ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಕ್ಕಳಲ್ಲಿ ಕಂಡು ಬರುವ ಡಯಾಬಿಟಿಸ್ ಕಂಟ್ರೋಲ್ ಮಾಡುವ ಸುಲಭ ವಿಧಾನದ ಬಗ್ಗೆ ತಜ್ಞರ ಕಿವಿಮಾತು

Health Tips: ದೃಷ್ಟಿ ಸಮಸ್ಯೆ, ಉಬ್ಬಸ, ಮಧುಮೇಹದಂತಹ ಅನೇಕ ಕಾಯಿಲೆಗಳು ವಂಶವಾಹಿಯಿಂದ ಬರುವ ಸಾಧ್ಯತೆ ಇದೆ. ರಕ್ತ ಸಂಬಂಧಿಕರಲ್ಲಿ ಮಧುಮೇಹವಿದ್ದರೆ ಅದು ಮುಂದಿನ ಪೀಳಿಗೆಗೆ ಹರಡುವ ಸಾಧ್ಯತೆ ಹೆಚ್ಚಿದೆ. ಈ ಆನುವಂಶಿಕ ಮಧುಮೇಹ ಕಾಯಿಲೆಯ ಹೇಗೆ ಪ್ರಭಾವ ಬೀರುತ್ತದೆ ಮತ್ತು ವಂಶಪಾರಂಪರ್ಯವಾಗಿ ಬರುವ ಈ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವೇ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಮಧುಮೇಹ ತಜ್ಞ ಡಾ. ಸುಮನ್ ಮತ್ತು ಡಯಟಿಶಿಯನ್ ಅನಿತಾ ಉತ್ತರಿಸಿದ್ದಾರೆ.

ಮಕ್ಕಳ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಟಿಪ್ಸ್‌

ಸಾಂದರ್ಭಿಕ ಚಿತ್ರ -

Profile
Pushpa Kumari Jan 2, 2026 8:00 AM

ಬೆಂಗಳೂರು, ಜ. 2: ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆ ತಾಯಿಯ ಗುಣ ಚಹರೆ ಹೋಲುವುದನ್ನು ನಾವು ಕಂಡಿದ್ದೇವೆ. ರೂಪ, ಗುಣ, ಬಣ್ಣ ಇಂತಹ ಅನೇಕ ಸಂಗತಿಗಳು ತಂದೆ-ತಾಯಿಯ ಗುಣ ಲಕ್ಷಣ ಮಕ್ಕಳಿಗೆ ಬರುತ್ತದೆ. ಕೆಲವು ಕಾಯಿಲೆಗಳು ಕೂಡ ವಂಶವಾಹಿಯಾಗಿ ಬರುವ ಸಾಧ್ಯತೆ ಇದೆ. ದೃಷ್ಟಿ ಸಮಸ್ಯೆ, ಉಬ್ಬಸ, ಡಯಾಬಿಟಿಸ್‌ನಂತಹ ಅನೇಕ ಕಾಯಿಲೆಗಳು ವಂಶವಾಹಿಯಿಂದ ಬರುವ ಪ್ರಮಾಣ ಹೆಚ್ಚಿದೆ. ರಕ್ತದ ಸಂಬಂಧಿಗಳಲ್ಲಿ ಮಧುಮೇಹವಿದ್ದರೆ ಅದು ಮುಂದಿನ ಪೀಳಿಗೆಗೆ ಹರಡುವ ಇದೆ. ಈ ಆನುವಂಶಿಕ ಮಧುಮೇಹ ಕಾಯಿಲೆಯ ಹೇಗೆ ಪ್ರಭಾವ ಬೀರುತ್ತದೆ ಮತ್ತು ವಂಶಪಾರಂಪರ್ಯವಾಗಿ ಬರುವ ಈ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವೇ ಎಂಬ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಮಧುಮೇಹ ತಜ್ಞರ ಡಾ. ಸುಮನ್ (Dr. Suman) ಮತ್ತು ಡಯಟಿಶಿಯನ್ ಅನಿತಾ (Dr. Anitha) ತಿಳಿಸಿಕೊಟ್ಟಿದ್ದಾರೆ. ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಟೈಪ್ 1 ಡಯಾಬಿಟಿಸ್ ಕಂಡು ಬರುತ್ತದೆ. ಅವರಿಗೆ ಇನ್ಸುಲಿನ್ ನೀಡಿ ಸರಿಮಾಡಲಾಗುತ್ತದೆ. ಟೈಪ್ 2 ಡಯಾಬಿಟಿಸ್ ಎನ್ನುವುದು ವಯೋವೃದ್ಧರಿಗೆ ಹೆಚ್ಚು ಕಾಡುತ್ತದೆ. ಇವರಿಬ್ಬರ ಜೀವನ ಮತ್ತು ಆಹಾರ ಶೈಲಿಯಿಂದ ಡಯಾಬಿಟಿಸ್ ಕಂಟ್ರೊಲ್ ಮಾಡುವ ವಿಧಾನ ಅರಿಯಬೇಕು ಎಂದು ಡಾ. ಸುಮನ್ ತಿಳಿಸಿದ್ದಾರೆ.

ಟೈಪ್ 1 ಡಯಾಬಿಟಿಸ್ ಮಕ್ಕಳಲ್ಲಿ ಕಂಡು ಬರುವ ಪ್ರಮಾಣ ಹೆಚ್ಚಾಗಿರುವ ಕಾರಣ ಮಕ್ಕಳಿಗೆ ಆಹಾರದ ವಿಚಾರದ ಬಗ್ಗೆ ಜಾಗೃತಿ ವಹಿಸುವುದು ಪೋಷಕರ ಜವಾಬ್ದಾರಿ. ಮಕ್ಕಳಿಗೆ ಇನ್ಸುಲಿನ್ ನೀಡಿ ಕಾರ್ಟ್ ಕೌಂಟ್ ಎಂದು ಮಾಡಲಾಗುತ್ತದೆ. ಈ ಕಾರ್ಟ್ ಕೌಂಟ್ ವಿಧಾನ ನಿತ್ಯ ಅನುಸರಿಸುವುದರಿಂದ ಶುಗರ್ ಲೆವಲ್ ಕಂಟ್ರೋಲ್ ಆಗಲಿದೆ. ಈ ಕಾರ್ಟ್ ಕೌಂಟ್ ವಿಧಾನದಲ್ಲಿ ಮಕ್ಕಳಿಗೆ ಇಷ್ಟವಾಗುವ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಪ್ರೋಟೀನ್, ಹಾಲು, ಹಣ್ಣು, ತರಕಾರಿ ಇತ್ಯಾದಿಗಳನ್ನು ಮಕ್ಕಳು ಕೂಡ ಇಷ್ಟ ಪಟ್ಟು ಸೇವಿಸಬೇಕು ಎಂದು ಡಯಟಿಶಿಯನ್ ಅನಿತಾ ತಿಳಿಸಿದ್ದಾರೆ.

ವಿಡಿಯೊ ನೋಡಿ:



ಟೈಪ್ 1 ಡಯಾಬಿಟಿಸ್‌ನಲ್ಲಿ ಮಕ್ಕಳ ಆಹಾರ ಕ್ರಮದ ಬಗ್ಗೆ ಪೋಷಕರು ಸರಿಯಾಗಿ ತಿಳಿದಿರಬೇಕು. ಮಕ್ಕಳಿಗೆ ಯಾವ ಆಹಾರ ನೀಡಬೇಕು ಅಥವಾ ನೀಡಬಾರದು ಎಂಬ ಪರಿಜ್ಞಾನ ಪೋಷಕರಿಗೆ ಇರಬೇಕು. ಅದಕ್ಕೂ ಮೊದಲು ತಮ್ಮ ಮಕ್ಕಳಿಗೆ ಈ ಡಯಾಬಿಟಿಸ್ ಬಗ್ಗೆ ಅರಿವು ಮೂಡಿಸಿ ಸ್ವಕಾಳಜಿ ಮಾಡಲು ಸಲಹೆ ನೀಡಬೇಕು. ಆಗ ಮಕ್ಕಳು ಶಾಲಾ ಅವಧಿಯಲ್ಲಿಯೂ ಹೊರಗಿನ ತಿಂಡಿ ಇತರೆ ಸೇವಿಸಲು ಜಾಗೃತಿ ವಹಿಸುವುದಾಗಿ ಅನಿತಾ ಸಲಹೆ ನೀಡಿದ್ದಾರೆ.

ಟೈಪ್ 2 ಡಯಾಬಿಟಿಸ್‌ನಲ್ಲಿ ತೂಕ ಇಳಿಕೆ ಮತ್ತು ಕ್ಯಾಲರಿ ರಿಸ್ಟ್ರಿಕ್ಷನ್ ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ. ಇತ್ತೀಚಿನ ದಿನದಲ್ಲಿ 15-18 ವಯಸ್ಸಿನವರಿಗೆಲ್ಲ ಈ ಟೈಪ್ 2 ಡಯಾಬಿಟಿಸ್ ಕಂಡು ಬರುವ ಪ್ರಮಾಣ ಹೆಚ್ಚಾಗಿದ್ದು ಇದಕ್ಕೆ ವಂಶವಾಹಿ ಮುಖ್ಯ ಕಾರಣ. ಹೀಗಾಗಿ ಇಲ್ಲಿ ಕೂಡ ಆಹಾರ ಪದ್ಧತಿ ಬೇರೆಯೇ ಇರಲಿದೆ. ಟೈಪ್ 1, ಟೈಪ್ 2 ಡಯಾಬಿಟಿಸ್ ನಡುವೆ ಆಹಾರ ಕ್ರಮದಲ್ಲಿಯೂ ವ್ಯತ್ಯಾಸ ಇರಲಿದೆ. ಹಾಗಿದ್ದರೂ ಈ ಎರಡು ಡಯಾಬಿಟಿಸ್ ಅವರು ಸಕ್ಕರೆ ಮತ್ತು ಬೆಲ್ಲ, ಜೇನುತುಪ್ಪ ಇತರ ಸಿಹಿ ಅಂಶ ಇರುವ ಆಹಾರವನ್ನು ತ್ಯಜಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭ ಇದೆ ಗೊತ್ತಾ?

ಟೈಪ್ 1 ಡಯಾಬಿಟಿಸ್‌ನಲ್ಲಿ ಮಕ್ಕಳ ಬೆಳವಣಿಗೆಗೆ ಆದ್ಯತೆ ನೀಡುವ ಜತೆಗೆ ಡಯಾಬಿಟಿಸ್ ಕಂಟ್ರೋಲ್ ಮಾಡುವ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತದೆ. ಟೈಪ್ 2 ಡಯಾಬಿಟಿಸ್‌ನಲ್ಲಿ ತೂಕ ಇಳಿಕೆ ಜತೆಗೆ ಡಯಾಬಿಟಿಸ್ ಕಂಟ್ರೋಲ್ ಮಾಡಲು ಆಹಾರ ಕ್ರಮ ಅನುಸರಿಸಬೇಕು ಎಂದು ಡಾ. ಸುಮನ್ ತಿಳಿಸಿದ್ದಾರೆ.

ಮಕ್ಕಳಿಗೆ ಟೈಪ್ 1 ಡಯಾಬಿಟಿಸ್ ಇದ್ದಾಗ ಕಂಟ್ರೋಲ್ ಮಾಡುವುದು ಬಹಳ ಕಷ್ಟವಾಗಿರುತ್ತದೆ. ಶಾಲಾ ಅವಧಿಯಲ್ಲಿ ಚಿಕ್ಕಿ, ಚಾಕೊಲೇಟ್, ಐಸ್ ಕ್ರೀಂ, ಕೇಕ್ ಇತರ ಆಹಾರ ಸೇವಿಸುವ ಸಾಧ್ಯತೆ ಹೆಚ್ಚು. ಆಗ ಪೋಷಕರು ಮಕ್ಕಳ ಮೇಲೆ ಕೋಪದಿಂದ ಗದರಿ ಮನಸ್ಸಿಗೆ ನೋವು ನೀಡಬಾರದು. ಅದರ ಬದಲು ತಾಳ್ಮೆಯಿಂದ ಅವರಿಗೆ ಡಯಾಬಿಟಿಸ್ ಅಪಾಯವನ್ನು ಮನದಟ್ಟು ಮಾಡಬೇಕು. ತಾಯಂದಿರು ಸಿಹಿಯ ಆಹಾರಕ್ಕೆ ತಡೆ ವಿಧಿಸಿದರೆ ಮಕ್ಕಳಿಗೆ ಆ ತಿಂಡಿಯ ಮೇಲೆ ವಿಶೇಷ ಆಸಕ್ತಿ, ಕುತೂಹಲ ಮೂಡುತ್ತದೆ. ಹೀಗಾಗಿ ಮಕ್ಕಳು ಪೋಷಕರಿಗೆ ತಿಳಿಸದೆ ಕದ್ದು ಮುಚ್ಚಿ ಸಿಹಿ ಪದಾರ್ಥ ಸೇವಿಸುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಿಗೆ ಈ ಬಗ್ಗೆ ಜಾಗೃತವಾಗುವಂತೆ ಪೋಷಕರು ಉತ್ತಮ ರೀತಿಯಲ್ಲಿ ಸಲಹೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.