ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿ.ಎಲ್.ಎಸ್ ಇಂಟರ್ನ್ಯಾಷನಲ್ ಮತ್ತು ಐಎಸಿಸಿಐಎನಿಂದ ಒಪ್ಪಂದಕ್ಕೆ ಸಹಿ

ಬಿ.ಎಲ್.ಎಸ್ ಇಂಟರ್ನ್ಯಾಷನಲ್‌, ವಿಶ್ವಾಸಾರ್ಹ ದೃಢೀಕರಣ ಮತ್ತು ಕಾನ್ಸುಲರ್ ಸೇವೆಗಳ ಮೂಲಕ ಜಾಗತಿಕ ಸಂಬಂಧಗಳನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಈ ಹೊಸ ಸಹಯೋಗ ನಮ್ಮ ಪಯಣ ದಲ್ಲಿನ ಮತ್ತೊಂದು ಮೈಲುಗಲ್ಲು. ಭಾರತ ಮತ್ತು ಅರಬ್ ದೇಶಗಳ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿ (ಐಎಸಿಸಿಐಎ) ಜೊತೆ ಕೈಜೋಡಿಸುವ ಮೂಲಕ, ನಾವು ಭಾರತ ಮತ್ತು ಅರಬ್ ಜಗತ್ತಿನ ನಡುವಿನ ಸಹಕಾರವನ್ನು ಮತ್ತು ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಿದ್ದೇವೆ

ಬಿ.ಎಲ್.ಎಸ್ ಇಂಟರ್ನ್ಯಾಷನಲ್ ಮತ್ತು ಐಎಸಿಸಿಐಎನಿಂದ ಒಪ್ಪಂದಕ್ಕೆ ಸಹಿ

-

Profile
Ashok Nayak Apr 22, 2026 3:01 PM

ಬೆಂಗಳೂರು: ಬಿ.ಎಲ್.ಎಸ್ ಇಂಟರ್ನ್ಯಾಷನಲ್, ಸರ್ಕಾರಗಳು ಮತ್ತು ನಾಗರಿಕರಿಗೆ ಪ್ರಮುಖ ಜಾಗತಿಕ ಎಐ ಮತ್ತು ತಂತ್ರಜ್ಞಾನ ಆಧರಿತ ಸೇವೆಗಳನ್ನು ಒದಗಿಸುವ ಒಂದು ಕಂಪನಿ. ಈ ಕಂಪನಿ ಭಾರತದಾದ್ಯಂತ 17 ಕೇಂದ್ರಗಳನ್ನು ಹೊಂದಿದೆ. ಈಗ ಈ ಕಂಪನಿ, ವಾಣಿಜ್ಯ ದೃಢೀಕರಣ ಮತ್ತು ಸಂಬಂಧಿತ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಭಾರತ ಮತ್ತು ಅರಬ್ ರಾಷ್ಟ್ರಗಳ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿ (ಐಎಸಿಸಿಐಎ) ಜೊತೆ ಒಂದು ಮಹತ್ವದ ತಿಳುವಳಿಕೆ ಒಪ್ಪಂದ (MoU) ಮಾಡಿಕೊಂಡಿದೆ.

ಇದರಿಂದ, 22 ಅರಬ್ ಲೀಗ್ ದೇಶಗಳೊಂದಿಗೆ ವ್ಯಾಪಾರದಲ್ಲಿ ತೊಡಗಿರುವ ಭಾರತೀಯ ವ್ಯವಹಾರ ಸಂಸ್ಥೆಗಳ ದಾಖಲಾತಿ ಪ್ರಕ್ರಿಯೆಗಳು ಬೇಗ, ಸುಲಭವಾಗಿ ಮತ್ತು ಅಚ್ಚುಕಟ್ಟಾಗಿ ಆಗುತ್ತವೆ. ಐಎಸಿಸಿಐಎ ಪ್ರಧಾನ ಕಾರ್ಯದರ್ಶಿ (ಪ್ರಭಾರ) ಡಾ. ವೇಲ್ ಎಸ್.ಎಚ್. ಅವ್ವಾದ್ (Dr. Waiel S. H. Awwad) ಮತ್ತು ಬಿ.ಎಲ್.ಎಸ್ ಇಂಟರ್ನ್ಯಾಷನಲ್‌ ನ ಸ್ಟ್ರ್ಯಾಟೆಜಿಕ್ ಮಾರ್ಕೆಟ್ಸ್, ಗವರ್ನಮೆಂಟ್ಸ್ ಮತ್ತು ಇನ್ಸ್ಟಿಟ್ಯುಷನ್ಸ್ ಚೀಫ್ ಆಪರೇಟಿಂಗ್ ಆಫೀಸರ್, ಶ್ರೀಮತಿ ಚಾರು ಖೋಸ್ಲಾ ಅವರ ಸಮ್ಮುಖದಲ್ಲಿ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಇತ್ತೀಚೆಗೆ ಭಾರತ ಸರ್ಕಾರದ ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿ.ಜಿ.ಎಫ್.ಟಿ), ಭಾರತ ಮತ್ತು ಅರಬ್ ದೇಶಗಳ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿಗೆ (ಐಎಸಿಸಿಐಎ) ಔಪಚಾರಿಕ ಮಾನ್ಯತೆ ನೀಡಿದೆ. ಇದೊಂದು ಮಹತ್ವದ ಮೈಲುಗಲ್ಲು.. ಇದರಿಂದ, ಐಎಸಿಸಿಐಎ ಗೆ ನಾನ್-ಪ್ರಿಫರೆಂಷ್ಯಲ್ ಸರ್ಟಿಫಿಕೇಟುಗಳನ್ನು ನೀಡಲು ಮತ್ತು ವಾಣಿಜ್ಯ ದಾಖಲೆಗಳನ್ನು ದೃಢೀಕರಿಸಲು, ಭಾರತ ಮತ್ತು ಅರಬ್ ದೇಶಗಳ ನಡುವಿನ ವ್ಯಾಪಾರ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಅಧಿಕಾರ ದೊರೆತಿದೆ. ಈ ಪರಿವರ್ತನಶೀಲ ಬೆಳವಣಿಗೆ, ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸಲಿದೆ ಎಂಬ ನಿರೀಕ್ಷೆಯಿದೆ.

ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ಬಿ.ಎಲ್.ಎಸ್ ಇಂಟರ್ನ್ಯಾಷನಲ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಿಖರ್ ಅಗರ್ವಾಲ್, “ಬಿ.ಎಲ್.ಎಸ್ ಇಂಟರ್ನ್ಯಾಷನಲ್‌, ವಿಶ್ವಾಸಾರ್ಹ ದೃಢೀಕರಣ ಮತ್ತು ಕಾನ್ಸುಲರ್ ಸೇವೆಗಳ ಮೂಲಕ ಜಾಗತಿಕ ಸಂಬಂಧಗಳನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಈ ಹೊಸ ಸಹಯೋಗ ನಮ್ಮ ಪಯಣದಲ್ಲಿನ ಮತ್ತೊಂದು ಮೈಲುಗಲ್ಲು. ಭಾರತ ಮತ್ತು ಅರಬ್ ದೇಶಗಳ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿ (ಐಎಸಿಸಿಐಎ) ಜೊತೆ ಕೈಜೋಡಿಸುವ ಮೂಲಕ, ನಾವು ಭಾರತ ಮತ್ತು ಅರಬ್ ಜಗತ್ತಿನ ನಡುವಿನ ಸಹಕಾರವನ್ನು ಮತ್ತು ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಿದ್ದೇವೆ; ಮಾರುಕಟ್ಟೆಗಳಲ್ಲಿ ನವೀನ ಪದ್ಧತಿಗಳನ್ನು ಪರಿಚಯಿಸಲಿದ್ದೇವೆ. ವ್ಯಕ್ತಿಗಳಿಗೆ ಮತ್ತು ಉದ್ಯಮಗಳಿಗೆ ಇಬ್ಬರಿಗೂ ಸಮಾನವಾಗಿ ನೆರವಾಗುವಂತಹ ಸಮಸ್ಯಾತೀತ, ಸುರಕ್ಷಿತ ಮತ್ತು ಪ್ರಮಾಣಾನುಬದ್ಧ ದೃಢೀಕರಣ ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.”

ಐಎಸಿಸಿಐಎ ಪ್ರಧಾನ ಕಾರ್ಯದರ್ಶಿ (ಪ್ರಭಾರ) ಡಾ. ವೇಲ್ ಎಸ್.ಎಚ್. ಅವ್ವಾದ್ "ಈ ಡಿ.ಜಿ.ಎಫ್.ಟಿ ಮಾನ್ಯತೆ ದೊರೆತಿರುವುದರಿಂದ ಐಎಸಿಸಿಐಎ ಗೆ, ಭಾರತ ಮತ್ತು ಅರಬ್ ಪ್ರಪಂಚದ ನಡುವಿನ ವಾಣಿಜ್ಯ ಸಂಬಂಧಗಳನ್ನು ಉತ್ತಮಪಡಿಸಲು ಒಂದು ವಿಶ್ವಾಸಾರ್ಹ ಸೇತುವೆಯಾಗಿ ಕೆಲಸ ಮಾಡಲು ನಮಗೆ ಹೆಚ್ಚಿನ ಶಕ್ತಿ ದೊರೆತಿದೆ.

ಬಿ.ಎಲ್.ಎಸ್ ಇಂಟರ್ನ್ಯಾಷನಲ್‌ ಜೊತೆಗಿನ ನಮ್ಮ ಪಾಲುದಾರಿಕೆಯಿಂದಾಗಿ ನಮ್ಮ ಸೇವಾ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಲು ಮತ್ತು ಉಭಯಪಕ್ಷ ವ್ಯವಹಾರಗಳಲ್ಲಿ ಯಾವುದೇ ಸಮಸ್ಯೆಗಳು ಬರದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ಭಾರತ ಮತ್ತು ಅರಬ್ ಜಗತ್ತಿನ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ವ್ಯಾಪಾರ ಮತ್ತು ಹೂಡಿಕೆಗಳಿಗೆ ಹೊಸ ಹೊಸ ಮಾರ್ಗಗಳನ್ನು ತೆರೆಯುತ್ತದೆ."