ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲ್ಲಂಗಡಿ ತಿಂದರೆ ಸಾವು ಬರುತ್ತಾ? ವೈದ್ಯರು ಹೇಳಿದ್ದೇನು?

ವಿಷ ಆಹಾರ ಸೇವಿಸಿ ಮುಂಬೈನಲ್ಲಿ ನಾಲ್ವರು ಸಾವನ್ನಪ್ಪಿದ ಬಳಿಕ ಅವರು ಕಲ್ಲಂಗಡಿ ಹಣ್ಣು ತಿಂದಿದ್ದರು ಎಂದು ವರದಿಯಾಗಿದೆ. ಇದರಿಂದ ಕಲ್ಲಂಗಡಿ ಹಣ್ಣು ತಿನ್ನುವುದಕ್ಕೂ ಜನರು ಈಗ ಚಿಂತಿಸುವಂತಾಗಿದೆ. ಕಲ್ಲಂಗಡಿ ಹಣ್ಣು ತಿಂದರೆ ಸಾವು ಬರುತ್ತಾ, ಅನಾರೋಗ್ಯ ಕಾಡುತ್ತದೆಯೇ, ಯಾವ ರೀತಿಯ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನುವ ಕುರಿತು ತಜ್ಞ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

ಕಲ್ಲಂಗಡಿ ತಿಂದರೆ ಸಾವು ಬರುತ್ತಾ?

ಸಂಗ್ರಹ ಚಿತ್ರ -

ಬೆಂಗಳೂರು: ಬೇಸಗೆಯಲ್ಲಿ ದಾಹ ತಣಿಸುವ ಹಣ್ಣು (Watermelon) ಎಂದು ಗುರುತಿಸಲ್ಪಟ್ಟಿರುವ, ಡಯಟ್ (healthy diet) ಪ್ರಿಯರು ಇಷ್ಟ ಪಟ್ಟು ಸೇವಿಸುವ ಕಲ್ಲಂಗಡಿ ಹಣ್ಣನ್ನು (Watermelon in diet) ಈಗ ಜನ ಸೇವಿಸುವುದಕ್ಕೂ ಆತಂಕ ಪಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ಮುಂಬೈನಲ್ಲಿ (Mumbai) ನಡೆದ ಘಟನೆ. ಶಂಕಿತ ವಿಷ ಆಹಾರ ಸೇವಿಸಿ (food poison) ಒಂದೇ ಕುಟುಂಬದ ನಾಲ್ವರು ಮುಂಬೈನಲ್ಲಿ ಸಾವನ್ನಪ್ಪಿದ ಬಳಿಕ ಜನರು ಕಲ್ಲಂಗಡಿ ಹಣ್ಣು ತಿನ್ನುವುದಕ್ಕೂ ಯೋಚಿಸುವಂತಾಗಿದೆ. ಮಾಹಿತಿ ಪ್ರಕಾರ ಅವರು ಭೋಜನದಲ್ಲಿ ಬಿರಿಯಾನಿ ತಿಂದ ಮೇಲೆ ಬಳಿಕ ಕಲ್ಲಂಗಡಿ ಹಣ್ಣು ಸೇವಿಸಿದ್ದರು. ಇದಾದ ಕೆಲವು ಗಂಟೆಗಳಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದು, ಅಲ್ಲಿ ಸಾವನ್ನಪ್ಪಿದ್ದರು. ಅವರಲ್ಲಿ ಮುಖ್ಯವಾಗಿ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ವಿಷ ಆಹಾರ ಸೇವನೆ ಸಾವಿಗೆ ಮುಖ್ಯ ಕಾರಣ ಎಂದು ಕಂಡು ಬಂದರೂ ಬಿರಿಯಾನಿ ಬೇಯಿಸಿ ತಿನ್ನುವ ಆಹಾರವಾದ್ದರಿಂದ ಇದರಿಂದ ಆರೋಗ್ಯದ ಮೇಲೆ ಹಾನಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಕಲ್ಲಂಗಡಿ ಹಣ್ಣು ಕಳವಳಕ್ಕೆ ಕಾರಣವಾಗಿದೆ. ಕಲ್ಲಂಗಡಿಯಿಂದ ಸಾವು ಬರುತ್ತದೆಯೇ? ಈ ಕುರಿತು ಪೌಷ್ಟಿಕ ತಜ್ಞರಾದ ರೂಪಾಲಿ ದತ್ತ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಸುಡುವ ಬಿಸಿಲಿನಲ್ಲಿ ಆರೋಗ್ಯದ ಕಾಳಜಿ ವಹಿಸುವುದು ಹೇಗೆ?

ಕಲ್ಲಂಗಡಿಯು ಆಹಾರ ವಿಷವನ್ನು ಉಂಟುಮಾಡಬಹುದು ಮತ್ತು ತೀವ್ರತರವಾದ ಸಂದರ್ಭಗಳಲ್ಲಿ ಇದು ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಸಾವಿಗೆ ಕಾರಣವಾಗಬಹುದು ಎನ್ನುತ್ತಾರೆ ರೂಪಾಲಿ ದತ್ತ.

ಕಲ್ಲಂಗಡಿಯಲ್ಲಿ ಹೆಚ್ಚಿನ ನೀರು ಮತ್ತು ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ಇದರಲ್ಲಿ ಮಾಲಿನ್ಯ ಉಂಟಾದರೆ ಬ್ಯಾಕ್ಟೀರಿಯಾಗಳು ತ್ವರಿತವಾಗಿ ಹೆಚ್ಚಾಗುತ್ತದೆ. ಇದಲ್ಲದೇ ಸಿಹಿ ಮತ್ತು ಹೆಚ್ಚು ಬಣ್ಣಕ್ಕೆ ಕಲ್ಲಂಗಡಿಗಳಿಗೆ ಗ್ಲೂಕೋಸ್ ನೀರು ಅಥವಾ ಸಕ್ಕರೆ ನೀರನ್ನು ಚುಚ್ಚಲಾಗುತ್ತದೆ. ಕಲುಷಿತ ಕಲ್ಲಂಗಡಿಗೆ ಅಂತಹ ದ್ರವಗಳನ್ನು ಚುಚ್ಚಿದರೆ ಅದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆಹಾರ ತಜ್ಞ ಮತ್ತು ಪ್ರಮಾಣೀಕೃತ ಮಧುಮೇಹ ಶಿಕ್ಷಕಿ ಡಾ. ಅರ್ಚನಾ ಬಾತ್ರಾ ಅವರ ಪ್ರಕಾರ, ಕಲ್ಲಂಗಡಿ ವಿಷಕಾರಿಯಾಗುವುದು ಹೊಸ ವಿಷಯವೇನಲ್ಲ. ಈ ಹಣ್ಣು ಸಾಲ್ಮೊನೆಲ್ಲಾ ಸೋಂಕು, ಲಿಸ್ಟೀರಿಯೊಸಿಸ್ ಅಥವಾ ಇ. ಕೋಲಿ ಸೋಂಕಿನ ಅಪಾಯ ಉಂಟು ಮಾಡುತ್ತದೆ. ಇದರಿಂದ ತೀವ್ರ ನಿರ್ಜಲೀಕರಣ, ಪ್ರಮುಖ ಅಂಗಗಳ ಮೇಲೆ ಪರಿಣಾಮ ಉಂಟು ಮಾಡಿ ಹಲವು ರೀತಿಯ ತೊಂದರೆಯನ್ನು ಉಂಟು ಮಾಡುತ್ತದೆ ಎನ್ನುತ್ತಾರೆ.

ವಿಷಕಾರಿಯಾದ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಅತಿಸಾರ, ವಾಂತಿ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ಮಕ್ಕಳಿಗೆ ಇದು ಜೀವಕ್ಕೆ ಅಪಾಯ ಉಂಟು ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Pudina vs Dhaniya: ಬೇಸಿಗೆಯಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಯಾವುದು ಉತ್ತಮ?

ಕಲುಷಿತ ಹಣ್ಣುಗಳು, ಸರಿಯಾಗಿ ನಿರ್ವಹಿಸದ ಆಹಾರ ಅಥವಾ ಅಸುರಕ್ಷಿತ ಪರಿಸ್ಥಿತಿಗಳಲ್ಲಿ ಹೆಚ್ಚು ಕಾಲ ಸಂಗ್ರಹಿಸಲಾದ ಆಹಾರ ವಸ್ತುಗಳಿಂದ ದೂರವಿರುವುದು ಒಳ್ಳೆಯದು. ಇನ್ನು ರಾತ್ರಿ 8 ಗಂಟೆಯ ಅನಂತರ ಹಣ್ಣುಗಳು ಅಥವಾ ಭಾರವಾದ ಆಹಾರವನ್ನು ತಿನ್ನದೇ ಇರುವುದು ಒಳ್ಳೆಯದು. ಯಾಕೆಂದರೆ ಇದು ನಿದ್ರೆಯ ಸಮಯದಲ್ಲಿ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಕಲ್ಲಂಗಡಿ ಹಣ್ಣನ್ನು ಬೆಳಗ್ಗೆ, ಊಟದ ನಡುವೆ ಸೇವಿಸಬಹುದು. ತಡರಾತ್ರಿ ಸೇವನೆ ಮಾಡಬಹುದು. ಇದರಿಂದ ತೊಂದರೆ ಇಲ್ಲ. ಆದರೆ ಹಣ್ಣು ಕಲುಷಿತವಾಗಿದ್ದರೆ ಅಥವಾ ದೇಹವು ಅದನ್ನು ಸಂಸ್ಕರಿಸಲು ಸಾಧ್ಯವಾಗದಿದ್ದರೆ ಅದು ಅಪಾಯ ಉಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.