ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

"ಆತನ ಸಾವು ಹತ್ತಿರದಲ್ಲಿದೆ" ಎಲಾನ್ ಮಸ್ಕ್‌ಗೆ ಲೈವ್ ವಿಡಿಯೊದಲ್ಲೇ ಕೊಲೆ ಬೆದರಿಕೆ ಹಾಕಿದ ಬುರ್ಖಾಧಾರಿ ಮಹಿಳೆ

Viral Video: ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ಹಾಗೂ ಅಮೆರಿಕನ್ ಸಮು ದಾಯದ ನಡುವಿನ ಸಮರ ಈಗ ತಾರಕಕ್ಕೇರಿದೆ. ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್‌ಗೆ ಮಹಿಳೆ ಯೊಬ್ಬರು ಬಹಿರಂಗವಾಗಿ ಬೆದರಿಕೆ ಹಾಕಿದ್ದು, ಅದಕ್ಕೆ ಮಸ್ಕ್ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ಆದ ಟಿಕ್‌ಟಾಕ್ ವಿಡಿಯೋದಲ್ಲಿ, ಬುರ್ಖಾ ಧರಿಸಿದ ಮಹಿಳೆಯೊಬ್ಬರು ಎಲೋನ್ ಮಸ್ಕ್ ಅವರ ಫೋಟೋ ಇರುವ ಐಪ್ಯಾಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲಾನ್ ಮಸ್ಕ್‌ಗೆ ಅಮೆರಿಕನ್ ಮಹಿಳೆಯಿಂದ ಬೆದರಿಕೆ: ವಿಡಿಯೊ ವೈರಲ್!

ಎಲೋನ್ ಮಸ್ಕ್‌ಗೆ ಅಮೆರಿಕನ್ ಮಹಿಳೆಯಿಂದ ಬೆದರಿಕೆ -

Profile
Pushpa Kumari Jan 2, 2026 6:54 PM

ವಾಷಿಂಗ್ಟನ್, ಡಿ.2: ಎಲಾನ್ ಮಸ್ಕ್ (Elon Musk) ಹೆಸರು ಈಗ ಹೆಚ್ಚು ಪ್ರಸಿದ್ದಿಯಲ್ಲಿದೆ. ಇವರು ಎಕ್ಸ್, ಟೆಸ್ಲಾ ಇತ್ಯಾದಿ ಹಲವು ಕಂಪನಿಗಳ ಮುಖ್ಯಸ್ಥನಾಗಿದ್ದು ಶ್ರೀಮಂತ ಉದ್ಯಮಿ ಎನಿಸಿ ಕೊಂಡಿದ್ದಾರೆ.ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಸುದ್ದಿಯಲ್ಲಿರುವ ಇವರಿಗೆ ಸೋಮಾಲಿ ಮೂಲದ ಮಹಿಳೆ ಯೊಬ್ಬರು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ‌. ಬುರ್ಖಾ ಧರಿಸಿದ ಅಮೆರಿಕನ್ ಮಹಿಳೆಯೊಬ್ಬರು ಲೈವ್ ವಿಡಿಯೊದಲ್ಲೇ ಎಲಾನ್ ಮಸ್ಕ್‌ ಅವರ ಫೋಟೋ ಇರುವ ಐಪ್ಯಾಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಸದ್ಯ ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್‌ ಹಾಗೂ ಅಮೆರಿಕನ್ ಸಮುದಾಯದ ನಡುವಿನ ಸಮರ ಈಗ ತಾರಕಕ್ಕೇರಿದೆ. ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್ ಮಸ್ಕ್‌ಗೆ ಮಹಿಳೆಯೊಬ್ಬರು ಬಹಿರಂಗವಾಗಿ ಬೆದರಿಕೆ ಹಾಕಿದ್ದು, ಅದಕ್ಕೆ ಮಸ್ಕ್ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ಆದ ಟಿಕ್‌ಟಾಕ್ ವಿಡಿಯೋದಲ್ಲಿ, ಬುರ್ಖಾ ಧರಿಸಿದ ಮಹಿಳೆಯೊಬ್ಬರು ಎಲೋನ್ ಮಸ್ಕ್ ಅವರ ಫೋಟೋ ಇರುವ ಐಪ್ಯಾಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ:



ಇತ್ತೀಚೆಗೆ ಮಿನ್ನೇಸೋಟದ ಸೋಮಾಲಿ ಮೂಲದ ಉದ್ಯಮಗಳಲ್ಲಿ ನಡೆಯುತ್ತಿರುವ ಭ್ರಷ್ಟಾ ಚಾರದ ಬಗ್ಗೆ ಮಸ್ಕ್ ಮಾತನಾಡಿದ್ದರು.ಈ ಹೇಳಿಕೆಯನ್ನು ಆಕೆ ಖಂಡಿಸಿದ್ದಾರೆ. ವಿಡಿಯೊದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ ಆಕೆ, "ಅವನ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಬೇಡಿ, ಅವನು ಸಾಯುವ ಕಾಲ ಹತ್ತಿರ ಬಂದಿದೆ" ಎಂದು ಹೇಳಿದ್ದಾರೆ. ಮಸ್ಕ್ ಅವರ ಮಾತುಗಳು ವರ್ಣಭೇದ ನೀತಿಯಿಂದ ಕೂಡಿದ್ದು, ಅವರು ಸ್ಥಳೀಯ ವಿಚಾರಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

Viral Video: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಂಪಾಟ; ಮಾಡಿದ ಸಬ್ ಇನ್ಸ್‌ಪೆಕ್ಟರ್ ಬಂಧನ, ವಿಡಿಯೋ ನೋಡಿ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಲೋನ್ ಮಸ್ಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋಗೆ ಮೊದಲು ವ್ಯಂಗ್ಯವಾಗಿ "ಅದ್ಭುತ ವ್ಯಕ್ತಿಗಳು'' ಎಂದು ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದರು. ನಂತರ ಮಹಿಳೆಯ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಮಸ್ಕ್, "ಹಾಗಿದ್ದಲ್ಲಿ, ಇದು ಯುದ್ಧವೇ ಆಗಲಿ ಎಂದು ಘೋಷಿಸುವ ಮೂಲಕ ಸಂದೇಶ ನೀಡಿದ್ದಾರೆ.

ಮಿನ್ನೇಸೋಟದಲ್ಲಿ ಸೋಮಾಲಿ ಸಮುದಾಯದವರು ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಲಕ್ಷಾಂತರ ಡಾಲರ್ ಸರ್ಕಾರಿ ಹಣವನ್ನು ವಂಚನೆ ಮಾಡುತ್ತಿದ್ದಾರೆ ಎಂದು ಮಸ್ಕ್ ಇತ್ತೀಚೆಗೆ ಆರೋಪಿಸಿದ್ದರು. ಅಮೆರಿಕದ ಸಂಸದೆ ಇಲ್ಹಾನ್ ಒಮರ್ ಅಮೆರಿಕಕ್ಕಿಂತ ತಮ್ಮ ಮೂಲ ದೇಶದ ಹಿತಾಸಕ್ತಿಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಮಸ್ಕ್ ಟೀಕಿಸಿದ್ದರು. ವಲಸಿಗರ ಹೆಸರಿನಲ್ಲಿ ಅಕ್ರಮಗಳನ್ನು ತಡೆಯ ದಿದ್ದರೆ ಅಮೆರಿಕವು ಸಂಪೂರ್ಣ ಕಮ್ಯುನಿಸ್ಟ್ ಆಗಿ ಬದಲಾವಣೆ ಆಗಲಿದೆ ಎಂದು ಮಸ್ಕ್ ತಿಳಿಸಿದ್ದರು. ಸದ್ಯ ಈ ವಿಚಾರವಾಗಿ ಬುರ್ಖಾ ಧರಿಸಿದ ಮಹಿಳೆ ವಿಡಿಯೊ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.