ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಗೆಳತಿಯ ಅಶ್ಲೀಲ ವಿಡಿಯೊ ವೈರಲ್ ಮಾಡಿದ ಯುವಕನಿಗೆ ಜೈಲು ಶಿಕ್ಷೆ

ಯುವತಿಯು ಬೇರೊಬ್ಬರ ಜತೆ ಮದುವೆಯಾದ ವಿಷಯ ತಿಳಿದ ಆರೋಪಿ, ಆಕೆ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. ಆಕೆಯ ಖಾಸಗಿ ಫೋಟೊ ಮತ್ತು ವಿಡಿಯೊಗಳನ್ನು ಸೋಷಿಯಲ್ ಮೀಡಿಯಾ ಹಾಗೂ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಆತನಿಗೆ‌ ಬೆಂಗಳೂರಿನ ಕೋರ್ಟ್ ಶಿಕ್ಷೆ ವಿಧಿಸಿದೆ.

ಗೆಳತಿಯ ಅಶ್ಲೀಲ ವಿಡಿಯೊ ವೈರಲ್ ಮಾಡಿದ ಯುವಕನಿಗೆ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ -

Prabhakara R
Prabhakara R Mar 27, 2026 9:55 PM

ಬೆಂಗಳೂರು: ಮದುವೆಯಾದ ಗೆಳತಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಖಾಸಗಿ ವಿಡಿಯೊಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ ಬಿಸಿಎ ಪದವೀಧರನಿಗೆ ಬೆಂಗಳೂರಿನ 47ನೇ ಎಸಿಜೆಎಂ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಜೆ.ಪಿ ನಗರದ ನಿವಾಸಿ ರವಿಶಂಕರ್ (32) ಅಪರಾಧಿ.

ರವಿಶಂಕರ್ ಫೇಸ್‌ಬುಕ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದು ವಾಟ್ಸ್ಯಾಪ್ ವಿಡಿಯೊ ಕಾಲ್‌ನಲ್ಲಿ ಹಲವು ಬಾರಿ ಮಾತನಾಡಿದ್ದರು. ಈ ಸಮಯದಲ್ಲಿ ಯುವತಿಗೆ ಕಿಂಚಿತ್ತೂ ಸುಳಿವು ನೀಡದೆ, ಆತ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ವಿಡಿಯೊಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಇದು ಮುಂದೆ ಆಕೆಯ ಬದುಕಿಗೆ ಮುಳುವಾಗಬಹುದು ಎಂಬ ಕಲ್ಪನೆಯೂ ಆ ಯುವತಿಗೆ ಇರಲಿಲ್ಲ.

2021ರ ಜೂನ್‌ನಲ್ಲಿ ಯುವತಿಯು ಬೇರೊಬ್ಬರ ಜತೆ ಮದುವೆಯಾದ ವಿಷಯ ತಿಳಿದ ರವಿಶಂಕರ್, ತೀವ್ರ ಆಕ್ರೋಶಗೊಂಡು ಆಕೆಯ ಖಾಸಗಿ ಫೋಟೊ ಮತ್ತು ವಿಡಿಯೊಗಳನ್ನು ಸೋಷಿಯಲ್ ಮೀಡಿಯಾ ಹಾಗೂ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹರಿಬಿಟ್ಟಿದ್ದ. ಈ ಬಗ್ಗೆ ಸಂತ್ರಸ್ತೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಎಸ್. ಸಿದ್ದರಾಜು ಅವರು ಸಾಕ್ಷ್ಯಧಾರಗಳನ್ನು ಪರಿಶೀಲಿಸಿ ಈ ಶಿಕ್ಷೆ ಪ್ರಕಟಿಸಿದ್ದಾರೆ.

ಸಣ್ಣಪುಟ್ಟ ಗಲಾಟೆಗಳಿಗೆಲ್ಲಾ 498ಎ ಕೇಸ್ ಹಾಕುವಂತಿಲ್ಲ: ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ವೈವಾಹಿಕ ಜೀವನದಲ್ಲಿ ಉಂಟಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮತ್ತು ದೈನಂದಿನ ಜೀವನದ ಸಾಮಾನ್ಯ ಘರ್ಷಣೆಗಳನ್ನು ‘ವರದಕ್ಷಿಣೆ ಕಿರುಕುಳ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಹಿಳೆಯೊಬ್ಬರು ತನ್ನ ಅತ್ತೆ-ಮಾವ ಹಾಗೂ ಮೈದುನನ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಎಂಬುದು ದಾಂಪತ್ಯದ ಎಲ್ಲಾ ಸಮಸ್ಯೆಗಳಿಗೂ ರಾಮಬಾಣವಲ್ಲ ಎಂದು ಮಾರ್ಮಿಕವಾಗಿ ನುಡಿದಿದೆ.

ಏನಿದು ಪ್ರಕರಣ?

ದೂರುದಾರೆ ಮಹಿಳೆ ಮತ್ತು ಆಕೆಯ ಪತಿ 2017 ರಲ್ಲಿ ವಿವಾಹವಾಗಿ ಅಮೆರಿಕದ ಟೆಕ್ಸಾಸ್‌ನಲ್ಲಿ ವಾಸವಾಗಿದ್ದರು. ಅಲ್ಲಿ ಸುಮಾರು ಆರು ವರ್ಷಗಳ ಕಾಲ ದಾಂಪತ್ಯ ನಡೆಸಿದ ನಂತರ, ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಭಾರತಕ್ಕೆ ಮರಳಿದ ಮಹಿಳೆ, ತನ್ನ ಪತಿ, ಅತ್ತೆ, ಮಾವ ಮತ್ತು ಮೈದುನನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್‌, ದೂರಿನಲ್ಲಿ ಉಲ್ಲೇಖಿಸಲಾದ ಆಹಾರದ ಮೇಲೆ ನಿರ್ಬಂಧ ಹೇರುವುದು, ಉಡುಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು, ಮನೆಯ ಕೆಲಸಗಳ ಹಂಚಿಕೆ ಅಥವಾ ಟಿವಿ ಚಾನೆಲ್ ನೋಡುವ ವಿಚಾರದಲ್ಲಿನ ಜಗಳಗಳು ಕೇವಲ ಕೌಟುಂಬಿಕ ಅಸಮಾಧಾನಗಳನ್ನು ತೋರಿಸುತ್ತವೆಯೇ ಹೊರತು, ಇವುಗಳನ್ನು ಸೆಕ್ಷನ್ 498ಎ ಅಡಿಯಲ್ಲಿ ಬರುವ ‘ಕ್ರೂರತೆ’ ಎಂದು ಕರೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Ajit Pawar Death: ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ?; ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲು

ಅಲ್ಲದೆ ಅಸ್ಪಷ್ಟ ಮತ್ತು ಕ್ಷುಲ್ಲಕ ಆರೋಪಗಳ ಮೇಲೆ ಕ್ರಿಮಿನಲ್ ಪ್ರಕ್ರಿಯೆಯನ್ನು ಮುಂದುವರಿಸುವುದು ಕಾನೂನನ್ನು ಪರಿಹಾರದ ಬದಲಿಗೆ ಆಯುಧವನ್ನಾಗಿ ಬಳಸಲು ಅವಕಾಶ ನೀಡಿದಂತಾಗುತ್ತದೆ. ಇದು ಆರೋಪಿಗಳಿಗೆ ಅನಗತ್ಯ ಕಿರುಕುಳ ನೀಡಿದಂತಾಗುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.