ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಧುಮೇಹ ಬಂದಿದೆಯೇ? ಚಿಂತೆ ಬಿಡಿ, ಈ ಲೈಫ್‌ ಸ್ಟೈಲ್‌ ಅಳವಡಿಸಿಕೊಳ್ಳಿ ಸಾಕು

Diabetes Control Tips: ಡಯಾಬಿಟಿಸ್ ಬಂದಿತು ಎಂದ ಕೂಡಲೇ ಗಾಬರಿಯಾಗುವ ಅಗತ್ಯವಿಲ್ಲ. ಅದನ್ನು ಧೈರ್ಯದಿಂದ ಎದುರಿಸಬೇಕು. ಡಯಾಬಿಟಿಸ್‌ ಕಾನಿಸಿಕೊಂಡ ವೇಳೆ ಆರೋಗ್ಯ ಕಾಳಜಿ ಹೇಗೆ ಮಾಡಬೇಕು ಎಂಬ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಖ್ಯಾತ ಮಧುಮೇಹ ತಜ್ಞ ಡಾ. ಸುಮನ್ ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ.

ಮಧುಮೇಹಕ್ಕೆ ಹೆದರಬೇಡಿ: ನಿಯಂತ್ರಣಕ್ಕೆ ಇಲ್ಲಿದೆ ಟಿಪ್ಸ್‌

ಡಾ. ಸುಮನ್ -

Profile
Pushpa Kumari Jan 1, 2026 8:00 AM

ಬೆಂಗಳೂರು, ಡಿ. 31: ಒಂದು ಕಾಲದಲ್ಲಿ ಶ್ರೀಮಂತರ ಕಾಯಿಲೆ ಎಂದಾಗ ಮೊದಲು ನೆನಪಾಗುವ ಹೆಸರೆ ಮಧುಮೇಹವಾಗಿತ್ತು(Diabetes). ಆದರೆ ಈಗ ಕಾಲ ಬದಲಾಗಿದೆ. ಇಂದು ವಯಸ್ಸಿನ ಮಿತಿ ಇಲ್ಲದೆ ಎಲ್ಲ ವರ್ಗದ ಜನರಿಗೂ ಈ ಮಧುಮೇಹ ಸಮಸ್ಯೆ ಕಾಡುತ್ತಿದೆ. ಇತ್ತೀಚೆಗೆ ಜನರ ಜೀವನ ಶೈಲಿ ಬದಲಾವಣೆಯ ಜತೆಗೆ ಆನುವಂಶಿಕ ಕಾರಣ, ಅತಿಯಾದ ಒತ್ತಡ ಮತ್ತು ದೈಹಿಕ ಶ್ರಮವಿಲ್ಲದ ನಿತ್ಯ ಜೀವನವು ಇದಕ್ಕೆ ಪ್ರಮುಖ ಕಾರಣ. ಒಮ್ಮೆ ಡಯಾಬಿಟಿಸ್ ಬಂದ ಮೇಲೆ ಏನು ಮಾಡಬೇಕು ಏನು‌ ಮಾಡಬಾರದು ಎಂಬ ಅರಿವು ಜನರಿಗೆ ಇರಬೇಕು. ಡಯಾಬಿಟಿಸ್ ಬಂತು ಎಂದ ಕೂಡಲೇ ಗಾಬರಿಯಾಗುವ ಅಗತ್ಯವಿಲ್ಲ. ಅದನ್ನು ಎಚ್ಚರಿಕೆಯಿಂದ ಎದುರಿಸಬೇಕು. ಡಯಾಬಿಟಿಸ್‌ನಲ್ಲಿ ಆರೋಗ್ಯ ಕಾಳಜಿ ಹೇಗೆ ಮಾಡಬೇಕು ಎಂಬ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಮಧುಮೇಹ ತಜ್ಞ ಡಾ. ಸುಮನ್ (Dr. Suman) ತಿಳಿಸಿಕೊಟ್ಟಿದ್ದಾರೆ (Diabetes Control Tips). ಮಧುಮೇಹದೊಂದಿಗೆ ಆರೋಗ್ಯಕರ ಜೀವನ ನಡೆಸಲು ಕಾಯಿಲೆಯ ಲಕ್ಷಣಗಳು, ವಿಧಗಳು ಮತ್ತು ಆಹಾರ ನಿಯಮಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಅಗತ್ಯ ಎಂದು ಅವರು ಸಲಹೆ ನೀಡಿದ್ದಾರೆ.

ಡಯಾಬಿಟಿಸ್ ಬಂದಿದೆ ಎಂದ ಕೂಡಲೆ ಬಹುತೇಕ ಜನರು ಅದನ್ನು ನೆಗೆಟಿವ್ ಆಗಿ ಪರಿಗಣಿಸಿ ಭಯ ಪಡುತ್ತಾರೆ. ಹೀಗೆ ಮಾಡುವುದರಿಂದ ಡಯಾಬಿಟಿಸ್ ರೋಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಗೊಂದಲ ಮಾಡಿಕೊಳ್ಳದೆ ಶಾಂತ ರೀತಿಯಲ್ಲಿ ಪರಿಗಣಿಸಬೇಕು. ಡಯಾಬಿಟಿಸ್ ಬಂದ ಕೂಡಲೇ ಊಟವನ್ನು ಸಮಯಕ್ಕೆ ಸರಿಯಾಗಿ ಮಾಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು.ಯಾವಾಗ ಊಟವನ್ನು ಸಮಯಕ್ಕೆ ಸರಿಯಾಗಿ ಸೇವನೆ ಮಾಡುತ್ತೀರೋ ಆಗ ಡಯಾಬಿಟಿಸ್ ಕೂಡ ಕಂಟ್ರೋಲ್ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ವಿಡಿಯೊ ನೋಡಿ:



ಡಯಾಬಿಟಿಸ್‌ ಕಾಣಿಸಿಕೊಂಡರೆ ಯಾವ ಆಹಾರ ಸೇವಿಸಬಾರದು ಎಂಬ ಪರಿಜ್ಞಾನ ಇರಬೇಕು. ಸಕ್ಕರೆ, ಬೆಲ್ಲ, ಜೇನುತುಪ್ಪ ಇತರ ಸಿಹಿ ಅಂಶಗಳನ್ನು ಸೇವಿಸಬಾರದು. ಇದರ ಸೇವನೆಯಿಂದ ಡಯಾಬಿಟಿಸ್ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಡಯಾಬಿಟಿಸ್ ರೋಗ ಇರುವವರು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಇದರಿಂದಾಗಿ ಸೇವಿಸಿದ ಆಹಾರದಿಂದ ಹೊರಬರುವ ಸಕ್ಕರೆ ಮಟ್ಟವು ಕರಗುತ್ತದೆ. ಜಾಗಿಂಗ್, ಸ್ವಿಮ್ಮಿಂಗ್, ಸೈಕ್ಲಿಂಗ್, ವಾಕಿಂಗ್‌ನಂತಹ ದೈಹಿಕ ಕಸರತ್ತು ಮಾಡಬೇಕು. ಇದರಿಂದಾಗಿ ಡಯಾಬಿಟಿಸ್ ಕಂಟ್ರೋಲ್ ಮಾಡಲು ಸಾಕಷ್ಟು ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಚಳಿಗಾಲದಲ್ಲಿ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಈ ಹಣ್ಣುಗಳು ಬೆಸ್ಟ್

ಈ ಎಲ್ಲ ವಿಧಾನ ಮಾಡಿಯೂ ಡಯಾಬಿಟಿಸ್ ಕಂಟ್ರೋಲ್ ಬರದಿದ್ದರೆ ತತ್‌ಕ್ಷಣ ವೈದ್ಯರ ಮೊರೆ ಹೋಗಬೇಕು. ಅವರು ಹೇಳಿದ ಔಷಧವನ್ನು ಸರಿಯಾಗಿ ಸೇವಿಸಬೇಕು. ಒಮ್ಮೆ ಡಯಾಬಿಟಿಸ್ ಕಂಟ್ರೋಲ್ ಬಂದಿದೆ ಎಂದ ಕೂಡಲೆ ಡಯಾಬಿಟಿಸ್ ಕಾಯಿಲೆಯನ್ನು ಹಗುರವಾಗಿ ಪರಿಗಣಿಸಬಾರದು. ಆಗಾಗ ಡಯಾಬಿಟಿಸ್ ಕಂಟ್ರೋಲ್ ಲೆವೆಲ್ ಚೆಕ್ ಮಾಡುತ್ತಿರಬೇಕು. ಡಯಾಬಿಟಿಸ್ ಕಾಯಿಲೆಯಿಂದ ಕಣ್ಣಿನ ಸಮಸ್ಯೆಯಾಗಬಹುದು. ಹಾಗಾಗಿ ಡಯಾಬಿಟಿಸ್ ರೋಗಿಗಳು ವರ್ಷಕ್ಕೊಮ್ಮೆ ಕಣ್ಣು, ಕಿಡ್ನಿ ಎಲ್ಲ ಚೆಕಪ್ ಮಾಡಿಸುತ್ತಿರಬೇಕು ಎಂದು ಅವರು ಹೇಳಿದ್ದಾರೆ.

ಡಯಾಬಿಟಿಸ್ ಇದ್ದ ರೋಗಿಗಳು ಎರಡು ಅಥವಾ ಮೂರು ತಿಂಗಳಿಗೊಮ್ಮೆ ಶುಗರ್ ಲೆವೆಲ್ ಅನ್ನು ಚೆಕ್ ಮಾಡಿಸುತ್ತಿರಬೇಕು. ಡಯಾಬಿಟಿಸ್ ಅನ್ನು ಮಾನಿಟರ್ ಮಾಡುವುದರಿಂದ ನಿಯಂತ್ರಣಕ್ಕೆ ಬರಲಿದೆ. ಇನ್ನು ಉತ್ತಮ ಆಹಾರ ಸೇವನೆ ಜತೆಗೆ ನಿದ್ರೆಯನ್ನು ಕೂಡ ಸಮಯಕ್ಕೆ ಸರಿಯಾಗಿ ಮಾಡಬೇಕು. ಆರೋಗ್ಯಯುತ ಜೀವನ ಶೈಲಿಯಿಂದ ಡಯಾಬಿಟಿಸ್ ಇದ್ದರೂ ಸಮಸ್ಯೆ ದೊಡ್ಡ ಮಟ್ಟಿಗೆ ಕಾಡಲಾರದು ಎಂದು ಅವರು ವಿವರಿಸಿದ್ದಾರೆ.