Bigg Boss Kannada 12: ʻಗಿಲ್ಲಿ ನೀನೊಬ್ಬ ಜೋಕರ್, ಥರ್ಡ್ ಕ್ಲಾಸ್ʼ! ಮತ್ತೆ ಹಳೆ ಚಾಳಿ ಮುಂದುವರಿಸಿದ ಅಶ್ವಿನಿ
Gilli Nata: ಬಿಗ್ ಬಾಸ್ ಇನ್ನೇನು ಕೊನೆಗ ಘಟ್ಟ ತಲಪುವ ಹಂತದಲ್ಲಿಯೇ ಗಿಲ್ಲಿ-ಅಶ್ವಿನಿ ನಡುವೆ ಜಗಳ ಜೋರಾಗುತ್ತಿದೆ. 2.0 ಅಂತ ಅನ್ನುತ್ತಿದ್ದ ಅಶ್ವಿನಿ ಅವರು ಈಗ ಕೆಂಡ ಆಗಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಶುರುವಾಗಿದೆ ಅಂತ ಅನ್ನುವಾಗಲೇ ಅಶ್ವಿನಿ ಅವರು ಬೇಕಾಬಿಟ್ಟಿ ಕೆಲವು ಪದಗಳನ್ನು ಬಳಕೆ ಮಾಡಿದ್ದಾರೆ. ಇತ್ತೀಚೆಗೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇರುತ್ತಿದ್ದರು. ಯಾರೇ ಎಷ್ಟೇ ಟ್ರಿಗರ್ ಮಾಡಿದರೂ ಅವರು ರೇಗಾಡುತ್ತಾ ಇರಲಿಲ್ಲ. ಆದರೆ ಗಿಲ್ಲಿಗೆ ಅಶ್ವಿನಿ ಅವರು ಈಗ ಜೋಕರ್, ಥರ್ಡ್ ಕ್ಲಾಸ್ ಎಂದೆಲ್ಲ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಇನ್ನೇನು ಕೊನೆಗ ಘಟ್ಟ ತಲಪುವ ಹಂತದಲ್ಲಿಯೇ ಗಿಲ್ಲಿ-ಅಶ್ವಿನಿ ನಡುವೆ ಜಗಳ ಜೋರಾಗುತ್ತಿದೆ. 2.0 ಅಂತ ಅನ್ನುತ್ತಿದ್ದ ಅಶ್ವಿನಿ (Ashwini Gowda) ಅವರು ಈಗ ಕೆಂಡ ಆಗಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಶುರುವಾಗಿದೆ ಅಂತ ಅನ್ನುವಾಗಲೇ ಅಶ್ವಿನಿ ಅವರು ಬೇಕಾಬಿಟ್ಟಿ ಕೆಲವು ಪದಗಳನ್ನು ಬಳಕೆ ಮಾಡಿದ್ದಾರೆ. ಇತ್ತೀಚೆಗೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇರುತ್ತಿದ್ದರು. ಯಾರೇ ಎಷ್ಟೇ ಟ್ರಿಗರ್ ಮಾಡಿದರೂ ಅವರು ರೇಗಾಡುತ್ತಾ ಇರಲಿಲ್ಲ. ಆದರೆ ಗಿಲ್ಲಿಗೆ ಅಶ್ವಿನಿ (Gilli Nata) ಅವರು ಈಗ ಜೋಕರ್, ಥರ್ಡ್ ಕ್ಲಾಸ್ ಎಂದೆಲ್ಲ ಹೇಳಿದ್ದಾರೆ.
ಜೋಕರ್, ಥರ್ಡ್ ಕ್ಲಾಸ್!
ಗಿಲ್ಲಿ ಟಾಸ್ಕ್ ವಿಚಾರವಾಗಿ ಮಾತನಾಡುತ್ತ ಅಶ್ವಿನಿ ಅವರನ್ನು ಮೂದಲಿಸಿದರು. ಅದು ಅಶ್ವಿನಿ ಹಾಗೂ ಧ್ರುವಂತ್ ಪಿತ್ತ ನೆತ್ತಿಗೇರಿದೆ. ಈ ವೇಳೆ ಅಶ್ವಿನಿ ಅವರು ಕಟ್ಟ ಪದ ಬಳಕೆ ಮಾಡಿದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ಶುರುವಾಗಿಗಿಲ್ಲಿಗೆ ಜೋಕರ್, ಥರ್ಡ್ ಕ್ಲಾಸ್ ಎಂದೆಲ್ಲ ಬೈದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಫ್ಯಾನ್ಸ್‌ನಿಂದಾಗಿ ಮುಜುಗರಕ್ಕೀಡಾದ ಮಾಳು! ವಿಡಿಯೊ ವೈರಲ್
ಅಶ್ವಿನಿ ವಿರುದ್ಧ ಏಕವಚನ ಪದ ಬಳಕೆ ಮಾಡಿದರು ಗಿಲ್ಲಿ. ಗಿಲ್ಲಿ ನಿಂಗೆ ಬೆನ್ನುಮೂಳೆ ಇಲ್ಲ. ನೀನೊಬ್ಬ ಜೋಕರ್, ಜೋಕರ್ ಕ್ಯಾಪ್ಟನ್, ಥರ್ಡ್ ಕ್ಲಾಸ್ ನೀನು ಎಂದಿದ್ದಾರೆ. ನನ್ನಷ್ಟು ಪ್ರಾಜೆಕ್ಟ್ ಮಾಡೋ ಯೋಗ್ಯತೆ ಇಲ್ಲ ಅಂದಿದ್ದಾರೆ. ಅದಕ್ಕೆ ಗಿಲ್ಲಿ ಕೂಡ, ನಿಮಗೆ ವಯಸ್ಸಾಗಿದೆ ಅಷ್ಟೆ ತಲೇಲಿ ಬುದ್ದಿ ಇಲ್ಲ ಎಂದು ಕೂಗಾಡಿದ್ದಾರೆ.
Funny thing about this conversation is that
— ಅಲ್ಪಸಂಖ್ಯಾತ (@alpasankhyata) December 31, 2025
Ashwini is speaking for her mileage
Dhruvant is speaking for his mileage#BBK12 pic.twitter.com/mYrFJXXEw2
ಅಶ್ವಿನಿಗೆ ಧ್ರುವಂತ್ ಸಾಥ್
ಅಶ್ವಿನಿ ಗೌಡ ಅವರು ಈ ಮೊದಲು ಬಳಕೆ ಮಾಡಿದ ಪದಗಳ ಆಡಿಯೋ ಹಾಕಲಾಗಿತ್ತು. ಅಲ್ಲಿಂದ ಅವರು ಬದಲಾಗಿದ್ದರು. ಈಗ ಮತ್ತೆ ಕೂಗಾಡಿ ಸುದ್ದಿಯಾಗಿದ್ದಾರೆ. ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರು ಉರಿದುರಿದು ಬೀಳೋಕೆ ಆರಂಭಿಸಿದರು. ಆದರೆ, ಗಿಲ್ಲಿ ಮಾತ್ರ ಇದನ್ನು ಕೂಲ್ ಆಗೇ ತೆಗೆದುಕೊಳ್ಳುತ್ತಿದ್ದರು. ನಿನ್ನ ಮೂರು-ಮುಕ್ಕಾಲು ರಿಯಾಲಿಟಿ ಶೋನ ಕಂಟೆಂಟ್ ಮುಗಿದು ಹೋಗಿದೆ ಅದೇ ಕಾರಣಕ್ಕೆ ಈಗ ಏನೇನೋ ಶಬ್ದ ಮಾಡುತ್ತಿದ್ದೀಯ’ ಎಂದೆಲ್ಲ ಧ್ರುವಂತ್ ಬೈದರೆ, ಗಿಲ್ಲಿ, ಅಶ್ವಿನಿ ಕುರಿತಂತೆ ಅಜ್ಜಿ ಎಂದು ರೇಗಿಸಿದ್ದಾರೆ.
ಕ್ಯಾಪ್ಟನ್ಸಿ ರೇಸ್‌ನಲ್ಲಿ ಪೈಪೋಟಿ
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಸದ್ಯ ಮನೆಯಲ್ಲಿ ಒಂಬತ್ತು ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಟಾಸ್ಕ್ಗಳು ಜೋರಾಗಿ ನಡೆಯುತ್ತಿದೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ ಸ್ಪರ್ಧಿ ಸಹ ಆಗಲಿದ್ದಾರೆ ಹಾಗಾಗಿ ಸಹಜವಾಗಿಯೇ ಸ್ಪರ್ಧೆ ಜೋರಾಗಿದೆ. ಇದೀಗ ಆಡುವ ಭರದಲ್ಲಿ ಧ್ರುವಂತ್ ಅವರು ಕಾವ್ಯ ಅವರಿಗೆ ಕಾವ್ಯ ಬಾಯ್ ಮುಚ್ಕೊಂಡ್ ಕೂತ್ಕೋ ಎಂದೂ ಹೇಳಿದ್ದಾರೆ.
ಹೊಸ ಪ್ರೋಮೋ ವೈರಲ್ ಆಗಿದೆ. ಧ್ರುವಂತ್ ಉಸ್ತುವಾರಿ ವಹಿಸಿಕೊಂಡಂತಿದೆ. ಬಿಗ್ ಬಾಸ್ ಒಂದು ಟಾಸ್ಕ್‌ಗಳನ್ನು ನೀಡಿದ್ದರು. ಸುರಂಗದಲ್ಲಿರುವ ಪೈಪ್‌ವನ್ನು ತೆಗೆದು, ದಾರಿಯಲ್ಲಿ ಸರಿ ಪಡಿಸಿಕೊಳ್ಳಬೇಕು. ಮೊದಲು ಘಂಟೆ ಬಾರಿಸುವ ಜೋಡಿ ಕೊನೆಯ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಅರ್ಹತೆ ಪಡೆಯುತ್ತದೆ.
ಇದನ್ನೂ ಓದಿ: Bigg Boss Kannada 12: ಟಾಸ್ಕ್‌ನಲ್ಲಿ ಗಿಲ್ಲಿಯಿಂದ ಭಾರೀ ಮೋಸ? ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ?
ಈ ವೇಳೆ ಹತ್ತು ಸೆಕೆಂಡ್ ಧ್ರುವಂತ್ ಅವರು ಗಿಲ್ಲಿ ಅವರ ಆಟವನ್ನು Pause ಮಾಡಿದ್ದಾರೆ. ಈ ಬಗ್ಗೆ ರಾಶಿಕಾ ಅವರಿಗೆ ಸಿಟ್ಟು ಬಂದಿದೆ. ರಕ್ಷಿತಾ ಕೂಡ ಅನ್‌ಫೇರ್ ಎಂದಿದ್ದಾರೆ. ಕಾವ್ಯ ಕೂಡ ಗಿಲ್ಲಿ ಪರ ನಿಂತಿದ್ದಾರೆ. ಈ ವೇಳೆ ಧ್ರುವಂತ್ ಅವರು ಗಿಲ್ಲಿಗೆ ಬಾಯ್ ಮುಚ್ಕೊಂಡ್ ಕೂತ್ಕೋ, ನಾನ್ ಮಾಡ್ತೀನಿ ಎಂದಿದ್ದಾರೆ. ಈ ಮಾತನ್ನು ಗಿಲ್ಲಿಗೆ ಹೇಳಿದ್ರಾ ಅಥವಾ ಕಾವ್ಯಗೆ ಅಂದ್ರಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.