ಭಾರತದ ಅತಿ ಕಿರಿಯ ಥಿಯೇಟ್ರಿಕಲ್ ಮಾಯಾಜಾಲ ಕಲಾವಿದನ ಮರುಪ್ರವೇಶ – ಅಮ್ಮ ಮತ್ತು ಮಗನ ‘MAAgic’ ಥಿಯೇಟ್ರಿಕಲ್ ಮ್ಯಾಜಿಕ್ ಶೋ
ಭಾರತದಲ್ಲಿ ವಿರಳವಾಗಿ ಕಾಣಸಿಗುವ ಕಥಾಹಂದರ ಆಧಾರಿತ ಥಿಯೇಟ್ರಿಕಲ್ ಮ್ಯಾಜಿಕ್ ಶೋ ಇದಾ ಗಿದೆ. 75 ನಿಮಿಷಗಳ ಈ ಪ್ರದರ್ಶನವು ಕಥೆ, ಭಾವನೆಗಳು ಮತ್ತು ಪ್ರತಿಯೊಂದು ಭಾರತೀಯ ಮನೆಯೊ ಳಗಿನ ಕಾಣದ ಮ್ಯಾಜಿಕ್ ಅನ್ನು ವೇದಿಕೆಗೆ ತರುತ್ತದೆ.ರಾಷ್ಟ್ರೀಯ ಪ್ರಶಸ್ತಿ ವಿಜೇತ 15 ವರ್ಷದ ಲೇಖಕ ಮತ್ತು ಇಲ್ಯೂಷನಿಸ್ಟ್ ಜಯಂತ್ ಪಟ್ವಾರಿ, ಈಗಾಗಲೇ 200ಕ್ಕೂ ಹೆಚ್ಚು ಮನಮೋಹಕ ಮ್ಯಾಜಿಕ್ ಶೋಗಳನ್ನು ನೀಡಿರುವ ಅವರು, ತಮ್ಮ ತಾಯಿ ಮೋನಿಕಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳ ಲಿದ್ದಾರೆ.
-
ಬೆಂಗಳೂರು: ಒಬ್ಬ ತಾಯಿ ತನ್ನ ಕಿಶೋರ್ ವಯಸ್ಸಿನ ಮಗನಿಗೆ “ಓದಲು ಕುಳಿತುಕೋ” ಎಂದು ಹೇಳಿದಾಗ, ಮಗನು ಪ್ರಶ್ನೆಪತ್ರಿಕೆಯನ್ನು ಮಾಯ ಮಾಡಿ, ಹಾಲನ್ನು ಪತ್ರಿಕೆಯೊಳಗೆ ಅಡಗಿಸಿ, ಕಣ್ಣು ಮುಚ್ಚಿಕೊಂಡೇ ಪಾಠಪುಸ್ತಕ ಓದಿದರೆ ಏನಾಗುತ್ತದೆ? ಇದೇ ಕುತೂಹಲಕಾರಿ ಕಥಾ ಹಂದರದೊಂದಿಗೆ ಬರುತ್ತಿದೆ ‘MAAgic’ – ಅಮ್ಮ ಮತ್ತು ಮಗನ ಥಿಯೇಟ್ರಿಕಲ್ ಮ್ಯಾಜಿಕ್ ಶೋ.
MAAgic 2.0 – Mom & Son Theatrical Magic Show
ಸ್ಥಳ: Jus’Trufs, ಬೆಂಗಳೂರು – ಪ್ರಸಿದ್ಧ ಬೋಟಿಕ್ ಚಾಕೊಲೇಟರಿ, ಡೆಸರ್ಟರಿ ಮತ್ತು ಕಫೆ
ದಿನಾಂಕ: ಶನಿವಾರ, ಮೇ 23th 2026
ಸಮಯ: ಸಂಜೆ 4.00 ಹಾಗೂ 6.30
ಅವಧಿ: 75 ನಿಮಿಷಗಳು
ಶೋನ ವಿಶೇಷತೆ
ಭಾರತದಲ್ಲಿ ವಿರಳವಾಗಿ ಕಾಣಸಿಗುವ ಕಥಾಹಂದರ ಆಧಾರಿತ ಥಿಯೇಟ್ರಿಕಲ್ ಮ್ಯಾಜಿಕ್ ಶೋ ಇದಾಗಿದೆ. 75 ನಿಮಿಷಗಳ ಈ ಪ್ರದರ್ಶನವು ಕಥೆ, ಭಾವನೆಗಳು ಮತ್ತು ಪ್ರತಿಯೊಂದು ಭಾರತೀಯ ಮನೆಯೊಳಗಿನ ಕಾಣದ ಮ್ಯಾಜಿಕ್ ಅನ್ನು ವೇದಿಕೆಗೆ ತರುತ್ತದೆ.ರಾಷ್ಟ್ರೀಯ ಪ್ರಶಸ್ತಿ ವಿಜೇತ 15 ವರ್ಷದ ಲೇಖಕ ಮತ್ತು ಇಲ್ಯೂಷನಿಸ್ಟ್ ಜಯಂತ್ ಪಟ್ವಾರಿ, ಈಗಾಗಲೇ 200ಕ್ಕೂ ಹೆಚ್ಚು ಮನಮೋಹಕ ಮ್ಯಾಜಿಕ್ ಶೋಗಳನ್ನು ನೀಡಿರುವ ಅವರು, ತಮ್ಮ ತಾಯಿ ಮೋನಿಕಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಕಥೆಯ ಒಂದು ನೋಟ
ಈ ಕಥೆ ಒಂದು ಮಧ್ಯಮ ವರ್ಗದ ಭಾರತೀಯ ಮನೆಯ ಸೌಹಾರ್ದಭರಿತ ವಾತಾವರಣದಲ್ಲಿ ನಡೆಯುತ್ತದೆ. ಬಾಸ್ಕೆಟ್‌ಬಾಲ್ ಆಟದಿಂದ ತಡವಾಗಿ ಮನೆಗೆ ಬರುವ ಮಗನನ್ನು ತಾಯಿ ಬೈಯುವುದರಿಂದ ಶೋ ಆರಂಭವಾಗುತ್ತದೆ. “ಇದು ಏನು ಗಜಬಜ?” ಎಂದು ಪುಸ್ತಕಗಳನ್ನು ಹಿಡಿದು ಮನೆಗೆ ಬರುವ ತಾಯಿ ಹೇಳುತ್ತಾಳೆ. ಮನೆಯಲ್ಲೆಲ್ಲ ಚಪ್ಪಲಿಗಳು ಚದುರಿರುತ್ತವೆ. ಅವನ್ನು ಮುಟ್ಟಿದ ಕ್ಷಣವೇ ಹಾವು ಕಾಣಿಸಿಕೊಂಡು ತಾಯಿ ಬೆಚ್ಚಿಬೀಳುತ್ತಾಳೆ. “ಅಯ್ಯೋ! ಜಯಂತ್?! ಜಯಂತ್????” ಎಂದು ಕರೆದಾಳೆ.
ಅಷ್ಟರಲ್ಲಿ ಬರುವ ಜಯಂತ್ ತನ್ನ ಬೆರಳ ತುದಿಯಿಂದ ಒಂದು ಗುಲಾಬಿ ಹೂ ತೋರಿಸಿ,
“ನೋಡಿ ಅಮ್ಮ, ಇದು ನಿಮಗಾಗಿ” ಎಂದು ಹೇಳುತ್ತಾನೆ.
ಆದರೆ ತಾಯಿ ಹೂವನ್ನು ತೆಗೆದುಕೊಳ್ಳಲು ಹೋಗುತ್ತಿದ್ದಂತೆ ಅದು ಕಾನ್ಫೆಟ್ಟಿಯಾಗಿ ಮಾಯವಾಗಿ ಮತ್ತಷ್ಟು ಗಜಬಜ ಸೃಷ್ಟಿಸುತ್ತದೆ. “ಈ ಮನೆಯೊಳಗೆ ನೀನು ಸಂಪೂರ್ಣ ನಗರದ ಕಸವೇ ತಂದು ಹಾಕಿದ್ದೀಯ!” ಎಂದು ತಾಯಿ ಕೋಪಗೊಳ್ಳುತ್ತಾಳೆ.
ಆ ಬಳಿಕ ಆರಂಭವಾಗುವುದು ಮ್ಯಾಜಿಕ್ ಮತ್ತು ಹಾಸ್ಯದ ಮೇಳ – ಸ್ಲೈಟ್ ಆಫ್ ಹ್ಯಾಂಡ್, ಮೆಂಟಲಿಸಂ ಹಾಗೂ ಥಿಯೇಟ್ರಿಕಲ್ ಕಥಾಹಂದರಗಳ ಸಂಯೋಜನೆ. ತಾಯಿ-ಮಗನ ಪ್ರೀತಿ, ಗಲಾಟೆ ಮತ್ತು ಮನರಂಜನೆಯ ಕ್ಷಣಗಳನ್ನು ಇದು ಜೀವಂತಗೊಳಿಸುತ್ತದೆ.
ಪ್ರೇಕ್ಷಕರನ್ನು ನಿಶ್ಚಲಗೊಳಿಸುವ ಕ್ಷಣ
ತಾಯಿ ಮಗನಿಗೆ ಪರೀಕ್ಷೆಗೆ ಓದಲು ಒತ್ತಾಯಿಸುತ್ತಾಳೆ. ಆಗ ಜಯಂತ್ ಸವಾಲು ಹಾಕುತ್ತಾನೆ:
“ನಾನು ಕಣ್ಣು ಮುಚ್ಚಿಕೊಂಡೇ ಓದಬಹುದು!”ವೇದಿಕೆಯಲ್ಲಿ ಅವನ ಕಣ್ಣುಗಳನ್ನು ಕಟ್ಟಲಾಗು ತ್ತದೆ. ಪ್ರೇಕ್ಷಕರು ಬೋರ್ಡ್ ಮೇಲೆ ಪದಗಳು, ಅಂಕೆಗಳು ಮತ್ತು ಚಿಹ್ನೆಗಳನ್ನು ಬರೆಯುತ್ತಾರೆ. ಜಯಂತ್ ಯಾವುದೇ ಸಂಶಯವಿಲ್ಲದೆ ಪ್ರತಿಯೊಂದನ್ನೂ ಸರಿಯಾಗಿ ಓದುತ್ತಾನೆ. ಆ ಕ್ಷಣದಲ್ಲಿ ಸಂಪೂರ್ಣ ಸಭಾಂಗಣ ನಿಶ್ಶಬ್ದವಾಗುತ್ತದೆ.
ಈ ಶೋ ಯಾಕೆ ರೂಪಿಸಲಾಯಿತು?
‘MAAgic’ ಕೇವಲ ಮ್ಯಾಜಿಕ್ ಟ್ರಿಕ್‌ಗಳ ಸರಮಾಲೆಯಲ್ಲ. ಇದು ಕಥೆ, ಪಾತ್ರಗಳು ಮತ್ತು ಪ್ರತಿ ಯೊಂದು ಭಾರತೀಯ ಕುಟುಂಬಕ್ಕೂ ಹತ್ತಿರವಾದ ಅನುಭವಗಳನ್ನು ಒಳಗೊಂಡ ಥಿಯೇಟ್ರಿಕಲ್ ಮ್ಯಾಜಿಕ್ ಪ್ರದರ್ಶನ.
ಹಿಂದಿನ ವರ್ಷದ ಎಲ್ಲಾ ಟಿಕೆಟ್‌ಗಳು ಸಂಪೂರ್ಣ ಮಾರಾಟವಾದ ಪ್ರದರ್ಶನವು, ಜನರು ನಿಜವಾದ ಕಥೆಗಳು ಮತ್ತು ಕುಟುಂಬದ ಭಾವನೆಗಳಿಗೆ ಸಂಪರ್ಕ ಹೊಂದುವ ಕಲೆಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಸಾಬೀತುಪಡಿಸಿತು.
ಹೊಸ ತಲೆಮಾರಿಗಾಗಿ ರೂಪಿಸಲಾದ ಈ ಪ್ರದರ್ಶನವು ಪ್ರತಿಯೊಂದು ಮನೆಯಲ್ಲೂ ಅಡಗಿರುವ ದಿನನಿತ್ಯದ ಮ್ಯಾಜಿಕ್ ಅನ್ನು ಸಂಭ್ರಮಿಸುತ್ತದೆ.
15 ವರ್ಷದ ಜಯಂತ್ ಪಟ್ವಾರಿ ಈಗಾಗಲೇ 220 ಪುಟಗಳ ‘The COVID Thief’ ಪುಸ್ತಕವನ್ನು ಪ್ರಕಟಿಸಿದ್ದು, ಕೋವಿಡ್ ಅವಧಿಯಲ್ಲಿ ಸಮುದಾಯ ಗ್ರಂಥಾಲಯವನ್ನೂ ಆರಂಭಿಸಿದ್ದರು. ಅವರು The Telegraph ಪತ್ರಿಕೆಗೆ ವರದಿ ಮಾಡಿರುವ ಅನುಭವವೂ ಹೊಂದಿದ್ದಾರೆ.
ಅವರಿಗೆ Young Indian ಮತ್ತು CII ನೀಡುವ All-India Kidpreneur Award ಹಾಗೂ NIVE at TAL-HUNT 2024 ವತಿಯಿಂದ Dream Entrepreneur Award 2024 ಪ್ರಶಸ್ತಿಗಳು ಲಭಿಸಿವೆ.
ಅಮೆರಿಕದ International Brotherhood of Magicians ಸದಸ್ಯರಾಗಿರುವ ಜಯಂತ್, ಡ್ರೋನ್ ಮ್ಯಾಜಿಕ್, ಸ್ಟೇಜ್ ಇಲ್ಯೂಷನ್ ಹಾಗೂ ಸ್ಲೈಟ್ ಆಫ್ ಹ್ಯಾಂಡ್ ಪ್ರದರ್ಶನಗಳ ಮೂಲಕ ಭಾರತದ ಪ್ರಮುಖ ಉತ್ಸವಗಳಲ್ಲಿ ಮಿಂಚುತ್ತಿದ್ದಾರೆ.