್ಸಾ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ಮಂಜುನಾಥ ಕೋಡಿಹಳ್ಳಿ ಅವರು “ಹಿಂದೆ ಯಾವುದೇ ಅಪಘಾತ, ಏಟುಗಳು ಆಗಿರದೆ ಇದ್ದರೂ ರೊಟೇಟರ್ ಕಫ್‌ಗೆ ಹಾನಿ ಆಗಬಹುದು. ವಯಸ್ಸಿನ ಕಾರಣದಿಂದಾಗಿಯೂ ಹೀಗೆ ಆಗಬಹುದು. ಇದರಿಂದಾಗಿ ಹಲವು ಸಂದರ್ಭಗಳಲ್ಲಿ ಸರಿಯಾಗಿ ಗಮನವನ್ನೇ ನೀಡಿರುವುದಿಲ್ಲ. ರೋಗಿಗಳು ಭುಜದ ಚಲನೆ ಕಡಿಮೆ ಆದರೂ, ನೋವು ಆಗುತ್ತಿದ್ದರೂ ಅದಕ್ಕೆ ಮನಸ್ಸನ್ನು ಒಗ್ಗಿಸಿಕೊಂಡಿರುತ್ತಾರೆ. ಅಲ್ಲದೆ, ವಿಶೇಷ ತಜ್ಞರ ಬಳಿ ತೋರಿಸದೆ ಇದ್ದರೆ, ಸೂಕ್ತವಾದ ಚಿಕಿತ್ಸೆಯು ಇನ್ನಷ್ಟು ವಿಳಂಬ ಆಗುತ್ತದೆ. ಇದರ ಬಗ್ಗೆ ಅರಿವು ಹೆಚ್ಚಬೇಕಿರುವು ದರ ಹಾಗೂ ಸರಿಯಾದ ಸಮಯಕ್ಕೆ ಸಮಸ್ಯೆಯನ್ನು ಗುರುತಿಸಬೇಕಿರುವುದರ, ವಿಶೇಷ ಪರಿಣತರ ಬಳಿ ಆರಂಭದಲ್ಲಿಯೇ ತೋರಿಸಬೇಕಿರುವುದರ ಮಹತ್ವವನ್ನು ಈ ಪ್ರಕರಣವು ಹೇಳುತ್ತಿದೆ. ಹೀಗೆ ಮಾಡುವುದರಿಂದ ಸಮಸ್ಯೆಯು ಉಲ್ಬಣ ಆಗುವುದನ್ನು ತಡೆಯಬಹುದು, ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳ ಅಗತ್ಯವನ್ನು ಕಡಿಮೆ ಮಾಡಬಹುದು, ದೀರ್ಘಾವಧಿಯಲ್ಲಿ ರೋಗಿಗಳು ಹೆಚ್ಚು ಆರಾಮ ಕಾಣುವಂತೆ ಮಾಡಬಹುದು” ಎಂದು ಹೇಳಿದ್ದಾರೆ.
ತನ್ನ ಅನುಭವ ಹಂಚಿಕೊಂಡಿರುವ ರೋಗಿಯು “ನಾನು ವರ್ಷಗಳಿಂದ ನೋವಿನ ಜೊತೆ ಜೀವನ ಸಾಗಿಸುತ್ತಿದ್ದೆ. ಭುಜದ ಚಲನೆಯು ಬಹಳ ಕಷ್ಟವಾಗಿತ್ತು. ಫೋರ್ಟಿಸ್ ಆಸ್ಪತ್ರೆಯಲ್ಲಿನ ವೈದ್ಯರು ಎಲ್ಲವನ್ನೂ ಬಹಳ ತಾಳ್ಮೆಯಿಂದ ವಿವರಿಸಿದರು. ನನಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅಗತ್ಯ ಧೈರ್ಯ ತುಂಬಿದರು. ಶಸ್ತ್ರಚಿಕಿತ್ಸೆಯ ನಂತರ ನನಗೆ ವಾರಗಳಲ್ಲಿಯೇ ವ್ಯತ್ಯಾಸ ಕಾಣುತ್ತಿದೆ. ನನಗೆ ಈಗ ನನ್ನ ಭುಜವನ್ನು ಹೆಚ್ಚು ಚೆನ್ನಾಗಿ ಚಲಿಸಲು ಸಾಧ್ಯವಾಗುತ್ತಿದೆ, ನನ್ನ ನಿತ್ಯದ ಕೆಲಸಗಳನ್ನು ನಿಭಾಯಿಸಲು ಆಗುತ್ತಿದೆ” ಎಂದು ಹೇಳಿದ್ದಾರೆ.
ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ರತೀಫ್ ನಾಯ್ಕ್ ಅವರು “ಹೆಚ್ಚು ಆಧುನಿಕವಾದ, ರೋಗಿಗಳನ್ನು ಗಮನದಲ್ಲಿಇರಿಸಿಕೊಂಡ ಅಸ್ಥಿಚಿಕಿತ್ಸೆಯನ್ನು ಒದಗಿಸುವ ವಿಚಾರದಲ್ಲಿ ನಾವು ಹೊಂದಿರುವ ಬದ್ಧತೆಯನ್ನು ಈ ಪ್ರಕರಣವು ಹೇಳುತ್ತಿದೆ. ಸರಿಯಾದ ರೀತಿಯಲ್ಲಿ ರೋಗಪತ್ತೆ, ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಮತ್ತು ನಂತರದ ಆರೈಕೆ ಮೂಲಕ ಹಿರಿಯ ನಾಗರಿಕರಲ್ಲಿನ ಬಹಳ ಸಂಕೀರ್ಣವಾದ ಸಮಸ್ಯೆಗಳನ್ನು ಚೆನ್ನಾಗಿ ನಿಭಾಯಿಸಬಹುದು, ಅವರ ಜೀವನದ ಮಟ್ಟವನ್ನು ಸುಧಾರಿಸಬಹುದು” ಎಂದು ಹೇಳಿದ್ದಾರೆ.