Lenskart Tilak-Bindi Row: ಲೆನ್ಸ್‌ಕಾರ್ಟ್‌ನ 12 ಸಾವಿರ ರುಪಾಯಿ ಮೌಲ್ಯದ ಕನ್ನಡಕ ಒಡೆದು ಆಕ್ರೋಶ ಹೊರಹಾಕಿದ ವ್ಯಕ್ತಿ
Viral Video: ಲೆನ್ಸ್‌ಕಾರ್ಟ್ ಸಂಸ್ಥೆ ಬಿಂದಿ ಮತ್ತು ತಿಲಕ ಧರಿಸಲು ನಿರ್ಬಂಧ ಹೇರಿರುವ ವಿಚಾರ ವಿವಾದಕ್ಕೆ ತಿರುಗಿದ್ದು ಪ್ರತಿಭಟನೆಗೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಲೆನ್ಸ್‌ಕಾರ್ಟ್‌ನಿಂದ ಕನ್ನಡಕ ಖರೀದಿಸಿ ನಂತರ ಅದನ್ನು ಪುಡಿ ಪುಡಿ ಮಾಡಿದ್ದಾನೆ. ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರಿಂದ ಹಲವು ಪ್ರತಿಕ್ರಿಯೆ ಪಡೆದುಕೊಂಡಿದೆ.
ಕನ್ನಡಕ ಒಡೆದು ಆಕ್ರೋಶ ಹೊರಹಾಕಿದ ವ್ಯಕ್ತಿ -
ನವದೆಹಲಿ, ಏ. 22: ಲೆನ್ಸ್‌ಕಾರ್ಟ್ ವಿವಾದ (Lenskart Tilak-Bindi Row) ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸಿಬ್ಬಂದಿ ತಿಲಕ ಹಾಗೂ ಬಿಂದಿ ಬಳಕೆ ಮಾಡಬಾರದು ಎಂಬ ರೂಲ್ಸ್ ಅನ್ನು ಲೆನ್ಸ್‌ಕಾರ್ಟ್ ಸಂಸ್ಥೆ ಜಾರಿಗೆ ತಂದಿತ್ತು. ಇದರ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಸಾರ್ವಜನಿಕರಿಂದ, ನೆಟ್ಟಿಗರಿಂದ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಈ ನಡುವೆ ಲೆನ್ಸ್‌ಕಾರ್ಟ್‌ಗೆ ವಿರೋಧ ವ್ಯಕ್ತಪಡಿಸಲು ವ್ಯಕ್ತಿಯೊಬ್ಬರು 12 ಸಾವಿರ ರುಪಾಯಿ ಮೌಲ್ಯದ ಕನ್ನಡಕ ಖರೀದಿಸಿ ಒಡೆದು ಹಾಕಿದ್ದಾರೆ. ಆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಲೆನ್ಸ್‌ಕಾರ್ಟ್ ಸಂಸ್ಥೆ ಬಿಂದಿ ಮತ್ತು ತಿಲಕ ಧರಿಸಲು ನಿರ್ಬಂಧ ಹೇರಿದ ಬಳಿಕ ವಿವಾದ ಭುಗಿಲೆದ್ದಿದೆ. ಈ ವಿಚಾರ ದೇಸಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ. ಇದರ ಭಾಗವಾಗಿ ವ್ಯಕ್ತಿಯೊಬ್ಬರು ಲೆನ್ಸ್‌ಕಾರ್ಟ್‌ನಿಂದ ಬರೋಬ್ಬರಿ 12 ಸಾವಿರ ರುಪಾಯಿ ಮೌಲ್ಯದ ಕನ್ನಡಕ ಖರೀದಿಸಿ ನಂತರ ಅದನ್ನು ಪುಡಿ ಪುಡಿ ಮಾಡಿದ್ದಾರೆ. ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಲವು ಭಿನ್ನ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರು ಆ ವ್ಯಕ್ತಿಯ ಕೃತ್ಯವನ್ನು ಅರ್ಥಹೀನ ಎಂದು ಟೀಕಿಸಿದರೆ, ಇನ್ನು ಹಲವರು ಬೆಂಬಲ ಸೂಚಿಸಿದ್ದಾರೆ.
ವಿಡಿಯೊ ನೋಡಿ:
RW 🤡 and Fatherland fans start a boycott campaign against Lenskart.
— D (@Deb_livnletliv) April 20, 2026
And How Do they Boycott??
They actually walk in to Lenskart store, buy the product and then break it 🤣 pic.twitter.com/5nkMt3nhTE
ವ್ಯಕ್ತಿಯೊಬ್ಬರು ಲೆನ್ಸ್‌ಕಾರ್ಟ್ ಮಳಿಗೆಯಿಂದ 12,000 ರುಪಾಯಿ ಕನ್ನಡಕವನ್ನು ಖರೀದಿಸಿದ್ದಾರೆ. ಶೋರೂಂನಿಂದ ಹೊರ ಬರುತ್ತಿದ್ದಂತೆ ಆ ಹೊಸ ಕನ್ನಡಕವನ್ನು ಕಾಲಿನಿಂದ ತುಳಿದು ಅಲ್ಲೇ ಪುಡಿ ಪುಡಿ ಮಾಡಿದ್ದಾರೆ. ʼʼಹಿಂದೂ ಧರ್ಮದ ಮೇಲೆ ಇಷ್ಟು ವಿರೋಧ ಯಾಕೆ? ನಮ್ಮನ್ನು ಯಾರು ಗೌರವಿಸುವುದಿಲ್ಲವೋ ಅವರನ್ನು ನಾವು ಗೌರವಿಸುವುದಿಲ್ಲʼʼ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಈ ವಿಡಿಯೊಗೆ ಪ್ರತಿಕ್ರಿಯಿಸಿದ ಹಲವರು, ಒಂದು ವರ್ಗ ಧರ್ಮದ ಗೌರವಕ್ಕಾಗಿ ಇದು ಅಗತ್ಯ ಎಂದು ಹೇಳಿದ್ದಾರೆ.
25 ಸಾವಿರ ರೂ.ಗೆ ಎಐ ಶಿಕ್ಷಕಿ ಸೃಷ್ಟಿಸಿದ 17 ವರ್ಷದ ವಿದ್ಯಾರ್ಥಿ
ಇತ್ತೀಚೆಗಷ್ಟೇ ಉದ್ಯೋಗಿಗಳು ಬಿಂದಿ, ತಿಲಕ ಇಟ್ಟುಕೊಳ್ಳಬಾರದೆಂದು ಎನ್ನುವ ರೂಲ್ಸ್ ವೈರಲ್ ಆದ ಬೆನ್ನಲ್ಲೇ ಈ ಸಂಸ್ಥೆ ವಿವಾದಕ್ಕೆ ಸಿಲುಕಿದೆ. ಹಿಜಾಬ್ಗೆ ಅನುಮತಿ ಇದೆ. ಆದರೆ ಹಿಂದೂ ಉದ್ಯೋಗಿಗಳಿಗೆ ಕುಂಕುಮ, ಹಣೆ ಬೊಟ್ಟು ಇಡುವ ಅವಕಾಶ ಇಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ. ಲೆನ್ಸ್‌ಕಾರ್ಟ್ ಸಂಸ್ಥಾಪಕರು ಸ್ಪಷ್ಟನೆ ನೀಡಿದ್ದು ಈ ಮಾರ್ಗಸೂಚಿ ಹಳೆಯದು ಎಂದು ಕ್ಷಮೆ ಕೇಳಿದ್ದಾರೆ.