Pudina vs Dhaniya: ಬೇಸಿಗೆಯಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಯಾವುದು ಉತ್ತಮ?
Health Tips: ಈ ಬೇಸಿಗೆಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತದೆ. ಅದರಲ್ಲೂ ಹೆಚ್ಚಿನವರು ಸರಿಯಾಗಿ ಜೀರ್ಣವಾಗದೆ ಸಮಸ್ಯೆ ಬಳಲುತ್ತಾರೆ. ಹೊಟ್ಟೆ ಉಬ್ಬುವುದು, ಆಮ್ಲೀಯತೆ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆ ಬೇಸಗೆಯಲ್ಲಿ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ಇದಕ್ಕೆ ನೈಸರ್ಗಿಕ ಪರಿಹಾರ ಎಂದರೆ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಬಳಕೆ. ಹಾಗಾದರೆ ಇವೆರಡರಲ್ಲಿ ಯಾವುದು ಉತ್ತಮ?
ಸಾಂದರ್ಭಿಕ ಚಿತ್ರ -
ಬೆಂಗಳೂರು, ಏ. 27: ಬೇಸಿಗೆಯ ಅತೀಯಾದ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ಈ ದಾಹಕ್ಕೆ ಎಷ್ಟೇ ನೀರು ಕುಡಿದರೂ ದೇಹ ದಣಿವು ಹೆಚ್ಚುತ್ತಿದೆ. ಅದರಲ್ಲೂ ಬೇಸಿಗೆಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತದೆ. ಅದರಲ್ಲೂ ಹೆಚ್ಚಿನವರಲ್ಲಿ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಾರೆ. ಹೊಟ್ಟೆ ಉಬ್ಬುವುದು, ಆಮ್ಲೀಯತೆ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆ ಬೇಸಗೆಯಲ್ಲಿ ಹೆಚ್ಚು ಕಾಡುತ್ತದೆ. ಇದಕ್ಕೆ ನೈಸರ್ಗಿಕ ಪರಿಹಾರ ಅಂತ ಬಂದಾಗ ಪುದಿನಾ (Pudina) ಮತ್ತು ಕೊತ್ತಂಬರಿ (Dhaniya) ಥಟ್ಟಂತ ನೆನಪಿಗೆ ಬರುತ್ತದೆ. ಜೀರ್ಣಕಾರಿಗೆ ನೆರವಾಗುವ ಗಿಡಮೂಲಿಕೆಗಳಿವು. ಹಾಗಿದ್ದರೆ ಇವೆರಡರಲ್ಲಿ ಯಾವುದು ಉತ್ತಮ?
ಬೇಸಿಗೆಯಲ್ಲಿ ಜೀರ್ಣಕ್ರಿಯೆ ನಿಧಾನವಾಗಲು ಕಾರಣವೇನು?
ಶಾಖದ ಪ್ರಮಾಣ ಹೆಚ್ಚಾದಾಗ ಅದು ದೇಹದ ಇಡೀ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಯಾಕೆಂದರೆ ನಿರ್ಜಲೀಕರಣ ಹೆಚ್ಚಾಗಿ ಹಸಿವು ಕಡಿಮೆಯಾಗುತ್ತದೆ. ಹೆಚ್ಚು ಹುದುಗಿಸಿದ ಮತ್ತು ಸಕ್ಕರೆ ಆಹಾರವನ್ನು ಸೇವಿಸಿದಾಗ, ಜೀರ್ಣಕ್ರಿಯೆ ಇನ್ನಷ್ಟು ನಿಧಾನವಾಗಿ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಬಿಸಿಲಿಗೆ ಸ್ಮೃತಿ ತಪ್ಪದಿರಲಿ; ಆರೋಗ್ಯದ ಬಗ್ಗೆ ಕಾಳಜಿ ಇರಲಿ
ಪುದಿನಾ ಸೊಪ್ಪು
ಪುದಿನಾ ಆಮ್ಲೀಯತೆ ಮತ್ತು ವಾಕರಿಕೆಗೆ ರಾಮ ಬಾಣ. ಇದು ಹೊಟ್ಟೆಯನ್ನು ತಂಪಾಗಿಸಿ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡುತ್ತದೆ. ಪ್ರಯಾಣದ ಸಂದರ್ಭದಲ್ಲಿ ಬಿಸಿಲಿನಿಂದಾಗಿ ವಾಂತಿ ಬಂದಂತಾಗುತ್ತಿದ್ದರೆ ಪುದಿನಾ ಸೇವಿಸಿ. ಅದರಲ್ಲೂ ಮಜ್ಜಿಗೆಗೆ ಪುದಿನಾ ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ತಂಪು ಸಿಗುತ್ತದೆ.
ಕೊತ್ತಂಬರಿ ಸೊಪ್ಪು
ಹೊಟ್ಟೆ ಉಬ್ಬುವುದು, ಹಸಿವು ಇಲ್ಲದೆ ಇರುವುದು ಇತ್ಯಾದಿ ಸಮಸ್ಯೆಗೆ ಕೊತ್ತಂಬರಿ ಸೊಪ್ಪು ಹೆಚ್ಚು ಉತ್ತಮ. ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆಯೊಳಗೆ ಗ್ಯಾಸ್ಟ್ರಿಕ್ ಅನುಭವವಾದರೆ ಕೊತ್ತಂಬರಿ ಸೊಪ್ಪು ಕೆಲಸ ಮಾಡುತ್ತದೆ. ಕೊತ್ತಂಬರಿ ಸೊಪ್ಪನ್ನು ನೀರು ಅಥವಾ ಸಾಂಬಾರ್‌ಗಳಿಗೆ ಸೇರಿಸಿ ಸೇವಿಸುವುದು ಸೂಕ್ತ. ಈ ಎರಡೂ ಸೊಪ್ಪುಗಳನ್ನು ಸಮಪ್ರಮಾಣದಲ್ಲಿ ಬಳಸಿ 'ಚಟ್ನಿ' ಅಥವಾ 'ಜ್ಯೂಸ್' ಮಾಡಿ ಸವಿದರೆ ಬೇಸಿಗೆಯ ಆರೋಗ್ಯಕ್ಕೆ ಉತ್ತಮ.