ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka Bypolls: ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ; ಕಾಂಗ್ರೆಸ್‌ನಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯ ಮತದಾನ ಏಪ್ರಿಲ್‌ 9ರಂದು ನಡೆಯಲಿದೆ. ಮೇ 4 ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ 40 ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

ಉಪ ಚುನಾವಣೆ; ಕಾಂಗ್ರೆಸ್‌ನಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ) -

Prabhakara R
Prabhakara R Mar 27, 2026 9:34 PM

ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೀಗ ಕಾಂಗ್ರೆಸ್ ಪಕ್ಷದಿಂದ ‘ಸ್ಟಾರ್ ಪ್ರಚಾರಕರ’ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ 40 ಘಟಾನುಘಟಿ ನಾಯಕರು ಈ ಪಟ್ಟಿಯಲ್ಲಿದ್ದಾರೆ.

ಹಿರಿಯ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರ ಮತ್ತು ಹಿರಿಯ ಕೈ ಶಾಸಕ ಎಚ್‌.ವೈ.ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ಕ್ಷೇತ್ರದಲ್ಲಿ ಉಪ ಚುನಾವಣೆ ನಿಗದಿಯಾಗಿದೆ.

Davanagere south bypolls: ಸಿಎಂ ಸಂಧಾನ ಸಕ್ಸಸ್‌; ದಾವಣಗೆರೆ ಕಣದಿಂದ ಹಿಂದೆ ಸರಿದ ಸ್ವತಂತ್ರ ಅಭ್ಯರ್ಥಿ ಸಾದಿಕ್ ಪೈಲ್ವಾನ್

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಟಿ. ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿಯಿಂದ ವೀರಣ್ಣ ಚರಂತಿಮಠ ಮತ್ತು ಕಾಂಗ್ರೆಸ್‌ನಿಂದ ಉಮೇಶ ಮೇಟಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಯಾರೆಲ್ಲಾ ಪ್ರಮುಖರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಕಾಂಗ್ರೆಸ್‌ ಸ್ಟಾರ್ ಪ್ರಚಾರಕರ ಪಟ್ಟಿ

  1. ಮಲ್ಲಿಕಾರ್ಜುನ ಖರ್ಗೆ- ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ
  2. ರಣದೀಪ್ ಸಿಂಗ್ ಸುರ್ಜೇವಾಲ- ಎಐಸಿಸಿ ಪ್ರಧಾನ ಕಾರ್ಯದರ್ಶಿ
  3. ಡಿ.ಕೆ. ಶಿವಕುಮಾರ್- ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ
  4. ಸಿದ್ದರಾಮಯ್ಯ- ಮುಖ್ಯಮಂತ್ರಿ
  5. ಡಾ. ಸೈಯದ್ ನಾಸೀರ್ ಹುಸೇನ್- ಸಂಸದ, ಎಐಸಿಸಿ ಪ್ರಧಾನ ಕಾರ್ಯದರ್ಶಿ
  6. ಜಿ.ಸಿ. ಚಂದ್ರಶೇಖರ್- ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ
  7. ತನ್ವೀರ್ ಸೇರ್-ಶಾಸಕ, ಸಚಿವ
  8. ಅಭಿಷೇಕ್ ದತ್- ಎಐಸಿಸಿ ಕಾರ್ಯದರ್ಶಿ
  9. ಗೋಪಿನಾಥ್ ಪಳನಿಯಪ್ಪನ್- ಎಐಸಿಸಿ ಕಾರ್ಯದರ್ಶಿ
  10. ಆ‌ರ್.ಬಿ. ತಿಮ್ಮಾಪುರ- ಸಚಿವ
  11. ಎಸ್.ಎಸ್. ಮಲ್ಲಿಕಾರ್ಜುನ್- ಸಚಿವ
  12. ಲಕ್ಷ್ಮಣ ಸವದಿ- ಶಾಸಕ, ಮಾಜಿ ಉಪಮುಖ್ಯಮಂತ್ರಿ
  13. ಕೆ.ಜೆ. ಜಾರ್ಜ್- ಶಾಸಕ, ಸಚಿವ
  14. ವಿನಯ್ ಕುಮಾರ್ ಸೊರಕೆ- ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ
  15. ಬಿ.ಕೆ. ಹರಿಪ್ರಸಾದ್- ಎಂಎಲ್‌ಸಿ
  16. ಡಾ. ಜಿ. ಪರಮೇಶ್ವರ- ಶಾಸಕ, ಗೃಹ ಸಚಿವ
  17. ಎಚ್.ಕೆ. ಪಾಟೀಲ- ಸಚಿವ
  18. ಎಂ.ಬಿ. ಪಾಟೀಲ- ಸಚಿವ
  19. ಕೆ.ಎಚ್‌. ಮುನಿಯಪ್ಪ- ಸಚಿವ
  20. ಈಶ್ವರ ಖಂಡ್ರೆ- ಸಚಿವ
  21. ಸತೀಶ್ ಜಾರಕಿಹೊಳಿ- ಸಚಿವ
  22. ಶಿವಾನಂದ ಪಾಟೀಲ- ಸಚಿವ
  23. ಡಾ. ಶರಣಪ್ರಕಾಶ ಪಾಟೀಲ- ಸಚಿವ
  24. ಡಾ. ಎಚ್.ಸಿ. ಮಹದೇವಪ್ಪ- ಸಚಿವ
  25. ಸಂತೋಷ್ ಲಾಡ್- ಸಚಿವ
  26. ಕೃಷ್ಣಬೈರೇಗೌಡ- ಶಾಸಕ, ಸಚಿವ
  27. ಪ್ರಿಯಾಂಕ್ ಖರ್ಗೆ- ಸಚಿವ
  28. ಚಲುವರಾಯಸ್ವಾಮಿ- ಸಚಿವ
  29. ಡಿ. ಸುಧಾಕರ್- ಸಚಿವ
  30. ಲಕ್ಷ್ಮಿ ಹೆಬ್ಬಾಳ್ಳರ್‌- ಸಚಿವೆ
  31. ಶಿವರಾಜ ತಂಗಡಗಿ- ಸಚಿವ
  32. ಬೈರತಿ ಸುರೇಶ್- ಸಚಿವ.
  33. ಮಧು ಬಂಗಾರಪ್ಪ-ಸಚಿವ
  34. ಎನ್.ಎಸ್. ಬೋಸರಾಜು- ಸಚಿವ
  35. ಎಚ್.ಎಂ. ರೇವಣ್ಣ-ರಾಜ್ಯ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ
  36. ಬಿ.ಝಡ್. ಜಮೀರ್ ಅಹಮದ್ ಖಾನ್- ಶಾಸಕ, ಸಚಿವ
  37. ಉಮಾಶ್ರೀ- ಎಂಎಲ್‌ಸಿ
  38. ರುದ್ರಪ್ಪ ಲಮಾಣಿ- ಶಾಸಕ
  39. ಪಿ.ಟಿ. ಪರಮೇಶ್ವರನಾಯ್ಕ- ಮಾಜಿ ಸಚಿವ
  40. ಕೆ.ಪಿ. ನಂಜುಂಡಿ- ಮಾಜಿ ಎಂಎಲ್‌ಸಿ