ಈ ಸಮಸ್ಯೆ ಇದ್ದವರು ದಾಳಿಂಬೆ ಸೇವನೆ ಮಾಡಲೇಬಾರದು!
Health Tips: ದಾಳಿಂಬೆಯೂ ಆರೋಗ್ಯಕ್ಕೆ ಅತೀ ಉಪಯೋಗಕಾರಿಯಾದ ಹಣ್ಣಾಗಿದೆ. ಇದರ ಬೀಜಗಳಿಂದ ಹಿಡಿದು ಅದರ ರಸ ಮತ್ತು ಸಿಪ್ಪೆಯವರೆಗೂ ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಗಳಂತ ಹಲವು ಜೀವಸತ್ವ ಗಳನ್ನು ಹೊಂದಿದೆ. ಆದರೆ ದೇಹಕ್ಕೆ ಉಪಯೋಗಕಾರಿ ಎಂದು ಎಲ್ಲರೂ ಸೇವನೆ ಮಾಡಲು ಸಾಧ್ಯವಿಲ್ಲ. ಕೆಲವರಿಗೆ ಇದರಿಂದ ಅಡ್ಡ ಪರಿಣಾಮಗಳು ಕೂಡ ಉಂಟಾಗಬಹುದು
ಇಂಟರ್ ನೆಟ್ ಚಿತ್ರ -
ನವದೆಹಲಿ,ಆ.14: ದಾಳಿಂಬೆಯೂ (pomegranate) ಆರೋಗ್ಯಕ್ಕೆ ಅತೀ ಉಪಯೋಗಕಾರಿಯಾದ ಹಣ್ಣಾಗಿದೆ. ಇದರ ಬೀಜಗಳಿಂದ ಹಿಡಿದು ಅದರ ರಸ ಮತ್ತು ಸಿಪ್ಪೆಯವರೆಗೂ ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕ ಗಳಂತ ಹಲವು ಜೀವಸತ್ವಗಳನ್ನು ಹೊಂದಿದೆ. ಆದರೆ ದೇಹಕ್ಕೆ ಉಪಯೋಗಕಾರಿ ಎಂದು ಎಲ್ಲರೂ ಸೇವನೆ ಮಾಡಲು ಸಾಧ್ಯವಿಲ್ಲ. ಕೆಲವರಿಗೆ ಇದರಿಂದ ಅಡ್ಡ ಪರಿಣಾಮಗಳು ಕೂಡ ಉಂಟಾಗ ಬಹುದು. ಕೆಲವು ಆರೋಗ್ಯ ಸಮಸ್ಯೆಗಳಿದ್ದಾಗ ಅಥವಾ ನಿರ್ದಿಷ್ಟ ಚಿಕಿತ್ಸೆ ಪಡೆಯುವವರು ದಾಳಿಂಬೆ ಸೇವಿಸುವುದು ಒಳಿತಿಗಿಂತ ಹೆಚ್ಚಾಗಿ ಕೆಡುಕನ್ನೇ ಉಂಟು ಮಾಡಬಹುದು. ಹಾಗಿದ್ರೆ ಯಾರು ಸೇವನೆ ಮಾಡಬಾರದು?
ಶಸ್ತ್ರಚಿಕಿತ್ಸೆಗೆ ಒಳಗಾದವರು:
ಶಸ್ತ್ರಚಿಕಿತ್ಸೆ ಆದವರು ದಾಳಿಂಬೆ ಸೇವನೆ ಮಾಡಿದರೆ ಅಪಾಯ ಕಾರಿ ತೊಡಕುಗಳಿಗೆ ಕಾರಣ ವಾಗಬಹುದು. ಇದು ಅತೀಯಾದ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅನೇಕ ವೈದ್ಯರು, ರೋಗಿಗಳು ಯಾವುದೇ ಶಸ್ತ್ರಚಿಕಿತ್ಸೆಗೆ ಕನಿಷ್ಠ ಎರಡು ವಾರಗಳ ಮೊದಲು ದಾಳಿಂಬೆ ತಿನ್ನಬಾರದು ಎಂದು ಶಿಫಾರಸು ಮಾಡುತ್ತಾರೆ.
ನಿರ್ದಿಷ್ಟ ಔಷಧಿ ಸೇವಿಸುವವರು:
ನಿರ್ಧಿಷ್ಟ ಔಷಧ ಸೇವನೆ ಮಾಡುವವರು ದಾಳಿಂಬೆಯನ್ನು ಸೇವನೆ ಮಾಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.ಇದು ದೇಹದಲ್ಲಿರುವ ಕಿಣ್ವಗಳ ಮೇಲೆ ಪರಿಣಾಯ ಬೀರಲಿದ್ದು ದಾಳಿಂಬೆ ರಸವು ಈ ಕಿಣ್ವಗಳ ಪರಿಣಾಮಕಾರಿತ್ವವನ್ನು ತಡೆಯುತ್ತದೆ.
ಕಡಿಮೆ ರಕ್ತದೊತ್ತಡ ಇರುವವರು:
ದಾಳಿಂಬೆಗಳು ನೈಸರ್ಗಿಕವಾಗಿ ಉತ್ಕರ್ಷಣ ನಿರೋಧಕಗಳು ಮತ್ತು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇವು ಅಧಿಕ ರಕ್ತ ದೊತ್ತಡವನ್ನು ಕಡಿಮೆ ಮಾಡಲು ಅಗತ್ಯವಾದ ಪೋಷಕಾಂಶವಾಗಿದೆ. ಆದರೆ ಈಗಾಗಲೇ ಹೈಪೊಟೆನ್ಷನ್‌ನಿಂದ ಬಳಲುತ್ತಿರುವವರಿಗೆ ಸಮಸ್ಯೆಗಳು ಉಂಟಾಗುತ್ತವೆ. ಅವರು ಹೆಚ್ಚು ದಾಳಿಂಬೆ ತಿಂದರೆ ರಕ್ತದೊತ್ತಡ ಮತ್ತಷ್ಟು ಕಡಿಮೆಯಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಇರುವವರು:
ದಾಳಿಂಬೆಯಲ್ಲಿ ನಾರಿನಂಶ ಹೆಚ್ಚಾಗಿದ್ದರೂ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ ಇದು ತೊಂದರೆ ನೀಡಬಹುದು. ದಾಳಿಂಬೆಯಲ್ಲಿರುವ ಟ್ಯಾನಿನ್ ಪದರಗಳು ಕರುಳಿನ ಪದರ ಗಳಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತವೆ. ಹೊಟ್ಟೆಯ ಕಿರಿಕಿರಿಯಿಂದ ಬಳಲುತ್ತಿರುವವರು ಸ್ವಲ್ಪ ದಾಳಿಂಬೆ ತಿಂದರೂ ಹೊಟ್ಟೆ ಉರಿ, ಗ್ಯಾಸ್ ಅಥವಾ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.
ದಾಳಿಂಬೆಯ ಅಲರ್ಜಿ ಸಮಸ್ಯೆ:
ಕೆಲವರಿಗೆ ಗಂಟಲು ಅಥವಾ ಮುಖದ ಊತ, ಚರ್ಮದ ದದ್ದುಗಳು, ತುರಿಕೆ ಹಾಗೂ ಉಸಿರಾಟದ ಸಮಸ್ಯೆಯನ್ನು ಅನುಭವಿಸಬಹುದು. ಇದರಲ್ಲಿರುವ ಪ್ರೋಟೀನ್‌ಗಳು ಕೆಲವರಿಗೆ ಸರಿಹೊಂದುವುದಿಲ್ಲ.