ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Healthy Food: ಹಸಿ ತರಕಾರಿ ಅಥವಾ ಬೇಯಿಸಿದ ತರಕಾರಿ! ಯಾವುದು ಆರೋಗ್ಯಕ್ಕೆ ಉತ್ತಮ?

ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವ ಆಹಾರಗಳ ಪಟ್ಟಿಯಲ್ಲಿ ತರಕಾರಿ ಮೊದಲ ಸ್ಥಾನದಲ್ಲಿದೆ. ಆದರೆ ಹಸಿಯಾಗಿ ತಿನ್ನುವ ತರಕಾರಿ ಹಾಗೂ ಬೇಯಿಸಿ ತಿನ್ನುವ ತರಕಾರಿ ಬಗ್ಗೆ ಗೊಂದಲ ನಿಮಗೂ ಇರಬಹುದು. ಹಾಗದರೆ  ನಮ್ಮ ದೇಹಕ್ಕೆ ಬೇಯಿಸಿದ ತರಕಾರಿ ಸೂಕ್ತವೇ ಅಥವಾ ಹಸಿ ತರಕಾರಿಯೇ ಎಂಬ ಗೊಂದಲಕ್ಕೆ ಪರಿಹಾರ ಇಲ್ಲಿದೆ.

ಹಸಿ ಅಥವಾ ಬೇಯಿಸಿದ ತರಕಾರಿ; ಆರೋಗ್ಯಕ್ಕೆ ಯಾವುದು ಬೆಸ್ಟ್?

Cooked or raw

Profile Pushpa Kumari Apr 17, 2025 7:48 AM

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ (Health Tips) ನಾವು ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡ ಬೇಕಾಗುತ್ತದೆ. ಕೆಲವೊಮ್ಮೆ ನಿತ್ಯ‌ ಅನೇಕ ಬಗೆಯ ಆಹಾರ ಸೇವನೆ ಮಾಡಿದರೂ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ‌ ನೈಸರ್ಗಿಕವಾಗಿ ಸಿಗುವ  ಆಹಾರಗಳ ಮೇಲೆ ನಿಗಾ ಇಡುವುದು ಬಹಳ ಮುಖ್ಯ. ಅದರಲ್ಲೂ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವ ಆಹಾರಗಳ ಪಟ್ಟಿಯಲ್ಲಿ ತರಕಾರಿಗಳು ಮೊದಲ ಸ್ಥಾನದಲ್ಲಿದೆ. ಆದರೆ ಹಸಿಯಾಗಿ ತಿನ್ನುವ ತರಕಾರಿ ಹಾಗೂ ಬೇಯಿಸಿ ತಿನ್ನುವ ತರಕಾರಿ ಬಗ್ಗೆ ಗೊಂದಲ ನಿಮಗೂ ಇರಬಹುದು. ಹಾಗದರೆ  ನಮ್ಮ ದೇಹಕ್ಕೆ ಬೇಯಿಸಿದ ತರಕಾರಿ ಸೂಕ್ತವೇ ಅಥವಾ ಹಸಿ ತರಕಾರಿಯೇ ಎಂಬ ಗೊಂದಲಕ್ಕೆ ಪರಿಹಾರ ಇಲ್ಲಿದೆ.

ಕೆಲವರು ತರಕಾರಿಗಳನ್ನು ಬೇಯಿಸಿ ತಿಂದರೆ ಮಾತ್ರ ಅದರಲ್ಲಿನ ಎಲ್ಲ ಪೋಷಕಾಂಶಗಳು ನಮ್ಮ ದೇಹಕ್ಕೆ ದೊರೆಯುತ್ತದೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ತರಕಾರಿಗಳನ್ನು ಕಚ್ಚಾ ತಿನ್ನುವುದು ಉತ್ತಮ ಎಂದು ಹೇಳುತ್ತಾರೆ. ಡಯೆಟ್ ಕಂಟ್ರೋಲ್ ಮಾಡುವವರು ಹಸಿ ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಸಿ ತರಕಾರಿಯಲ್ಲಿ ಪೊಟ್ಯಾಸಿಯಮ್, ಕಬ್ಬಿಣ, ಖನಿಜಗಳು ಹೇರಳವಾಗಿ ಇರುತ್ತದೆ. ಇದಲ್ಲದೆ, ಕೆಲವು ಪೋಷಕಾಂಶಗಳು, ಜೀವಸತ್ವಗಳು,  ವಿಟಮಿನ್‌ನಂತಹ ಆರೋಗ್ಯ ಲಾಭವು ಸಿಗುತ್ತದೆ. ಅದರೆ ಬೇಯಿಸಿದ ತರಕಾರಿಗಳು ಹಸಿ ತರಕಾರಿಗಳಿಗಿಂತ ವಿಭಿನ್ನವಾದ ಪೌಷ್ಟಿಕಾಂಶದ ಪ್ರಮಾಣ ಮತ್ತು ಗುಣ ಮಟ್ಟವನ್ನು ನೀಡುತ್ತದೆ. ಹಾಗಿದ್ದರೆ ಆರೋಗ್ಯಕ್ಕೆ ಯಾವುದು ಉತ್ತಮ?

ಹಸಿ ತರಕಾರಿಗಳಿಗಿಂತ ಬೇಯಿಸಿದ ತರಕಾರಿಗಳು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿವೆ. ಜತೆಗೆ ಬೇಯಿಸಿದ ತರಕಾರಿಗಳು ರುಚಿಯಾಗಿರುತ್ತದೆ. ಕುದಿಸುವುದು, ಹಬೆಯಲ್ಲಿ ಬೇಯಿಸುವುದು ಇತ್ಯಾದಿಯಿಂದ ಕೆಲವೊಂದು ತರಕಾರಿಗಳಲ್ಲಿ ಪೌಷ್ಟಿಕಾಂಶ ಹೆಚ್ಚುತ್ತದೆ. ನಾವು ಅಡುಗೆ ಮಾಡುವ ವಿಧಾನವು ತರಕಾರಿಗಳ ಪೌಷ್ಟಿಕಾಂಶದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಬ್ರೊಕೊಲಿಯ ಕ್ಲೋರೊಫಿಲ್, ಸಕ್ಕರೆ, ಪ್ರೋಟೀನ್ ಮತ್ತು ವಿಟಮಿನ್ ಸಿ ಅಂಶವು ಬೇಯಿಸಿದಾಗ ಕಡಿಮೆಯಾಗುತ್ತದೆ. ಆದರೆ ಕುದಿಸುವುದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ.

ನೀವು ತರಕಾರಿಗಳನ್ನು ಹಸಿ ತಿನ್ನುವುದಕ್ಕಿಂತ ಹೆಚ್ಚಾಗಿ ಬೇಯಿಸಿ  ತಿನ್ನುವರಾಗಿದ್ದರೆ, ನಿಮ್ಮ ತರಕಾರಿಗಳನ್ನು ನೀವು ಹೇಗೆ ಬೇಯಿಸುತ್ತೀರಿ ಎಂಬುವುದು ಮುಖ್ಯವಾಗುತ್ತದೆ. ಅಂದರೆ ನಿಮ್ಮ ಅಡುಗೆ ವಿಧಾನದ ಆಯ್ಕೆಯು ತರಕಾರಿಗಳ ಪೌಷ್ಟಿಕಾಂಶದ ಮೌಲ್ಯದ ಮೇಲೆ ಪರಿಣಾಮ ಬೀರಬಹುದು‌. ತರಕಾರಿಗಳನ್ನು ಹಬೆಯಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶಗಳು ಹಾಗೇ ಉಳಿಯುತ್ತವೆ. ಹಾಗಾಗಿ ಬೇಯಿಸುವ ಪ್ರಮಾಣವು ತಿಳಿದಿರಬೇಕು.

ಇದನ್ನು ಓದಿ: World Health Day: ಜೀವನಶೈಲಿ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ: ಪ್ರಾಕ್ಟೊ

ಹಸಿ ತರಕಾರಿ ತಿನ್ನುವುದರಿಂದ ಆಗುವ ಪ್ರಯೋಜನಗಳು

ಹಸಿ ತರಕಾರಿಗಳನ್ನು ಹಾಗೆಯೇ ತಿನ್ನುವುದರಿಂದ ಹಲವು ರೀತಿಯ ಅರೋಗ್ಯ ಲಾಭ ಇದೆ. ಹೆಚ್ಚಿನ ವಿಟಮಿನ್ ಅಂಶ ಹಸಿ ತರಕಾರಿಯಲ್ಲಿ ಸಿಗುತ್ತದೆ. ತರಕಾರಿಗಳನ್ನು ಬೇಯಿಸದೆ ‌ಇರುವುದರಿಂದ ಅವುಗಳ ಪೋಷಕಾಂಶಗಳು ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.ಹಾಗಾಗಿ ಹಸಿರು ತರಕಾರಿಯ ಸೇವನೆ ಕೂಡ ಉತ್ತಮ.

ಬೇಯಿಸಿದ ತರಕಾರಿ

ತರಕಾರಿಗಳನ್ನು ಹಬೆಯಲ್ಲಿ ಬೇಯಿಸುವುದು ಇತರ ಅಡುಗೆ ವಿಧಾನಗಳಿಗಿಂತ ಆರೋಗ್ಯಕರವಾಗಿಯೇ ಇರುತ್ತದೆ‌. ಇನ್ನು ತರಕಾರಿಗಳನ್ನು ಹಬೆಯಲ್ಲಿ ಬೇಯಿಸುವುದರಿಂದ ಅವುಗಳ ಹೆಚ್ಚಿನ ಪೋಷಕಾಂಶಗಳು ಹಾಗೇ ಉಳಿಯುತ್ತವೆ. ನಿಯಾಸಿನ್, ಬೀಟಾ ಕ್ಯಾರೋಟಿನ್, ಪ್ಯಾಂಟೊಥೆನಿಕ್ ಆಮ್ಲ ಮತ್ತು ವಿಟಮಿನ್ ಸಿ ಅಂಶಗಳು ಇದರಲ್ಲಿ ಸಿಗುತ್ತವೆ. ಇನ್ನು ಬೇಯಿಸಿದ ತರಕಾರಿಗಳು ಸುಲಭವಾಗಿ ಜೀರ್ಣವಾಗುತ್ತವೆ.ಬೀಟ್ರೂ ಟ್, ಸೌತೆ ಕಾಯಿ,ಈರುಳ್ಳಿ, ಕ್ಯಾರೆಟ್ ಇತ್ಯಾದಿಯನ್ನು ಹಸಿ ಯಾಗಿಯೇ ತಿಂದರೆ ಉತ್ತಮ. ಆಲೂ ಗಡ್ಡೆ, ಹುರುಳಿ ಕಾಯಿ,ಎಲೆಕೋಸು, ಹೂಕೋಸು ಮಶ್ರೂಮ್ ಇತ್ಯಾದಿಯನ್ನು ಬೇಯಿಸಿ ತಿಂದರೆ ಅರೋಗ್ಯಕ್ಕೆ ಒಳಿತು.