ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Crime News: ಸ್ಕರ್ಟ್‌ ಧರಿಸಿದ್ರೆ ರೇಪ್‌ ಮಾಡ್ತೀನಿ ಎಂದು ಬೆದರಿಸಿದ ಬೆಂಗಳೂರಿನ ರಿಕ್ಷಾ ಚಾಲಕ, ರೆಡ್ಡಿಟ್‌ ಪೋಸ್ಟ್‌ ವೈರಲ್‌

Physical Abuse: ನಾನು ಇಡೀ ಘಟನೆಯಿಂದ ಶಾಕ್‌ ಆಗಿದ್ದುದರಿಂದ ಆತನ ರಿಕ್ಷಾದ ನಂಬರ್ ಪ್ಲೇಟ್ ಸಂಖ್ಯೆಯನ್ನು ಬರೆದುಕೊಳ್ಳಲು ಅಥವಾ ಅವನ ಮುಖದ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ. ನಾನು ನನ್ನ ಗೆಳೆಯನೊಂದಿಗೆ ಇರುವಾಗಲೇ, ಹಾಡ ಹಗಲೇ ಹೀಗೆ ಬೆದರಿಸಬಲ್ಲ ವ್ಯಕ್ತಿ, ಮಹಿಳೆಯರು ಒಬ್ಬಂಟಿಯಾಗಿ ಸಿಕ್ಕಿದರೆ ಏನಾದರೂ ಮಾಡಬಲ್ಲ ಎಂಬುದು ಖಚಿತ. ಅದರಲ್ಲೂ ಅವನ ಆಟೋದಲ್ಲಿ ಪ್ರಯಾಣಿಕಳಾಗಿ ಸಿಕ್ಕಿದಾಗ. ಇದು ನನ್ನ ಚಿಂತೆ. ಅವನು ಬಲಿಷ್ಠನಾಗಿಯೂ ಇದ್ದ ಎಂದು ಯುವತಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ಕರ್ಟ್‌ ಧರಿಸಿದ್ರೆ ರೇಪ್‌ ಮಾಡ್ತೀನಿ ಎಂದು ಬೆದರಿಸಿದ ರಿಕ್ಷಾ ಚಾಲಕ

ಬೆಂಗಳೂರಿನಲ್ಲಿ ಆಟೋ ಚಾಲಕನಿಂದ ಯುವತಿಗೆ ಬೆದರಿಕೆ -

ಹರೀಶ್‌ ಕೇರ
ಹರೀಶ್‌ ಕೇರ Nov 10, 2025 7:57 AM

ಬೆಂಗಳೂರು, ನ.09: ಹೆಣ್ಣು ಮಕ್ಕಳು ರಾತ್ರಿ ಓಡಾಡಲು ಆತಂಕಪಡುವ ಪರಸ್ಥಿತಿ ಬೆಂಗಳೂರಿನಲ್ಲಿ (Bengaluru Crime News) ಇದೆ. ಕೆಲವು ಚಾಲಕರು ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದರ ನಡುವೆಯೇ, ಯುವತಿಯೊಬ್ಬರು ಇಂದಿರಾನಗರದಲ್ಲಿ (Indira nagar) ತಾನು ಹಾಗೂ ತನ್ನ ಗೆಳೆಯ ಎದುರಿಸಿದ ಕಳವಳಕಾರಿ ಅನುಭವವನ್ನು ವಿವರಿಸಿದ್ದಾರೆ. ತಾನು ಧರಿಸಿದ ಉಡುಗೆಯನ್ನೇ ಪ್ರಶ್ನಿಸಿ ಆಟೋ ಚಾಲಕ (auto driver) ತನ್ನ ಮೇಲೆ ಅತ್ಯಾಚಾರ (Physical abuse) ಮಾಡುವುದಾಗಿ ಬೆದರಿಕೆ (Threat) ಹಾಕಿದ್ದಾಗಿ ಹೇಳಿಕೊಂಡಿದ್ದಾಳೆ.

r/bengluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಮಹಿಳೆ ತನ್ನ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ರೆಡ್ಡಿಟ್‌ ಪೋಸ್ಟ್‌ ಇದೀಗ ವೈರಲ್‌ ಆಗಿದ್ದು, ಹಲವಾರು ಜನ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ʼನಾನು ಹಾಗೂ ತನ್ನ ಪ್ರಿಯಕರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಂದಿರಾನಗರದಲ್ಲಿ ಕಾಯುತ್ತಿದ್ದಾಗ ಆಟೋ ಚಾಲಕನೊಬ್ಬ ನಮ್ಮ ಮೇಲೆ ಕೂಗಾಡಲು ಪ್ರಾರಂಭಿಸಿದ. ಆಟೋ ಚಾಲಕ ಏನು ಹೇಳುತ್ತಿದ್ದಾನೆಂದು ನಮಗೆ ನಿಜವಾಗಿಯೂ ತಿಳಿಯಲಿಲ್ಲ. ನಾವು ಅದನ್ನು ನಿರ್ಲಕ್ಷಿಸಿ ಮುಂದೆ ಹೋದೆವು. ಆದರೆ ಅವನು ಮತ್ತೆ ನಮಗೆ ಅಡ್ಡ ಬಂದು ಮತ್ತೆ ಕೂಗಾಡಲು ಆರಂಭಿಸಿದ. "ನಿನ್ನ ಖಾಸಗಿ ಭಾಗಗಳು ಹೊರಗೆ ಕಾಣುತ್ತಿವೆ. ನೀನು ಯಾಕೆ ಇಷ್ಟೊಂದು ಚಿಕ್ಕ ಸ್ಕರ್ಟ್ ಧರಿಸಿದ್ದೀಯಾ?ʼʼ ಎಂದು ಕಿರುಚಾಡಲು ಪ್ರಾರಂಭಿಸಿದ. ನಾನು ಶಾಕ್‌ ಆಗಿದ್ದೆ. ಪ್ರತಿಕ್ರಿಯಿಸಲಿಲ್ಲ. ಅವನು ನನ್ನ ಗೆಳೆಯನ ಕಡೆಗೆ ಕೂಗಾಡಲು ಪ್ರಾರಂಭಿಸಿದ.

ನನ್ನ ಗೆಳೆಯ "ಅವಳು ಏನು ಧರಿಸಲು ಬಯಸುತ್ತಾಳೋ ಅದನ್ನು ಧರಿಸುತ್ತಾಳೆ. ಅದರಿಂದ ನಿನಗೇನು?" ಎಂದು ಕೇಳಿದ. ಅವನು "ಅವಳು ಈ ರೀತಿಯ ದಿರಿಸು ಧರಿಸಿದರೆ ಜನರು ಅವಳನ್ನು ಅತ್ಯಾಚಾರ ಮಾಡುತ್ತಾರೆ. ನಾನು ಅವಳನ್ನು ಅತ್ಯಾಚಾರ ಮಾಡುತ್ತೇನೆ" ಎಂದು ಕೂಗಾಡಿದ. ನಂತರ ಜನ ಸೇರುತ್ತಿದ್ದಂತೆ ಆಟೋ ಚಾಲಕ ಅಲ್ಲಿಂದ ಆಟೋ ಚಲಾಯಿಸುತ್ತಾ ಎಸ್ಕೇಪ್ ಆದ.

ಇದನ್ನೂ ಓದಿ: Crime News: ರ‍್ಯಾಗಿಂಗ್‌ಗೆ ಬೇಸತ್ತು ಬಾಲಕಿ ನಾಲ್ಕನೇ ಮಹಡಿಯಿಂದ ಹಾರಿದ್ಳಾ? ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌!

ನಾನು ಇಡೀ ಘಟನೆಯಿಂದ ಶಾಕ್‌ ಆಗಿದ್ದುದರಿಂದ ಆತನ ರಿಕ್ಷಾದ ನಂಬರ್ ಪ್ಲೇಟ್ ಸಂಖ್ಯೆಯನ್ನು ಬರೆದುಕೊಳ್ಳಲು ಅಥವಾ ಅವನ ಮುಖದ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ. ನಾನು ನನ್ನ ಗೆಳೆಯನೊಂದಿಗೆ ಇರುವಾಗಲೇ, ಹಾಡ ಹಗಲೇ ಹೀಗೆ ಬೆದರಿಸಬಲ್ಲ ವ್ಯಕ್ತಿ, ಮಹಿಳೆಯರು ಒಬ್ಬಂಟಿಯಾಗಿ ಸಿಕ್ಕಿದರೆ ಏನಾದರೂ ಮಾಡಬಲ್ಲ ಎಂಬುದು ಖಚಿತ. ಅದರಲ್ಲೂ ಅವನ ಆಟೋದಲ್ಲಿ ಪ್ರಯಾಣಿಕಳಾಗಿ ಸಿಕ್ಕಿದಾಗ. ಇದು ನನ್ನ ಚಿಂತೆ. ಅವನು ಬಲಿಷ್ಠನಾಗಿಯೂ ಇದ್ದ.

ನನಗೆ ವೀಡಿಯೊ ಮಾಡಲು ಸಾಧ್ಯವಾಗದಿದ್ದಕ್ಕೆ ನಿಜವಾಗಿಯೂ ವಿಷಾದವಿದೆ. ಈಗ ನಾನು ಮಾಡಬಹುದಾದದ್ದು ಇಲ್ಲಿ ಬರೆದು ಹಾಕಿ ಜಾಗೃತಿ ಮೂಡಿಸುವುದು. ಅವನು ವಯಸ್ಸಾದವನಂತಿದ್ದ ಹಾಗೂ ಬಿಳಿ ತಲೆಕೂದಲನ್ನು ಹೊಂದಿದ್ದ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಯಾವುದೇ ನಿರುಪದ್ರವಿ ವೃದ್ಧನಂತೆ ಕಾಣುತ್ತಿದ್ದ. ವೈಯಕ್ತಿಕವಾಗಿ ಈ ಘಟನೆ ನನಗೆ ಹೆಚ್ಚು ತೊಂದರೆ ನೀಡಲಿಲ್ಲ. ನನ್ನ ಸ್ಕರ್ಟ್ ತುಂಬಾ ಚಿಕ್ಕದು ಎಂದು ನಾನು ಭಾವಿಸುವುದಿಲ್ಲ. ನಾನು ನನ್ನ ಗೆಳೆಯನೊಂದಿಗೆ ಇದ್ದೆ. ಆದಾಗ್ಯೂ, ಅಂತಹ ವ್ಯಕ್ತಿ ಏನೂ ಮಾಡಬಲ್ಲನೆಂಬ ವಿಚಾರ ನನ್ನನ್ನು ಕಾಡುತ್ತದೆ. ಯುವತಿಯರೇ, ಹೊರಗಡೆ ಓಡಾಡುವಾಗ ಸುರಕ್ಷಿತವಾಗಿರಿ." ಎಂದು ಯುವತಿ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral News: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದವಳು ಪ್ರಿಯಕರನ ಮನೆಯಲ್ಲಿ ಪ್ರತ್ಯಕ್ಷ! ಸಾವಿನ ನಾಟಕ ಕೊನೆಗೂ ಬಯಲು

ಈ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರೊಬ್ಬರು, ಈ ರೀತಿಯ ಘಟನೆಯನ್ನು ನೋಡುವಾಗ ಮಹಿಳೆಯರಿಗೆ ಸುರಕ್ಷತೆ ಅನ್ನೋದೇ ಇಲ್ಲ ಎನ್ನುವುದು ಖಚಿತವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಹಾಗೂ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು ನಿಮಗೆ ಆ ಆಟೋಚಾಲಕನ ನಂಬರ್ ಪ್ಲೇಟ್ ಬೇಕಿದ್ದರೆ ಸುತ್ತಮುತ್ತಲಿನ ಕೆಫೆ, ಮನೆಗಳಿದ್ದರೆ ಅವರಿಗೆ ತಿಳಿಸಿ. ಅವರು ನಿಮಗೆ ಸಿಸಿಟಿವಿ ನೋಡಿ ನಂಬರ್ ಪ್ಲೇಟ್ ಒದಗಿಸಬಹುದು ಎಂದು ಹೇಳಿದ್ದಾರೆ.