ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕದಲ್ಲಿ ಕಿಂಗ್‌ಫಿಷರ್ ಪೋರ್ಟ್‌ಫೋಲಿಯೊ ಬೆಲೆ ಇಳಿಕೆ; ರಾಜ್ಯ ಅಬಕಾರಿ ನೀತಿ ಬದಲಾವಣೆಯ ಬಳಿಕ ಯುನೈಟೆಡ್ ಬ್ರೂವರೀಸ್ ಘೋಷಣೆ

“ಬಿಯರ್ ಮೇಲಿನ ತೆರಿಗೆ ಇಳಿಕೆಗೆ ನೆರವಾದ ಎಐಬಿ ಆಧಾರಿತ ತೆರಿಗೆ ವ್ಯವಸ್ಥೆ ಸೇರಿದಂತೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಇತ್ತೀಚಿನ ಅಬಕಾರಿ ಸುಧಾರಣೆಯನ್ನು ನಾವು ಸ್ವಾಗತಿಸುತ್ತೇವೆ. ವಿಭಾಗದ ದೀರ್ಘಕಾಲೀನ ಬೆಳವಣಿಗೆಗೆ ಬದ್ಧವಾಗಿರುವ ಸಂಸ್ಥೆಯಾಗಿ, ಇದರ ಲಾಭವನ್ನು ಗ್ರಾಹಕರಿಗೆ ನೀಡುತ್ತಿರು ವುದು ಸಂತಸದ ವಿಷಯ

ಕರ್ನಾಟಕದಲ್ಲಿ ಕಿಂಗ್‌ಫಿಷರ್ ಪೋರ್ಟ್‌ಫೋಲಿಯೊ ಬೆಲೆ ಇಳಿಕೆ

-

Profile
Ashok Nayak May 28, 2026 3:13 PM

ಬೆಂಗಳೂರು: ಹೈನ್‌ಕೆನ್ ಕಂಪನಿಯ ಅಂಗ ಸಂಸ್ಥೆಯಾದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್), ಕರ್ನಾಟಕದಲ್ಲಿ ತನ್ನ ಬಿಯರ್ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಮಾಡುವುದಾಗಿ ಘೋಷಿಸಿದೆ. ಸಾಮಾನ್ಯ ಹಾಗೂ ಪ್ರೀಮಿಯಂ ವಿಭಾಗಗಳ ಉತ್ಪನ್ನಗಳ ಬೆಲೆಗಳನ್ನು ಕಡಿತ ಗೊಳಿಸಲಾಗಿದ್ದು, ಕಿಂಗ್‌ಫಿಷರ್ ಪ್ರೀಮಿಯಂ, ಕಿಂಗ್‌ಫಿಷರ್ ಅಲ್ಟ್ರಾ ಹಾಗೂ ಹೈನ್‌ಕೆನ್® ಸೇರಿದಂತೆ ಜನಪ್ರಿಯ ಬ್ರ್ಯಾಂಡ್‌ಗಳು ರಾಜ್ಯದ ಗ್ರಾಹಕರಿಗೆ ಇನ್ನಷ್ಟು ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ.

ಇದನ್ನೂ ಓದಿ: Dr Vijay Darda Column: ಯಾರಾದರೂ ಜಿರಳೆ ಸಾಕುವುದನ್ನು ನೋಡಿದ್ದೀರಾ ?

ಈ ಕುರಿತು ಕಂಪನಿಯ ವಕ್ತಾರರು ಮಾತನಾಡಿ, “ಬಿಯರ್ ಮೇಲಿನ ತೆರಿಗೆ ಇಳಿಕೆಗೆ ನೆರವಾದ ಎಐಬಿ ಆಧಾರಿತ ತೆರಿಗೆ ವ್ಯವಸ್ಥೆ ಸೇರಿದಂತೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಇತ್ತೀಚಿನ ಅಬಕಾರಿ ಸುಧಾರಣೆಯನ್ನು ನಾವು ಸ್ವಾಗತಿಸುತ್ತೇವೆ. ವಿಭಾಗದ ದೀರ್ಘಕಾಲೀನ ಬೆಳವಣಿಗೆಗೆ ಬದ್ಧವಾಗಿರುವ ಸಂಸ್ಥೆಯಾಗಿ, ಇದರ ಲಾಭವನ್ನು ಗ್ರಾಹಕರಿಗೆ ನೀಡುತ್ತಿರುವುದು ಸಂತಸದ ವಿಷಯ. ಇದರಿಂದ ಬಿಯರ್ ಇನ್ನಷ್ಟು ಕೈಗೆಟುಕುವ ದರದಲ್ಲಿ ಲಭ್ಯವಾಗುವುದರ ಜೊತೆಗೆ ಜವಾಬ್ದಾರಿಯುತ ಬಳಕೆ ಯನ್ನು ಉತ್ತೇಜಿಸುವ ನಮ್ಮ ಬದ್ಧತೆಯೂ ಮುಂದುವರಿಯಲಿದೆ,” ಎಂದು ಹೇಳಿದರು.

ಕರ್ನಾಟಕದಲ್ಲಿ ಪರಿಷ್ಕೃತ ಗ್ರಾಹಕ ಬೆಲೆಗಳು: 650 ಮಿ.ಲೀ. ಕಿಂಗ್‌ ಫಿಷರ್‌ ಪ್ರೀಮಿಯಂ 185 ರಿಂದ 110, ಕಿಂಗ್‌ ಫಿಷರ್‌ ಪ್ರೀಮಿಯಂ 225 ರಿಂದ 150, ಹೈನ್‌ಕೆನ್ ಸಿಲ್ವರ್ 270ರಿಂದ 200, ಹೈನ್‌ಕೆನ್ ಒರಿಜಿನಲ್l 270 ರಿಂದ 200 ವರೆಗೆ ಇಳಿಸಲಾಗಿದೆ.