ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿಮ್ಮ ರಕ್ತದೊತ್ತಡವನ್ನು ಸದ್ದಿಲ್ಲದೆ ಹೆಚ್ಚಿಸುವ ದೈನಂದಿನ ಅಭ್ಯಾಸಗಳು ಇವು!

Health Tips: ಇತ್ತೀಚೆಗೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದವರು ಅನೇಕರು ಇದ್ದಾರೆ. ವೈದ್ಯಕೀಯ ಲೋಕದಲ್ಲಿ ಇದನ್ನು ಸೈಲೆಂಟ್ ಕಿಲ್ಲರ್ ರೋಗ ಎಂದೇ ಕರೆಯುತ್ತಾರೆ‌...ಅದರಲ್ಲೂ ಇತ್ತೀಚೆಗೆ ಕೆಲಸದ ಒತ್ತಡ ಹಾಗೂ ಆಧುನಿಕ ಆಹಾರ ಪದ್ದತಿಯಿಂದ ರಕ್ತದೊತ್ತಡ ಸಮಸ್ಯೆ ಜಾಸ್ತಿಯಾಗುತ್ತಿದೆ. ದಿನ ನಿತ್ಯ ನಾವು ಕೆಲವೊಂದು ಅಭ್ಯಾಸ ಬೆಳೆಸಿಕೊಳ್ಳುವ ಮೂಲಕ ಹಾಗೂ ತಪ್ಪು ಅಭ್ಯಾಸಗಳಿಗೆ ಕಡಿವಾಣ ಹಾಕುವ ಮೂಲಕ ಈ ಸಮಸ್ಯೆ ಬಗೆಹರಿಸಬಹುದು...

ರಕ್ತದೊತ್ತಡ ಹೆಚ್ಚು ಮಾಡುವ ದೈನಂದಿನ ಅಭ್ಯಾಸಗಳೀವು!

ಸಂಗ್ರಹ ಚಿತ್ರ -

Profile
Pushpa Kumari May 21, 2026 6:00 AM

ನವದೆಹಲಿ,ಮೇ 20: ಇತ್ತೀಚೆಗೆ ಅಧಿಕ ರಕ್ತದೊತ್ತಡ (blood pressure) ಸಮಸ್ಯೆಯಿಂದ ಬಳಲುತ್ತಿದ್ದವರು ಅನೇಕರು ಇದ್ದಾರೆ. ವೈದ್ಯಕೀಯ ಲೋಕದಲ್ಲಿ ಇದನ್ನು ಸೈಲೆಂಟ್ ಕಿಲ್ಲರ್ ರೋಗ ಎಂದೇ ಕರೆಯುತ್ತಾರೆ‌. ದೇಹದಲ್ಲಿ ಯಾವುದೇ ಪ್ರಮುಖ ಲಕ್ಷಣಗಳನ್ನು ತೋರ್ಪಡಿಸದೆ ಒಮ್ಮೆಲೆ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಅದರಲ್ಲೂ ಇತ್ತೀಚೆಗೆ ಕೆಲಸದ ಒತ್ತಡ ಹಾಗೂ ಆಧುನಿಕ ಆಹಾರ ಪದ್ದತಿಯಿಂದ ರಕ್ತದೊತ್ತಡ ಸಮಸ್ಯೆ ಜಾಸ್ತಿಯಾಗುತ್ತಿದೆ. ದಿನ ನಿತ್ಯ ನಾವು ಕೆಲವೊಂದು ಅಭ್ಯಾಸ ಬೆಳೆಸಿಕೊಳ್ಳುವ ಮೂಲಕ ಹಾಗೂ ತಪ್ಪು ಅಭ್ಯಾಸಗಳಿಗೆ ಕಡಿವಾಣ ಹಾಕುವ ಮೂಲಕ ಈ ಸಮಸ್ಯೆ ಬಗೆಹರಿಸಬಹುದು.

ಅನಿಯಮಿತ ಸಮಯದಲ್ಲಿ ಊಟ ಮಾಡುವುದು, ಸಾಕಷ್ಟು ನಿದ್ರೆ ಇಲ್ಲದಿರುವುದು,ಒತ್ತಡ ನಿರ್ವಹಣೆಯ ಕೊರತೆ ಇತ್ಯಾದಿ ಅಭ್ಯಾಸಗಳು ಕಾಲಾನಂತರದಲ್ಲಿ ಹೃದಯ ಮತ್ತು ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತವೆ. ಇದರಿಂದಾಗಿ ಹೃದಯ ವೈಪರೀತ್ಯಗಳು, ಪಾರ್ಶ್ವವಾಯು, ಮೂತ್ರಪಿಂಡದ ಸಮಸ್ಯೆಗಳು ಮುಂತಾದ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚು ಮಾಡಬಹುದು‌.

ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುವ ದೈನಂದಿನ ಅಭ್ಯಾಸಗಳು

ದೀರ್ಘಕಾಲ ಕುಳಿತುಕೊಳ್ಳುವುದು:

ಹೆಚ್ಚಿನ ಸಮಯದ ವರೆಗೆ ಒಂದೇ ಕೆಲಸ ಕಾರ್ಯದಲ್ಲಿ ಮಗ್ನರಾಗುವುದು, ಜಡ ಜೀವನ ಶೈಲಿ ಬೆಳೆಸಿಕೊಳ್ಳುವುದು ರಕ್ತದೊತ್ತಡಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ವಿಶೇಷವಾಗಿ ದೀರ್ಘಕಾಲ ಕುಳಿತುಕೊಳ್ಳುವುದು ರಕ್ತದ ಹರಿವು ಮತ್ತು ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ಹಾಗೂ ಇದು ಬೊಜ್ಜುತನಕ್ಕೆ ಕಾರಣವಾಗುತ್ತದೆ.

ದೈನಂದಿನ ಆಹಾರಗಳಲ್ಲಿ ಅತೀಯಾದ ಉಪ್ಪು:

ಹೆಚ್ಚು ಸೋಡಿಯಂ ಸೇವನೆಯು ದೇಹಕ್ಕೆ ಕೆಟ್ಟ ಪರಿಣಾಮ ಬೀರಬಹುದು. ಉಪ್ಪಿನ ಸೇವನೆಯೂ ರಕ್ತನಾಳಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯ ಸ್ನಾಯುವಿನ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡಬಹುದು.ಸಂಸ್ಕರಿಸಿದ ತಿಂಡಿಗಳು, ಸಾಸ್‌ಗಳು, ಬೇಕರಿ ಉತ್ಪನ್ನಗಳು ಅಥವಾ ರೆಸ್ಟೋರೆಂಟ್ ಊಟಗಳಲ್ಲಿ ಉಪ್ಪಿನ ಪ್ರಮಾಣ ಅಧಿಕವಾಗಿರುತ್ತದೆ.

Basil Seeds Health Benefits: ಕಾಮಕಸ್ತೂರಿ ಬೀಜ ಚಿಕ್ಕದಾದರೂ ಔಷಧ ಗುಣ ದೊಡ್ಡದು

ಕಳಪೆ ನಿದ್ರೆ:

ದೀರ್ಘಕಾಲದ ನಿದ್ರಾಹೀನತೆಯೂ ಒತ್ತಡದ ಹಾರ್ಮೋನ್ ಬಿಡುಗಡೆ ಮಾಡಿ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ನಿದ್ರೆಯ ಸಮಯದಲ್ಲಿ ಉಸಿರಾಟವು ಪದೇ ಪದೇ ನಿಲ್ಲುವಂತಹ ಸ್ಲೀಪ್ ಅಪ್ನಿಯಾದಂತಹ ಲಕ್ಷಣಗಳು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಮಲಗುವಾಗ ಟಿವಿ, ಮೊಬೈಲ್ ನೋಡುವುದನ್ನು ತಪ್ಪಿಸಿ.

ದೀರ್ಘಕಾಲದ ಒತ್ತಡ:

ಕೆಲಸದಲ್ಲಿನ ಒತ್ತಡ, ಹಣದ ಬಗ್ಗೆ ಚಿಂತೆಗಳು, ಕುಟುಂಬದ ಜವಾಬ್ದಾರಿಗಳು, ಹಾಗೂ ಬಹುತೇಕ ಸಮಯದಲ್ಲೂ ಡಿಜಿಟಲ್ ಸಂಪರ್ಕದಲ್ಲಿರುವುದು ಇದು ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನುಗಳಲ್ಲಿ (ಕಾರ್ಟಿಸೋಲ್‌ನಂತಹ) ಏರಿಕೆಗೆ ಕಾರಣವಾಗುತ್ತದೆ, ಇದು ಕಾಲಾನಂತರದಲ್ಲಿ ರಕ್ತದೊತ್ತಡಕ್ಕೆ ಕಾರಣವಾಗಬಹುದು.