ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಊಟದ ನಂತರ ಸದಾ ಹಸಿವಾಗುತ್ತಿದೆಯೇ? ರಕ್ತದ ಸಕ್ಕರೆಯ ಸಂಪರ್ಕವನ್ನು ಅರಿಯಿರಿ

ಕೆಲ ವ್ಯಕ್ತಿಗಳು ಬಹಳ ಕಡಿಮೆ ಆಹಾರ ಸೇವಿಸಿದ್ದೇವೆ ಎಂದು ಭಾವಿಸುತ್ತಾರೆ. ವಾಸ್ತವದಲ್ಲಿ ಸಮಸ್ಯೆಯು ಆಹಾರದ ಪ್ರಮಾಣದಲ್ಲಿ ಅಲ್ಲ, ಬದಲಿಗೆ ದೇಹವು ಅದನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದರಲ್ಲಿದೆ. ಉಪಾಹಾರವು ರಿಫೈನ್ಡ್ ಕಾರ್ಬೊಹೈಡ್ರೇಟ್ ಗಳನ್ನು ಹೊಂದಿರುತ್ತದೆ, ಅದು ತಕ್ಷಣವೇ ಶಕ್ತಿ ನೀಡಬಹುದು, ಆದರೆ ಅದು ರಕ್ತದ ಸಕ್ಕರೆಯ ದೀರ್ಘಾವಧಿ ಸ್ಥಿರತೆ ನೀಡುವುದಿಲ್ಲ. ಸಕ್ಕರೆಯ ಅಂಶದ ತೀವ್ರ ಹೆಚ್ಚಳ ಮತ್ತು ಕುಸಿತ ಹಸಿವು ಬೇಗನೆ ಮರುಕಳಿಸುವಂತೆ ಮಾಡುತ್ತದೆ.

ಊಟದ ನಂತರ ಸದಾ ಹಸಿವಾಗುತ್ತಿದೆಯೇ?

-

Profile
Ashok Nayak Jul 30, 2026 10:49 AM

ಡಾ.ಮಣಿ ದೀಪ್ತಿ, ಕನ್ಸಲ್ಟೆಂಟ್ ಎಂಡೋಕ್ರಿನಾಲಜಿಸ್ಟ್, ಅಪೋಲೋ ಆಸ್ಪತ್ರೆ, ಶೇಷಾದ್ರಿಪುರಂ, ಬೆಂಗಳೂರು

ಬಹಳಷ್ಟು ಜನರು ಹೊಟ್ಟೆ ತುಂಬಿದಂತೆ ಭಾವಿಸಿ ಹೊರಗಡೆ ಹೋಗುತ್ತಾರೆ, ಆದರೆ ಒಂದು ಗಂಟೆಯ ನಂತರ ಮತ್ತಾವುದೋ ಕುರುಕುಲು ತಿನಿಸನ್ನು ಸೇವಿಸಲು ಬಯಸುತ್ತಾರೆ. ಸಾಂದರ್ಭಿಕ ಹಸಿವು ಸಾಮಾನ್ಯ ಸಂವೇದನೆಯಾಗಿದೆ, ಆದರೆ ತಕ್ಕಷ್ಟು ಊಟ ಸೇವಿಸಿದ ನಂತರವೂ ಪದೇ ಪದೇ ಹಸಿವಾಗುವುದು ಕಾಳಜಿಯ ವಿಷಯವಾಗಿದೆ.

ಈ ಸಂವೇದನೆಯ ಹಿಂದಿನ ಕಾರಣಗಳಲ್ಲಿ ಒಂದು ರಕ್ತದ ಸಕ್ಕರೆ ಮಟ್ಟದಲ್ಲಿ ಏರಿಳಿತವಾಗುವುದು. ದೇಹವು ಶಕ್ತಿಗೆ ಗ್ಲೂಕೋಸ್ ಮೇಲೆ ಆಧಾರಪಟ್ಟಿರುತ್ತದೆ, ರಕ್ತದ ಪರಿಚಲನೆಯಿಂದ ಜೀವಕೋಶ ಗಳಿಗೆ ಗ್ಲೂಕೋಸ್ ಚಲನೆಯು ಇನ್ಸುಲಿನ್ ನೆರವಿನಿಂದ ಉಂಟಾಗುತ್ತದೆ. ಇದರಿಂದ ದೇಹವು ಊಟದ ನಂತರವೂ ಹಸಿವಿನ ಭಾವನೆಯನ್ನು ಮುಂದುವರಿಸುತ್ತದೆ.

ಕೆಲ ವ್ಯಕ್ತಿಗಳು ಬಹಳ ಕಡಿಮೆ ಆಹಾರ ಸೇವಿಸಿದ್ದೇವೆ ಎಂದು ಭಾವಿಸುತ್ತಾರೆ. ವಾಸ್ತವದಲ್ಲಿ ಸಮಸ್ಯೆ ಯು ಆಹಾರದ ಪ್ರಮಾಣದಲ್ಲಿ ಅಲ್ಲ, ಬದಲಿಗೆ ದೇಹವು ಅದನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದರಲ್ಲಿದೆ.

ಇದನ್ನೂ ಓದಿ: Health Tips: ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಉಪಾಹಾರವು ರಿಫೈನ್ಡ್ ಕಾರ್ಬೊಹೈಡ್ರೇಟ್ ಗಳನ್ನು ಹೊಂದಿರುತ್ತದೆ, ಅದು ತಕ್ಷಣವೇ ಶಕ್ತಿ ನೀಡಬಹುದು, ಆದರೆ ಅದು ರಕ್ತದ ಸಕ್ಕರೆಯ ದೀರ್ಘಾವಧಿ ಸ್ಥಿರತೆ ನೀಡುವುದಿಲ್ಲ. ಸಕ್ಕರೆಯ ಅಂಶದ ತೀವ್ರ ಹೆಚ್ಚಳ ಮತ್ತು ಕುಸಿತ ಹಸಿವು ಬೇಗನೆ ಮರುಕಳಿಸುವಂತೆ ಮಾಡುತ್ತದೆ.

ನಿರಂತರ ಹಸಿವನ್ನು ಪ್ರತ್ಯೇಕವಾಗಿ ನೋಡಬಾರದು. ಅದು ಅಸಹಜ ಆಯಾಸ, ಹೆಚ್ಚಿನ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ ಅಥವಾ ತೂಕದಲ್ಲಿ ವಿವರಿಸಲಾಗದ ಬದಲಾವಣೆಗಳನ್ನು ತಂದರೆ ಆಗ ವೈದ್ಯರಲ್ಲಿ ಭೇಟಿ ಮಾಡಿ ಚರ್ಚಿಸುವುದು ಸೂಕ್ತ.

ಸಣ್ಣ ಬದಲಾವಣೆಗಳು ವ್ಯತ್ಯಾಸವನ್ನು ಸೃಷ್ಟಿಸಬಲ್ಲವು. ಪ್ರೊಟೀನ್ ಮತ್ತು ಫೈಬರ್ ಅಂಶ ಹೆಚ್ಚಾಗಿರುವ ಆಹಾರವು ನಿರಂತರ ಹಸಿವನ್ನು ಕಡಿಮೆ ಮಾಡಿ ಜೀರ್ಣವಾಗುವುದನ್ನು ನಿಧಾನಗೊಳಿಸಿ, ಹೊಟ್ಟೆ ತುಂಬಿಸುತ್ತದೆ ಮತ್ತು ಹೆಚ್ಚು ಸ್ಥಿರವಾದ ರಕ್ತದ ಸಕ್ಕರೆ ಅಂಶಗಳಿಗೆ ಬೆಂಬಲಿಸುತ್ತದೆ. ಸಮತೋಲನದ ಭೋಜನದಲ್ಲಿ ಪ್ರೊಟೀನ್, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳಿದ್ದರೆ ಸುಸ್ಥಿರ ಶಕ್ತಿ ನೀಡುತ್ತವೆ ಮತ್ತು ಹಸಿವನ್ನು ಉತ್ತಮ ನಿಯಂತ್ರಣದಲ್ಲಿ ಇರಿಸುತ್ತವೆ. ಕೆಲವರಿಗೆ ಸರಳವಾದ ರಕ್ತದ ಸಕ್ಕರೆ ಪರೀಕ್ಷೆಯು ಅವರ ಹಸಿವು ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎನ್ನುವುದರ ಅರಿವು ಮೂಡಿಸುತ್ತದೆ.