ಕಾಫಿ ಸೇವನೆಯಿಂದ ಕರುಳಿನ ಆರೋಗ್ಯ ವೃದ್ಧಿಸುತ್ತಾ? ತಜ್ಞರ ಸಲಹೆ ಏನು?
Health Tips: ಕಾಫಿ ಕುಡಿಯದಿದ್ದರೆ ದಿನವೇ ಸಾಗಲ್ಲ ಎನ್ನುವ ಯೋಚನೆಯಲ್ಲಿ ಹಲವರು ಇರುತ್ತಾರೆ. ಇದು ಕೇವಲ ನಮ್ಮ ಮೈಂಡ್ ರಿಫ್ರೇಶ್ ಮಾಡುವುದಲ್ಲದೆ ಆರೋಗ್ಯಕ್ಕೂ ಬಹಳಷ್ಟು ಒಳಿತು. ತಜ್ಞರ ಸಲಹೆಯಂತೆ ಮಿತವಾಗಿ ಕಾಫಿ ಕುಡಿಯುವುದರಿಂದ ಆಯಾಸ ದೂರವಾಗಿ ನಮ್ಮ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಅಷ್ಟೇ ಅಲ್ಲದೆ ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಯಕೃತ್ತಿನ ಕಾಯಿಲೆಗೂ ಪರಿಣಾಮಕಾರಿಯಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು, ಮೇ 19: ನಮ್ಮಲ್ಲಿ ಕಾಫಿ ಪ್ರಿಯರು (Coffee for health) ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ಬೆಳಗ್ಗಿನ ಸಮಯದಲ್ಲಿ ಒಂದು ಕಪ್ ಕಾಫಿ ಕುಡಿಯದಿದ್ದರೆ ದಿನವೇ ಸಾಗಲ್ಲ ಎನ್ನುವ ಯೋಚನೆಯಲ್ಲಿ ಹಲವರು ಇರುತ್ತಾರೆ. ಇದು ಕೇವಲ ನಮ್ಮ ಮೈಂಡ್ ರಿಫ್ರೇಶ್ ಮಾಡುವುದಲ್ಲದೆ ಆರೋಗ್ಯಕ್ಕೂ ಬಹಳಷ್ಟು ಒಳಿತು. ತಜ್ಞರ ಸಲಹೆಯಂತೆ ಮಿತವಾಗಿ ಕಾಫಿ ಕುಡಿಯುವುದರಿಂದ ಆಯಾಸ ದೂರವಾಗಿ ನಮ್ಮ ಚಯಾಪಚಯ ಕ್ರಿಯೆಯನ್ನು ಉತ್ತೇಜಿ ಸುತ್ತದೆ. ಅಷ್ಟೇ ಅಲ್ಲದೆ ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಯಕೃತ್ತಿನ ಕಾಯಿಲೆಗೂ ಪರಿಣಾಮಕಾರಿಯಾಗಿದೆ.
ಇತ್ತೀಚಿನ ಸಂಶೋಧನೆಗಳ ಪ್ರಕಾರ, ಮಿತವಾಗಿ ಕಾಫಿ ಕುಡಿ ಯುವುದರಿಂದ ನಮ್ಮ ಕರುಳಿನ ಆರೋಗ್ಯವೂ ಸುಧಾರಿ ಸುತ್ತದೆ ಎಂದು ತಿಳಿದು ಬಂದಿದೆ. ಕಾಫಿಯೂ ನಿಮ್ಮ ಕರುಳಿನಲ್ಲಿ ವಾಸಿ ಸುವ ಸೂಕ್ಷ್ಮಜೀವಿಗಳ ಸಮುದಾಯವಾದ ಕರುಳಿನ ಮೈಕ್ರೋಬಯೋಟಾವನ್ನು ಧನಾತ್ಮಕವಾಗಿ ಪ್ರಭಾವಿಸುತ್ತದೆ. ಹಾಗಾಗಿ ಹೆಚ್ಚುವರಿಯಾಗಿ, ಕಾಫಿ ಕುಡಿಯುವವರು ಜೀರ್ಣಕ್ರಿಯೆಗೆ ಸಹಾಯ ಮಾಡುವ ಎಗ್ಗರ್‌ಥೆಲ್ಲಾ ಮತ್ತು ಕ್ರಿಪ್ಟೋಬ್ಯಾಕ್ಟೀರಿಯಂನಂತಹ ಕೆಲವು ಉತ್ತಮ ಬ್ಯಾಕ್ಟೀರಿಯಾ ಗಳನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯೂ ತಿಳಿಸಿದೆ.
ಉಪಯೋಗವೇನು?
ಕಾಫಿಯು ಪಾಲಿಫಿನಾಲ್ ಎಂಬ ಜೈವಿಕ ಸಕ್ರಿಯ ಸಂಯುಕ್ತವನ್ನು ಹೊಂದಿದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸಿ ಪ್ರಿಬಯಾಟಿಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ, ಇದು ನಮ್ಮ ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆದು ಕರುಳಿನ ಆರೋಗ್ಯವನ್ನು ರಕ್ಷಣೆ ಮಾಡುವಂತೆ ಮಾಡುತ್ತದೆ.
Health Tips: ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!
ಅಷ್ಟೇ ಅಲ್ಲದೆ ಇವುಗಳಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ, ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಇದು ಐಬಿಡಿ ಅಥವಾ ಐಬಿಎಸ್ ನಂತಹ ಕರುಳಿನ ದೀರ್ಘಕಾಲದ ಸಮಸ್ಯೆ ಇರುವವರಿಗೆ ಕಿರಿಕಿರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಾಫಿ ಜೀರ್ಣಾಂಗ ವ್ಯವಸ್ಥೆಗೆ ಒಂದು ಅತ್ಯುತ್ತಮ ಸ್ಟಿಮ್ಯುಲೆಂಟ್ ಆಗಿ ಕೆಲಸ ಮಾಡುತ್ತದೆ. ಇದು ತ್ವರಿತ ಜೀರ್ಣಕ್ರಿಯೆಗೆ ಸಹಕರಿಸಿ ಮಲಬದ್ಧತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದಾಗ್ಯೂ, ಕಾಫಿ ಜೀರ್ಣಕ್ರಿಯೆಗೆ ಸಹಾಯ ಮಾಡ ಬಹುದಾದರೂ, ಅತಿಯಾದ ಸೇವನೆಯು ಪರಿಣಾಮವನ್ನು ಬೀರಬಹುದು, ಕೆಲವೊಂದು ವ್ಯಕ್ತಿಗಳಲ್ಲಿ ಜಠರಗರುಳಿನ ಅಸ್ವಸ್ಥತೆ ಅಥವಾ ಎದೆಯುರಿಗೆ ಕಾರಣವಾಗಬಹುದು.
ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಏನನ್ನೂ ತಿನ್ನದೆ ಬರಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಜಠರದಲ್ಲಿ ಆಮ್ಲೀಯತೆ ಹೆಚ್ಚಾಗ ಬಹುದು.. ಇದರಿಂದ ಹೊಟ್ಟೆನೋವು, ವಾಕರಿಕೆ ಸಮಸ್ಯೆ ಕಾಡಬಹುದು. ದಿನಕ್ಕೆ 3 ರಿಂದ 4 ಕಪ್ ಕಾಫಿ ಸೇವನೆ ಹಿತಕಾರಿ. ಇದಕ್ಕಿಂತ ಅಧಿಕವಾಗಿ ಕೆಫೀನ್ ದೇಹ ಸೇರಿದರೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳಬಹುದು.