ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಮ್‌ಗೆ ಹೋಗದೆ ಬ್ಲ್ಯಾಕ್ ಟೀ ಕುಡಿದು ತೂಕ ಇಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Black Tea: ಕೆಲ ಜನರು ತೂಕ ಇಳಿಸಲು ಗ್ರೀನ್‌ ಟೀ ಕುಡಿದರೆ, ಇನ್ನು ಕೆಲವರು ಬ್ಲ್ಯಾಕ್ ಟೀ ಸೇವಿಸುತ್ತಾರೆ. ಸಕ್ಕರೆ ಇರುವ ಸಿಹಿ ಪಾನೀಯಗಳ ಬದಲಾಗಿ ದೇಹದ ತೂಕ ಇಳಿಸಲು, ಫಿಟ್‌ನೆಸ್‌ ಆಗಿ ಕಾಣಲು ಗ್ರೀನ್‌ ಟೀ ಮತ್ತು ಬ್ಲ್ಯಾಕ್ ಟೀಗಳನ್ನು ಆಯ್ಕೆ ಮಾಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇವು ಎರಡೂ ಮುಖ್ಯ. ಹೀಗಿದ್ದರೂ ಆರೋಗ್ಯದ ವಿಚಾರ ಅಂತ ಬಂದಾಗ ಇವೆರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿಯಬೇಕು.

ಪ್ರತಿದಿನ ಬ್ಲ್ಯಾಕ್ ಟೀ ಕುಡಿದರೆ ನಿಜಕ್ಕೂ ತೂಕ ಇಳಿಯುತ್ತಾ?

ಸಾಂದರ್ಭಿಕ ಚಿತ್ರ -

Profile
Jyoti S Nov 14, 2026 7:00 AM

ಬೆಂಗಳೂರು: ಚಹಾವು ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದು. ಇದು ದಿನವಿಡೀ ನಿಮ್ಮನ್ನು ಚೈತನ್ಯದಿಂದ ಇರಿಸಲು ಸಹಾಯ ಮಾಡುತ್ತದೆ. ಇದೇ ಕಾರಣಕ್ಕೆ ಅನೇಕರ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿದೆ. ಗ್ರೀನ್ ಟೀ (Green Tea) ಅಥವಾ ಬ್ಲ್ಯಾಕ್ ಟೀ (Black Tea) ಎರಡೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಹೀಗಿದ್ದರೂ ಆರೋಗ್ಯದ ವಿಚಾರ ಬಂದರೆ ಈ ಎರಡರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಬೇಕು. ಈ ಎರಡೂ ಚಹಾಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ಎರಡರಲ್ಲೂ ಪಾಲಿಫಿನಾಲ್‌ಗಳು ಎಂಬ ನೈಸರ್ಗಿಕ ಸಂಯುಕ್ತಗಳಿವೆ. ಇವುಗಳು ದೇಹವನ್ನು ಫ್ರೀ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಈ ಫ್ರೀ ರಾಡಿಕಲ್‌ಗಳು ಜೀವಕೋಶಗಳನ್ನು ಹಾನಿಗೊಳಿಸುತ್ತವೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ.

ನಿಯಮಿತವಾಗಿ ಬ್ಲ್ಯಾಕ್ ಟೀ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಇದರ ಪ್ರಯೋಜನವನ್ನು ವಿವರವಾಗಿ ನೋಡೋಣ.

ಬಾಳೆ ಹಣ್ಣು vs ಕಾಯಿ: ನಮ್ಮ ಆರೋಗ್ಯಕ್ಕೆ ಯಾವುದು ಪೂರಕ?

ದೇಹದ ತೂಕ ಇಳಿಸಲು ಬ್ಲ್ಯಾಕ್ ಹೇಗೆ ಟೀ ಪ್ರಯೋಜನಕಾರಿ?

  • ಅತಿ ಕಡಿಮೆ ಕ್ಯಾಲೊರಿ: ಹಾಲು ಮತ್ತು ಸಕ್ಕರೆ ಇಲ್ಲದ ಒಂದು ಕಪ್ ಬ್ಲ್ಯಾಕ್ ಟೀಯಲ್ಲಿ ಕೇವಲ 2 ಕ್ಯಾಲೊರಿಗಳಿರುತ್ತವೆ. ಹಾಲಿನ ಚಹಾ ಅಥವಾ ಸಕ್ಕರೆ ಬೆರೆಸಿದ ಪಾನೀಯಗಳ ಬದಲು ಬ್ಲ್ಯಾಕ್ ಟೀ ಕುಡಿಯುವುದರಿಂದ ದಿನದ ಕ್ಯಾಲೊರಿ ಸೇವನೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
  • ಮೆಟಾಬಾಲಿಸಂ ಹೆಚ್ಚಳ: ಬ್ಲ್ಯಾಕ್ ಟೀಯಲ್ಲಿರುವ ಕೆಫೀನ್ ಮತ್ತು ಪಾಲಿಫಿನಾಲ್‌ ಅಂಶಗಳು ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಇದರಿಂದ ದೇಹವು ವೇಗವಾಗಿ ಕ್ಯಾಲೊರಿ ಮತ್ತು ಕೊಬ್ಬನ್ನು ಕರಗಿಸುತ್ತದೆ.
  • ಕರುಳಿನ ಆರೋಗ್ಯಕ್ಕೆ ಪೂರಕ: ಬ್ಲ್ಯಾಕ್ ಟೀಯಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಉತ್ತಮ ಜೀರ್ಣಕ್ರಿಯೆಯು ತೂಕ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಕೊಬ್ಬಿನ ಹೀರಿಕೊಳ್ಳುವಿಕೆಗೆ ತಡೆ: ಬ್ಲ್ಯಾಕ್ ಟೀಯಲ್ಲಿರುವ ಥಿಯಾಫ್ಲಾವಿನ್ಸ್ ಎಂಬ ಅಂಶವು ಕರುಳಿನಲ್ಲಿ ಕೊಬ್ಬು ಮತ್ತು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

ತೂಕ ಇಳಿಸಿಕೊಳ್ಳಲು ಬ್ಲ್ಯಾಕ್ ಟೀ ಕುಡಿಯುವ ಸರಳ ವಿಧಾನ

ಬ್ಲ್ಯಾಕ್ ಟೀಗೆ ಸಕ್ಕರೆ ಅಥವಾ ಬೆಲ್ಲವನ್ನು ಉಪಯೋಗಿಸದಿರುವುದು ಒಳ್ಳೆಯದು. ಕಾರಣ ಸಿಹಿ ಪದಾರ್ಥಗಳನ್ನು ಸೇರಿಸಿದರೆ ಅದರ ಕ್ಯಾಲೊರಿ ಹೆಚ್ಚಾಗಿ ತೂಕ ಇಳಿಸುವ ಉದ್ದೇಶ ವಿಫಲವಾಗುತ್ತದೆ. ರುಚಿಗಾಗಿ ಬೇಕಿದ್ದರೆ ಸ್ವಲ್ಪ ನಿಂಬೆರಸ ಅಥವಾ ಶುಂಠಿ ಸೇರಿಸಬಹುದು. ಬೆಳಗ್ಗೆ ತಿಂಡಿಯ ನಂತರ ಅಥವಾ ವ್ಯಾಯಾಮಕ್ಕೆ 30 ನಿಮಿಷ ಮೊದಲು ಕುಡಿಯುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೆಲವರಿಗೆ ಅಸಿಡಿಟಿ ಸಮಸ್ಯೆ ಉಂಟಾಗಬಹುದು. ದಿನಕ್ಕೆ 2ರಿಂದ 3 ಕಪ್‌ಗಳಷ್ಟು ಮಾತ್ರ ಕುಡಿಯಿರಿ. ಅತಿಯಾದ ಕೆಫೀನ್ ಸೇವನೆಯಿಂದ ನಿದ್ರಾಹೀನತೆ, ಆತಂಕ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಲಗುವ 4-5 ಗಂಟೆಗಳ ಮೊದಲು ಬ್ಲ್ಯಾಕ್ ಟೀ ಕುಡಿಯುವುದನ್ನು ತಪ್ಪಿಸಿ.