ಬೆಂಡೆಕಾಯಿ ಬಳಕೆ ಬಗ್ಗೆ ತಜ್ಞರು ನೀಡಿರುವ ಪ್ರಮುಖ ಸಲಹೆಗಳಿವು!
Health Tips: ಸರಳವಾಗಿ ಕಾಣುವ ಈ ಬೆಂಡೆಕಾಯಿಯಲ್ಲಿಅಪಾರ ಪ್ರಮಾಣದ ಪೋಷಕಾಂಶಗಳಿದ್ದು ಬಹಳಷ್ಟು ಹಿತಕಾರಿ. ಆರೋಗ್ಯವನ್ನು ಬೆಂಬಲಿಸುವ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಸಸ್ಯ ಸಂಯುಕ್ತಗಳನ್ನು ಸಹ ಒಳಗೊಂಡಿದೆ. ದಿನ ನಿತ್ಯ ಆಹಾರದಲ್ಲಿ ಬೆಂಡೆಕಾಯಿ ಬಳಕೆ ಎಷ್ಟು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ.
(ಸಂಗ್ರಹ ಚಿತ್ರ) -
ನವದೆಹಲಿ,ಸೆ.7: ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ತರಕಾರಿ ಅಂದ್ರೆ ಅದು ಬೆಂಡೆಕಾಯಿ, ಪಲ್ಯ, ಸಾಂಬಾರು ಅಥವಾ ಪ್ರೈ ಮಾಡಿ ಊಟದ ಜೊತೆಗೆ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ ಸರಳವಾಗಿ ಕಾಣುವ ಈ ಬೆಂಡೆಕಾಯಿಯಲ್ಲಿ ಅಪಾರ ಪ್ರಮಾಣದ ಪೋಷ ಕಾಂಶಗಳಿದ್ದು ಬಹಳಷ್ಟು ಹಿತಕಾರಿ. ಆರೋಗ್ಯವನ್ನು ಬೆಂಬಲಿಸುವ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಸಸ್ಯ ಸಂಯುಕ್ತಗಳನ್ನು ಸಹ ಒಳಗೊಂಡಿದೆ. ದಿನ ನತ್ಯ ಆಹಾರದಲ್ಲಿ ಬೆಂಡೆಕಾಯಿ ಬಳಕೆ ಎಷ್ಟು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ:
ಬೆಂಡೆಕಾಯಿ ಕರಗುವ ನಾರನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಗ್ಲೂಕೋಸ್ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇನ್ಸುಲಿನ್ ಸೂಕ್ಷ್ಮತೆ ಮತ್ತು ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡಲು ಹೆಚ್ಚು ನೆರವಾಗುತ್ತದೆ.
ಹೊಟ್ಟೆ ಹಾಗೂ ಕರುಳಿನ ಆರೋಗ್ಯ:
ಬೆಂಡೆಕಾಯಿಯಲ್ಲಿ ಇರುವ ಪ್ರೀಬಯೋಟಿಕ್ ನಾರಿನ ಅಂಶವು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಶಕ್ತಿ ನೀಡಿ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿ ಇರಿಸುವಂತೆ ಮಾಡುತ್ತದೆ. ಹಾಗಾಗಿ ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಗೆ ಇದು ಪ್ರಯೋಜನಕಾರಿಯಾಗಿದೆ.
Vishwavani Health: ಜೆನ್ ಝೀಗಳನ್ನು ಕಾಡುತ್ತಿದೆ ಕಣ್ಣುರಿ, ಕತ್ತುನೋವು; ಕಾರಣವೇನು? ಏನಿದಕ್ಕೆ ಪರಿಹಾರ?
ಅಗತ್ಯ ವಿಟಮಿನ್‌ಗಳು ಮತ್ತು ಖನಿಜಗಳು ಸಿಗುತ್ತವೆ:
ಬೆಂಡೆಕಾಯಿಯಲ್ಲಿ ವಿಟಮಿನ್ K ಪ್ರಮಾಣ ಅಧಿಕವಾಗಿದ್ದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆಗಳ ಆರೋಗ್ಯಕ್ಕೆ ಸಹಕಾರಿ.
ವಿಟಮಿನ್ ಸಿ ಪ್ರಮಾಣ:
ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಫೋಲೇಟ್ ಮತ್ತು ವಿಟಮಿನ್ B ಕೋಶಗಳ ಬೆಳವಣಿಗೆ ನೆರವು ನೀಡುತ್ತದೆ..ಹಾಗೆಯೇ ದೇಹದ ನರ ಮತ್ತು ಸ್ನಾಯುಗಳ ಸಕ್ರಿಯ ಕಾರ್ಯನಿರ್ವಹಣೆಗೂ ಪೂರಕವಾಗಿದೆ.
ಆಂಟಿ-ಆಕ್ಸಿಡೆಂಟ್ ಗುಣಗಳು:
ಬೆಂಡೆಕಾಯಿಯಲ್ಲಿ ಇರುವ ಪಾಲಿಫಿನಾಲ್‌ಗಳು ದೇಹದ ಜೀವಕೋಶಗಳ ಉರಿಯೂತವನ್ನು ತಡೆಯಲು ಸಹಕರಿಸುತ್ತವೆ. ಹೀಗಾಗಿಯೇ ಶಸ್ತ್ರಚಿಕಿತ್ಸೆಯ ನಂತರದ ಅವಧಿಯಲ್ಲಿ ಬೆಂಡೇಕಾಯಿ ಆಹಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.
ಅಡುಗೆ ಮಾಡುವ ವಿಧಾನ
ಬೆಂಡೇಕಾಯಿಯನ್ನು ಎಣ್ಣೆಯಲ್ಲಿ ಕರಿದು ಸೇವಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಕನಿಷ್ಠ ಎಣ್ಣೆ ಬಳಸಿ ಸ್ವಲ್ಪ ಪ್ರಮಾಣದಲ್ಲಿ ಬೇಯಿಸಿ. ಬೆಂಡೇಕಾಯಿಯಲ್ಲಿ ವಿಟಮಿನ್ K ಅಧಿಕವಾಗಿರುವುದರಿಂದ ಮೂತ್ರಪಿಂಡದ ಸಮಸ್ಯೆ ಇದ್ದವರು ವೈದ್ಯರ ಸಲಹೆ ಪಡೆದ ನಂತರವೇ ಸೇವಿಸಿ.