ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀರ್ಣ ಕ್ರಿಯೆ ಸುಧಾರಣೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ; ಪುಟ್ಟ ಶುಂಠಿಯ ದೊಡ್ಡ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

Health Tips: ಶುಂಠಿ ಅದರ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿಯಾದ ಜನಪ್ರಿಯ ಮಸಾಲೆ ಪದಾರ್ಥ. ಸಂಬಾರು ಪದಾರ್ಥಗಳಿಗೆ, ಪಾನೀಯಗಳಿಗೆ ಸುವಾಸನೆಯನ್ನು ಭರಿಸಲು ಹೆಚ್ಚಾಗಿ ಇದನ್ನು ಬಳಕೆ ಮಾಡುತ್ತಾರೆ. ಜತೆಗೆ ಶುಂಠಿಯು ಜೀವಸತ್ವಗಳು, ಖನಿಜಗಳು ಹಾಗೂ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾದರೆ ಶುಂಠಿಯಲ್ಲಿ ಏನೆಲ್ಲ ಆರೋಗ್ಯ ಲಾಭವಿದೆ ಎನ್ನುವುದನ್ನು ನೋಡೋಣ.

ಶುಂಠಿ: ನಮ್ಮ ಅಡುಗೆ ಮನೆಯ ಔಷಧ

ಸಾಂದರ್ಭಿಕ ಚಿತ್ರ -

Profile
Pushpa Kumari Jul 30, 2026 7:02 AM

ನವದೆಹಲಿ: ಅಡುಗೆ ಮನೆಯಲ್ಲಿ ದಿನ ನಿತ್ಯ ಬಳಸುವ ಕೆಲವೊಂದು ವಸ್ತುಗಳು ಆರೋಗ್ಯ ವೃದ್ಧಿಸಲು ಸಹಕಾರಿ. ಇದರಲ್ಲಿ ಪ್ರಮುಖವಾಗಿ ಅರಶಿನ, ಕರಿಮೆಣಸು, ಜೀರಿಗೆ ಹೀಗೆ ಹಲವು ವಸ್ತುಗಳು ಸೇರಿವೆ. ಅದರಲ್ಲೂ ಹಿಂದಿನ ಕಾಲದಿಂದಲೂ ನಮ್ಮ ಅಡುಗೆ ಮನೆಯಲ್ಲಿ ಮುಖ್ಯವೆನಿಸುವ ಶುಂಠಿ (Ginger Benefits) ಕೇವಲ ಘಮ ಮಾತ್ರವಲ್ಲ ಅದ್ಬುತ ಆರೋಗ್ಯಕ್ಕೂ ರಾಮಬಾಣ. ಪ್ರತಿದಿನ ಸ್ವಲ್ಪ ಪ್ರಮಾಣದ ಶುಂಠಿಯನ್ನು ಸೇವಿಸುವುದು ನಿಮ್ಮ ದೇಹದ ಮೇಲೆ ಹಲವು ವಿಧಗಳಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಶುಂಠಿ ಅದರ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿಯಾದ ಜನಪ್ರಿಯ ಮಸಾಲೆಯಾಗಿದೆ. ಸಂಬಾರು ಪದಾರ್ಥಗಳಿಗೆ, ಪಾನೀಯಗಳಿಗೆ ಸುವಾಸನೆಯನ್ನು ಭರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಅದರ ಹೊರತಾಗಿ ಔಷಧವಾಗಿಯೂ ಶುಂಠಿ ಬಳಕೆಯಲ್ಲಿದೆ. ಇದರಲ್ಲಿ ಜೀವಸತ್ವಗಳು, ಖನಿಜಗಳು ಹಾಗೂ ಹಲವು ಪೋಷಕಾಂಶಗಳಿವೆ. ಹಾಗಾದರೆ ಶುಂಠಿಯಲ್ಲಿ ಏನೆಲ್ಲ ಆರೋಗ್ಯ ಲಾಭವನ್ನು ಪಡೆಯಬಹುದು ಎನ್ನುವುದನ್ನು ನೋಡೋಣ.

ಉರಿಯೂತ ಶಮನ

ಶುಂಠಿಯು ಉರಿಯೂತ ಮತ್ತು ಕಿರಿಕಿರಿಯಿಂದ ಪಾರಾಗಲು ಸಹಾಯ ಮಾಡುತ್ತದೆ. ಜ್ವರ, ಕೆಮ್ಮು, ಗಂಟಲು ಕೆರೆತ ಇದ್ದಾಗ ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ. ಒಂದು ಸಣ್ಣ ತುಂಡು ಶುಂಠಿಯನ್ನು ಜಗಿದು ತಿನ್ನುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು‌.

ಜೀರ್ಣಕ್ರಿಯೆ ವೃದ್ಧಿ

ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್‌, ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಶುಂಠಿ ಆರೋಗ್ಯ ವರ್ಧಕವಾಗಿ ಕೆಲಸ ಮಾಡುತ್ತದೆ. ಅದೇ ರೀತಿ ಆರೋಗ್ಯಪೂರ್ಣ ಕರುಳಿಗೆ ಸಹಾಯ ಮಾಡುತ್ತದೆ.

ನಿದ್ದೆಯಲ್ಲಿ ಬಾಯಲ್ಲೇ ಉಸಿರಾಡುತ್ತೀರಾ? ಈ ಸಮಸ್ಯೆ ಎದುರಾಗಬಹುದು ಎಚ್ಚರ

ವಾಕರಿಕೆಗೆ ನಿಯಂತ್ರಣ

ಬೆಳಗ್ಗೆ ಪ್ರಯಾಣ ಮಾಡುವಾಗ ನಿಮಗೆ ಆಗಾಗ್ಗೆ ವಾಕರಿಕೆ ಬರುತ್ತದೆಯೇ? ಈ ಸಂದರ್ಭದಲ್ಲಿ ಒಂದು ಸಣ್ಣ ತುಂಡು ಶುಂಠಿಯನ್ನು ಸೇವಿಸಿದರೆ ಸಾಕ, ಇದು ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರು ಹಾಗೂ ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿ.

ಸ್ನಾಯುಗಳ ನೋವು ಶಮನ

ಶುಂಠಿ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ನೀವು ನಿಯಮಿತವಾಗಿ ಸ್ನಾಯು ನೋವಿನಿಂದ ಬಳಲುತ್ತಿದ್ದರೆ ಇದರ ಸೇವನೆಯು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಮತೋಲನ

​ಶುಂಠಿಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸಕ್ರಿಯಗೊಳಿಸುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯಕ.

ಹೇಗೆ ಸೇವಿಸಬೇಕು?

ನೀವು ಪ್ರತಿದಿನ ಹಸಿ ಶುಂಠಿಯನ್ನು ತಿನ್ನಬೇಕಾಗಿಲ್ಲ. ಸಣ್ಣ ಶುಂಠಿಯ ತುಂಡನ್ನು ಹೋಳುಗಳಾಗಿ ಕತ್ತರಿಸಿ ಚಹಾ, ಸ್ಮೂಥಿಗಳು, ಸೂಪ್‌ಗಳು ಅಥವಾ ನಿಮ್ಮ ನೆಚ್ಚಿನ ಊಟಕ್ಕೆ ಸೇರಿಸಬಹುದು.