Health Insurance: ಆರೋಗ್ಯ ವಿಮೆಯಲ್ಲಿ ದೊಡ್ಡ ಬದಲಾವಣೆ- ಈ ಎರಡು ಕಂಪನಿಗಳ ಪಾಲಿಸಿಗಳಿಗೆ ಕ್ಯಾಶ್‌ಲೆಸ್ ಸೇವೆ ಬಂದ್
ಬಜಾಜ್ ಅಲಯನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳ ಆರೋಗ್ಯ ವಿಮೆಗಳನ್ನು ಸ್ಥಗಿತಗೊಳಿಸಲು ಭಾರತದ ಆರೋಗ್ಯ ವಿಮಾ ಸೇವಾದಾರ ಕಂಪನಿಗಳ ಸಂಸ್ಥೆ ನಿರ್ಧರಿಸಿದ್ದು, ಖರೀದಿಸಿರುವವರಿಗೆ ಈ ಆರೋಗ್ಯ ವಿಮಾ ನೆಟ್ ವರ್ಕ್ ನಲ್ಲಿರುವ ದೇಶದ 20 ಸಾವಿರ ಆಸ್ಪತ್ರೆಗಳಲ್ಲಿ ವಿಮಾ ಸೇವೆಗಳನ್ನು ಬಂದ್ ಆಗಲಿವೆ. ಈ ಬಗ್ಗೆ, ಎಎಚ್ ಪಿಐ ಸಂಸ್ಥೆ ಮಾಹಿತಿ ನೀಡಿದ್ದು, ಈ ವಿಮಾ ಯೋಜನೆಯಡಿ ಬರುವ 20 ಸಾವಿರ ಆಸ್ಪತ್ರೆಗಳಿಗೆ ಎಎಚ್ ಪಿಐ ಆದೇಶ ಹೊರಡಿಸಿದೆ. ಸೆ. 1ರಿಂದ ಈ ಆದೇಶ ಜಾರಿಗೆ ಬರಲಿದೆ


ನವದೆಹಲಿ: ಬಜಾಜ್ ಅಲಯನ್ಸ್ (Bajaj Allianz) ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ (Care Health Insurance) ಕಂಪನಿಗಳಿಂದ ಆರೋಗ್ಯ ವಿಮೆ (Health Insurance) ಖರೀದಿಸಿದವರಿಗೆ ದೇಶಾದ್ಯಂತ ಆರೋಗ್ಯ ವಿಮಾ ಸೇವಾದಾರ ಕಂಪನಿಗಳ ಸಂಸ್ಥೆ (Association of Health Insurance Service Companies) ನೆಟ್‌ವರ್ಕ್‌ನಲ್ಲಿರುವ 20,000 ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಸೇವೆಗಳು ಸೆಪ್ಟೆಂಬರ್ 1 ರಿಂದ ಸ್ಥಗಿತಗೊಳ್ಳಲಿವೆ. ಎಎಚ್‌ಪಿಐ ಈ ಸಂಬಂಧ ತನ್ನ ವ್ಯಾಪ್ತಿಯ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿದೆ. ಇದರಿಂದ, ಈ ಕಂಪನಿಗಳ ಪಾಲಿಸಿ ಹೊಂದಿರುವವರು ಚಿಕಿತ್ಸೆಗೆ ತಮ್ಮ ಖಾಸಗಿ ಹಣವನ್ನೇ ಪಾವತಿಸಬೇಕಾಗುತ್ತದೆ.
ಸೂಚನೆಯ ಪರಿಣಾಮ
ಎಎಚ್‌ಪಿಐ ವ್ಯಾಪ್ತಿಯ ಆಸ್ಪತ್ರೆಗಳಾದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ, ಫೋರ್ಟಿಸ್ ಎಸ್ಕಾರ್ಟ್ಸ್ ಮತ್ತು ಇತರ ಸ್ಥಳೀಯ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಸೌಲಭ್ಯ ನಿಲ್ಲಲಿದೆ. ಈ ಆದೇಶ ಉತ್ತರ ಭಾರತದಲ್ಲಿ ಮಾತ್ರ ಜಾರಿಗೆ ಬರಲಿದೆ ಎಂದು ತಿಳಿದುಬಂದಿದ್ದು, ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖವಿಲ್ಲ ಮತ್ತು ಎಎಚ್‌ಪಿಐ ಇದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಈ ಸುದ್ದಿಯನ್ನು ಓದಿ: Dharmasthala: ಧರ್ಮಸ್ಥಳ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪ; ಎಸ್‌ಐಟಿಯಿಂದ ತಿಮರೋಡಿ ಮನೆಗೆ ದಾಳಿ
ಎಎಚ್‌ಪಿಐ ವ್ಯಾಪ್ತಿ
ದೇಶದ 20,000ಕ್ಕೂ ಹೆಚ್ಚು ಆಸ್ಪತ್ರೆಗಳು ಎಎಚ್‌ಪಿಐ ನೆಟ್‌ವರ್ಕ್‌ನಲ್ಲಿವೆ. ಯಾವುದೇ ಆರೋಗ್ಯ ವಿಮಾ ಕಂಪನಿಯು ದೇಶದಲ್ಲಿ ಕಾರ್ಯಾರಂಭ ಮಾಡಿದರೂ ಎಎಚ್‌ಪಿಐ ಸದಸ್ಯತ್ವ ಕಡ್ಡಾಯವಾಗಿದೆ. ಈ ನಿಯಮವು ದೇಶದ ಪ್ರತಿಷ್ಠಿತ ಮತ್ತು ಸ್ಥಳೀಯ ಆಸ್ಪತ್ರೆಗಳಿಗೆ ಅನ್ವಯವಾಗುತ್ತದೆ.
ವಿದೇಶದಲ್ಲಿ ಭಾರತೀಯರಿಗೆ ಆರೋಗ್ಯ ವಿಮೆ
ಯುನೈಟೆಡ್ ಕಿಂಗ್‌ಡಮ್, ಅಮೆರಿಕಾ ಮತ್ತು ಗಲ್ಫ್ ದೇಶಗಳಲ್ಲಿ ವಾಸಿಸುವ ಭಾರತೀಯರು ಆರೋಗ್ಯ ಸೇವೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹೆಚ್ಚು ಸಮಯ ಕಾಯುವಿಕೆ, ಹೆಚ್ಚಿನ ವೆಚ್ಚ ಮತ್ತು ಅಪಾಯಿಂಟ್‌ಮೆಂಟ್‌ನ ಅಗತ್ಯದಿಂದ ಕೆಲವರು ಚಿಕಿತ್ಸೆಗಾಗಿ ಭಾರತಕ್ಕೆ ಬಂದು ಹಿಂತಿರುಗುತ್ತಾರೆ. ಅನಿವಾಸಿ ಭಾರತೀಯರಲ್ಲಿ ಭಾರತದ ಆರೋಗ್ಯ ವಿಮೆಯನ್ನು ಹೊಂದುವವರ ಸಂಖ್ಯೆ ಹೆಚ್ಚುತ್ತಿದೆ.
ಯಶಸ್ವಿನಿ ಆರೋಗ್ಯ ವಿಮೆ
ಕರ್ನಾಟಕ ಸರ್ಕಾರದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು ಸಹಕಾರಿ ಸಂಘಗಳ ಸದಸ್ಯರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತದೆ. ಈ ಯೋಜನೆಯಡಿ ಹೃದಯ ಶಸ್ತ್ರಚಿಕಿತ್ಸೆ, ಮೂಳೆ ಚಿಕಿತ್ಸೆ, ನರವಿಜ್ಞಾನ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ 2,000ಕ್ಕೂ ಹೆಚ್ಚು ವೈದ್ಯಕೀಯ ಸೇವೆಗಳು ರಾಜ್ಯದಾದ್ಯಂತ ಲಭ್ಯವಿವೆ.