ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashi Tharoor: ಅಡ್ವಾಣಿ ಪರ ಶಶಿ ತರೂರ್‌ ಬ್ಯಾಟಿಂಗ್‌; ಕಾಂಗ್ರೆಸ್‌ಗೆ ತೀವ್ರ ಮುಜುಗರ!

Shashi Tharoor’s Praise for LK Advani: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮಾಜಿ ಉಪ ಪ್ರಧಾನಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಎಲ್‌.ಕೆ. ಅಡ್ವಾನಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಇದು ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ.

ಅಡ್ವಾಣಿಗೆ ಶಶಿ ತರೂರ್ ಬೆಂಬಲ; ಕಾಂಗ್ರೆಸ್‌ ಫುಲ್‌ ಗರಂ!

ಎಲ್‌.ಕೆ. ಅಡ್ವಾಣಿ ಮತ್ತು ಶಶಿ ತರೂರ್‌(ಸಂಗ್ರಹ ಚಿತ್ರ) -

Priyanka P
Priyanka P Nov 10, 2025 10:39 AM

ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಅವರು ಮಾಜಿ ಉಪ ಪ್ರಧಾನಮಂತ್ರಿ ಎಲ್‌.ಕೆ. ಅಡ್ವಾನಿ (LK Advani) ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದು, ಇದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ತರೂರ್ ಅವರ ಹೇಳಿಕೆಯಿಂದ ಕಾಂಗ್ರೆಸ್ (Congress) ಪಕ್ಷ ದೂರವಿದ್ದು, ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಮಾತ್ರ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಭಾನುವಾರ ಅಡ್ವಾಣಿಯವರ 98ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ತರೂರ್ ಅವರು, ಅಡ್ವಾಣಿಯವರ ರಾಜಕೀಯ ಪರಂಪರೆಯನ್ನು ಸಮರ್ಥಿಸಿಕೊಂಡರು. ಹಿರಿಯ ಬಿಜೆಪಿಯ ನಾಯಕರಾದ ಅಡ್ವಾಣಿ ಅವರನ್ನು ಒಂದೇ ಒಂದು ಘಟನೆಯ ಆಧಾರದ ಮೇಲೆ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ತರೂರ್ ಹೇಳಿದರು. ಅಡ್ವಾನಿ ಅವರ ಸಾರ್ವಜನಿಕ ಸೇವೆಯತ್ತ ಅಚಲ ಬದ್ಧತೆ, ವಿನಯಶೀಲತೆ ಹಾಗೂ ಆಧುನಿಕ ಭಾರತದ ಮಾರ್ಗದರ್ಶನದಲ್ಲಿ ಅವರ ಪಾತ್ರವನ್ನು ಪ್ರಶಂಸಿಸಿದರು.

ತರೂರ್ ಅವರ ಶುಭಾಶಯಗಳು ಬಿಜೆಪಿಯ ಹಿರಿಯ ನಾಯಕ ಅಡ್ವಾನಿ ಅವರ ನಿಜವಾದ ಇತಿಹಾಸವನ್ನು ಶುದ್ಧೀಕರಿಸುವ ಪ್ರಯತ್ನ ಎಂದು ಆರೋಪಿಸಲ್ಪಟ್ಟಿವೆ. ಸುಪ್ರೀಂ ಕೋರ್ಟ್ ವಕೀಲ ಸಂಜಯ್ ಹೆಗ್ಡೆ ಅವರು ತರೂರ್ ಅವರನ್ನು ಟೀಕಿಸಿ, ಅಡ್ವಾನಿ ಅವರು ದ್ವೇಷದ ಡ್ರ್ಯಾಗನ್ ಬೀಜಗಳನ್ನು ಬಿತ್ತಿದರು ಎಂಬುದನ್ನು ಸಾರ್ವಜನಿಕ ಸೇವೆ ಎಂದು ಕರೆಯಲು ಸಾಧ್ಯವಿಲ್ಲ ಎಂದು, 1990ರಲ್ಲಿ ನಡೆದ ರಾಮ ರಥಯಾತ್ರೆಯನ್ನು ಅವರು ಉಲ್ಲೇಖಿಸಿದರು.

ಇದನ್ನೂ ಓದಿ: Bihar Assembly Election: ಬಿಹಾರ ವಿಧಾನಸಭಾ ಚುನಾವಣೆ: ನಾಳೆ ಎರಡನೇ ಹಂತದ ಮತದಾನ

ಇಲ್ಲಿದೆ ಪೋಸ್ಟ್:



ಇದಕ್ಕೆ ಪ್ರತಿಕ್ರಿಯೆಯಾಗಿ ತರೂರ್, ಅವರ ದೀರ್ಘಕಾಲದ ಸೇವೆಯನ್ನು, ಎಷ್ಟು ಮಹತ್ವದದ್ದಾಗಿದ್ದರೂ, ಒಂದೇ ಘಟನೆಯ ಮೂಲಕ ಅಳೆಯುವುದು ನ್ಯಾಯಸಮ್ಮತವಲ್ಲ. ಮಾಜಿ ಪ್ರಧಾನಿ ನೆಹರೂ ಅವರ ಸಂಪೂರ್ಣ ರಾಜಕೀಯ ಜೀವನವನ್ನು ಚೀನಾ ಯುದ್ಧದ ವೈಫಲ್ಯದ ಆಧಾರದ ಮೇಲೆ ನಿರ್ಣಯಿಸುವಂತಿಲ್ಲ. ಇದೇ ರೀತಿ ಇಂದಿರಾ ಗಾಂಧಿಯವರ ಜೀವನವನ್ನೂ ಕೇವಲ ತುರ್ತುಪರಿಸ್ಥಿತಿಯ ಆಧಾರದ ಮೇಲೆ ತೀರ್ಮಾನಿಸಲು ಸಾಧ್ಯವಿಲ್ಲ. ಆದ್ದರಿಂದ, ಅಡ್ವಾನಿಗೂ ಅದೇ ಸೌಜನ್ಯವನ್ನು ತೋರಿಸಬೇಕು ಎಂದು ಹೇಳಿದರು.

ತರೂರ್ ಹೇಳಿಕೆಗೆ ಕಾಂಗ್ರೆಸ್ ಪ್ರತಿಕ್ರಿಯೆ

ತರೂರು ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಮಾತ್ರ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ. ಜೊತೆಗೆ, ತರೂರ್ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಸದಸ್ಯರಾಗಿಯೇ ಇಂತಹ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದು ಪಕ್ಷದ ಪ್ರಜಾಸತ್ತಾತ್ಮಕ ಮತ್ತು ಉದಾರ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ರಾಜಕೀಯದಲ್ಲಿ ಬಿಜೆಪಿಯ ಉದಯಕ್ಕೆ ಕಾರಣರಾದ ಅಡ್ವಾಣಿಯವರಿಗೆ ಈ ವರ್ಷ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಲಾಯಿತು. ರಾಮ ಜನ್ಮಭೂಮಿ ದೇವಾಲಯ ನಿರ್ಮಾಣಕ್ಕೆ ಕರೆ ನೀಡಲು ಅವರು ಸೆಪ್ಟೆಂಬರ್ 25, 1990 ರಂದು ಗುಜರಾತ್‌ನ ಸೋಮನಾಥದಿಂದ ರಾಮ ರಥಯಾತ್ರೆಯನ್ನು ಆಯೋಜಿಸಿದ್ದರು. ಆಗಿನ ಪ್ರಧಾನಿ ವಿ.ಪಿ. ಸಿಂಗ್ ಅವರ ಆದೇಶದ ಮೇರೆಗೆ ಅಡ್ವಾಣಿಯ ಬಂಧನವೂ ಆಗಿತ್ತು.

ಯಾತ್ರೆಯ ಎರಡು ವರ್ಷಗಳ ನಂತರ, ಡಿಸೆಂಬರ್ 6, 1992 ರಂದು, ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಲಾಯಿತು. ಜನವರಿ 22, 2024 ರಂದು, ರಾಮ ಮಂದಿರವನ್ನು ಸಾರ್ವಜನಿಕರಿಗೆ ಅಧಿಕೃತವಾಗಿ ತೆರೆಯಲಾಯಿತು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠೆ ಸಮಾರಂಭವನ್ನು ನೆರವೇರಿಸಿದರು.

ಈ ಸುದ್ದಿಯನ್ನೂ ಓದಿ: Shashi Tharoor: ನಾನು ಮಾರಾಟಕ್ಕಿಲ್ಲ... ಶಶಿ ತರೂರು ಇಷ್ಟೊಂದು ಗರಂ ಆಗಿದ್ದೇಕೆ?

ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ತರೂರ್ ಹೇಳಿಕೆಯಿಂದ ದೂರ ಉಳಿದಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ತರೂರ್ ತಮ್ಮ ಪರವಾಗಿ ಮಾತ್ರ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಪಕ್ಷದ ಪರವಾಗಿ ಅಲ್ಲ ಎಂದು ಹೇಳುತ್ತಿದೆ. ಅದು ನಿಜ, ಏಕೆಂದರೆ ಕಾಂಗ್ರೆಸ್‌ನಲ್ಲಿ ಎಲ್ಲರ ಪರವಾಗಿ ಮಾತನಾಡುವ ಹಕ್ಕು ಇರುವುದು ಒಂದೇ ಕುಟುಂಬಕ್ಕೆ. ತರೂರ್ ರಾಜಕೀಯವು ಕುಟುಂಬ ವ್ಯವಹಾರವಾಗಿಬಿಟ್ಟಿದೆ ಎಂದಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಚಾರ ಕಾರ್ಯದರ್ಶಿ ಪ್ರದೀಪ್ ಭಂಡಾರಿ ಅವರು ವ್ಯಂಗ್ಯವಾಡಿದ್ದಾರೆ.

ಇಲ್ಲಿದೆ ಬಿಜೆಪಿ ಪೋಸ್ಟ್:



ಶಶಿ ತರೂರ್ ಮಾಡಿದ ಏಕೈಕ ಅಪರಾಧವೆಂದರೆ, ರಾಜಕೀಯ ದೃಷ್ಟಿಯಿಂದ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಎಲ್.ಕೆ. ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು. ಈಗ ಅದು ಕಾಂಗ್ರೆಸ್‌ನ ಉನ್ನತ ನಾಯಕರ ಕೋಪಕ್ಕೆ ಕಾರಣವಾಗಿದೆ ಎಂದು ಬಿಜೆಪಿಯ ಶೆಹಜಾದ್ ಪೂನಾವಾಲಾ ಆರೋಪಿಸಿದರು.