ಅಮೆಜಾನ್ ನಿಂದ ಹಬ್ಬದ ಋತು ಹತ್ತಿರವಾಗುತ್ತಿದ್ದಂತೆ ದೇಶಾದ್ಯಂತ 150,000 ಋತು ಆಧರಿತ ಉದ್ಯೋಗಾವಕಾಶಗಳ ಸೃಷ್ಟಿ
ಅಮೆಜಾನ್ ಸಾವಿರಾರು ಮಹಿಳಾ ಅಸೋಸಿ ಯೇಟ್ ಗಳಿಗೆ ಹಾಗೂ 2000 ಪಿಡಬ್ಲ್ಯೂಡಿಗಳಿಗೆ (ವಿಶೇಷ ಚೇತನರು) ತನ್ನ ಜಾಲದಲ್ಲಿ ಅವಕಾಶ ಗಳನ್ನು ಸೃಷ್ಟಿಸಿದೆ. ಅಮೆಜಾನ್ ಇಂಡಿಯಾ ಈಗಾಗಲೇ ಮುಂದಿನ ಹಬ್ಬದ ಋತುವಿಗೆ ಸಿದ್ಧತೆ ಯಾಗಿ ಈ ಹೊಸ ಅಸೋಸಿಯೇಟ್ ಗಳ ಬಹುತೇಕ ಜನರನ್ನು ನೇಮಕ ಮಾಡಿಕೊಂಡಿದೆ.


ಅಮೆಜಾನ್ ಇಂಡಿಯಾ ಮುಂದಿನ ಹಬ್ಬದ ಋತುವಿಗೆ ಕೋಟ್ಯಂತರ ಗ್ರಾಹಕರಿಗೆ ಸೇವೆ ಒದಗಿಸಲು ಸಜ್ಜಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ತನ್ನ ಫುಲ್ ಫಿಲ್ಮೆಂಟ್ ಸೆಂಟರ್(ಎಫ್.ಸಿ.ಗಳು)ಗಳು, ಸಾರ್ಟ್ ಸೆಂಟರ್ ಗಳು ಮತ್ತು ಕೊನೆಯ ಹಂತದ ಡೆಲಿವರಿ ಸ್ಟೇಷನ್ ಗಳಲ್ಲಿ ಕಾರ್ಯಾಚರಣೆ ಜಾಲದಲ್ಲಿ 150,000ಕ್ಕೂ ಹೆಚ್ಚು ಋತು ಆಧರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಇಂದು ಪ್ರಕಟಿಸಿದೆ.
ಇದರಲ್ಲಿ ಭಾರತದಾದ್ಯಂತ 400+ ನಗರಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಒಳಗೊಂಡಿದ್ದು ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಲಖನೌ, ಕೊಚ್ಚಿ, ಕೊಯಮತ್ತೂರು, ಇಂದೋರ್, ರಾಯ್ಪುರ, ಜಲಂಧರ್, ಜೋಧ್ಪುರ, ರಾಂಚಿ, ಅನಂತ್ ನಾಗ್, ಜಲಗಾಂವ್ ಮುಂತಾದ ನಗರಗಳಿವೆ. ವಿಶೇಷವೆಂದರೆ ಅಮೆಜಾನ್ ಸಾವಿರಾರು ಮಹಿಳಾ ಅಸೋಸಿ ಯೇಟ್ ಗಳಿಗೆ ಹಾಗೂ 2000 ಪಿಡಬ್ಲ್ಯೂಡಿಗಳಿಗೆ (ವಿಶೇಷ ಚೇತನರು) ತನ್ನ ಜಾಲದಲ್ಲಿ ಅವಕಾಶ ಗಳನ್ನು ಸೃಷ್ಟಿಸಿದೆ. ಅಮೆಜಾನ್ ಇಂಡಿಯಾ ಈಗಾಗಲೇ ಮುಂದಿನ ಹಬ್ಬದ ಋತುವಿಗೆ ಸಿದ್ಧತೆ ಯಾಗಿ ಈ ಹೊಸ ಅಸೋಸಿಯೇಟ್ ಗಳ ಬಹುತೇಕ ಜನರನ್ನು ನೇಮಕ ಮಾಡಿಕೊಂಡಿದೆ.
ಇದನ್ನೂ ಓದಿ: Roopa Gururaj Column: ಬದುಕನ್ನು ಎದುರಿಸಲು ಭಗೀರಥ ಪ್ರಯತ್ನ ಬೇಕು
“ಈ ಹಬ್ಬದ ಋತುವಿಗೆ ನಾವು ಭಾರತದಾದ್ಯಂತ ನಾವು ಪ್ರತಿ ಸರ್ವೀಸ್ ಮಾಡಬಲ್ಲ ಪಿನ್ ಕೋಡ್ ಗಳಲ್ಲಿ ವೇಗ ಮತ್ತು ವಿಶ್ವಾಸಾರ್ಹ ಡೆಲಿವರಿಗಳನ್ನು ಮುಂದುವರಿಸಲು ಆದ್ಯತೆ ನೀಡಿದ್ದೇವೆ. ಇದಕ್ಕಾಗಿ ನಾವು ಹೆಚ್ಚಿನ ಗ್ರಾಹಕರ ಬೇಡಿಕೆಯನ್ನು ದಕ್ಷತೆಯಿಂದ ನಿರ್ವಹಿಸಲು 1.5 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡು ನಮ್ಮ ಫುಲ್ ಫಿಲ್ಮೆಂಟ್ ಮತ್ತು ಲಾಜಿಸ್ಟಿಕ್ಸ್ ಜಾಲವನ್ನು ಸದೃಢ ಗೊಳಿಸಿದ್ದೇವೆ.
ಇವರಲ್ಲಿ ಬಹುತೇಕ ಮಂದಿ ಅವರ ಪ್ರಯಾಣವನ್ನು ಹಬ್ಬದ ಅವಧಿ ಮೀರಿಯೂ ಅಮೆಜಾನ್ ಜೊತೆಯಲ್ಲಿ ಮುಂದುವರಿಯಲಿದ್ದು ಗಮನಾರ್ಹ ಸಂಖ್ಯೆಯ ಜನರು ವರ್ಷದಿಂದ ವರ್ಷದ ನಂತರ ನಮ್ಮಲ್ಲಿ ಕೆಲಸಕ್ಕೆ ಮರಳುತ್ತಿದ್ದಾರೆ” ಎಂದು ಅಮೆಜಾನ್ ಭಾರತ ಮತ್ತು ಆಸ್ಟ್ರೇಲಿಯಾದ ಆಪರೇಷನ್ಸ್ ವಿಪಿ ಅಭಿನವ್ ಸಿಂಗ್ ಹೇಳಿದರು. “ಇಡೀ ನಮ್ಮ ಕಾರ್ಯಾಚರಣೆಗಳಾದ್ಯಂತ ಅಸೋಸಿಯೇಟ್ ಗಳು ನಮ್ಮ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಗ್ರಾಹಕರಿಗೆ ಪ್ಯಾಕೇಜ್ ಗಳನ್ನು ಡೆಲಿವರಿ ಮಾಡುತ್ತಿರಲಿ ನಾವು ಎಲ್ಲರ ಸುರಕ್ಷತೆ ಮತ್ತು ಸ್ವಾಸ್ಥ್ಯಕ್ಕೆ ಆದ್ಯತೆ ನೀಡುತ್ತಿದ್ದೇವೆ.
ನಾವು ಸುರಕ್ಷಿತ, ಸಮಾನ ಮತ್ತು ಸಬಲೀಕರಿಸುವ ಉದ್ಯೋಗದ ಪರಿಸರವನ್ನು ರೂಪಿಸಲು ಬದ್ಧ ರಾಗಿದ್ದು ಅದು ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ಒಳಗೊಂಡಿದೆ ಮತ್ತು ನಮ್ಮ ಇಡೀ ತಂಡದ ಹಣಕಾಸು ಸ್ವಾಸ್ಥ್ಯಕ್ಕೆ ಬೆಂಬಲಿಸುತ್ತದೆ” ಎಂದರು.
“ಈ ಹಬ್ಬದ ಋತುವಿನಲ್ಲಿ ಅಮೆಜಾನ್ ಗೆ ಸೇರಲು ನಾನು ಆಭಾರಿಯಾಗಿದ್ದೇನೆ. ಸುರಕ್ಷತೆಯ ಕ್ರಮಗಳಿಗೆ ಕಂಪನಿ ನೀಡಿರುವ ಆದ್ಯತೆಯು ಕಾರ್ಯಾಚರಣೆಗಳ ಜಾಲದಲ್ಲಿ ಕೆಲಸ ಮಾಡುವಾಗ ನನಗೆ ವಿಶ್ವಾಸ ಮೂಡಿಸಿದೆ. ಇದು ಭಾರತದಾದ್ಯಂತ ಹಬ್ಬದ ಸಂಭ್ರಮಾಚರಣೆಗಳ ಸಮಯದಲ್ಲಿ ಕುಟುಂಬಗಳಿಗೆ ಸಂತೋಷವನ್ನು ಪೂರೈಸಲು ನೆರವಾಗುವುದು ಅಲ್ಲದೆ ಗೌರವಯುತ ಉದ್ಯೋಗದ ಸ್ಥಳದ ಭಾಗವಾಗುವುದು ಬಹಳ ಸಂತೋಷ ನೀಡುತ್ತದೆ” ಎಂದು ಅಮೆಜಾನ್ ಗೆ ಇತ್ತೀಚೆಗೆ ಸೇರ್ಪಡೆಯಾದ ಮತ್ತು ಬೆಂಗಳೂರಿನ ತನ್ನ ಎಫ್.ಸಿ.ಗಳಲ್ಲಿ ಒಂದರಲ್ಲಿ ಕೆಲಸ ಮಾಡುತ್ತಿರುವ ಮನಿಷಾ ಸಿಂಗ್ ಹೇಳಿದರು.
ಭಾರತದಲ್ಲಿ ಇ-ಕಾಮರ್ಸ್ ಜಾಲದಲ್ಲಿ ಅಸೋಸಿಯೇಟ್ ಗಳ ಸೌಖ್ಯಕ್ಕೆ ಬೆಂಬಲಿಸುವ ತನ್ನ ಬದ್ಧತೆಯ ಭಾಗವಾಗಿ ಅಮೆಜಾನ್ ಆಶ್ರಯ್ ರೆಸ್ಟ್ ಸೆಂಟರ್ ಗಳನ್ನು ದೇಶಾದ್ಯಂತ 2025ರಲ್ಲಿ 100ಕ್ಕೆ ವಿಸ್ತರಣೆ ಮಾಡಿದೆ. ಕಂಪನಿಯು ಆರೋಗ್ಯ ಮತ್ತು ಸ್ವಾಸ್ಥ್ಯದ ಉಪಕ್ರಮದ ಭಾಗವಾಗಿ 80,000ಕ್ಕೂ ಹೆಚ್ಚು ಡೆಲಿವರಿ ಅಸೋಸಿಯೇಟ್ ಗಳ ಉಚಿತ ಆರೋಗ್ಯಪರೀಕ್ಷೆ ನಡೆಸಿದೆ. ಈ ಉಪಕ್ರಮವು ಆರೋಗ್ಯ ಸೇವೆಯನ್ನು ನೇರವಾಗಿ ಕೊನೆಯ ಹಂತದ ಡೆಲಿವರಿ ಸ್ಟೇಷನ್ ಗಳಿಗೆ ತರುತ್ತಿದ್ದು ಕಣ್ಣು, ದಂತ, ಬಿಎಂಐ ಮತ್ತು ವೈದ್ಯರ ಸಲಹೆಗಳನ್ನು ಒಳಗೊಂಡ ಸಮಗ್ರ ಸೇವೆಗಳನ್ನು ಒದಗಿಸುತ್ತದ.
ಅಮೆಜಾನ್ ನಲ್ಲಿ ಲಭ್ಯವಿರುವ ಇತರೆ ಅನುಕೂಲಗಳು
- ಉದ್ಯಮದ ಮುಂಚೂಣಿಯ ಮೂಲಸೌಕರ್ಯ ಮತ್ತು ಸೌಲಭ್ಯಗಳು: ಉದ್ಯೋಗಿಗಳು ಮತ್ತು ಅಸೋಸಿಯೇಟ್ ಗಳಿಗೆ ಸುರಕ್ಷಿತ ಮತ್ತು ಅನುಕೂಲಕರ ಪರಿಸರ ಒದಗಿಸಲು ಎಲ್ಲ ಅಮೆಜಾನ್ ಸೌಲಭ್ಯಗಳೂ ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯಗಳು ಮತ್ತು ಏರ್-ಕಂಡೀಷನ್ಡ್ ಕೆಫೆಟೇರಿಯಾಗಳನ್ನು ದೊಡ್ಡ ಸೌಲಭ್ಯಗಳನ್ನು ಹೊಂದಿದ್ದು ಅವು ತಕ್ಕಷ್ಟು ಸೀಟಿನ ಸ್ಥಳ ಮತ್ತು ಚಹಾ/ಕಾಫಿ/ಸ್ನಾಕ್ ವೆಂಡಿಂಗ್ ಮೆಷಿನ್ ಗಳು, ಮೈಕ್ರೊವೇವ್ ಗಳು ಇತ್ಯಾದಿ ಸೌಲಭ್ಯ ಗಳನ್ನು ಒಳಗೊಂಡಿವೆ.
- ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯಗಳು- ಯಾರಿಗೇ ಆದರೂ ತಕ್ಷಣದ ಪ್ರಥಮ ಚಿಕಿತ್ಸೆ ಅಥವಾ ವಿಶ್ರಾಂತಿ ಅಗತ್ಯವಾದರೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ(“AMCARE”) ಸೌಲಭ್ಯಗಳು ಫುಲ್ ಫಿಲ್ಮೆಂಟ್ ಸೆಂಟರ್ ಗಳಲ್ಲಿ ಲಭ್ಯವಿರುತ್ತದೆ. ಯಾವುದೇ ಉದ್ಯೋಗಿ ಅಥವಾ ಅಸೋಸಿಯೇಟ್ ಸೌಖ್ಯವಿಲ್ಲದಿದ್ದರೆ ಅವರಿಗೆ ಹಾಸಿಗೆ ಅಥವಾ ವಿಶ್ರಾಂತಿಯ ಸ್ಥಳ, ಮೌಖಿಕ ಡಿಹೈಡ್ರೇಷನ್, ಹೀಟಿಂಗ್ ಪ್ಯಾಡ್ ಗಳು ಮತ್ತು ಕಟ್ಟಡದಲ್ಲಿರುವ ತರಬೇತಿ ಪಡೆದ ಶುಶ್ರೂಷಕರ ನೆರವು ಇರುತ್ತದೆ. ಉದ್ಯೋಗಿ ಅಥವಾ ಅಸೋಸಿಯೇಟ್ ಆಮ್ಕೇರ್ ಸೌಲಭ್ಯಕ್ಕೆ ಭೇಟಿ ನೀಡಿದ ನಂತರ ವೂ ಸುಧಾರಿಸದಿದ್ದರೆ ಅವರನ್ನು ಹತ್ತಿರದ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ.
- ವಾತಾವರಣದ ಪ್ರತಿಕೂಲ ಸಂದರ್ಭದಲ್ಲಿ ಸುರಕ್ಷತೆ- ನಾವು ಅಮೆಜಾನ್ ಫೋರ್ ಕಾಸ್ಟಿಂಗ್ ಟೂಲ್ ಹೊಂದಿದ್ದು ಅದು ಬಿಸಿಯ ಮಟ್ಟದಲ್ಲಿ ಹೆಚ್ಚಳ ಅಥವಾ ಗಂಭೀರ ವಾತಾವರಣದ ಸನ್ನಿವೇಶಗಳ ಕುರಿತು ಎಚ್ಚರಿಕೆಯನ್ನು ನೀಡುತ್ತದೆ. ಒಮ್ಮೆ ಗಂಭೀರ ವಾತಾವರಣದ ಎಚ್ಚರಿಕೆ ನೀಡಿದ ನಂತರ ಚಟುವಟಿಕೆಗಳು ಮತ್ತು ಕ್ರಮ ತೆಗೆದುಕೊಳ್ಳಲು ಸಮಯ ನಿಗದಿಪಡಿಸ ಲಾಗುತ್ತದೆ. ಉದಾಹರಣೆಗೆ ಕಟ್ಟಡಗಳಲ್ಲಿ ಉಷ್ಣತೆ ಅಥವಾ ಆರ್ದ್ರತೆ ಹೆಚ್ಚಳ ಕಂಡುಬಂದರೆ ತಂಡಗಳು ಅನುಕೂಲಕರ ಕೆಲಸದ ವಾತಾವರಣದ ಪರಿಸ್ಥಿತಿಗಳನ್ನು ಸೃಷ್ಟಿಸಲು ಶ್ರಮಿಸುತ್ತವೆ, ಅಗತ್ಯವಿದ್ದರೆ ಕೆಲಸವನ್ನು ಸ್ಥಗಿತಗೊಳಿಸುತ್ತವೆ.
- ಹಣಕಾಸಿನ ಅನುಕೂಲ ಮತ್ತು ಸ್ವಾಸ್ಥ್ಯ- ಅರ್ಲಿ ಅಕ್ಸೆಸ್ ಟು ಪೇ (ಇಎಟಿಪಿ) ಕಾರ್ಯಕ್ರಮವು ಎಲ್ಲ ಅಸೋಸಿಯೇಟ್ ಗಳಿಗೆ ಪ್ರತಿ ತಿಂಗಳಲ್ಲಿ 1ರಿಂದ 20ರ ನಡುವೆ ಅವರ ಮೂಲಭೂತ ವೇತನದಲ್ಲಿ ಶೇ.80ರಷ್ಟು ಪಡೆಯಲು ಅವಕಾಶ ನೀಡುವ ಮೂಲಕ ಹಣಕಾಸು ಅನುಕೂಲ ಮತ್ತು ಸ್ವಾಸ್ಥ್ಯ ಉತ್ತೇಜಿಸುತ್ತದೆ. ಅಸೋಸಿಯೇಟ್ ಫೀಡ್ ಬ್ಯಾಕ್ ಅಭೂತಪೂರ್ವ ಸಕಾರಾತ್ಮಕ ವಾಗಿದ್ದು ಅದರಲ್ಲಿ ಅವರು ಕುಟುಂಬದ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಕಾಲಿಕ ಬೆಂಬಲಕ್ಕೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅಮೆಜಾನ್ ಮೂಲಭೂತ ಹಣಕಾಸು ಸ್ವಾಸ್ಥ್ಯ ದ ವಿಷಯಗಳ ಸುತ್ತಲೂ ಕಾರ್ಯಕ್ರಮಗಳನ್ನು ಆನ್ಲೈನ್ ಶಿಕ್ಷಣ ಕಾರ್ಯಕ್ರಮಗಳು ಮತ್ತು “ಸಮೃದ್ಧಿ ಶಿಬಿರಗಳು” ಎಂಬ ಭೌತಿಕ ಹಣಕಾಸು ಸ್ವಾಸ್ಥ್ಯದ ಶಿಬಿರಗಳ ಮಿಶ್ರಣದ ಮೂಲಕ ಆಯೋಜಿಸುತ್ತದೆ.
- ವಾರದ 5 ದಿನಗಳು ಕೆಲಸ- ಅಮೆಜಾನ್ ತಾಣಗಳಲ್ಲಿ ಕೆಲಸ ಮಾಡುವ ಅಸೋಸಿಯೇಟ್ ಗಳು ಪ್ರತಿ ವಾರ 2 ದಿನ ರಜೆ ಪಡೆಯುತ್ತಾರೆ. ಹೆಚ್ಚುವರಿಯಾಗಿ ಎಲ್ಲ ಅಸೋಸಿಯೇಟ್ ಗಳು ಕಡ್ಡಾಯ ರಜಾದಿನಗಳು/ಐಚ್ಛಿಕ ರಜಾದಿನಗಳು/ವಾರ್ಷಿಕ ರಜಾದಿನಗಳು/ಅನಾರೋಗ್ಯದ ರಜೆಗಳು/ಕ್ಯಾಶುಯಲ್ ರಜೆಗಳನ್ನು ಅನ್ವಯಿಸುವ ಕಾನೂನಿನಂತೆ ಪಡೆಯುತ್ತಾರೆ.
- ಸಾಮಾಜಿಕ ಭಧ್ರತೆಯ ಅನುಕೂಲ- ಅಮೆಜಾನ್ ತಾಣಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಅಸೋಸಿಯೇಟ್ ಗಳು ಅನ್ವಯಿಸುವ ಕಾನೂನಿನಂತರ ಭವಿಷ್ಯ ನಿಧಿ(ಪಿ.ಎಫ್.), ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ(ಇ.ಎಸ್.ಐ.ಸಿ.) ಮತ್ತು ಗ್ರಾಚ್ಯುಟಿ ಅನುಕೂಲಗಳಿಗೆ ಅರ್ಹತೆ ಪಡೆಯು ತ್ತಾರೆ.
- ಅಪಘಾತಗಳು ಮತ್ತು ಗಾಯಗೊಳ್ಳುವಿಕೆಯ ವಿರುದ್ಧ ವಿಮೆಯ ರಕ್ಷಣೆ- ಇ.ಎಸ್.ಐ.ಸಿ.ಯ ಕನಿಷ್ಠ ಶಾಸನಬದ್ಧ ಅಗತ್ಯ ಪೂರೈಸುವುದಲ್ಲದೆ ಅಮೆಜಾನ್ ತಾಣಗಳಲ್ಲಿ ಕೆಲಸ ಮಾಡು ತ್ತಿರುವ ಎಲ್ಲ ಸಿಬ್ಬಂದಿ ಮತ್ತು ಡೆಲಿವರಿ ಅಸೋಸಿಯೇಟ್ ಗಳು ಗ್ರೂಪ್ ಮೆಡಿಕ್ಲೇಮ್ ವಿಮೆ, ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್ ಮತ್ತು ಗ್ರೂಪ್ ಟರ್ಮ್ ಇನ್ಷೂರೆನ್ಸ್ ಅಡಿಯಲ್ಲಿ ರಕ್ಷಣೆ ಪಡೆಯುತ್ತಾರೆ.
- ಎಲ್ಲರನ್ನೂ ಒಳಗೊಳ್ಳುವ ಉದ್ಯೋಗದ ಸ್ಥಳ- ನಾವು ಉದ್ಯಮದ ಮುಂಚೂಣಿಯ ಸೌಲಭ್ಯ ಗಳನ್ನು ಹಾಗೂ ಉದ್ಯೋಗದ ಪರಿಸ್ಥಿತಿಗಳನ್ನು ಒದಗಿಸುತ್ತಿದ್ದು ಎಲ್ಲ ಅಸೋಸಿಯೇಟ್ ಗಳಿಗೂ ನಮ್ಮ ಕಟ್ಟಡಗಳಲ್ಲಿ ಸಕಾರಾತ್ಮಕ ಅನುಭವ ಮೂಡುವಂತೆ ಮಾಡುತ್ತೇವೆ.
ಅಮೆಜಾನ್ ಇಂಡಿಯಾ ಸದೃಢ ದೇಶವ್ಯಾಪಿ ಫುಲ್ ಫಿಲ್ಮೆಂಟ್ ಮತ್ತು ಡೆಲಿವರಿ ಜಾಲವನ್ನು ನಿರ್ಮಿಸಿದ್ದು ಅದು ದೇಶಾದ್ಯಂತ ಗ್ರಾಹಕರಿಗೆ ಸೇವೆ ಒದಗಿಸಲು 1.6 ಮಿಲಿಯನ್ ಮಾರಾಟಗಾರರಿಗೆ ನೆರವಾಗುತ್ತಿದೆ.
ಕಂಪನಿಯು 15 ರಾಜ್ಯಗಳಲ್ಲಿ ಫುಲ್ ಫಿಲ್ಮೆಂಟ್ ಸೆಂಟರ್ ಗಳನ್ನು ಹೊಂದಿದ್ದು 43 ಮಿಲಿಯನ್ ಕ್ಯೂಬಿಕ್ ಅಡಿಯಷ್ಟು ಸಂಗ್ರಹ ಸ್ಥಳ ಹೊಂದಿದೆ; 19 ರಾಜ್ಯಗಳಲ್ಲಿ ಸಾರ್ಟೇಷನ್ ಕೇಂದ್ರಗಳು; ಇದರೊಂದಿಗೆ 2,000 ಅಮೆಜಾನ್-ಕಾರ್ಯ ನಿರ್ವಹಣೆ ಮತ್ತು ಪಾರ್ಟ್ನರ್ ಡೆಲಿವರಿ ಸ್ಟೇಷನ್ ಗಳ ಜಾಲ ಹೊಂದಿದೆ. ಅಲ್ಲದೆ ಇದು 28,000 ‘ಐ ಹ್ಯಾವ್ ಸ್ಪೇಸ್’ ಪಾಲುದಾರರನ್ನು ಮತ್ತು ಸಾವಿರಾರು ಅಮೆಜಾನ್ ಫ್ಲೆಕ್ಸ್ ಪಾರ್ಟ್ನರ್ ಗಳನ್ನು ಹೊಂದಿದ್ದು ಅವರು ದೇಶಾದ್ಯಂತ ಗ್ರಾಹಕರಿಗೆ ಪೂರೈಕೆ ಮಾಡುತ್ತಾರೆ.