ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Anekal News: ಕೃಷಿ ಹೊಂಡಕ್ಕೆ ಬಿದ್ದು ತಾಯಿ- ಮಗಳು ಸಾವು, ಪತಿ ಮೇಲೆ ಸಂಶಯ

ಲಾವಣ್ಯ ಹಾಗೂ ಮೃತದೇಹ ಕೃಷಿ ಹೊಂಡದಲ್ಲಿ ಸಿಕ್ಕಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಓಡೋಡಿ ಬಂದಿದ್ದಾರೆ. ತಾಯಿ-ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ. ಇದರ ಹಿಂದೆ ಗಂಡನ ಕೈವಾಡವಿದೆ ಎಂದು ಆರೋಪ ಮಾಡಿದ್ದಾರೆ.

ಕೃಷಿ ಹೊಂಡಕ್ಕೆ ಬಿದ್ದು ತಾಯಿ- ಮಗಳು ಸಾವು, ಪತಿ ಮೇಲೆ ಸಂಶಯ

ಮೃತ ಲಾವಣ್ಯ ಮತ್ತು ಮಗಳು -

ಹರೀಶ್‌ ಕೇರ
ಹರೀಶ್‌ ಕೇರ Apr 27, 2026 1:28 PM

ಬೆಂಗಳೂರು, ಏ.27: ಕೃಷಿ ಹೊಂಡಕ್ಕೆ (Farm Pond) ಬಿದ್ದು ತಾಯಿ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಲಕ್ಷ್ಮೀಸಾಗರದಲ್ಲಿ ನಡೆದಿದೆ. 28 ವರ್ಷದ ಲಾವಣ್ಯ ಹಾಗೂ 8 ವರ್ಷದ ಲಕ್ಷತಾ ಮೃತ (Death) ದುರ್ದೈವಿಗಳಾಗಿದ್ದಾರೆ. ಇಬ್ಬರೂ ಕೃಷಿ ಹೊಂಡಕ್ಕೆ ಬಿದ್ದಿರುವ ಬಗ್ಗೆ ಲಾವಣ್ಯರ ಪತಿಯ ಮೇಲೆಯೇ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ ಏಪ್ರಿಲ್​ 26ರ ಭಾನುವಾರ ಈ ದುರ್ಘಟನೆ ನಡೆದಿದೆ. 28 ವರ್ಷದ ಲಾವಣ್ಯ, ಲಕ್ಷ್ಮೀಸಾಗರ ಗ್ರಾಮದ ಸಂಪತ್ ಅವರನ್ನು 2017ರಲ್ಲಿ ಮದುವೆಯಾಗಿದ್ದು, ಈ ದಂಪತಿಗೆ 8 ವರ್ಷದ ಮಗಳು ಕೂಡ ಇದ್ದಳು. ಲಾವಣ್ಯ ಹಾಗೂ ಮೃತದೇಹ ಕೃಷಿ ಹೊಂಡದಲ್ಲಿ ಸಿಕ್ಕಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಓಡೋಡಿ ಬಂದಿದ್ದಾರೆ. ತಾಯಿ-ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ. ಇದರ ಹಿಂದೆ ಗಂಡನ ಕೈವಾಡವಿದೆ ಎಂದು ಆರೋಪ ಮಾಡಿದ್ದಾರೆ.

ಪತಿ ಸಂಪತ್ ವಿರುದ್ದ ಮೃತ ಲಾವಣ್ಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೃಷಿ ಹೊಂಡದಲ್ಲಿ ತಾಯಿ-ಮಗಳು ಸಾವನ್ನಪ್ಪಿರೋ ಬಗ್ಗೆ ಅನುಮಾನವಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಮೃತ ಲಾವಣ್ಯ ಪೋಷಕರು ದೂರು ನೀಡಿದ್ದಾರೆ.

Road Accident: ನಾಲ್ವರು ಪ್ರಯಾಣಿಸುತ್ತಿದ್ದ ಬೈಕಿಗೆ ಟಿಪ್ಪರ್‌ ಡಿಕ್ಕಿ, ಇಬ್ಬರು ಸಾವು