ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಆಹಾರ ಹಸಿಯಾಗಿ ಸೇವಿಸಿದರೆ ಒಳ್ಳೆಯದೇ?

ಆಹಾರ ಹಸಿಯದಾಗಿದ್ದರೆ ಸರಿಯೋ ಅಥವಾ ಬೇಯಿಸಿದ್ದು ಸೂಕ್ತವೋ? ಎಂಬುದು ಈ ಪ್ರಶ್ನೆಯ ತಿರುಳು. ಕೆಲವರು ಹಸಿ ಆಹಾರಗಳ ಸೇವನೆಗೆ ಹೆಚ್ಚಿನ ಒತ್ತು ನೀಡಿದರೆ, ಹಲವರು ಬೇಯಿಸಿದ್ದೇ ಸರಿ ಎನ್ನುವವರಿದ್ದಾರೆ. ಈ ಎರಡೂ ತಂಡಗಳಿಗೆ ತಂತಮ್ಮ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಕಷ್ಟು ವಿಷಯಗಳಿವೆ. ಆದರೆ ಇತ್ತಂಡಗಳಿಂದಾಗಿ ನಮಗೆ ಗೊಂದಲ ಆಗಬಾರದಲ್ಲಾ- ಹಾಗಾಗಿ ಈ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ.

ಹಸಿಯಾಗಿ ಆಹಾರ ಸೇವಿಸಿದರೆ ಒಳಿತೆ?

ಹಸಿಯಾದ ಆಹಾರ -

Profile
Pushpa Kumari Nov 21, 2025 7:00 AM

ನವದೆಹಲಿ: ಆಹಾರವನ್ನು ಹೇಗೆ ಸೇವಿಸಿದರೆ ಸೂಕ್ತ? ಇದೆಂಥಾ ವಿಚಿತ್ರ ಪ್ರಶ್ನೆ ಎನಿಸಿದರೆ- ಕೇಳುವುದಕ್ಕೊಂದು ಕಾರಣವಿದೆ. ಆಹಾರ ಹಸಿಯದಾಗಿದ್ದರೆ (Raw food) ಸರಿಯೋ ಅಥವಾ ಬೇಯಿಸಿದ್ದು ಸೂಕ್ತವೋ? ಎಂಬುದು ಈ ಪ್ರಶ್ನೆಯ ತಿರುಳು. ಕೆಲವರು ಹಸಿ ಆಹಾರಗಳ ಸೇವನೆಗೆ ಹೆಚ್ಚಿನ ಒತ್ತು ನೀಡಿದರೆ, ಹಲವರು ಬೇಯಿಸಿದ್ದೇ ಸರಿ ಎನ್ನುವವರಿದ್ದಾರೆ. ಈ ಎರಡೂ ತಂಡಗಳಿಗೆ ತಂತಮ್ಮ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಕಷ್ಟು ವಿಷಯಗಳಿವೆ. ಆದರೆ ಇತ್ತಂಡ ಗಳಿಂದಾಗಿ ನಮಗೆ ಗೊಂದಲ ಆಗಬಾರದಲ್ಲಾ- ಹಾಗಾಗಿ ಈ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ.

ಹಸಿಯಾಗಿ ಸೇವಿಸಿದರೆ ಒಳ್ಳೆಯದೇ?: ಕೆಟ್ಟದಂತೂ ಖಂಡಿತ ಅಲ್ಲ! ಆದರೆ ಎಲ್ಲವನ್ನೂ ಹಸಿಯಾಗಿ ತಿನ್ನಲು ಸಾಧ್ಯವಾಗದೇ ಇರಬಹುದು. ವಿಷಯವೇನೆಂದರೆ, ದೇಹಕ್ಕೆ ಸುಲಭವಾಗಿ ದಕ್ಕಬಲ್ಲಂಥ ವಿಟಮಿನ್‌ಗಳ ಸಾಂದ್ರತೆ ಹಸಿ ಆಹಾರದಲ್ಲಿ ಹೆಚ್ಚು ಎನ್ನುತ್ತಾರೆ ಪರಿಣಿತರು. ಹಸಿಯಾದ ತರಕಾರಿ ಮತ್ತು ಹಣ್ಣುಗಳಲ್ಲಿ ಆಂಟಿ ಆಕ್ಸಿಂಡೆಂಟ್‌ಗಳ ಪ್ರಮಾಣವೂ ಗಣನೀಯವಾಗಿ ಹೆಚ್ಚಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಹಸಿಯಾದ ಮೆಣಸಿನ ಕಾಯಿಯಲ್ಲಿ ಸರಿಸುಮಾರು ನಿಂಬೆಹಣ್ಣಿನಲ್ಲಿ ಇರುವಷ್ಟೇ ಪ್ರಮಾಣದಲ್ಲಿ ವಿಟಮಿನ್‌ ಸಿ ದೊರೆಯುವುದಕ್ಕೆ ಸಾಧ್ಯವಿದೆ. ಹಾಗೆಂದು ಹಸಿರು ಮೆಣಸಿನ ಕಾಯಿಯನ್ನು ಎಷ್ಟು ಜನರಿಗೆ ಹಸಿಯಾಗಿ ತಿಂದು ಸುಧಾರಿಸಿಕೊಳ್ಳಲು ಸಾಧ್ಯ?

ತೂಕ ಇಳಿಕೆ, ಕೊಲೆಸ್ಟ್ರಾಲ್‌ ಮತ್ತು ಮಧುಮೇಹ ನಿಯಂತ್ರಣದಂಥ ಗುರಿಗಳಿದ್ದಲ್ಲಿ ಹಸಿ ತರಕಾರಿ-ಹಣ್ಣುಗಳು ಅತ್ಯುತ್ತಮ ಪ್ರಯೋಜನ ನೀಡಬಲ್ಲವು. ಆಹಾರದಲ್ಲಿ ಕಿಣ್ವಗಳ ಮಟ್ಟ ಕಾಯ್ದು ಕೊಳ್ಳುವುದಕ್ಕೂ ಹಸಿಯಾಗಿಯೇ ತಿನ್ನುವುದು ನೆರವಾಗುತ್ತದೆ. ಹಸಿ ಎಂದರೆ ಹಣ್ಣು ತರಕಾರಿಗಳು ಮಾತ್ರವೇ ಅಲ್ಲ, ಹಸಿ ಕಾಳುಗಳು ಅಥವಾ ಮೊಳಕೆ ಕಾಳುಗಳು, ಯಾವುದೇ ಸಂಸ್ಕರಣೆಗೆ ಒಳಪಡದಂತೆ ತಿನ್ನಲಾಗುವ ಬೀಜಗಳು ಮತ್ತು ಒಣಹಣ್ಣುಗಳು ಸಹ ಸೇರಿವೆ.

ಇದನ್ನು ಓದಿ:Health Tips: ಯಾವ ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಸೂಕ್ತ?

ಬೇಯಿಸಿದರೇನಾಗುತ್ತದೆ?: ಅದರಿಂದಲೂ ಆಗುವ ನಷ್ಟ ಏನೂ ಇಲ್ಲ. ಆಹಾರ ಸಂಸ್ಕೃತಿ ಬೆಳೆದು ಬಂದ ದಿನಗಳಿಂದಲೂ ಬೇಯಿಸಿ ತಿನ್ನುವುದು ಮಾನವರಿಗೆ ಇಷ್ಟವಾಗುವಂಥದ್ದು. ಕಾರಣ, ಬೇಯಿಸಿದ ಆಹಾರ ಸುಲಭಕ್ಕೆ ಜೀರ್ಣವಾಗುತ್ತದೆ. ಸೊಪ್ಪು-ತರಕಾರಿಗಳನ್ನು ಬೇಯಿಸಿ ತಿನ್ನು ವುದರಿಂದ, ಇದರಲ್ಲಿರುವ ಹೆಚ್ಚುವರಿ ನೀರು ಕಡಿಮೆಯಾಗುತ್ತದೆಯೇ ಹೊರತು ಪೌಷ್ಟಿ ಕಾಂಶವಲ್ಲ ಎನ್ನುತ್ತಾರೆ ತಜ್ಞರು. ಉದಾ, ವಿಟಮಿನ್‌ ಕೆಯಂಥ ಸತ್ವಗಳು ಬೇಯಿಸಿದಾಗಲೇ ಸಾಂದ್ರ ಗೊಳ್ಳುತ್ತವೆಯಂತೆ. ಬೇಯಿಸಿದ ಆಹಾರದಲ್ಲಿ ಕಿಣ್ವಗಳು ಕಡಿಮೆಯಾಗುತ್ತವೆನ್ನುವುದು ಹೌದಾದರೂ, ನಮ್ಮ ದೇಹಕ್ಕೆ ಬೇಕಾಗುವಷ್ಟು ನಮಗೆ ಮೋಸವಿಲ್ಲ ಎಂಬುದು ಅವರ ಮಾತು.

ಆಹಾರವನ್ನು ಬೇಯಿಸುವ ಮತ್ತೊಂದು ಮುಖ್ಯ ಲಾಭವೆಂದರೆ, ಅದರಲ್ಲಿ ಇರಬಹುದಾದ ರೋಗಾಣುಗಳನ್ನು ನಿರ್ನಾಮ ಮಾಡುವುದು. ಆಹಾರ ಸಸ್ಯಜನ್ಯವೇ ಇರಲಿ ಅಥವಾ ಪ್ರಾಣಿ ಜನ್ಯವೇ ಇರಲಿ- ಅದನ್ನು ಬೇಯಿಸಿ ತಿನ್ನುವುದರಿಂದ ಅದರಲ್ಲಿನ ಬೇಡದ ಸೂಕ್ಷ್ಮಜೀವಿಗಳನ್ನು ನಾಶ ಪಡಿಸಿ, ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಮಾತ್ರವಲ್ಲ, ಕೆಲವು ಸತ್ವಗಳನ್ನು ಹೀರಿಕೊಳ್ಳಲು ಆಹಾರದಲ್ಲಿರುವ ಇನ್ನೂ ಕೆಲವು ಅಂಶಗಳನ್ನು ನಮ್ಮ ದೇಹಕ್ಕೆ ತಡೆಯೊಡ್ಡುವ ಸಾಧ್ಯತೆಯಿದೆ. ಉದಾ, ಆಂಟಿ ನ್ಯೂಟ್ರಿಯೆಂಟ್‌ಗಳೆಂದೇ ಕರೆಸಿಕೊಳ್ಳುವ ಆಕ್ಸಲೇಟ್‌ ಮತ್ತು ಫೈಟೇಟ್‌ಗಳನ್ನು ಬೇಯಿಸುವುದರಿಂದ ತಗ್ಗಿಸಬಹುದು.

ಎಲ್ಲಾ ಆಹಾರಗಳನ್ನು ಬೇಯಿಸಿ ತಿನ್ನುವುದು ಹೇಗೆ ರುಚಿಯಾಗುವುದಿಲ್ಲವೋ ಹಾಗೆಯೇ ಎಲ್ಲ ವನ್ನೂ ಬೇಯಿಸದೆ ತಿನ್ನುವುದೂ ಸಾಧ್ಯವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ, ಲಾಗಾಯ್ತಿನಿಂದ ನಾವು ಅನುಸರಿಸಿಕೊಂಡು ಬರುತ್ತಿರುವ ಆಹಾರ ಕ್ರಮಗಳಲ್ಲಿ, ಕೆಲವನ್ನು ಬೇಯಿಸಿ ಮತ್ತು ಕೆಲವನ್ನು ಹಸಿಯಾಗಿ ತಿನ್ನುತ್ತೇವೆ. ಘಮಘಮಿಸುವ ಪಲಾವಿಗೆ ಹಸಿ ತರಕಾರಿಯ ರಾಯ್ತ ಇದ್ದಂತೆ! ಇದು ನಮ್ಮ ರುಚಿ, ಅನುಕೂಲ ಮತ್ತು ಅಗತ್ಯಕ್ಕೆ ಸಂಬಂಧಪಟ್ಟಂತೆ ಅಲ್ಲಲ್ಲಿ ವ್ಯತ್ಯಯ ವಾಗಬಹುದು. ಮೊದಲಿನಿಂದ ರೂಢಿಯಿರುವ ಮತ್ತು ದೇಹಕ್ಕೆ ಒಗ್ಗಿರುವ ಆಹಾರ ಪದ್ಧತಿಯೇ ಸೂಕ್ತ ಎನ್ನುವುದು ಆಹಾರ ತಜ್ಞರ ಅಭಿಮತ.