ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Averebele Mela: ಡಿ.27 ರಿಂದ ಜನವರಿ 4,ರವರೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅವರೇಬೇಳೆ ಮೇಳ

ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಅವರೇಬೇಳೆ ಮೇಳದಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಜೊತೆಗೆ ಅವರೇಕಾಯಿಯಿಂದ ತಯಾರಿ ಸಲಾದ ವೈವಿದ್ಯಮಯ ಹಾಗು ವಿಶಿಷ್ಟ ಆಹಾರ ಪದಾರ್ಥಗಳ ಮೂಲಕ ಆಹಾರ ಪ್ರಿಯರ ಮನಗೆದ್ದಿದೆ.

ಜನವರಿ 4,ರವರೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅವರೇಬೇಳೆ ಮೇಳ

-

Ashok Nayak
Ashok Nayak Dec 25, 2025 1:47 PM

ಬೆಂಗಳೂರು: ಶ್ರೀ ವಾಸವಿ ಕಾಂಡಿಮೆಂಟ್ಸ್, ನಿಂದ ಬೆಂಗಳೂರು ನಗರದ ಆಹಾರ ಸಾಂಸ್ಕೃತಿಕ ಮತ್ತು ಪಾರಂಪರೆಯ ಪ್ರತೀಕವಾಗಿರುವ 26ನೇ ಆವೃತ್ತಿಯ "ಅವರೇಬೇಳೆ ಮೇಳ"(Averebele Mela) ವನ್ನು ಈ ಬಾರಿ ಇನ್ನಷ್ಟು ವೈಭವದಿಂದ ಡಿ.27ರಿಂದ ಜನವರಿ 4,2026 ರವರೆಗೆ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

a mela

ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಅವರೇಬೇಳೆ ಮೇಳದಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಜೊತೆಗೆ ಅವರೇಕಾಯಿಯಿಂದ ತಯಾರಿ ಸಲಾದ ವೈವಿಧ್ಯಮಯ ಹಾಗು ವಿಶಿಷ್ಟ ಆಹಾರ ಪದಾರ್ಥಗಳ ಮೂಲಕ ಆಹಾರಪ್ರಿಯರ ಮನ ಗೆದ್ದಿದೆ.

ಮೊದಲ ಬಾರಿಗೆ ಈ ವರ್ಷದ ವಿಶೇಷ ಆಕರ್ಷಣೆಗಳು

1) ನೀರುದೋಸೆ ಅವರೇಬೇಳೆ ಸಾಂಬಾರ

2) ಅವರೇಕಾಯಿ ಮೊಮೋಸ್

3) ಅವರೇಬೇಳೆ ಗುಲಾಬ್ ಜಾಮೂನ್, ಐಸ್ಕ್ರೀಂ ಜೊತೆಗೆ

4) ಅವರೇಕಾಯಿ ಪೂರಿ, ಹೋಳಿಗೆ ಹಾಗು ಹಲ್ವ

ಇದನ್ನೂ ಓದಿ: Avarekai Mela: ಡಿ.27 ರಿಂದ ನ್ಯಾಷನಲ್ ಮೈದಾನದಲ್ಲಿ ಅವರೇಕಾಯಿ ಮೇಳ ಪ್ರಾರಂಭ

ಇವು ಆಹಾರ ಪ್ರಿಯರಿಗೆ ವಿಶೇಷ ರುಚಿ ಅನುಭವವನ್ನು ನೀಡಲಿದೆ. ಆಹಾರ ಮಾತ್ರವಲ್ಲದೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ, 5ಡಿ ಥಿಯೇಟರ್: 360 ಡಿಗ್ರಿ ಸಿನಿಮಾ ಅನುಭವವನ್ನು ಮೊದಲ ಬಾರಿಗೆ ಪರಿಚಯಸಲಾಗುತ್ತಿದೆ. ಇದು ಮಕ್ಕಳ ಹಾಗು ಯುವ ಜನತೆಗೆ ವಿಭಿನ್ನ ಮನರಂಜನ ಅನುಭವ ನೀಡಲಿದೆ. ಮಕ್ಕಳು ಹಾಗು ಕುಟುಂಬಗಳಿಗಾಗಿ ವಿಶೇಷ ವ್ಯವಸ್ಥೆಗಳು.

1) ಅಮ್ಯೂಸ್‌ಮೆಂಟ್ ಜೋನ್

2) ಕ್ಯಾರಿಕೇಚರ್, ಟ್ಯಾಟೂ, ಫೇಸ್ ಪೇಂಟಿಮಗ್, ನೈಲ್ ಆರ್ಟ್ಸ್, ಕುಟುಂಬ ಸಮೇತ ಸಮಯ ಕಳೆಯಲು ಸೂಕ್ತವಾದ ಸೌಲಭ್ಯಗಳನ್ನು ಒದಗಿಸಲಾಗಿದೆ.

a bele 2

ಸುರಕ್ಷತೆ ಮತ್ತು ಸಾರ್ವಜನಿಕ ಸೌಲಭ್ಯಗಳು: ಮೇಳಕ್ಕೆ ಆಗಮಿಸುವ ಎಲ್ಲರಿಗೂ ಸುಗಮ ಹಾಗೂ ಸುರಕ್ಷಿತ ಅನುಭವ ಕಲ್ಪಿಸುವ ಉದ್ದೇಶದಿಂದ ಪ್ರಥಮ ಚಿಕಿತ್ಸೆ ಕೇಂದ್ರ(First Aid Centre ) ಮಕ್ಕಳ (Feeding Booth) ವೀಲ್‌ ಚೇರ್ ಪ್ರವೇಶ್ ಸೌಲಭ್ಯ, ಸ್ವಚ್ಚ ಹಾಗೂ ಸುಸಜ್ಜಿತ ಶೌಚಾಲಯಗಳು, ಮಾಹಿತಿ ಮತ್ತು ಸಹಾಯ ಕೇಂದ್ರ (Help Desk ) ಭದ್ರತಾ ಸಿಬ್ಬಂದಿ, ಅಂಬ್ಯುಲೆನ್ಸ್ ಹಾಗೂ ಅಗ್ನಿ ಸುರಕ್ಷತಾ ವ್ಯವಸ್ಥೆ. ಇವೆಲ್ಲವನ್ನೂ ವ್ಯವಸ್ಥಿತವಾಗಿ ಒದಗಿಸಲಾಗಿದೆ.

ಈ ಮೇಳವು ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದ ಈ ಮೇಳವು ಈ ಬಾರಿ ಇನ್ನಷ್ಟು ಜನಸಂದಣಿ ಹಾಗೂ ಆಕರ್ಷಣೆಯೊಂದಿಗೆ ನಡೆಯಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರಬೆಳೆ ಮೇಳ ಕೇವಲ ಆಹಾರ ಮೇಳವಲ್ಲ, ಇದು ರೈತರು, ಆಹಾರ ಸಂಸ್ಕೃತಿ ಮತ್ತು ಬೆಂಗಳೂರು ನಗರದ ಹೃದಯವನ್ನು ಒದಗಿಸುವ ಹಬ್ಬವಾಗಿದೆ.