ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sprint Fest 2026: ಬ್ರಿಗೇಡ್ ಸ್ಕೂಲ್ಸ್ ನಿಂದ ಸ್ಪ್ರಿಂಟ್‌ ಫೆಸ್ಟ್ 2026 ಆಯೋಜನೆ: ಅಶಕ್ತ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ನೆರವಿಗಾಗಿ ವಿದ್ಯಾರ್ಥಿಗಳಿಂದ 40 ಲಕ್ಷ ರೂ. ಸಂಗ್ರಹದ ಗುರಿ

ಸ್ಪ್ರಿಂಟ್ ಫೆಸ್ಟ್ 2026 ಓಟವು ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಿಂದ ಪ್ರಾರಂಭ ವಾಗಿ ಕಬ್ಬನ್ ಪಾರ್ಕ್ ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿ ಮೂಲಕ ಸಾಗಿ, ಪುನಃ ಸೇಂಟ್ ಜೋಸೆಫ್ ಮೈದಾನದಲ್ಲೇ ಮುಕ್ತಾಯಗೊಳ್ಳಲಿದೆ. ಈ ವರ್ಷದ ಸ್ಪ್ರಿಂಟ್‌ ಫೆಸ್ಟ್‌ ನಲ್ಲಿ 1ಕಿ.ಮೀ, 3ಕಿ.ಮೀ, 5ಕಿ.ಮೀ ಮತ್ತು 10ಕಿ.ಮೀ ಎಂಬ ನಾಲ್ಕು ವಿಭಾಗಗಳಿದ್ದು, ಸುಮಾರು 3,000ಕ್ಕೂ ಹೆಚ್ಚು ಓಟಗಾರರು ಭಾಗವಹಿ ಸುವ ನಿರೀಕ್ಷೆಯಿದೆ.

ಬ್ರಿಗೇಡ್ ಸ್ಕೂಲ್ಸ್ ನಿಂದ ಸ್ಪ್ರಿಂಟ್‌ ಫೆಸ್ಟ್ 2026 ಆಯೋಜನೆ

-

Ashok Nayak
Ashok Nayak Mar 27, 2026 10:32 PM

*ಉದ್ಘಾಟನಾ ನಡಿಗೆಯಲ್ಲಿ ರೇಸ್ ಡೇ ಪದಕ ಮತ್ತು ಟಿ-ಶರ್ಟ್ ಅನಾವರಣ

ಬೆಂಗಳೂರು: ಬ್ರಿಗೇಡ್ ಫೌಂಡೇಶನ್‌ ಅಧೀನದ 'ದಿ ಬ್ರಿಗೇಡ್ ಸ್ಕೂಲ್ಸ್' ಇಂದು ತನ್ನ ಪ್ರಮುಖ ಕ್ರೀಡಾಕೂಟವಾದ 'ಸ್ಪ್ರಿಂಟ್‌ ಫೆಸ್ಟ್ 2026'ಗೆ ಅಧಿಕೃತವಾಗಿ ಚಾಲನೆ ನೀಡಿದೆ. ಸ್ಪ್ರಿಂಟ್ ಫೆಸ್ಟ್ 2026 ಅಂಗವಾಗಿ ಸಾಂಕೇತಿಕ ನಡಿಗೆಯನ್ನು ಆಯೋಜಿಸಲಾಗಿದ್ದು, ಈ ಉದ್ಘಾಟನಾ ನಡಿಗೆಯಲ್ಲಿ ವಿವಿಧ ಗುಂಪುಗಳ ಸುಮಾರು 100 ವೃತ್ತಿಪರ ಓಟಗಾರರು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ವಿದ್ಯಾರ್ಥಿ ನೇತೃತ್ವದ ಸ್ಪ್ರಿಂಟ್ ಫೆಸ್ಟ್ 2026 ಓಟದ ಸ್ಪರ್ಧೆಯು ಈ ವರ್ಷ ಆಗಸ್ಟ್ 9, 2026ರ ಭಾನುವಾರ ನಡೆಯಲಿದ್ದು, ಶಾಲೆಗಳು, ಸಾರ್ವಜನಿಕರು ಮತ್ತು ವೃತ್ತಿಪರ ಓಟಗಾರರು ಈ ಸ್ಪರ್ಧೆ ಯಲ್ಲಿ ಭಾಗವಹಿಸಬಹುದಾಗಿದೆ. ಈ ಓಟದ ಸ್ಪರ್ಧೆಯ ಮೂಲಕ ನೋಂದಣಿ ಶುಲ್ಕ ಮತ್ತು ಪ್ರಾಯೋಜಕತ್ವದಿಂದ ಸುಮಾರು ₹40 ಲಕ್ಷ ಸಂಗ್ರಹಿಸುವ ಗುರಿಯನ್ನು ವಿದ್ಯಾರ್ಥಿಗಳು ಹೊಂದಿದ್ದು, ಈ ಮೊತ್ತವನ್ನು ಅಶಕ್ತ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತದೆ.

ಇದನ್ನೂ ಓದಿ: Bangalore News: ಮುಖ್ಯಮಂತ್ರಿ ಪದವಿ ಗುದ್ದಾಟ ವಿಷಯಾಂತರಕ್ಕೆ ಒಳ ಮೀಸಲಾತಿ ಬಳಕೆ: ಧಮ್ಮ ಧೀವಿಗೆ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ್

ಸ್ಪ್ರಿಂಟ್ ಫೆಸ್ಟ್ 2026 ಓಟವು ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗಿ ಕಬ್ಬನ್ ಪಾರ್ಕ್ ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿ ಮೂಲಕ ಸಾಗಿ, ಪುನಃ ಸೇಂಟ್ ಜೋಸೆಫ್ ಮೈದಾನದಲ್ಲೇ ಮುಕ್ತಾಯಗೊಳ್ಳಲಿದೆ. ಈ ವರ್ಷದ ಸ್ಪ್ರಿಂಟ್‌ ಫೆಸ್ಟ್‌ ನಲ್ಲಿ 1ಕಿ.ಮೀ, 3ಕಿ.ಮೀ, 5ಕಿ.ಮೀ ಮತ್ತು 10ಕಿ.ಮೀ ಎಂಬ ನಾಲ್ಕು ವಿಭಾಗಗಳಿದ್ದು, ಸುಮಾರು 3,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.

ದಿ ಬ್ರಿಗೇಡ್ ಸ್ಕೂಲ್ಸ್‌ ನ ಹಿರಿಯ ವಿದ್ಯಾರ್ಥಿಗಳು 'ಸ್ಪ್ರಿಂಟ್‌ ಫೆಸ್ಟ್ 2026' ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪ್ರಚಾರ ಕಾರ್ಯ, ಕಾರ್ಯಕ್ರಮದ ನಿರ್ವಹಣೆ ಹಾಗೂ ನಿಧಿ ಸಂಗ್ರಹಣೆಯಂತಹ ಪ್ರಮುಖ ಕೆಲಸಗಳನ್ನು ವಿದ್ಯಾರ್ಥಿಗಳೇ ನಡೆಸುತ್ತಿದ್ದು, ಈ ಮೂಲಕ ಈವೆಂಟ್ ಮ್ಯಾನೇಜ್‌ ಮೆಂಟ್ ಮತ್ತು ಸಾಮಾಜಿಕ ಪರಿಣಾಮ ಬೀರುವ ಕೆಲಸಗಳ ಪ್ರಾಯೋಗಿಕ ಅನುಭವವನ್ನು ಪಡೆಯಲಿದ್ದಾರೆ.

ಉದ್ಘಾಟನಾ ನಡಿಗೆ ಸಂದರ್ಭದಲ್ಲಿ ಬ್ರಿಗೇಡ್ ಗ್ರೂಪ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸ್ಪ್ರಿಂಟ್‌ ಫೆಸ್ಟ್ 2026ರ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶ್ರೀಮತಿ ನಿರೂಪಾ ಶಂಕರ್ ಅವರು ಅಧಿಕೃತ ರೇಸ್-ಡೇ ಟಿ-ಶರ್ಟ್ ಮತ್ತು ಪದಕವನ್ನು ಅನಾವರಣಗೊಳಿಸಿದರು. ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಸಾಕಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ ನೋಂದಣಿ ಪ್ರಕ್ರಿಯೆ ಯನ್ನು ಈಗಿನಿಂದಲೇ ಆರಂಭಿಸಲಾಗಿದೆ. ಆಸಕ್ತರು ಶಾಲೆಯ ಅಧಿಕೃತ ಜಾಲತಾಣವಾದ www.brigadeschools.edu.in ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ