ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೈಕ್ ಟ್ಯಾಕ್ಸಿ ಪ್ರಯಾಣಿಕರೇ ಗಮನಿಸಿ: ಶೇರ್ ಹೆಲ್ಮೆಟ್ ಬಳಸುವ ಮುನ್ನ ಈ ವಿಚಾರ ನಿಮಗೆ ತಿಳಿದಿರಲೇ ಬೇಕು

Skin and Haircare: ಬೈಕ್‌ ಟ್ಯಾಕ್ಸಿ ಪ್ರಯಾಣದ ವೇಳೆ ನೀಡುವ ಒಂದೇ ಹೆಲ್ಮೆಟ್ ಅನ್ನು ಅನೇಕರು ಹಂಚಿಕೊಂಡು ಬಳಸುವುದರಿಂದ ಚರ್ಮದ ಸೋಂಕು, ತಲೆಹೊಟ್ಟು, ಮೊಡವೆ ಮತ್ತು ಕೂದಲು ಉದುರುವಿಕೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯವಿದ್ದು, ಪ್ರಯಾಣಿಕರು ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ ಎಂದು ಚರ್ಮರೋಗ ತಜ್ಞರು ಸಲಹೆ ನೀಡುತ್ತಾರೆ.

ಬೈಕ್ ಟ್ಯಾಕ್ಸಿ ಹೆಲ್ಮೆಟ್ ಹಂಚಿಕೊಳ್ಳುವುದು ಎಷ್ಟು ಡೇಂಜರ್‌ ಗೊತ್ತೆ?

ಸಾಂದರ್ಭಿಕ ಚಿತ್ರ -

Profile
Jyoti S Nov 16, 2026 7:00 AM

ಬೆಂಗಳೂರು: ನಗರದ ಟ್ರಾಫಿಕ್ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಮತ್ತು ಬೇಗ ಕೆಲಸದ ಸ್ಥಳಗಳಿಗೆ ತಲುಪಲು ಬೈಕ್‌ ಮತ್ತು ಟ್ಯಾಕ್ಸಿಗಳ (Bike Taxi) ಬಳಕೆ ಇಂದು ಅನಿವಾರ್ಯವಾಗಿದೆ. ಆದರೆ ಈ ಪ್ರಯಾಣದ ಸಮಯದಲ್ಲಿ ಸವಾರರು ಪ್ರಯಾಣಿಕರಿಗೆ ನೀಡುವ ಹೆಲ್ಮೆಟ್ (Sharing Helmets) ಅನ್ನು ದಿನಕ್ಕೆ ಹತ್ತಾರು ಮಂದಿ ಬಳಸುತ್ತಾರೆ. ನಿಯಮಿತವಾಗಿ ಸ್ವಚ್ಛಗೊಳಿಸದ ಇಂತಹ ಹೆಲ್ಮೆಟ್‌ಗಳನ್ನು ಧರಿಸುವುದರಿಂದ ತಲೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಎಂದು ಚರ್ಮರೋಗ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಪ್ರತಿದಿನ ಟ್ಯಾಕ್ಸಿ ಮತ್ತು ಬೈಕ್‌ ಸೇವೆಗಳಿಂದ ಹತ್ತಾರು ಜನರು ಒಂದೇ ಹೆಲ್ಮೆಟ್‌ ಬಳಸುತ್ತಾರೆ. ಇದೇ ಹೆಲ್ಮೆಟ್‌ನ್ನು ಚಾಲಕ ಮತ್ತು ನಿಮಗೆ ನೀಡಿದಾಗ ಒಬ್ಬರ ತಲೆಯಲ್ಲಿರುವ ಬೆವರು, ಎಣ್ಣೆ ಅಂಶ ಮತ್ತು ಬ್ಯಾಕ್ಟೀರಿಯಾಗಳು ಹೆಲ್ಮೆಟ್‌ನ ಒಳಪದರದಲ್ಲಿ ಸಂಗ್ರಹವಾಗುತ್ತವೆ. ಇದು ಇತರ ಪ್ರಯಾಣಿಕರಿಗೆ ಸುಲಭವಾಗಿ ಸೋಂಕು ಹರಡಲು ಕಾರಣವಾಗುತ್ತದೆ. ಹೀಗಾಗಿ ಅಂತಹ ಹೆಲ್ಮೆಟ್‌ ಬಳಸುವುದು ಚರ್ಮದ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ವ್ಯಾಯಾಮ ಮಾಡುವುದು ಹೃದಯಾಘಾತಕ್ಕೆ ದಾರಿ ಮಾಡಿಕೊಟ್ಟಂತೆ! ವೈದ್ಯರ ಎಚ್ಚರಿಕೆ ಏನು?

ಶೇರ್ ಹೆಲ್ಮೆಟ್ ಬಳಕೆಯಿಂದ ಉಂಟಾಗುವ ಸೋಂಕುಗಳು

ಬೆವರಿನಿಂದ ತೇವಗೊಂಡ ಹೆಲ್ಮೆಟ್ ಒಳಭಾಗದಲ್ಲಿ ಫಂಗಸ್ ಬೆಳೆಯುತ್ತದೆ. ಇದರಿಂದ ನೆತ್ತಿಯ ಮೇಲೆ ತುರಿಕೆ, ಕೆಂಪು ದದ್ದುಗಳು (Rashes) ಮತ್ತು ಹುಳುಕಡ್ಡಿ (Ringworm) ಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇತರರ ತಲೆಯಲ್ಲಿದ್ದ ತಲೆಹೊಟ್ಟು ಮತ್ತು ಬ್ಯಾಕ್ಟೀರಿಯಾ ಸೋಂಕು ಹೆಲ್ಮೆಟ್ ಮೂಲಕ ಹರಡಿ, ನೆತ್ತಿಯ ಆರೋಗ್ಯ ಹಾಳಾಗುವ ಜತೆಗೆ ತೀವ್ರ ಕೂದಲು ಉದುರುವಿಕೆಗೆ ದಾರಿ ಮಾಡಿಕೊಡುತ್ತದೆ. ಹೆಲ್ಮೆಟ್‌ನ ಪಟ್ಟಿ ಮತ್ತು ಒಳಭಾಗದಲ್ಲಿರುವ ಕೊಳೆ ಹಾಗೂ ಧೂಳು ಹಣೆ ಮತ್ತು ಕೆನ್ನೆಯ ಭಾಗಕ್ಕೆ ತಾಗಿ ಮೊಡವೆ ಹಾಗೂ ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ.

ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

ಬೈಕ್ ಟ್ಯಾಕ್ಸಿಗಳಲ್ಲಿ ನಿಯಮಿತವಾಗಿ ಪ್ರಯಾಣಿಸುವವರು ತಮ್ಮದೇ ಆದ ಸ್ವಂತ ಹೆಲ್ಮೆಟ್ ಹೊಂದಿರುವುದು ಅತ್ಯಂತ ಸುರಕ್ಷಿತ. ಒಂದು ವೇಳೆ ಸವಾರರು ನೀಡುವ ಹೆಲ್ಮೆಟ್ ಬಳಸುವುದು ಅನಿವಾರ್ಯವಾದರೆ, ತಲೆಗೆ ತೆಳುವಾದ ಹತ್ತಿಯ ಬಟ್ಟೆ, ಕರವಸ್ತ್ರ ಅಥವಾ ಡಿಸ್ಪೋಸಬಲ್ ಹೆಡ್ ಕ್ಯಾಪ್ ಧರಿಸಿದ ನಂತರವೇ ಹೆಲ್ಮೆಟ್ ಹಾಕಿಕೊಳ್ಳುವುದು ಉತ್ತಮ. ಜತೆಗೆ ಹೆಲ್ಮೆಟ್ ಒಳಭಾಗವನ್ನು ಸ್ಯಾನಿಟೈಸರ್ ವೈಪ್ಸ್‌ನಿಂದ ಒರೆಸಿ ಬಳಸುವ ಮೂಲಕ ಸೋಂಕಿನ ಅಪಾಯವನ್ನು ತಗ್ಗಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.