ವಿದ್ಯುತ್ ಮಾರ್ಗಗಳಾಚೆಗೆ: ನವೀಕರಿಸಬಹುದಾದ ಇಂಧನ ಯೋಜನೆಗಳಿಂದ ಗ್ರಾಮೀಣ ಆರ್ಥಿಕತೆಗೆ ಹೇಗೆ ಬಲ ಸಿಗುತ್ತಿದೆ?
ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯದ ತ್ವರಿತ ವಿಸ್ತರಣೆಯಿಂದಾಗಿ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ರಾಷ್ಟ್ರೀಯ ಗ್ರಿಡ್ಗೆ ಜೋಡಿಸುವ ಬೃಹತ್ ಪ್ರಸರಣಾ ಜಾಲಗಳ ಅಗತ್ಯ ಸೃಷ್ಟಿಯಾಗಿದೆ. ‘ರೆಸೋನಿಯಾ’ (Resonia) ದಂತಹ ಕಂಪನಿಗಳು, ಹೆಚ್ಚಾಗಿ ಕೃಷಿ ಭೂಮಿಯನ್ನೇ ಹೊಂದಿರುವ ಹಲವು ಪ್ರದೇಶಗಳಲ್ಲಿ ಇಂತಹ ಜಾಲಗಳನ್ನು ಅಭಿವೃದ್ಧಿ ಪಡಿಸುತ್ತಿವೆ.
-
ಬೆಂಗಳೂರು: ಬೃಹತ್ ಮೂಲಸೌಕರ್ಯ ಯೋಜನೆಗಳು ಗ್ರಾಮೀಣ ಪ್ರದೇಶಗಳನ್ನು ಪ್ರವೇಶಿಸಿ ದಾಗ, ಅಲ್ಲಿನ ಭೌತಿಕ ಬದಲಾವಣೆಗಳು- ಅಂದರೆ ಹೊಸ ರಸ್ತೆಗಳು, ನಿರ್ಮಾಣ ಕಾಮಗಾರಿಗಳು ಮತ್ತು ವಾಹನಗಳ ಸಂಚಾರ, ತಕ್ಷಣವೇ ಕಣ್ಣಿಗೆ ರಾಚುತ್ತವೆ. ಆದರೆ, ಹೆಚ್ಚು ಶಾಶ್ವತವಾದ ಪರಿವರ್ತನೆಗಳು ಸಾಮಾನ್ಯವಾಗಿ ನಮ್ಮ ಗಮನಕ್ಕೆ ಬಾರದಂತೆ ನಿಧಾನವಾಗಿ ನಡೆಯುತ್ತಿರುತ್ತವೆ. ಅದುವೇ ಸ್ಥಳೀಯ ಆರ್ಥಿಕ ಚಟುವಟಿಕೆಗಳ ಹಂತಹಂತವಾದ ವಿಸ್ತರಣೆ.
ನವೀಕರಿಸಬಹುದಾದ ಇಂಧನ ಪ್ರಸರಣಾ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ಪ್ರದೇಶಗಳಲ್ಲಿ, ಹಳ್ಳಿಗಳು ಕೇವಲ ವಿದ್ಯುತ್ ಮಾರ್ಗಗಳು ಮತ್ತು ಟವರ್ಗಳ ವ್ಯಾಪ್ತಿಯನ್ನು ಮೀರಿ ಬೆಳೆಯುವ ಹೊಸ ಅವಕಾಶಗಳ ಉದಯಕ್ಕೆ ಸಾಕ್ಷಿಯಾಗುತ್ತಿವೆ. ಕೇವಲ ಒಂದು ಇಂಧನ ಯೋಜನೆ ಯಾಗಿ ಆರಂಭವಾಗುವ ಪ್ರಕ್ರಿಯೆ, ಹೆಚ್ಚಾಗಿ ಸಮಗ್ರ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿ ಮಾರ್ಪಾಡಾಗುತ್ತದೆ.
ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯದ ತ್ವರಿತ ವಿಸ್ತರಣೆಯಿಂದಾಗಿ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ರಾಷ್ಟ್ರೀಯ ಗ್ರಿಡ್ಗೆ ಜೋಡಿಸುವ ಬೃಹತ್ ಪ್ರಸರಣಾ ಜಾಲಗಳ ಅಗತ್ಯ ಸೃಷ್ಟಿಯಾಗಿದೆ. ‘ರೆಸೋನಿಯಾ’ (Resonia) ದಂತಹ ಕಂಪನಿಗಳು, ಹೆಚ್ಚಾಗಿ ಕೃಷಿ ಭೂಮಿಯನ್ನೇ ಹೊಂದಿರುವ ಹಲವು ಪ್ರದೇಶಗಳಲ್ಲಿ ಇಂತಹ ಜಾಲಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಈ ಯೋಜನೆಗಳ ಪ್ರಮುಖ ಉದ್ದೇಶ ಶುದ್ಧ ವಿದ್ಯುತ್ ಅನ್ನು ಸಾಗಿಸುವುದಾಗಿದ್ದರೂ, ಅವುಗಳ ಅನುಷ್ಠಾನವು ಹಳ್ಳಿಗಳ ಆರ್ಥಿಕತೆಯ ಮೇಲೆ ಪರೋಕ್ಷ ಲಾಭಗಳನ್ನೂ ತಂದು ಕೊಡುತ್ತವೆ.
ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ
ನಿರ್ಮಾಣ ಹಂತದಲ್ಲಿಯೇ ಇದರ ಮೊದಲ ಪ್ರಭಾವವನ್ನು ಕಾಣಬಹುದು. ವಿದ್ಯುತ್ ಪ್ರಸರಣಾ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಾಮಗ್ರಿಗಳ ಸಾಗಾಟ, ನಿವೇಶನ ಸಿದ್ಧತೆ, ಯಂತ್ರೋಪಕರಣ ಗಳ ನಿರ್ವಹಣೆ ಮತ್ತು ಸಾಗಾಟ ವ್ಯವಸ್ಥೆಯ ಬೆಂಬಲದಂತಹ ವಿವಿಧ ಸೇವೆಗಳ ಅಗತ್ಯವಿರುತ್ತದೆ. ಈ ಕಾರ್ಯಗಳಲ್ಲಿ ಹೆಚ್ಚಿನವು ಸ್ಥಳೀಯ ಕಾರ್ಮಿಕರು ಮತ್ತು ಪೂರೈಕೆದಾರರನ್ನೇ ಅವಲಂಬಿಸಿ ರುತ್ತವೆ.
ಗ್ರಾಮೀಣ ಕಾರ್ಮಿಕರಿಗೆ, ಈ ನಿರ್ಮಾಣ ಕಾಮಗಾರಿಗಳು ತಾತ್ಕಾಲಿಕವಾದರೂ ಅತ್ಯಂತ ಉಪಯುಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತವೆ. ಸ್ಥಳೀಯ ಟ್ರ್ಯಾಕ್ಟರ್ ಮಾಲೀಕರು, ಸಾರಿಗೆ ನಿರ್ವಾಹಕರು ಮತ್ತು ಕೂಲಿ ಕಾರ್ಮಿಕರು ಯೋಜನೆಗೆ ಪೂರಕವಾದ ಕೆಲಸಗಳನ್ನು ಕಂಡು ಕೊಳ್ಳುತ್ತಾರೆ.
ಇದರಲ್ಲಿರುವ ಮತ್ತೊಂದು ಪ್ರಮುಖ ಆರ್ಥಿಕ ಆಯಾಮವೆಂದರೆ, ಪ್ರಸರಣಾ ಮೂಲಸೌಕರ್ಯ ಗಳಿಗೆ ಜಾಗ ನೀಡುವ ರೈತರದ್ದು. ಹಲವು ನವೀಕರಿಸಬಹುದಾದ ಯೋಜನೆಗಳಲ್ಲಿ, ಅಭಿವೃದ್ಧಿ ಗಾರರು ಜಮೀನನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು ಗುತ್ತಿಗೆ (ಲೀಸ್) ಮಾದರಿಯನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ರೈತರು ಭೂಮಿಯ ಮಾಲೀಕತ್ವ ಉಳಿಸಿ ಕೊಳ್ಳುವುದರ ಜೊತೆಗೆ, ತಮ್ಮ ಜಮೀನಿನಲ್ಲಿ ಟವರ್ಗಳಂತಹ ಮೂಲಸೌಕರ್ಯಗಳನ್ನು ಸ್ಥಾಪಿಸಲು ಅವಕಾಶ ನೀಡಿದ್ದಕ್ಕಾಗಿ ಸೂಕ್ತ ಪರಿಹಾರವನ್ನೂ ಪಡೆಯುತ್ತಾರೆ.
ಪ್ರಸರಣಾ ಟವರ್ಗಳು ಆಕ್ರಮಿಸುವ ಜಾಗ ತುಲನಾತ್ಮಕವಾಗಿ ಚಿಕ್ಕದಾಗಿರುವುದರಿಂದ, ಉಳಿದ ಬಹುಪಾಲು ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಸರಾಗವಾಗಿ ಮುಂದುವರಿಸಬಹುದು. ಹೀಗಾಗಿ, ರೈತರು ಬೆಳೆ ಬೆಳೆಯುವುದರ ಜೊತೆಗೆ, ತಮ್ಮ ಹೊಲದಲ್ಲಿರುವ ಮೂಲಸೌಕರ್ಯಗಳಿಂದ ಹೆಚ್ಚುವರಿ ಆದಾಯವನ್ನೂ ಗಳಿಸಲು ಶಕ್ತರಾಗುತ್ತಾರೆ.
ಈ ರೀತಿಯ 'ದ್ವಿಮುಖ ಆದಾಯ'ದ ವ್ಯವಸ್ಥೆಯು ಅನೇಕ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕೇವಲ ಕೃಷಿ ಆದಾಯವು ಹವಾಮಾನ ವೈಪರೀತ್ಯ ಮತ್ತು ಮಾರು ಕಟ್ಟೆ ಬೆಲೆಗಳಿಂದಾಗಿ ಏರಿಳಿತಗಳನ್ನು ಕಾಣಬಹುದು. ಆದರೆ ಗುತ್ತಿಗೆಯಿಂದ ಬರುವ ನಿಶ್ಚಿತ ಆದಾಯವು, ಮನೆ ಖರ್ಚು, ಮಕ್ಕಳ ಶಿಕ್ಷಣ ಅಥವಾ ಕೃಷಿಯಲ್ಲಿ ಮರುಹೂಡಿಕೆಗೆ ಪೂರಕ ನೆರವಾಗುತ್ತದೆ.
ಕೆಲವು ರೈತರು ಈ ಹೆಚ್ಚುವರಿ ಆದಾಯವನ್ನು ನೀರಾವರಿ ವ್ಯವಸ್ಥೆಗಳ ಉನ್ನತೀಕರಣಕ್ಕೆ ಅಥವಾ ಸುಧಾರಿತ ಬೀಜಗಳ ಖರೀದಿಗೆ ಬಳಸಿದ್ದಾರೆ. ಇನ್ನು ಕೆಲವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿ ದ್ದಾರೆ ಅಥವಾ ಕೃಷಿ-ಪೂರಕ ಚಟುವಟಿಕೆಗಳತ್ತ ಮುಖಮಾಡಿ ಆದಾಯದ ಮೂಲಗಳನ್ನು ವಿಸ್ತರಿಸಿಕೊಂಡಿದ್ದಾರೆ.
ಇಂತಹ ಮೂಲಸೌಕರ್ಯ ಯೋಜನೆಗಳ ಅನುಷ್ಠಾನವು ಕೆಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ವನ್ನೂ ಸುಧಾರಿಸುತ್ತದೆ. ಕಾಮಗಾರಿ ಸ್ಥಳಗಳಿಗೆ ಯಂತ್ರೋಪಕರಣಗಳು ಮತ್ತು ಸಾಮಗ್ರಿಗಳನ್ನು ಸಾಗಿಸಲು ನಿರ್ಮಾಣ ತಂಡಗಳಿಗೆ ಉತ್ತಮ ರಸ್ತೆಗಳ ಅಗತ್ಯವಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಕಾಮಗಾರಿ ಮುಗಿದ ನಂತರವೂ ಅಭಿವೃದ್ಧಿಗೊಂಡ ಹಳ್ಳಿ ರಸ್ತೆಗಳು ಅಥವಾ ದಾರಿಗಳು ಹಾಗೆಯೇ ಉಳಿದುಕೊಂಡು, ಗ್ರಾಮಸ್ಥರ ದೈನಂದಿನ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ತವೆ.
ಈ ಸುಧಾರಿತ ಸಂಪರ್ಕ ವ್ಯವಸ್ಥೆಯಿಂದಾಗಿ, ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಗಳಿಗೆ ಸಾಗಿಸಲು ಅಥವಾ ಸಮೀಪದ ಪಟ್ಟಣಗಳಲ್ಲಿ ಸೇವೆಗಳನ್ನು ಪಡೆಯಲು ಹೆಚ್ಚು ಸುಲಭ ವಾಗುತ್ತದೆ.
ಮೂಲಸೌಕರ್ಯ ಆಧಾರಿತ ಆರ್ಥಿಕ ಚಟುವಟಿಕೆಗಳಿಂದ ಲಾಭ ಪಡೆಯುವ ಮತ್ತೊಂದು ವರ್ಗವೆಂದರೆ ಸ್ಥಳೀಯ ಯುವಜನತೆ. ಹಲವು ಗ್ರಾಮೀಣ ಪ್ರದೇಶಗಳಲ್ಲಿ, ತಮ್ಮ ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳ ಕೊರತೆಯಿರುವುದರಿಂದ ಯುವಕರು ಕೆಲಸವನ್ನರಸಿ ನಗರಗಳಿಗೆ ವಲಸೆ ಹೋಗುತ್ತಾರೆ. ಆದರೆ, ಇಂತಹ ಯೋಜನೆಗಳು ನಿರ್ಮಾಣ, ಸಾರಿಗೆ ಅಥವಾ ನಿರ್ವಹಣಾ ವಲಯ ಗಳಲ್ಲಿ ಸ್ಥಳೀಯವಾಗಿಯೇ ಉದ್ಯೋಗಗಳನ್ನು ಸೃಷ್ಟಿಸಿದಾಗ, ಅನೇಕ ಯುವಕರಿಗೆ ತಮ್ಮೂರಿನ ಸನಿಹದಲ್ಲೇ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಇದು ಕೇವಲ ಕುಟುಂಬದ ಆದಾಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ವಲಸೆಯನ್ನು ತಡೆಗಟ್ಟುವ ಮೂಲಕ ಸ್ಥಳೀಯ ಸಮುದಾಯಗಳನ್ನೂ ಬಲಪಡಿಸುತ್ತದೆ.
ನಿಸ್ಸಂದೇಹವಾಗಿ, ನವೀಕರಿಸಬಹುದಾದ ಇಂಧನ ಯೋಜನೆಗಳ ಆರ್ಥಿಕ ಪ್ರಭಾವವು ಯೋಜನೆ ಯ ಗಾತ್ರ, ಸ್ಥಳ ಮತ್ತು ಸ್ಥಳೀಯರ ಭಾಗವಹಿಸುವಿಕೆಯಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ. ಪ್ರತಿಯೊಂದು ಹಳ್ಳಿಯೂ ಒಂದೇ ರೀತಿಯ ಆರ್ಥಿಕ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ.
ಹಾಗಿದ್ದರೂ, ಇಲ್ಲಿನ ವಿಶಾಲವಾದ ಚಿತ್ರಣವು ಹೆಚ್ಚು ಸ್ಪಷ್ಟವಾಗುತ್ತಿದೆ: ಮೂಲಸೌಕರ್ಯಗಳ ಅಭಿವೃದ್ಧಿಯು, ಕೇವಲ ಯೋಜನೆಯ ವ್ಯಾಪ್ತಿಯನ್ನು ಮೀರಿ ವಿಸ್ತರಿಸುವ ಆರ್ಥಿಕ ಜಾಲಗಳಿಗೆ ಚೈತನ್ಯ ತುಂಬಬಲ್ಲದು.
ಯೋಜನಾ ಅಭಿವೃದ್ಧಿಗಾರರು ಮತ್ತು ಸಮುದಾಯಗಳ ನಡುವಿನ ಪಾಲ್ಗೊಳ್ಳುವಿಕೆಯೂ ಅಷ್ಟೇ ಮಹತ್ವದ್ದಾಗಿದೆ. ಯೋಜನೆಯ ರೂಪುರೇಷೆಗಳು, ಪರಿಹಾರದ ಚೌಕಟ್ಟುಗಳು ಮತ್ತು ಭವಿಷ್ಯದ ಆರ್ಥಿಕ ಅವಕಾಶಗಳ ಬಗ್ಗೆ ಪಾರದರ್ಶಕ ಸಂವಹನವಿದ್ದಾಗ, ಯೋಜನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತಾವು ಹೇಗೆ ಪಾಲ್ಗೊಳ್ಳಬಹುದು ಎಂಬುದನ್ನು ಅರಿಯಲು ಗ್ರಾಮಸ್ಥರಿಗೆ ನೆರವಾಗುತ್ತದೆ.
ಯಾವ ಪ್ರದೇಶಗಳಲ್ಲಿ ಅಭಿವೃದ್ಧಿಗಾರರು ಮತ್ತು ರೈತರ ನಡುವೆ ಮುಕ್ತ ಸಂವಾದವಿರುತ್ತದೆಯೋ, ಅಲ್ಲಿ ಸಮುದಾಯಗಳು ಈ ಯೋಜನೆಗಳನ್ನು ಕೇವಲ ಬಾಹ್ಯ ಹಸ್ತಕ್ಷೇಪ ಎಂದು ಭಾವಿಸದೆ, ಸಹಭಾಗಿತ್ವದ ಪ್ರಯತ್ನಗಳಾಗಿ ನೋಡುವ ಸಾಧ್ಯತೆ ಹೆಚ್ಚು.
ಭಾರತವು ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ನಿರಂತರವಾಗಿ ವಿಸ್ತರಿಸುತ್ತಿರು ವಾಗ, ಶುದ್ಧ ಇಂಧನ ಮೂಲಗಳನ್ನು ದೇಶಾದ್ಯಂತದ ಗ್ರಾಹಕರಿಗೆ ತಲುಪಿಸಲು ಪ್ರಸರಣಾ ಜಾಲ ಗಳು ಅತ್ಯಗತ್ಯವಾಗಿರುತ್ತವೆ. ಈ ಜಾಲಗಳು ಅನಿವಾರ್ಯವಾಗಿ ಗ್ರಾಮೀಣ ಪ್ರದೇಶಗಳ ಮೂಲಕವೇ ಹಾದುಹೋಗಬೇಕಾಗಿರುವುದರಿಂದ, ದೇಶದ ಈ ಇಂಧನ ಪರಿವರ್ತನೆಯಲ್ಲಿ ರೈತರು ಮತ್ತು ಗ್ರಾಮ ಸಮುದಾಯಗಳು ಪ್ರಮುಖ ಪಾತ್ರ ವಹಿಸುತ್ತವೆ.
ಇಂತಹ ಮೂಲಸೌಕರ್ಯಗಳಿಗೆ ಆಶ್ರಯ ನೀಡಿದ ಹಲವು ಹಳ್ಳಿಗಳ ಅನುಭವವು, ನವೀಕರಿಸ ಬಹುದಾದ ಇಂಧನ ಯೋಜನೆಗಳು ಕೇವಲ ಪರಿಸರ ಸುಸ್ಥಿರತೆಗೆ ಮಾತ್ರವಲ್ಲದೆ, ಗ್ರಾಮೀಣ ಆರ್ಥಿಕತೆಯ ಚೈತನ್ಯಕ್ಕೂ ಕೊಡುಗೆ ನೀಡಬಲ್ಲವು ಎಂಬುದನ್ನು ಸಾಬೀತುಪಡಿಸುತ್ತವೆ.
ಟವರ್ಗಳು ಮತ್ತು ವಿದ್ಯುತ್ ಮಾರ್ಗಗಳು ಶುದ್ಧ ಇಂಧನ ಅಭಿವೃದ್ಧಿಯ ತಾಂತ್ರಿಕ ಮಗ್ಗಲನ್ನು ಪ್ರತಿನಿಧಿಸಿದರೂ, ಇದರ ಹಿಂದಿರುವ ಅಸಲಿ ಕಥೆ ಜನರಿಗೆ- ಅಂದರೆ, ಈ ಯೋಜನೆಗಳೊಂದಿಗೆ ಬೆಸೆದುಕೊಂಡಿರುವ ರೈತರು, ಕಾರ್ಮಿಕರು, ಉದ್ಯಮಿಗಳು ಮತ್ತು ಅವರ ಕುಟುಂಬಗಳಿಗೆ- ಸೇರಿದ್ದಾಗಿದೆ.
ಅವರ ಮಟ್ಟಿಗೆ ಹೇಳುವುದಾದರೆ, ನವೀಕರಿಸಬಹುದಾದ ಇಂಧನ ಮೂಲಸೌಕರ್ಯವೆಂದರೆ ಕೇವಲ ಗ್ರಿಡ್ಗಳ ಮೂಲಕ ಸಾಗುವ ವಿದ್ಯುತ್ ಅಲ್ಲ; ಬದಲಾಗಿ, ಅದು ಗ್ರಾಮೀಣ ಆರ್ಥಿಕತೆಯಲ್ಲಿ ಮೂಡುತ್ತಿರುವ ಹೊಸ ಸಾಧ್ಯತೆಗಳ ಸಂಕೇತ.