ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SSC Recruitment 2026: 1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌

Job Guide: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ದೇಶಾದ್ಯಂತ ಖಾಲಿ ಇರುವ 1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 30.

1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Sep 13, 2026 9:33 PM

ದೆಹಲಿ, ಸೆ. 13: ಕೆಲವು ದಿನಗಳ ಹಿಂದೆಯಷ್ಟೇ 4,284 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (Staff Selection Commission) ಇದೀಗ ದೇಶಾದ್ಯಂತ ಖಾಲಿ ಇರುವ 1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಮುಂದಾಗಿದೆ (Job Guide). ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಬಹುದು (SSC CHSL Recruitment 2026). ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 30.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸಿಆರ್‌ಪಿಎಫ್‌-254, ಬಿಎಸ್‌ಎಫ್‌-457, ಐಟಿಬಿಪಿ-187, ಸಿಐಎಸ್‌ಎಫ್‌-484, ಎಸ್‌ಎಸ್‌ಬಿ-172, ದೆಹಲಿ ಪೊಲೀಸ್‌-317 ಹುದ್ದೆಗಳಿವೆ. ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದೇಶದ ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆ ತಿಳಿಸಿದೆ.

ವಯೋಮಿತಿ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ತಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.

1,748 ಹುದ್ದೆಗಳ ಭರ್ತಿಗೆ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಿಂದ ಅರ್ಜಿ ಆಹ್ವಾನ

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಇಎಸ್‌ಎಂ/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಉಳಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂಪಾಯಿ ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ಪರೀಕ್ಷೆ (ಪೇಪರ್‌-I, ಪೇಪರ್‌-II ಕಂಪ್ಯೂಟರ್‌ ಬೇಸ್ಡ್‌ ಪರೀಕ್ಷೆ), ದಾಖಲಾತಿ ಪರಿಶೀಲನೆ, ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರವಿದೆ. ಪೇಪರ್‌ I ಪರೀಕ್ಷೆಯಲ್ಲಿ ಜನರಲ್‌ ಇಂಟಲಿಜೆನ್ಸ್‌ ಮತ್ತು ರೀಸನಿಂಗ್‌, ಜನರಲ್‌ ನಾಲೆದ್ಜ್‌ ಮತ್ತು ಜನರಲ್‌ ಅವೆರನ್ಸ್‌, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ಮತ್ತು ಇಂಗ್ಲಿಷ್‌ ಸಬ್ಕೆಕ್ಟ್‌ನ ತಲಾ 25 ಪ್ರಶ್ನೆಗಳಿರುತ್ತವೆ. ಪೇಪರ್‌ II ಪರೀಕ್ಷೆಯಲ್ಲಿ ಜನರಲ್‌ ಇಂಟಲಿಜೆನ್ಸ್‌ ಮತ್ತು ರೀಸನಿಂಗ್‌, ಜನರಲ್‌ ನಾಲೆದ್ಜ್‌ ಮತ್ತು ಜನರಲ್‌ ಅವೆರನ್ಸ್‌, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ಮತ್ತು ಇಂಗ್ಲಿಷ್‌ ಸಬ್ಕೆಕ್ಟ್‌ನ ಪ್ರಶ್ನೆಗಳಿರುತ್ತವೆ. ಗಮನಿಸಿ ಪ್ರತಿ ತಪ್ಪು ಉತ್ತರಕ್ಕೆ ನೆಗೆಟಿವ್‌ ಆಂಕಗಳಿದ್ದು, ಯೋಚಿಸಿ ಉತ್ತರಿಸಬೇಕು.

SSC Recruitment 2026 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (https://ssc.gov.in/login)
  • ಹೆಸರು ನೋಂದಾಯಿಸಿ.
  • ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ಅಧಿಕೃತ ವೆಬ್‌ಸೈಟ್‌ ವಿಳಾಸ: ssc.gov.inಗೆ ಭೇಟಿ ನೀಡಿ ಅಥವಾ ಟೋಲ್‌ ಫ್ರೀ ನಂಬರ್‌ 18003093063ಕ್ಕೆ ಕರೆ ಮಾಡಿ.

ಇನ್ನಷ್ಟು ಉದ್ಯೋಗದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.