ʼವಿಶ್ವವಾಣಿʼಯಂತೆ ʼಲೋಕಧ್ವನಿʼಯೂ ಬೆಳಗಲಿ
ವಿಶ್ವೇಶ್ವರ ಭಟ್ಟರು ಉತ್ತರ ಕನ್ನಡದ ಪ್ರಮುಖ ಪತ್ರಿಕೆಯಾಗಿರುವ ಲೋಕಧ್ವನಿಯ ಸಾರಥ್ಯ ವಹಿಸಿಕೊಂಡ ಬಳಿಕ ಈ ಪತ್ರಿಕೆಯನ್ನು ಕೊಪ್ಪಳಕ್ಕೂ ವಿಸ್ತರಿಸಿದ್ದಾರೆ. ಶೀಘ್ರದಲ್ಲಿಯೇ ಮೈಸೂರಿನಲ್ಲಿಯೂ ಆರಂಭಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ಲೋಕಧ್ವನಿ ಜಿಲ್ಲಾಮಟ್ಟದ ಪತ್ರಿಕೆಯಾಗಿ ಉಳಿದಿಲ್ಲ. ಬದಲಿಗೆ ಅದೂ ಸಹ ರಾಜ್ಯಮಟ್ಟದ ಪತ್ರಿಕೆ ಯಾಗುವತ್ತ ಸಾಗುತ್ತದೆ.
-
ಪತ್ರಿಕೆಗಳು ವೈಚಾರಿಕತೆ, ವೈಜ್ಞಾನಿಕತೆಗೆ ಒತ್ತು ನೀಡಬೇಕು, ಸಮಾಜಮುಖಿ ಕೆಲಸಗಳಿಗೆ ಧ್ವನಿಯಾಗಬೇಕು
ಲೋಕಧ್ವನಿ ಹೆಮ್ಮೆಯ ಸಾಧಕ-2026 ಪ್ರಶಸ್ತಿ ಪ್ರದಾನ ಕಾರ್ಯಕ ಮದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮತ
ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ವಿಶ್ವೇಶ್ವರ ಭಟ್ಟರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಉತ್ತರ ಕನ್ನಡ ಮೂಲದ ಲೋಕ ಧ್ವನಿ ಪತ್ರಿಕೆ ವಿಶ್ವವಾಣಿಯಂತೆ ರಾಜ್ಯಮಟ್ಟದ ಪತ್ರಿಕೆಯಾಗಿ ಬೆಳೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.
ಲೋಕಧ್ವನಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವವಾಣಿ, ವಿಶ್ವೇಶ್ವರ ಭಟ್ಟರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. 2016ರಲ್ಲಿ ಮರುಲೋಕಾರ್ಪಣೆಗೊಂಡ ವಿಶ್ವವಾಣಿ ದಿನಪತ್ರಿಕೆ ಯನ್ನು, ಕಳೆದ ವರ್ಷ ಲೋಕಾರ್ಪಣೆಗೊಂಡ ಪ್ರವಾಸಿ ಪ್ರಪಂಚ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದನ್ನು ನೆನಪಿಸಿಕೊಂಡ ಸಿದ್ದರಾಮಯ್ಯ ಅವರು ಲೋಕಧ್ವನಿಯೂ ರಾಜ್ಯಮಟ್ಟದ ಪತ್ರಿಕೆಯಾಗಿ ಬೆಳೆಯಲಿ, ಅದನ್ನು ತಾವೇ ಬಿಡುಗಡೆ ಮಾಡುವಂತಾಗಲಿ ಎಂದು ಅಭಿಮಾನದ ಮಾತುಗಳನ್ನಾಡಿದರು.
ವಿಶ್ವವಾಣಿ ಹಾಗೂ ಪ್ರವಾಸಿ ಪ್ರಪಂಚ ಬಿಡುಗಡೆಯಾಗುವ ಸಮಯದಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದೆ. 2016ರಲ್ಲಿ ವಿಶ್ವವಾಣಿ ಪತ್ರಿಕೆಯನ್ನು ಉದ್ಘಾಟನೆ ಮಾಡಿದ್ದೆ. ಈ ಪತ್ರಿಕೆ ರಾಜ್ಯದಲ್ಲಿ ಪ್ರಮುಖ ಪತ್ರಿಕೆಯಾಗಿ ಹೊರಹೊಮ್ಮಿದೆ. ವಿಶ್ವೇಶ್ವರ ಭಟ್ ಅವರು ವಿಶೇಷ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಅವರು ಆರಂಭಿಸಿರುವ ಪ್ರವಾಸಿ ಪ್ರಪಂಚ ವಾರ ಪತ್ರಿಕೆಯನ್ನೂ ನಾನೇ ಉದ್ಘಾಟಿಸಿದೆ.
ವಿಶ್ವೇಶ್ವರ ಭಟ್ಟರು ಉತ್ತರ ಕನ್ನಡದ ಪ್ರಮುಖ ಪತ್ರಿಕೆಯಾಗಿರುವ ಲೋಕಧ್ವನಿಯ ಸಾರಥ್ಯ ವಹಿಸಿಕೊಂಡ ಬಳಿಕ ಈ ಪತ್ರಿಕೆಯನ್ನು ಕೊಪ್ಪಳಕ್ಕೂ ವಿಸ್ತರಿಸಿದ್ದಾರೆ. ಶೀಘ್ರದಲ್ಲಿಯೇ ಮೈಸೂರಿನಲ್ಲಿಯೂ ಆರಂಭಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ಲೋಕಧ್ವನಿ ಜಿಲ್ಲಾಮಟ್ಟದ ಪತ್ರಿಕೆಯಾಗಿ ಉಳಿದಿಲ್ಲ. ಬದಲಿಗೆ ಅದೂ ಸಹ ರಾಜ್ಯಮಟ್ಟದ ಪತ್ರಿಕೆ ಯಾಗುವತ್ತ ಸಾಗುತ್ತದೆ.
ಸಾಗುವುದಷ್ಟೇ ಅಲ್ಲದೇ, ಲೋಕಧ್ವನಿಯು ರಾಜ್ಯ ಪತ್ರಿಕೆಯಾಗುವ ಅರ್ಹತೆ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವೇಶ್ವರ ಭಟ್ಟರು ಮುಂದಿನ ದಿನದಲ್ಲಿ ಇನ್ನಷ್ಟು ಪತ್ರಿಕೆಗಳನ್ನು ಹೊರತರಬೇಕು. ಆ ಪತ್ರಿಕೆಗಳನ್ನು ನಾನೇ ಬಿಡುಗಡೆ ಮಾಡುತ್ತೇನೆ ಎಂದರು.
ಕಂದಾಚಾರಗಳಿಗೆ ಹೆಚ್ಚು ಮಹತ್ವ ನೀಡಬಾರದು: ಮಾಧ್ಯಮಗಳು ಕಂದಾಚಾರ, ಮೌಢ್ಯಗಳಿಗೆ ಹೆಚ್ಚು ಒತ್ತು ನೀಡದೇ ಸಮಾಜದಲ್ಲಿ ವೈಚಾರಿಕತೆ ಮತ್ತು ವೈeನಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು. ಪತ್ರಕರ್ತರಾಗಿ ವಸ್ತುನಿಷ್ಠರಾಗಿ ಸತ್ಯವನ್ನು ಹೇಳುವ ಕೆಲಸ ಮಾಡಬೇಕು. ಸಮಾಜಕ್ಕೆ ಉಪಯೋಗವಲ್ಲದ ವಿಚಾರಗಳಿಗೆ ಮಹತ್ವವನ್ನು ನೀಡಬಾರದು. ಒಮ್ಮೆ ತಮ್ಮ ಕಾರಿನ ಮೇಲೆ ಕಾಗೆಯೊಂದು ಕೂತಿದ್ದಕ್ಕೆ ಪುಕಾರು ಎಬ್ಬಿಸಲಾಯಿತು. ಅಂತೆಯೇ ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು ಭೇಟಿ ಕೊಟ್ಟರೆ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಆದರೆ ಈ ಘಟನೆಯ ನಂತರವೂ ನಾನು ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿಯೇ ಮುಂದುವರಿದಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.
ಹುಟ್ಟು ಆಕಸ್ಮಿಕ, ಸಾವು ಖಚಿತ, ಹುಟ್ಟುಸಾವುಗಳ ನಡುವೆ ನಾವು ಸಾರ್ಥಕತೆ ಕಂಡು ಕೊಳ್ಳಬೇಕು. ಯಾವುದೇ ಜಾತಿಧರ್ಮದಲ್ಲಿ ಹುಟ್ಟಿದರೂ ನಾವೆಲ್ಲರೂ ಮನುಷ್ಯರಾಗಿ ಬಾಳುವುದು ಮುಖ್ಯ. ಯಾವ ಜಾತಿಧರ್ಮದ ಆಧಾರದ ಮೇಲೆ ಮನುಷ್ಯತ್ವವನ್ನು ಅಳೆಯ ಬಾರದು. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಜಾತಿಧರ್ಮದ ಆಧಾರದ ಮೇಲೆ ಸಮಾಜ ಒಡೆಯಬಾರದು ಎಂದರು.
ಶಿಕ್ಷಣ ಒಂದು ವರ್ಗಕ್ಕೆ ಸೀಮಿತವಲ್ಲ: ಪತ್ರಕರ್ತರು ಮೌಢ್ಯಗಳಿಗೆ ಒತ್ತು ನೀಡದೆ ಸಮಾಜದಲ್ಲಿ ವೈಚಾರಿಕತೆ, ವೈeನಿಕತೆಯನ್ನು ಪ್ರೋತ್ಸಾಹಿಸಬೇಕು. ಇತ್ತೀಚಿನ ದಿನದಲ್ಲಿ ವಿದ್ಯಾವಂತರು ಕಂದಾಚಾರ, ಮೌಢ್ಯವನ್ನು ನಂಬುವುದು ಹೆಚ್ಚಾಗುತ್ತಿದೆ. ಜಾತಿವ್ಯವಸ್ಥೆ ಯಲ್ಲಿ ಚಲನೆಯಿಲ್ಲ. ಶಿಕ್ಷಣ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ, ಸಮಾನ ಅವಕಾಶ ದೊರೆತರೆ ಎಲ್ಲರೂ ಉತ್ತಮ ಸಾಧನೆಗಳನ್ನು ಮಾಡುತ್ತಾರೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿ ಬಂದಾಗಲೇ ಜಾತಿ ವ್ಯವಸ್ಥೆ ತೊಲಗುತ್ತದೆ. ಸಮಾನ ಅವಕಾಶ ಮತ್ತು ಪ್ರಯತ್ನಗಳಿದ್ದರೆ ಸಮಾಜದ ಅಶಕ್ತರು ಅಭಿವೃದ್ಧಿ ಹೊಂದುತ್ತಾರೆ. ಪತ್ರಿಕೆಗಳು ಸಮಾಜ ವನ್ನು ತಿದ್ದುವ ಕೆಲಸ ಮಾಡುತ್ತಾ, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದರು.
ಕೆಲವು ವೈದ್ಯರು, ಎಂಜಿನಿಯರ್, ವಿಜ್ಞಾನಿಗಳು ಈಗಲೂ ‘ಕರ್ಮ’, ‘ಹಣೆಬರಹ’ದ ಮೇಲೆ ನಂಬಿಕೆ ಇಟ್ಟಿದ್ದಾರೆ. ದೇವರು ಯಾರಿಗಾದರೂ ಹಣೆಯಲ್ಲಿ ಬರೆದಿದ್ದಾನೆಯೇ? ನಮ್ಮ ಮನೆ ಯಲ್ಲಿ ಆರು ಜನ ಮಕ್ಕಳಲ್ಲಿ ನಾನೊಬ್ಬನೇ ಪದವಿ ಪಡೆದಿರುವುದು. ಇನ್ನುಳಿದವರೆಲ್ಲರೂ ಅವಿದ್ಯಾವಂತರು. ಹಾಗಾದರೆ, ದೇವರು ನನ್ನ ಹಣೆಯಲ್ಲಿ ಮಾತ್ರ ಮುಖ್ಯಮಂತ್ರಿ ಯಾಗುವಂತೆ ಬರೆದಿದ್ದನೇ? ಇಂತಹ ಸುದ್ದಿಗಳಿಗೆ ಮಾಧ್ಯಮಗಳು ಮಹತ್ವ ನೀಡಬಾರದು. ಅವಕಾಶ ಹಾಗೂ ಕಠಿಣ ಶ್ರಮದಿಂದ ಮಾತ್ರ ಮೇಲೆ ಬರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಪಟ್ಟಭದ್ರ ಹಿತಾಸಕ್ತರು ವ್ಯವಸ್ಥಿತವಾಗಿ ಶಿಕ್ಷಣದಿಂದ ಶೂದ್ರರನ್ನು ಹೊರಗಿಟ್ಟರು. ಮಂತ್ರ ಕೇಳಿದರೆ ಕಾದ ಶೀಸವನ್ನು ಕಿವಿಗೆ ಹಾಕುವ ಕಠೋರ ಪದ್ಧತಿಯಿತ್ತು. ಯಾವುದೇ ವ್ಯಕ್ತಿಗೆ ಅವಕಾಶ ಸಿಗದೇ, ಶಿಕ್ಷಣದಿಂದ ವಂಚಿತವಾದರೆ ಮುಂದೆ ಬರಲು ಹೇಗೆ ಸಾಧ್ಯ? ಮನೆಯಲ್ಲಿ ಒಬ್ಬರು ಪದವಿ ಪಡೆದರೆ ಮುಂದಿನ ಪೀಳಿಗೆ ವಿದ್ಯಾವಂತರಾಗುವುದು ಸುಲಭ.
- ಸಿದ್ದರಾಮಯ್ಯ ಮುಖ್ಯಮಂತ್ರಿ
ಭಟ್ಟರು ಕ್ರಿಯಾಶೀಲ ವ್ಯಕ್ತಿ
ವಿಶ್ವೇಶ್ವರ ಭಟ್ಟರು ಕೇವಲ ಪತ್ರಕರ್ತರಾಗಿ ಮಾತ್ರ ಇರದೇ, ನಾಡಿನ ಶ್ರೇಷ್ಠ ಬರಹಗಾರ ರಾಗಿದ್ದಾರೆ, ಪತ್ರಿಕೋದ್ಯಮಿಯಾಗಿದ್ದಾರೆ. ಇದಕ್ಕೂ ಮಿಗಿಲಾಗಿ ಒಬ್ಬ ಅದ್ಭುತ ಪ್ರವಾಸಿಗ ರಾಗಿದ್ದಾರೆ. ಈಗಾಗಲೇ 110 ದೇಶಗಳನ್ನು ಸುತ್ತಿರುವ ಅವರು, ಕೇವಲ ದೇಶ ಸುತ್ತುವುದಷ್ಟೇ ಅಲ್ಲದೇ, ಅಲ್ಲಿನ ಕಲೆ, ಸಂಸ್ಕೃತಿಯ ಬಗ್ಗೆ ತಿಳಿಸುತ್ತಿದ್ದಾರೆ. 110 ದೇಶಗಳನ್ನು ಸುತ್ತಿರುವ ವಿಶ್ವೇಶ್ವರ ಭಟ್ಟರು ಕೆಲವೇ ವರ್ಷಗಳಲ್ಲಿ ವಿಶ್ವದಲ್ಲಿರುವ ಎಲ್ಲ ದೇಶಗಳ ಪ್ರಯಾಣವನ್ನು ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
ವಿಶ್ವವಾಣಿ ಸಮೂಹದ 'ಲೋಕಧ್ವನಿ' ರಾಜ್ಯ ಮಟ್ಟದ ಪತ್ರಿಕೆಯಾಗಲಿ: ಸಿದ್ದರಾಮಯ್ಯ ಆಶಯ
ಸಿದ್ದರಾಮಯ್ಯ ಭಾಷಣದ ಝಲಕ್
ಜಾತಿ ಹಾಗೂ ಹುಟ್ಟಿನಿಂದ ಯೋಗ್ಯತೆ ಅಳೆಯಬಾರದು; ಸಮಾನ ಅವಕಾಶ ಸಿಕ್ಕರೆ ಎಲ್ಲರೂ ಉತ್ತಮ ಸಾಧನೆ ಮಾಡುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಕೆಲ ಜಿಲ್ಲೆ ಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಬಂದಿದ್ದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿವೆ. ನಾನು ಮತ್ತು ಬಸವರಾಜ ಹೊರಟ್ಟಿ ಅವರು ರಾಜಕೀಯ ಮೀರಿ ವೈಯಕ್ತಿಕ ನೆಲೆಯಲ್ಲಿ ಆತ್ಮೀಯರು, ಸ್ನೇಹಿತರು. ಹುಟ್ಟು ಆಕಸ್ಮಿಕ, ಸಾವು ಖಚಿತ; ಹುಟ್ಟು ಸಾವಿನ ನಡುವೆ ಜೀವನ ಸಾರ್ಥಕತೆಯನ್ನು ಗಮನಿಸಬೇಕು. ಯಾವ ಜಾತಿ, ಧರ್ಮದಲ್ಲಿ ಹುಟ್ಟಿದ್ದರೂ ಮನುಷ್ಯನಾಗಿ ಬಾಳುವುದು ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ ಜಾತಿ, ಧರ್ಮದ ಆಧಾರದಲ್ಲಿ ಮನುಷ್ಯತ್ವವನ್ನು ಮರೆಯಬಾರದು; ಯಾವ ಜಾತಿ,ಧರ್ಮವೂ ದ್ವೇಷ ಮಾಡಬೇಕೆಂದು ಹೇಳಿಲ್ಲ ಕೆಲ ಮಾಧ್ಯಮಗಳು ಗಂಡ-ಹೆಂಡತಿ ಜಗಳವನ್ನೇ ತೋರಿಸುತ್ತಾರೆ; ಇಂತಹ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವೇನಿದೆ? ಸಮಾಜಕ್ಕೆ ಉಪಯೋಗವಿಲ್ಲದ ಸುದ್ದಿಗಳಿಗೆ ಮಾಧ್ಯಮಗಳು ಹೆಚ್ಚು ಮಹತ್ವ ನೀಡಬಾರದು. ಸಮಸ್ಯೆಗಳಿಗೆ ಸ್ಪಂದಿಸಬೇಕು. ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನೇ ಮಾಧ್ಯಮಗಳು ದೊಡ್ಡ ವಿಷಯ ಮಾಡಿದ್ದವು; ಇಂತಹ ಕಂದಾಚಾರಕ್ಕೆ ಅವಕಾಶ ನೀಡಬಾರದು ಚಾಮರಾಜನಗರಕ್ಕೆ ಹೋದರೆ ಸಿಎಂ ಸ್ಥಾನ ಹೋಗುತ್ತದೆ ಎನ್ನುತ್ತಾರೆ; ಆದರೆ ನಾನು 15 ಬಾರಿ ಹೋಗಿದ್ದೇನೆ. ಏನೂ ಬದಲಾವಣೆ ಆಗಿಲ್ಲ ರಾಮಾಯಣ ಬರೆದ ವಾಲ್ಮೀಕಿ, ಮಹಾಭಾರತ ಬರೆದ ವ್ಯಾಸ, ಸಂವಿಧಾನ ನೀಡಿದ ಅಂಬೇಡ್ಕರ್ ಯಾವ ಜಾತಿಯವರು?