ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Apollo Founder: 26 ಸಾವಿರ ಕೋಟಿ ಒಡೆಯ... 92 ವರ್ಷ ವಯಸ್ಸಿನಲ್ಲೂ ವಾರಕ್ಕೆ ಆರು ದಿನ ಕೆಲಸ ಮಾಡ್ತಾರೆ!

ಬಹುತೇಕ ವಯೋವೃದ್ಧರು ಆಸ್ಪತ್ರೆಗೆ ಭೇಟಿ ನೀಡುವ ಮತ್ತು ಸಕ್ರಿಯ ಜೀವನದಿಂದ ನಿವೃತ್ತರಾಗುವ ವಯಸ್ಸಿನಲ್ಲಿ ಯುವ ಪೀಳಿಗೆಗೆ ಮಾದರಿಯಾಗಿ 92 ವರ್ಷದ ಡಾ. ಪ್ರತಾಪ್ ಸಿ ರೆಡ್ಡಿ ಅವರು ಇಂದಿಗೂ ಕಾಯಕವೇ ಕೈಲಾಸ ಎಂದು ರೋಗಿಗಳ ಶುಶ್ರೂಷೆಯಲ್ಲಿ ನಿರತರಾಗಿದ್ದಾರೆ.

ವಾರಕ್ಕೆ ಆರು ದಿನವೂ ದುಡಿಯುತ್ತಾರೆ 26 ಸಾವಿರ ಕೋಟಿ ಒಡೆಯ

ಡಾ. ಪ್ರತಾಪ್ ಸಿ ರೆಡ್ಡಿ

Profile Sushmitha Jain May 13, 2025 9:57 PM

ಚೆನ್ನೈ: ಬಹುತೇಕ ವಯೋವೃದ್ಧರು ಆಸ್ಪತ್ರೆಗೆ ಭೇಟಿ ನೀಡುವ ಮತ್ತು ಸಕ್ರಿಯ ಜೀವನದಿಂದ ನಿವೃತ್ತರಾಗುವ ವಯಸ್ಸಿನಲ್ಲಿ ಯುವ ಪೀಳಿಗೆಗೆ ಮಾದರಿಯಾಗಿ 92 ವರ್ಷದ ಡಾ. ಪ್ರತಾಪ್ ಸಿ ರೆಡ್ಡಿ (Dr Prathap C Reddy) ಅವರು ಇಂದಿಗೂ ಕಾಯಕವೇ ಕೈಲಾಸ ಎಂದು ರೋಗಿಗಳ ಶುಶ್ರೂಷೆಯಲ್ಲಿ ನಿರತರಾಗಿದ್ದಾರೆ. ಹೌದು ಡಾ. ಪ್ರತಾಪ್ ಸಿ ರೆಡ್ಡಿ ವಾರದ ಆರು ದಿನವೂ ಹಾಸ್ಪಿಟಲ್ ಗೆ ತೆರಳಿ ಕಾರ್ಯ ಪ್ರವೃತರಾಗಿದ್ದು, ಬೆಳಿಗ್ಗೆ 10 ಗಂಟೆಗೆ ಕೆಲಸದ ಸ್ಥಳಕ್ಕೆ ತೆರಳಿದ್ದರೆ ಸಂಜೆ 5 ಗಂಟೆವರೆಗೂ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾರತದ ಮೊದಲ ಕಾರ್ಪೊರೇಟ್ ಆಸ್ಪತ್ರೆಯಾದ ಅಪೋಲೋ ಆಸ್ಪತ್ರೆಯನ್ನು (Apollo Hospitals) ಸ್ಥಾಪಿಸಿದ ಕೀರ್ತಿ ಡಾ. ರೆಡ್ಡಿಗೆ ಸಲ್ಲಿದ್ದು, ರೋಗಿಗಳಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಕಟ್ಟಿದರು. ಹೆಚ್ಚಿನ ಚಿಕಿತ್ಸೆಗೆ, ಉನ್ನತ ಚಿಕಿತ್ಸೆಗೆ ವಿದೇಶದತ್ತ ಮುಖ ಮಾಡುವುದನ್ನು ತಪ್ಪಿಸುವ ಸದುದ್ದೇಶದಿಂದ ಭಾರತದಲ್ಲಿಯೇ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಗುರಿಯನ್ನು ಹೊಂದಿದ್ದ ಅವರು ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ. ಪ್ರತಾಪ್ ಸಿ ರೆಡ್ಡಿ ಯಾರು?

ಚೆನ್ನೈ ಮೂಲದ ರೆಡ್ಡಿ, ಸ್ಟಾನ್ಲಿ ಮೆಡಿಕಲ್ ಕಾಲೇಜಿನಿಂದ (ಎಸ್‌ಎಂಸಿ) ಎಂಬಿಬಿಎಸ್ ಪದವಿ ಪಡೆದರು. ಹೃದ್ರೋಗ ತಜ್ಞರ ತರಬೇತಿಗಾಗಿ ಅವರು ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದರು. 1970ರ ದಶಕದಲ್ಲಿ ಅವರ ತಂದೆಯ ಭಾವನಾತ್ಮಕ ಪತ್ರದಿಂದ ಪ್ರೇರಿತರಾಗಿ, ವಿದೇಶದಲ್ಲಿ ಯಶಸ್ವಿ ವೃತ್ತಿಜೀವನದ ಅವಕಾಶವಿದ್ದರೂ ಭಾರತಕ್ಕೆ ಮರಳಿದರು. ಅವರ ತಂದೆ, ತಾಯ್ನಾಡಿಗೆ ಮರಳಿ ಸೇವೆ ಸಲ್ಲಿಸುವಂತೆ ಕೋರಿದ್ದರು. 1979 ರಲ್ಲಿ ಭಾರತದಲ್ಲಿ ವೈದ್ಯಕೀಯ ಸೌಲಭ್ಯಗಳಿಲ್ಲದೆ ಒಬ್ಬ ರೋಗಿ ಮೃತಪಟ್ಟ ಘಟನೆಯು ಡಾ. ರೆಡ್ಡಿಯವರ ಮೇಲೆ ಗಾಢ ಪರಿಣಾಮ ಬೀರಿತು ಎಂದು ವರದಿಯಾಗಿದೆ.

ಜನರಿಗೆ ಉನ್ನತ ಮಟ್ಟದ ಆರೈಕೆ ಒದಗಿಸಲು ಆಸ್ಪತ್ರೆ ಸ್ಥಾಪಿಸಲು ಅವರು ನಿರ್ಧರಿಸಿದರು. ಈ ನಿರ್ಧಾರವು ಅವರ ಜೀವನವನ್ನು ಬದಲಾಯಿಸಿತು. ಒಂದು ಆಸ್ಪತ್ರೆಯಿಂದ ಆರಂಭವಾದ ಅವರ ಕನಸು, ಇಂದು ವಿಶಾಲ ಆರೋಗ್ಯ ಜಾಲವಾಗಿ ವಿಸ್ತರಿಸಿದೆ. ಅಪೋಲೋ ಆಸ್ಪತ್ರೆಗಳು ಇಂದು ದೇಶಾದ್ಯಂತ 71 ಶಾಖೆಗಳನ್ನು ನಡೆಸುತ್ತಿವೆ. ಇದರ ಜೊತೆಗೆ, ಕಂಪನಿಯು 291 ಪ್ರಾಥಮಿಕ ಆರೈಕೆ ಕ್ಲಿನಿಕ್‌ಗಳು, 5,000 ಕ್ಕೂ ಹೆಚ್ಚು ಔಷಧಾಲಯಗಳು ಮತ್ತು ಡಿಜಿಟಲ್ ಆರೋಗ್ಯ ಜಾಲವನ್ನು ಹೊಂದಿದೆ.

ಈ ಸುದ್ದಿಯನ್ನು ಓದಿ: Viral News: ಆಡೋ ಮಕ್ಕಳ ಕೈಯಲ್ಲಿ ಫುಲ್‌ ಲೋಡೆಡ್‌ ಗನ್‌- ಆಮೇಲೇನಾಯ್ತು? ಈ ಶಾಕಿಂಗ್‌ ವಿಡಿಯೊ ವೈರಲ್‌

70,000 ಕೋಟಿ ರೂ. ಮಾರುಕಟ್ಟೆ ಮೌಲ್ಯದೊಂದಿಗೆ, ಅಪೋಲೋ ಆಸ್ಪತ್ರೆಗಳು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಮಾತ್ರವಲ್ಲ, ಆರ್ಥಿಕ ದೈತ್ಯಯಾವಿಯೂ ಗುರುತಿಸಲ್ಪಟ್ಟಿದೆ. ಡಾ.ರೆಡ್ಡಿಯವರ ಕುಟುಂಬವು ಕಂಪನಿಯ ಶೇ. 29.3 ರಷ್ಟು ಷೇರುಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಫೋರ್ಬ್ಸ್ ಪ್ರಕಾರ, ಡಾ. ರೆಡ್ಡಿಯವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 26,560 ಕೋಟಿ ರೂ. ಆಗಿದೆ. ಯಶಸ್ಸಿಗೆ ವಿನಯ ಮತ್ತು ರಾಷ್ಟ್ರ ಸೇವೆಯ ಅಗತ್ಯವಿದೆ ಎಂಬ ಅವರ ನಂಬಿಕೆ ಇನ್ನೂ ಅವರ ಜೀವನದ ಮೂಲಭೂತ ತತ್ವವಾಗಿದೆ ಎಂದು ಅವರು ಬ್ಯುಸಿನೆಸ್ ಟುಡೇಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅವರ ವೃತ್ತಿಜೀವನವು ನಾಯಕತ್ವಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ.