ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ವಿಸ್ ಬಾರ್‌ ಅಗ್ನಿ ಅವಘಡ; ಬೆಂಕಿ ಹತ್ತಿಕೊಂಡ ವಿಡಿಯೋ ವೈರಲ್‌

Viral Video: ಸ್ವಿಸ್ ಸ್ಕೀ ರೆಸಾರ್ಟ್ ಮತ್ತು ಬಾರ್‌ನಲ್ಲಿ ಹೊಸ ವರ್ಷದಂದು ಅದ್ಧೂರಿ ಡಿಜೆ , ನೈಟ್ ಡ್ಯಾನ್ಸ್ ಇತರೆ ಆಯೋಜನೆ ಮಾಡಿದ್ದುಈ ವೇಳೆ ಆಕಸ್ಮಿಕವಾಗಿ ಅಗ್ನಿ ಅವಘಡವಾಗಿದೆ. ಮೊದಲಿಗೆ ಈ ಬಾರ್ ನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು ಇದರಿಂದಾಗಿ 40 ಅಧಿಕ ಮಂದಿ ಸಾವನಪ್ಪಿದ್ದು ನೂರಾರು ಮಂದಿಗೆ ಗಂಭೀರ ಗಾಯಗಳಾಗಿದೆ. ಸದ್ಯ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸ ವರ್ಷದ ಸಂಭ್ರಮದ ನಡುವೆ ಸ್ವಿಸ್ ನಲ್ಲಿ ಅಗ್ನಿ ದುರಂತ: 40 ಮಂದಿ ಸಾವು!

ಸ್ವಿಸ್ ನಲ್ಲಿ ಅಗ್ನಿ ದುರಂತ -

Profile
Pushpa Kumari Jan 2, 2026 7:11 PM

ಸ್ವಿಸ್, ಜ. 2: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಐಷಾರಾಮಿ ಸ್ವಿಸ್ ಸ್ಕೀ ರೆಸಾರ್ಟ್‌ನ ಬಾರ್‌ನಲ್ಲಿ ಸ್ಫೋಟ ಸಂಭವಿಸಿದ್ದು ಸ್ಫೋಟದ ಬಳಿಕ ಬಾರ್ ತುಂಬಾ ದಟ್ಟ ಹೊಗೆಗಳು ತುಂಬಿಕೊಂಡಿದ್ದು ತಿಳಿದು ಬಂದಿದೆ.‌‌ ಬೆಂಕಿ ತಗುಲಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್‌ ಒಂದು ವೈರಲ್ ಆಗಿದೆ‌. ವೈರಲ್ ಆದ ಪೋಸ್ಟ್ನಲ್ಲಿ ಬೆಂಕಿ ಹೇಗೆ ತಗುಲಿದೆ. ಯಾವ ರೀತಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂಬುದನ್ನು ವಿಡಿಯೋ ಹಾಗೂ ಫೋಟೊ ಮೂಲಕ ತಿಳಿಸಲಾಗಿದೆ.

ವಿಡಿಯೋ ನೋಡಿ:



ಸ್ವಿಸ್ ನ ರೆಸಾರ್ಟ್ ನಲ್ಲಿ ಬೆಂಕಿಯ ಆರಂಭಿಕ ಕ್ಷಣಗಳ ಬಗ್ಗೆ ಇದ್ದ ಫೋಟೊ ಮತ್ತು ವಿಡಿಯೋ ವನ್ನು ವ್ಯಕ್ತಿಯೊಬ್ಬರು ಟ್ವಿಟ್ಟರ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಪಾರ್ಟಿಗೆ ಬಂದ ಬಹುತೇಕರು ವೈನ್ ಬಾಟಲಿ ಹಿಡಿದುಕೊಂಡಿದ್ದು ಅದರ ಜೊತೆಗೆ ಸ್ಟಾರ್ಕ್ , ಬ್ಲಸ್ಟರ್ ಸಹ ಹಿಡಿದುಕೊಂಡಿದ್ದ ದೃಶ್ಯವನ್ನು ಕಾಣಬಹುದು.‌ ಅಗ ಅಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಷಾಂಪೇನ್ ಬಾಟಲಿಯಿಂದ ಸೀಲಿಂಗ್‌ಗೆ ಬೆಂಕಿ ತಲುಲಿದೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.

Viral Video: ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದ ಸಾಕು ನಾಯಿ; ಸಂತ್ರಸ್ತೆಗೇ ಕಪಾಳ ಮೋಕ್ಷ ಮಾಡಿದ ಮಾಲಕಿ! ವಿಡಿಯೋ ನೋಡಿ

ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದ್ದು ಸ್ವಿಸ್ ಅಧಿಕಾರಿಗಳಾಗಲಿ ಇತರ ಆಡಳಿತ ವರ್ಗದವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಿಲ್ಲ. ಹಾಗಿದ್ದರೂ ಪ್ರತ್ಯೇಕ್ಷದರ್ಶಿಗಳ ಹೇಳಿಕೆಯ ಮೇಲೆ ತನಿಖೆ ನಡೆಯುತ್ತಿರುವುದಾಗಿ ಪೋಸ್ಟ್ ನಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಜ.1ರ ಹೊಸ ವರ್ಷದ ದಿನದಂದು ಬೆಳಗಿನ ಜಾವ 1:30 ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು ಕನಿಷ್ಠ 47 ಜನರು ಸಾವನ್ನ ಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಸಹ ತಿಳಿಸಿರುವುದನ್ನು ಪೋಸ್ಟ್ ನಲ್ಲಿ ಕಾಣಬಹುದು.

ತನಿಖಾಧಿಕಾರಿಗಳು ಹಲವಾರು ಆಯಾಮದಲ್ಲಿ ಪರಿಶೀಲಿಸುತ್ತಿದ್ದಾರೆ, ಬೆಂಕಿ ತೀವ್ರವಾಗಲು ಕೆಲವು ಡೆಕೋರೇಟಿವ್ ಐಟಂ ಕಾರಣವಾಗಿರಬಹುದೇ ಎಂಬುದರ ಮೇಲೆ ತನಿಖೆಯನ್ನು ಕೇಂದ್ರೀಕರಿಸಿ ದ್ದಾರೆ. ಬಾರ್ ಸೀಲಿಂಗ್ ಸಾಮಗ್ರಿಗಳು, ಒಳಾಂಗಣ, ನಿರ್ಗಮನಗಳ ಸಂಖ್ಯೆ ಸೇರಿದಂತೆ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಿದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.