ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಾಂಟಿ ರೋಡ್ಸ್ ವಿಶ್ವ ದಾಖಲೆ ಮುರಿದ 24 ವರ್ಷದ ವಿಘ್ನೇಶ್ ಪುತ್ತೂರು

Vignesh Puthur: ಲಿಸ್ಟ್ ಎ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಹಿಂದಿನ ದಾಖಲೆ ದಕ್ಷಿಣ ಆಫ್ರಿಕಾದ ದಂತಕಥೆ ಜಾಂಟಿ ರೋಡ್ಸ್ ಹೆಸರಿನಲ್ಲಿತ್ತು. ನವೆಂಬರ್ 14, 1993 ರಂದು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಪರ ಆಡುವಾಗ ರೋಡ್ಸ್ ಐದು ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ್ದರು.

ಜಾಂಟಿ ರೋಡ್ಸ್ ವಿಶ್ವ ದಾಖಲೆ ಮುರಿದ 24 ವರ್ಷದ ವಿಘ್ನೇಶ್ ಪುತ್ತೂರು

Vignesh Puthur -

Abhilash BC
Abhilash BC Dec 25, 2025 2:55 PM

ಅಹಮದಾಬಾದ್‌, ಡಿ.25: 24 ವರ್ಷದ ಸ್ಪಿನ್ನರ್ ವಿಘ್ನೇಶ್ ಪುತ್ತೂರು(Vignesh Puthur) ತ್ರಿಪುರ(Kerala vs Tripura) ವಿರುದ್ಧದ ವಿಜಯ್ ಹಜಾರೆ ಟ್ರೋಫಿ(Vijay Hazare Trophy) ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಕೇರಳ ಪರ ಲಿಸ್ಟ್ ಎ ಪದಾರ್ಪಣೆ ಮಾಡುವ ಜತೆಗೆ ತಮ್ಮ ಹೆಸರನ್ನು ಇತಿಹಾಸ ಪುಸ್ತಕಗಳಲ್ಲಿ ದಾಖಲಿಸಿದರು. ಪಂದ್ಯದಲ್ಲಿ 6 ಕ್ಯಾಚ್‌ಗಳನ್ನು ಹಿಡಿಯುವ ಮೂಲ ಲಿಸ್ಟ್ ಎ ಪಂದ್ಯದಲ್ಲಿ ಅತ್ಯಧಿಕ ಕ್ಯಾಚ್‌ ಹಿಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕೇರಳದ ಮಲ್ಲಪುರಂ ಮೂಲದ ಪುತ್ತೂರು, ಫೀಲ್ಡರ್ ಆಗಿ (ವಿಕೆಟ್ ಕೀಪರ್ ಅಲ್ಲದ) ಆರು ಕ್ಯಾಚ್‌ಗಳನ್ನು ಪೂರ್ಣಗೊಳಿಸಿದರು. ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆದ ಐಪಿಎಲ್ 2026 ಹರಾಜಿನಲ್ಲಿ 30 ಲಕ್ಷ ರೂ.ಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿದ ವಿಘ್ನೇಶ್ ಮುಂಬರುವ ಐಪಿಎಲ್‌ನಲ್ಲಿ ತಮ್ಮ ಸ್ಪಿನ್‌ ಜಾದೂ ತೋರಿಸಲು ಸಜ್ಜಾಗುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಮಿಂಚಿನ ಪ್ರದರ್ಶನ ಮೂಲಕ ದಿಗ್ಗಜ ಧೋನಿ ಅವರ ಮನಗೆದ್ದಿದ್ದರು.

ಲಿಸ್ಟ್ ಎ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಹಿಂದಿನ ದಾಖಲೆ ದಕ್ಷಿಣ ಆಫ್ರಿಕಾದ ದಂತಕಥೆ ಜಾಂಟಿ ರೋಡ್ಸ್ ಹೆಸರಿನಲ್ಲಿತ್ತು. ನವೆಂಬರ್ 14, 1993 ರಂದು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಪರ ಆಡುವಾಗ ರೋಡ್ಸ್ ಐದು ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ್ದರು.

ಮರವೇರಿ ಕೊಹ್ಲಿಯ ಶತಕ ಕಣ್ತುಂಬಿಕೊಂಡ ಅಭಿಮಾನಿ!

22 ಶತಕ

ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಮೊದಲ ದಿನವಾದ ಬುಧವಾರ ಒಟ್ಟು 22 ಶತಕಗಳು ದಾಖಲಾಗಿತ್ತು. ಇದು ಮೊದಲ ದಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಶತಕ ಎನಿಸಿಕೊಂಡಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಅವರಷ್ಟೇ ಅಲ್ಲದೇ ಇನ್ನೂ 18 ಮಂದಿ ಶತಕ ಸಿಡಿಸಿ ಹೊಸ ದಾಖಲೆ ಬರೆದರು. ಈ ಮೊದಲು 2021ರ ಡಿಸೆಂಬರ್ 12ರಂದು ಹಾಗೂ 2025ರ ಜನವರಿ 03ರಂದು ತಲಾ 19 ಶತಕಗಳು ದಾಖಲಾಗಿದ್ದವು.

ಒಂದು ಲಿಸ್ಟ್ ಎ ಪಂದ್ಯದಲ್ಲಿ ಫೀಲ್ಡರ್ ಆಗಿ ಅತಿ ಹೆಚ್ಚು ಕ್ಯಾಚ್‌ಗಳು

ವಿಘ್ನೇಶ್ ಪುತ್ತೂರು-6

ಜಾಂಟಿ ರೋಡ್ಸ್-5

ಬ್ರಾಡ್ ಯಂಗ್-5

ಪೀಟರ್ ಹ್ಯಾಂಡ್ಸ್‌ಕಾಂಬ್-5

ಏರಿಯನ್ ಸಂಗ್ಮಾ-5

ಹ್ಯಾರಿ ಬ್ರೂಕ್-5