ಸರ್ಜಾಪುರದ ಅಪೋಲೋ ಆಸ್ಪತ್ರೆಯಿಂದ ಹೃದಯದ ಆರೋಗ್ಯದ ಅರಿವು ಮೂಡಿಸಲು ನಡಿಗೆ ಮತ್ತು ಓಟದ ಕಾರ್ಯಕ್ರಮ
ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞರ ತಂಡವು ಭಾಗವಹಿಸಿದವರಿಗೆ ಸಿಪಿಆರ್ (CPR) ಕುರಿತು ಮಾಹಿತಿ ನೀಡುವುದರ ಜೊತೆಗೆ, ಯಾವುದೇ ಸಮಯದಲ್ಲಿ ಹೃದಯಾಘಾತ ಅಥವಾ ಹೃದಯ ಸ್ತಂಭನ ದಿಂದ ತುರ್ತು ಪರಿಸ್ಥಿತಿಗೆ ಒಳಗಾದ ವ್ಯಕ್ತಿಯ ಜೀವವನ್ನು ಸಿಪಿಆರ್ ಮೂಲಕ ಹೇಗೆ ಉಳಿಸಬಹುದು ಎಂಬುದನ್ನು ತಿಳಿಸಿಕೊಟ್ಟರು.
-
ಬೆಂಗಳೂರು: ಹೃದಯದ ಆರೋಗ್ಯದ ಕುರಿತು ಅರಿವು ಮೂಡಿಸಲು ಅಪೋಲೋ ಆಸ್ಪತ್ರೆಯು ಡೆಕಾಥ್ಲಾನ್ ಸ್ಪೋರ್ಟ್ಸ್ ನಲ್ಲಿ ನಡಿಗೆ ಮತ್ತು ಓಟದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ 3 ಕಿ.ಮೀ ನಡಿಗೆ, 5 ಕಿ.ಮೀ ನಡಿಗೆ, 5 ಕಿ.ಮೀ ಓಟ ಮತ್ತು 10 ಕಿ.ಮೀ ಓಟ ಒಳಗೊಂಡಿದ್ದು ಕುಟುಂಬಗಳು, ಫಿಟ್‌ನೆಸ್ ಉತ್ಸಾಹಿಗಳು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: Apollo Founder: 26 ಸಾವಿರ ಕೋಟಿ ಒಡೆಯ... 92 ವರ್ಷ ವಯಸ್ಸಿನಲ್ಲೂ ವಾರಕ್ಕೆ ಆರು ದಿನ ಕೆಲಸ ಮಾಡ್ತಾರೆ!
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಭಾರತೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯಕ್, ವ್ಹೀಲ್ ಚೇರ್ ಟೆನ್ನಿಸ್ ಆಟಗಾರ್ತಿ ಶ್ರೀಮತಿ ಪ್ರತಿಮಾ ರಾವ್; ಡೆಲ್ಲಿ ಪಬ್ಲಿಕ್ ಸ್ಕೂಲ್ ಈಸ್ಟ್ ನ ಪ್ರಾಂಶುಪಾಲರಾದ ಶ್ರೀಮತಿ ಮನಿಲಾ ಕರ್ವಾಲೋ; ಮತ್ತು ಹಿಂದುಸ್ಥಾನ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕದ ಅಧ್ಯಕ್ಷ ಡಾ. ಅಫ್ಷಾದ್ ಅಹಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞರ ತಂಡವು ಭಾಗವಹಿಸಿದವರಿಗೆ ಸಿಪಿಆರ್ (CPR) ಕುರಿತು ಮಾಹಿತಿ ನೀಡುವುದರ ಜೊತೆಗೆ, ಯಾವುದೇ ಸಮಯದಲ್ಲಿ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ತುರ್ತು ಪರಿಸ್ಥಿತಿಗೆ ಒಳಗಾದ ವ್ಯಕ್ತಿಯ ಜೀವವನ್ನು ಸಿಪಿಆರ್ ಮೂಲಕ ಹೇಗೆ ಉಳಿಸಬಹುದು ಎಂಬುದನ್ನು ತಿಳಿಸಿಕೊಟ್ಟರು.
ಪ್ರತಿ ಭಾಗವಹಿಸುವವರೂ ಈ ಪ್ರಕ್ರಿಯೆಯನ್ನು ಕಲಿಯಲು ಆಸಕ್ತಿ ತೋರಿದರು. ಹೃದಯ ಸಂಬಂಧಿತ ಕಾಯಿಲೆಗಳು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳು ಹಾಗೂ ದೈಹಿಕವಾಗಿ ಸದೃಢವಾಗಿರಲು ಅನುಸರಿಸಬೇಕಾದ ಕ್ರಮಗಳ ಕುರಿತು ತಮ್ಮ ಸಂದೇಹಗಳನ್ನು ಕೇಳಿ, ತಜ್ಞರಿಂದ ಸೂಕ್ತ ಮಾಹಿತಿ ಪಡೆದರು.
ಈ ಉಪಕ್ರಮವು ನಿಯಮಿತ ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಆಯ್ಕೆ ಗಳನ್ನು ಪ್ರೋತ್ಸಾಹಿಸಿತು. ಜೊತೆಗೆ, ಹೃದ್ರೋಗದ ಮುನ್ನೆಚ್ಚರಿಕೆ ರೋಗಲಕ್ಷಣಗಳನ್ನು ಗುರುತಿಸು ವುದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಿತು.