ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ದೇಹದಲ್ಲಿನ ಸಕ್ಕರೆ ಪ್ರಮಾಣ ಇಳಿಸಬೇಕೇ? ಮನೆಯಲ್ಲೇ ಈ ಪಾನೀಯ ತಯಾರಿಸಿ

Blood Sugar Levels: ದೇಹದಲ್ಲಿ ಸಕ್ಕರೆಯ ಮಟ್ಟ ಕಾಯ್ದುಕೊಳ್ಳುವುದು ಬಹಳಷ್ಟು ಅಗತ್ಯ. ದೇಹದಲ್ಲಿ ಇದರ ಮಟ್ಟ ಏರಿಳಿತವಾದರೆ ತೂಕ ಹೆಚ್ಚಳ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿಡಲು ನಾವು ಸೇವಿಸುವ ಆಹಾರ ಕೂಡ ಮುಖ್ಯ. ವೈದ್ಯಕೀಯ ಚಿಕಿತ್ಸೆಗಳ ಜತೆಗೆ, ನೈಸರ್ಗಿಕ ಮನೆಮದ್ದುಗಳು ಮನೆಯಲ್ಲೆ ಬಳಕೆ ಮಾಡುವ ಮೂಲಕ ಸಕ್ಕರೆ ಪ್ರಮಾಣ ಕಡಿಮೆ ಮಾಡಬಹುದು.

ಸಕ್ಕರೆ ಮಟ್ಟ ಇಳಿಸಲು ಈ ಗಿಡಮೂಲಿಕೆ ಪಾನೀಯ ಸೇವಿಸಿ

ಸಾಂದರ್ಭಿಕ ಚಿತ್ರ -

Profile
Pushpa Kumari Aug 29, 2026 7:03 AM

ಬೆಂಗಳೂರು: ದೇಹದಲ್ಲಿ ಸಕ್ಕರೆಯ (Sugar Level) ಮಟ್ಟ ಕಾಯ್ದುಕೊಳ್ಳುವುದು ಬಹಳಷ್ಟು ಅಗತ್ಯ. ದೇಹದಲ್ಲಿ ಇದರ ಮಟ್ಟ ಏರಿಳಿತ ತೂಕ ಹೆಚ್ಚಳ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿಡಲು ನಾವು ಸೇವಿಸುವ ಆಹಾರ ಕೂಡ ಮುಖ್ಯವಾಗುತ್ತದೆ. ವೈದ್ಯಕೀಯ ಚಿಕಿತ್ಸೆಗಳ ಜತೆಗೆ, ನೈಸರ್ಗಿಕ ಮನೆಮದ್ದುಗಳು ಬಳಸುವ ಮೂಲಕ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡಬಹುದು. ಸಂಶೋಧನೆವೊಂದರ ಪ್ರಕಾರ, ಕೆಲವು ಗಿಡಮೂಲಿಕೆ ಪಾನೀಯ ಹಾಗೂ ಚಹಾಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಮಾಡಬಹುದು.

ಹಾಗಲಕಾಯಿ ಜ್ಯೂಸ್

ಹಾಗಲಕಾಯಿಯನ್ನು ಮಧುಮೇಹ ವಿರೋಧಿಯಾಗಿ ಸಾಂಪ್ರದಾಯಿಕ ಔಷಧದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ. ಇದು ಚರಂಟಿನ್ ಮತ್ತು ಪಾಲಿಪೆಪ್ಟೈಡ್-ಪಿನಂತಹ ಸಕ್ರಿಯ ಸಂಯುಕ್ತಗಳನ್ನು ಹೊಂದಿದ್ದು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುತ್ತದೆ. ದೇಹವು ಗ್ಲೂಕೋಸ್ ಮಟ್ಟವನ್ನು ಸರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತವೆ. ಹಾಗಲಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿ, ಅರ್ಧ ಕಪ್ ನೀರಿನೊಂದಿಗೆ ಬ್ಲೆಂಡ್ ಮಾಡಿ. ಬಳುಕ ರುಚಿಗೆ ಸ್ವಲ್ಪ ನಿಂಬೆ ರಸ ಅಥವಾ ಉಪ್ಪು ಸೇರಿಸಿ ಸೇವಿಸಬಹುದು‌

ಆರೋಗ್ಯಕರ ಆಹಾರಪದ್ಧತಿಯಿಂದ ತಿನ್ನುವ ವ್ಯಸನ ತಡೆಯಬಹುದೇ?

ದಾಲ್ಚಿನ್ನಿ ಚಹಾ

ದಾಲ್ಚಿನ್ನಿ ಕೇವಲ ಅಡುಗೆಮನೆಯಲ್ಲಿ ಬಳಸುವ ಮಸಾಲೆಯಲ್ಲ, ಇದು ನೈಸರ್ಗಿಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ. ಇದು ದೇಹದ ಗ್ಲೂಕೋಸ್ ಅನ್ನು ನಿಯಂತ್ರಿಸುತ್ತದೆ. ದಾಲ್ಚಿನ್ನಿ ಚಹಾವು ಊಟದ ನಂತರದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಕುದಿಯುವ ನೀರಿಗೆ ಒಂದು ಅಥವಾ ಎರಡು ದಾಲ್ಚಿನ್ನಿ ತುಂಡುಗಳನ್ನು ಸೇರಿಸಿ. 5-10 ನಿಮಿಷಗಳ ಕಾಲ ಅದನ್ನು ಕುದಿಸಲು ಬಿಡಿ. ಊಟದ ನಂತರ ಸೋಸಿ ಕುಡಿದರೆ ಉತ್ತಮ.

ಮೆಂತ್ಯೆ ನೀರು

ಮೆಂತೆ ಕಾಳುಗಳನ್ನು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ. ಇದರಲ್ಲಿ ಆರೋಗ್ಯಯುತ ಹಲವು ಅಂಶಗಳಿದ್ದು ಕರಗುವ ನಾರಿನಂಶ ಮತ್ತು '4-ಹೈಡ್ರಾಕ್ಸಿಐಸೋಲ್ಯೂಸಿನ್' ಎಂಬ ಸಂಯುಕ್ತವಿದೆ. ಮಧುಮೇಹ ನಿಯಂತ್ರಣಕ್ಕೆ ಇದು ರಾಮಬಾಣ. ಮೆಂತ್ಯೆ ಕಾಳುಗಳನ್ನು ತೊಳೆದು, ರಾತ್ರಿಯಿಡೀ ನೆನೆಸಿ. ಬೆಳಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಹೈಬಿಸ್ಕಸ್ ಟೀ

ದಾಸವಾಳದ ಹೂವಿನ ದಳಗಳಿಂದ ತಯಾರಿಸಲ್ಪಟ್ಟ ಈ ಚಹಾವು ಉತ್ಕರ್ಷಣ ನಿರೋಧಕ ಗಳಿಂದ ತುಂಬಿರುತ್ತದೆ, ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಿ ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡುತ್ತದೆ. 1 ಕಪ್ ನೀರನ್ನು ಕುದಿಸಿ, 1-2 ಚಮಚ ಒಣಗಿದ ದಾಸವಾಳದ ಎಸಳುಗಳನ್ನು ಹಾಕಿ 5 ನಿಮಿಷ ನೆನೆಯಲು ಬಿಡಿ. ನಂತರ ಸೋಸಿ ಕುಡಿಯಿರಿ.