ದೇಶಾದ್ಯಂತ ಬರೋಬ್ಬರಿ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶ ಸೃಷ್ಟಿಸಿದ ಅಮೆಜಾನ್ ಇಂಡಿಯಾ
ಅಮೆಜಾನ್ ಇಂಡಿಯಾ ಸಂಸ್ಥೆಯು ಮುಂಬರುವ ದೀಪಾವಳಿ ಹಾಗೂ ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳ ಸುಸಂದರ್ಭದಲ್ಲಿ ತನ್ನ ಇ-ಕಾಮರ್ಸ್ ಜಾಲದ ಮೂಲಕ ಭಾರತದಾದ್ಯಂತ ಸುಗಮ ಸೇವೆ ಗಳನ್ನು ಒದಗಿಸಲು ಸನ್ನದ್ಧವಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತ ದಾದ್ಯಂತ ತನ್ನ ಪ್ರಮುಖ ಕಾರ್ಯ ನಿರ್ವಹಣಾ ಕೇಂದ್ರಗಳು ಹಾಗೂ ಕ್ವಿಕ್ ಕಾಮರ್ಸ್ ಜಾಲ ದಾದ್ಯಂತ ಬರೋಬ್ಬರಿ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದಾಗಿ ಘೋಷಣೆ ಮಾಡಿದೆ.
-
ಬೆಂಗಳೂರು: ಅಮೆಜಾನ್ ಇಂಡಿಯಾ ಸಂಸ್ಥೆಯು ಮುಂಬರುವ ದೀಪಾವಳಿ ಹಾಗೂ ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳ ಸುಸಂದರ್ಭದಲ್ಲಿ ತನ್ನ ಇ-ಕಾಮರ್ಸ್ ಜಾಲದ ಮೂಲಕ ಭಾರತದಾದ್ಯಂತ ಸುಗಮ ಸೇವೆಗಳನ್ನು ಒದಗಿಸಲು ಸನ್ನದ್ಧವಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತ ದಾದ್ಯಂತ ತನ್ನ ಪ್ರಮುಖ ಕಾರ್ಯನಿರ್ವಹಣಾ ಕೇಂದ್ರಗಳು ಹಾಗೂ ಕ್ವಿಕ್ ಕಾಮರ್ಸ್ ಜಾಲ ದಾದ್ಯಂತ ಬರೋಬ್ಬರಿ 1,60,000ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವು ದಾಗಿ ಘೋಷಣೆ ಮಾಡಿದೆ.
ಈ ವಿಸ್ತಾರವಾದ ನೇಮಕಾತಿಯು ದೇಶದ ಬಹುದೊಡ್ಡ ಮೆಟ್ರೋಪಾಲಿಟನ್ ಮಹಾನಗರಗಳ ಜತೆಗೆ, ವಾರಣಾಸಿ, ಕೊಚ್ಚಿ, ಜಲಂಧರ್, ಗಾಜಿಯಾಬಾದ್, ರಾಂಚಿ, ಸೇಲಂ, ಗೋರಖ್‌ಪುರ ಸೇರಿ ದಂತೆ ಒಟ್ಟಾರೆಯಾಗಿ 400ಕ್ಕೂ ಅಧಿಕ ನಗರಗಳಲ್ಲಿ ತೆರೆದುಕೊಂಡಿರುವ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳನ್ನು ಸಮಗ್ರವಾಗಿ ಒಳಗೊಂಡಿದೆ.
ಅಮೆಜಾನ್, ತನ್ನ ಕಾರ್ಯ ಜಾಲದಲ್ಲಿ ಸಾವಿರಾರು ಮಹಿಳಾ ಸಹವರ್ತಿಗಳಿಗೆ ಹಾಗೂ ವಿಶೇಷ ಚೇತನ ವ್ಯಕ್ತಿಗಳಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಗಮನಾರ್ಹ ಹೆಜ್ಜೆಯನ್ನು ಇರಿಸಿದೆ.
ಇದನ್ನೂ ಓದಿ: Job Mela: ಗುಡಿಬಂಡೆ ತಾಲ್ಲೂಕಿನಲ್ಲಿ ಜಾಬ್ ಕಾರ್ಡ್ ಮೇಳ: ಗ್ರಾಮೀಣ ಕುಟುಂಬಗಳಿಗೆ ಸ್ವಗ್ರಾಮದಲ್ಲೇ ಉದ್ಯೋಗದ ಅವಕಾಶ
ನೂತನವಾಗಿ ಸೇರ್ಪಡೆಗೊಂಡಿರುವ ಈ ಎಲ್ಲಾ ಸಹವರ್ತಿಗಳು ಅಮೆಜಾನ್ ಸಂಸ್ಥೆಯ ಹಾಲಿ ಇರುವ ಕಾರ್ಯಪಡೆಯೊಂದಿಗೆ ಸಕ್ರಿಯವಾಗಿ ಕೈಜೋಡಿಸಲಿದ್ದಾರೆ. ಹಬ್ಬದ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಗ್ರಾಹಕರ ಬೇಡಿಕೆಯನ್ನು ಸಕಾಲದಲ್ಲಿ ಪೂರೈಸುವ ನಿಟ್ಟಿನಲ್ಲಿ, ಗ್ರಾಹಕರು ನೀಡಿದ ಪ್ರತಿಯೊಂದು ಆರ್ಡರ್ ಅನ್ನು ಅತ್ಯಂತ ಜಾಗರೂಕತೆಯಿಂದ ಪಿಕ್ ಮಾಡು ವುದು, ಪ್ಯಾಕ್ ಮಾಡುವುದು, ಸುರಕ್ಷಿತವಾಗಿ ರವಾನಿಸುವುದು ಹಾಗೂ ಅಂತಿಮವಾಗಿ ವಿಳಾಸಕ್ಕೆ ವಿತರಿಸುವ ಕಾರ್ಯಗಳಲ್ಲಿ ಇವರು ದಕ್ಷತೆಯಿಂದ ನೆರವಾಗಲಿದ್ದಾರೆ. ಅಮೆಜಾನ್, ಈಗಾಗಲೇ ಈ ಸಹವರ್ತಿಗಳ ಪೈಕಿ ಬಹುಪಾಲು ಮಂದಿಯನ್ನು ತನ್ನ ಜಾಲಕ್ಕೆ ಬರಮಾಡಿಕೊಂಡಿದ್ದು, ಕರ್ತವ್ಯ ನಿರ್ವಹಣೆಗೆ ಅಗತ್ಯವಾಗಿ ಬೇಕಾಗಿರುವ ವೃತ್ತಿಪರ ತರಬೇತಿಯನ್ನು ನೀಡಲು ಆರಂಭಿಸಿದೆ.
ಸಿಬ್ಬಂದಿಯ ಹಿತರಕ್ಷಣೆಗೆ ಸದಾ ಬದ್ಧವಾಗಿರುವ ಅಮೆಜಾನ್, ತನ್ನ ಕಾಯಂ ನೌಕರರಿಗೆ ನೀಡು ವಂತೆಯೇ ತಾತ್ಕಾಲಿಕ ನೌಕರರಿಗೂ ಎಲ್ಲಾ ಬಗೆಯ ಸುರಕ್ಷತೆ ಮತ್ತು ಕಲ್ಯಾಣ ಸೌಲಭ್ಯ ಗಳನ್ನು ವಿಸ್ತರಿಸಿದೆ. ಸುರಕ್ಷಿತ, ಸೌಹಾರ್ದಯುತ ಕೆಲಸದ ವಾತಾವರಣದ ಜತೆಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನೂ ಇವರಿಗೆ ಒದಗಿಸಲಾಗುತ್ತಿದೆ.
ವಿಶೇಷವಾಗಿ, ಹಬ್ಬದ ಸೀಸನ್‌ನ ಕಾರ್ಯಾಚರಣೆಗೆ ಹೊಸದಾಗಿ ಸೇರ್ಪಡೆಗೊಳ್ಳುವ ಸಿಬ್ಬಂದಿಗೆ ಕಂಪನಿಯ ಮಹತ್ವಾಕಾಂಕ್ಷೆಯ ಸಮೃದ್ಧಿ ಯೋಜನೆ ಮೂಲಕ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಲು ಹಾಗೂ ಸರ್ಕಾರದ ನಾನಾ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ಸುಲಭವಾಗಿ ತಲುಪಿಸಲು ಅಮೆಜಾನ್ ಪೂರ್ಣ ಬೆಂಬಲ ನೀಡಲಿದೆ.
ಅಮೆಜಾನ್ ಇಂಡಿಯಾ, ಎಪಿಎಸಿ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ತುರ್ಕಿಯೆ ವಲಯದ ಆಪರೇಷನ್ಸ್ ಉಪಾಧ್ಯಕ್ಷ ಅಭಿನವ್ ಸಿಂಗ್ ಅವರು, "ಈ ಹಬ್ಬದ ಸೀಸನ್‌ನಲ್ಲಿ ಭಾರತದ ಪ್ರತಿ ಯೊಂದು ಪಿನ್-ಕೋಡ್ ವ್ಯಾಪ್ತಿಯ ಗ್ರಾಹಕರಿಗೂ ತ್ವರಿತ ಹಾಗೂ ವಿಶ್ವಾಸಾರ್ಹ ಡೆಲಿವರಿ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ. ಹೆಚ್ಚಾಗಲಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸುವ ಸಲುವಾಗಿ, ನಮ್ಮ ಕಾರ್ಯಾಚರಣೆ ಜಾಲದಾದ್ಯಂತ ನಾವು 1.6 ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದೇವೆ. ಭಾರತದಲ್ಲೇ ಅತ್ಯಂತ ದೊಡ್ಡದಾದ, ಸುರಕ್ಷಿತವಾದ, ವೇಗವಾದ ಹಾಗೂ ಅತ್ಯಂತ ವಿಶ್ವಾಸಾರ್ಹವಾದ ಕಾರ್ಯಾಚರಣೆ ಜಾಲವನ್ನು ರೂಪಿಸುವತ್ತ ಗಮನಹರಿಸುತ್ತಿರುವ ನಾವು, ಸಾವಿರಾರು ಮಹಿಳಾ ಸಹವರ್ತಿಗಳು ಹಾಗೂ ವಿಕಲಚೇತನ ವ್ಯಕ್ತಿಗಳಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಎಲ್ಲರನ್ನೂ ಒಳಗೊಳ್ಳುವಂತಹ ಕಾರ್ಯಪಡೆ ಯನ್ನು ನಿರ್ಮಿಸಲೂ ಬದ್ಧರಾಗಿದ್ದೇವೆ.
ನಮ್ಮ ಸಹವರ್ತಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಸದಾ ಮೊದಲ ಆದ್ಯತೆ ನೀಡುತ್ತೇವೆ ಹಾಗೂ ಅವರಿಗೆ ಸುರಕ್ಷಿತ, ಸೌಹಾರ್ದಯುತ ಮತ್ತು ಪ್ರೋತ್ಸಾಹದಾಯಕ ಕೆಲಸದ ವಾತಾವರಣ ವನ್ನು ಒದಗಿಸುತ್ತೇವೆ. ಈ ವಿಸ್ತರಿತ ಕಾರ್ಯಪಡೆಯು ನಮ್ಮ ಫುಲ್‌ಫಿಲ್‌ಮೆಂಟ್ ಮತ್ತು ಲಾಜಿಸ್ಟಿಕ್ಸ್ ಸಾಮರ್ಥ್ಯಗಳನ್ನು ಬಲಪಡಿಸಲು ಹಾಗೂ ಹಬ್ಬದ ಸೀಸನ್‌ನ ದಟ್ಟಣೆಯನ್ನು ಸುಗಮವಾಗಿ ನಿರ್ವಹಿಸಲು ನೆರವಾಗಲಿದೆ. ಇಲ್ಲಿ ಕೆಲಸ ಮಾಡುವ ಅನೇಕ ಸಹವರ್ತಿಗಳು ಹಬ್ಬದ ಅವಧಿ ಮುಗಿದ ನಂತರವೂ ಅಮೆಜಾನ್‌ನೊಂದಿಗೆ ತಮ್ಮ ಪಯಣವನ್ನು ಮುಂದುವರಿಸುತ್ತಾರೆ, ಹಾಗೆಯೇ ಇನ್ನೂ ಹಲವರು ಪ್ರತಿ ವರ್ಷ ನಮ್ಮೊಂದಿಗೆ ಕೆಲಸ ಮಾಡಲು ಮರಳಿ ಬರುತ್ತಾರೆ," ಎಂದು ಹೇಳಿದರು.
ದೇಶಾದ್ಯಂತ ಇರುವ ಗ್ರಾಹಕರಿಗೆ ಸೇವೆ ಸಲ್ಲಿಸಲು 17 ಲಕ್ಷಕ್ಕೂ ಹೆಚ್ಚು ಮಾರಾಟಗಾರರಿಗೆ ನೆರವಾ ಗುವಂತಹ ಬಲಿಷ್ಠವಾದ ರಾಷ್ಟ್ರವ್ಯಾಪಿ ಫುಲ್‌ಫಿಲ್‌ಮೆಂಟ್ ಮತ್ತು ಡೆಲಿವರಿ ನೆಟ್‌ವರ್ಕ್ ಅನ್ನು ಅಮೆಜಾನ್ ಇಂಡಿಯಾ ನಿರ್ಮಿಸಿದೆ.
ಸಂಸ್ಥೆಯು ದೇಶದ 15 ರಾಜ್ಯಗಳಲ್ಲಿ ಹರಡಿಕೊಂಡಿರುವ ಫುಲ್‌ಫಿಲ್‌ಮೆಂಟ್ ಕೇಂದ್ರಗಳನ್ನು ಹೊಂದಿದ್ದು, ಮಾರಾಟಗಾರರ ದಾಸ್ತಾನು ಸಂಗ್ರಹಕ್ಕಾಗಿ 4.3 ಕೋಟಿ ಕ್ಯೂಬಿಕ್ ಅಡಿಗಳಿಗೂ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತಿದೆ, 19 ರಾಜ್ಯಗಳಲ್ಲಿ ವಿಂಗಡಣಾ ಕೇಂದ್ರಗಳನ್ನು ಹಾಗೂ ಅಮೆಜಾನ್ ನೇತೃತ್ವದ ಮತ್ತು ಪಾಲುದಾರಿಕೆ ಹೊಂದಿರುವ ಸುಮಾರು 2,000 ಡೆಲಿವರಿ ಸ್ಟೇಷನ್ ಗಳ ಜಾಲ ಹೊಂದಿದೆ. ಇದಲ್ಲದೆ, ದೇಶಾದ್ಯಂತ ಇರುವ ಗ್ರಾಹಕರಿಗೆ ಸಂತಸದ ಡೆಲಿವರಿ ನೀಡಲು ಸಜ್ಜಾಗಿರುವ 28,000 ಹಬ್ ಡೆಲಿವರಿ ಪಾಲುದಾರರು ಮತ್ತು ಸಾವಿರಾರು ಅಮೆಜಾನ್ ಫ್ಲೆಕ್ಸ್ ಪಾಲುದಾರರ ಬಲವನ್ನೂ ಸಂಸ್ಥೆ ಹೊಂದಿದೆ.