Namma Metro Extension: ತಮಿಳುನಾಡು ಗಡಿ ತನಕ ಮೆಟ್ರೋ ವಿಸ್ತರಣೆ: ಬೊಮ್ಮಸಂದ್ರ ನಿಲ್ದಾಣದಿಂದ ಅತ್ತಿಬೆಲೆವರೆಗೆ 10.5 ಕಿಮೀ ಲೈನ್‌ಗೆ ಒಪ್ಪಿಗೆ
ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ನಿರ್ಮಾಣವಾಗಲಿರುವ ಈ ಹೊಸ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ಇರಲಿವೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸಮೀಪದಲ್ಲಿ ಈ ಕಾರಿಡಾರ್ ನಿರ್ಮಾಣಗೊಳ್ಳಲಿದ್ದು, ಅನೇಕಲ, ಅತ್ತಿಬೆಲೆ ಹಾಗೂ ಕರ್ನಾಟಕ-ತಮಿಳುನಾಡು ಗಡಿ ಭಾಗದ ಪ್ರಯಾಣಿಕರಿಗೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ.
-
ಬೆಂಗಳೂರು: ಬೆಂಗಳೂರಿನ ಮೆಟ್ರೋ ಜಾಲವನ್ನು ತಮಿಳುನಾಡು ಗಡಿಯವರೆಗೆ ವಿಸ್ತರಿಸುವ ಮಹತ್ವದ ಯೋಜನೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು, ಹಳದಿ ಮಾರ್ಗದ ಬೊಮ್ಮಸಂದ್ರ ನಿಲ್ದಾಣದಿಂದ ಅತ್ತಿಬೆಲೆವರೆಗೆ ಸುಮಾರು 10.5 ಕಿಲೋಮೀಟರ್ ಉದ್ದದ ಎಲಿವೇಟೆಡ್ ಮೆಟ್ರೋ ಕಾರಿಡಾರ್ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದೆ.
ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ನಿರ್ಮಾಣವಾಗಲಿರುವ ಈ ಹೊಸ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ಇರಲಿವೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸಮೀಪದಲ್ಲಿ ಈ ಕಾರಿಡಾರ್ ನಿರ್ಮಾಣಗೊಳ್ಳಲಿದ್ದು, ಅನೇಕಲ, ಅತ್ತಿಬೆಲೆ ಹಾಗೂ ಕರ್ನಾಟಕ-ತಮಿಳುನಾಡು ಗಡಿ ಭಾಗದ ಪ್ರಯಾಣಿಕರಿಗೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ.
ಬೊಮ್ಮಸಂದ್ರದಿಂದ ಮುಂದುವರಿಯುವ ಮೆಟ್ರೋ ಮಾರ್ಗದಲ್ಲಿ ನಾರಾಯಣ ಹೃದಯಾಲಯ, ಚಂದಾಪುರ ವೃತ್ತ, ಹಳೆ ಚಂದಾಪುರ, ತಿರುಮಗೊಂಡನಹಳ್ಳಿ, ಬಾಲಗಾರನಹಳ್ಳಿ, ಯಾದವನಹಳ್ಳಿ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಅತ್ತಿಬೆಲೆ ಹಾಗೂ ಅತ್ತಿಬೆಲೆ ಟರ್ಮಿನಲ ಸೇರಿದಂತೆ 9 ನಿಲ್ದಾಣ ಗಳನ್ನು ನಿರ್ಮಿಸುವ ಪ್ರಸ್ತಾವವಿದೆ.
ಪ್ರಸ್ತುತ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸುಮಾರು 19 ಕಿ.ಮೀ ಉದ್ದದ ಹಳದಿ ಮಾರ್ಗ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಂದ ಅತ್ತಿಬೆಲೆವರೆಗೆ ಈ ವಿಸ್ತರಣೆ ಕೈಗೊಳ್ಳಲಾಗುತ್ತಿದೆ. ಯೋಜನೆ ಜಾರಿಯಾದರೆ ಅನೇಕಲ್ ಭಾಗದ ಜನರು ಹಾಗೂ ತಮಿಳುನಾಡು ಗಡಿಯತ್ತ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಪ್ರಸ್ತಾವಿತ ನಿಲ್ದಾ ಣಗಳು ನಾರಾಯಣ ಹೃದಯಾಲಯ, ಚಂದಾಪುರ ವೃತ್ತ, ಹಳೆ ಚಂದಾಪುರ, ತಿರುಮಗೊಂಡನಹಳ್ಳಿ, ಬಾಲಗಾರನಹಳ್ಳಿ, ಯಾದವ ನಹಳ್ಳಿ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಅತ್ತಿಬೆಲೆ ಹಾಗೂ ಅತ್ತಿಬೆಲೆ ಟರ್ಮಿನಲ್ ಸೇರಿದಂತೆ 9 ನಿಲ್ದಾಣ ನಿರ್ಮಿಸುವ ಪ್ರಸ್ತಾವವಿದೆ.
ಡಿಪಿಆರ್‌ಗೆ ಬಿಎಂಆರ್‌ಸಿಎಲ್ ಸಿದ್ಧತೆ
ತಮಿಳುನಾಡು ಸರಕಾರ ಯೋಜನೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ, ಕರ್ನಾಟಕ ಸರಕಾರ ತನ್ನ ವ್ಯಾಪ್ತಿಯ ರಾಜ್ಯದ ಗಡಿಯವರೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಅತ್ತಿಬೆಲೆ ಟರ್ಮಿನಲ್‌ನರೆಗೆ ಮೆಟ್ರೋ ನಿರ್ಮಾಣವಾದ ಬಳಿಕ, ತಮಿಳುನಾಡು ಕೂಡ ತನ್ನ ಗಡಿಯವರೆಗೆ ಪ್ರತ್ಯೇಕವಾಗಿ ಮೆಟ್ರೋ ಮಾರ್ಗ ನಿರ್ಮಿಸಿದರೆ ಮುಂದಿನ ಹಂತದಲ್ಲಿ ಎರಡೂ ರಾಜ್ಯಗಳ ಮೆಟ್ರೋ ಸಂಪರ್ಕ ಸಾಧ್ಯವಾಗಲಿದೆ.
ಯೋಜನೆಗೆ ರಾಜ್ಯ ಸರಕಾರ ಒಪ್ಪಿಗೆ ದೊರೆತಿರುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಶೀಘ್ರದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ.
ಈಗಾಗಲೇ ವಿಳಂಬವಾಗಿರುವ ಗುಲಾಬಿ ಹಾಗೂ ನೀಲಿ ಮಾರ್ಗಗಳ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂಬ ಪ್ರಯಾಣಿಕರ ಒತ್ತಾಯದ ನಡುವೆಯೇ, ತಮಿಳುನಾಡು ಗಡಿಯವರೆಗೆ ಮೆಟ್ರೋ ವಿಸ್ತರಣೆಯ ಹೊಸ ಯೋಜನೆ ಬೆಂಗಳೂರಿನ ಸಾರ್ವಜನಿಕ ಸಾರಿಗೆ ಸಂಪರ್ಕದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.