ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೊಬೈಲ್‌ ಸ್ಫೋಟ: ಬಹು ಅಂಗಾಂಗಕ್ಕೆ ಹಾನಿ-ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ

ಇದೊಂದು ಅತ್ಯಂತ ಸಂಕೀರ್ಣವಾಗಿದ್ದ ಮತ್ತು ರೋಗಿಯ ಪ್ರಾಣಕ್ಕೆ ಕುತ್ತು ತರುವಂತಹ ಸ್ಥಿತಿಯಾ ಗಿದ್ದು ಬಹು ಅಂಗಾಂಗ ವ್ಯವಸ್ಥೆಯ ಮೇಲೆ ಸ್ಫೋಟದ ಗಂಭೀರ ಪರಿಣಾಮಗಳುಂಟಾಗಿದ್ದವು. ಸುಟ್ಟ ಗಾಯಗಳು,ಶ್ವಾಸಕೋಶಕ್ಕೆ ತೀವ್ರ ತರದ ಹಾನಿ, ಡಯಾಬಿಟಿಸ್‌ನಿಂದಾಗಿ ಚಯಾಪಚಯ ಪ್ರಕ್ರಿಯೆಗೆ ತೊಂದರೆ ಉಂಟಾಗಿತ್ತು

ಬಹು ಅಂಗಾಂಗಕ್ಕೆ ಹಾನಿ: ಪ್ರಾಣಾಪಾಯದಿಂದ ಪಾರು ಮಾಡಿದ ಸಕಾಲಿಕ ಚಿಕಿತ್ಸೆ

-

Ashok Nayak Ashok Nayak Oct 17, 2025 6:43 PM

ಬೆಂಗಳೂರು: ಮೊಬೈಲ್‌ ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡು ಬಹುಅಂಗಾಂಗ ಹಾನಿಗೊಳಗಾಗಿದ್ದ 19 ವರ್ಷದ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ನಗರದ ಸ್ಪರ್ಶ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ತನ್ನ ಮನೆಯಲ್ಲಿ ಮೊಬೈಲ್‌ ನೋಡುತ್ತಿದ್ದಾಗ 19 ವರ್ಷದ ಯುವಕ ಪ್ರಥಮ್‌ (ಹೆಸರು ಬದಲಿಸ ಲಾಗಿದೆ) ಮೊಬೈಲ್‌ ಅಕಸ್ಮಾತ್‌ ಸ್ಫೋಟಿಸಿತ್ತು.. ಮಧುಮೇಹದಿಂದಲೂ ಬಳಲುತ್ತಿದ್ದ ಪ್ರಥಮ್‌ ರನ್ನು ತಕ್ಷಣ ಇನ್‌ಫ್ಯಾಂಟ್ರಿ ರಸ್ತೆಯ ಸ್ಪರ್ಶ್‌ ಆಸ್ಪತ್ರೆಗೆ ಕರೆ ತರಲಾಗಿತ್ತು. ತಮ್ಮ ಪುತ್ರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆತನ ಮುಖದ ತುಂಬಾ ಕಪ್ಪು ಮಸಿ ತುಂಬಿಕೊಂಡು ಮುಖದ ತುಂಬ ಗಾಯಗಳಾಗಿ ಬಲ ಗೈ ಊದಿಕೊಂಡಿದ್ದನ್ನು ಕಂಡ ಪ್ರಥಮ್‌ ತಂದೆ ಆಸ್ಪತ್ರೆಗೆ ದಾಖಲಿಸಿ ದ್ದರು.

ತಕ್ಷಣ ಕಾರ್ಯಪ್ರವೃತ್ತವಾದ ಸ್ಪರ್ಶ್‌ ಆಸ್ಪತ್ರೆಯ ಬಹು ವಿಭಾಗೀಯ ತಜ್ಞ ವೈದ್ಯರ ತಂಡ ಯುವಕನು ಮೊಬೈಲ್‌ ಸ್ಫೋಟದಿಂದಾಗಿ ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎಂಬ ಮಾರಣಾಂತಿಕ ಸ್ಥಿತಿಗೆ ತಲುಪಿದ್ದನ್ನು ಪತ್ತೆ ಮಾಡಿದರು. ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ತುತು ಚಿಕಿತ್ಸಾ ತಜ್ಞರು, ಮೂಳೆ ತಜ್ಷರು ಹಾಗೂ ಪ್ಲಾಸ್ಟಿಕ್‌ ಸರ್ಜರಿ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತು. ಮೊದಲಿಗೆ ಯುವಕನನ್ನು ಸ್ಥಿರ ಸ್ಥಿತಿಗೆ ಮರಳಿಸುವುದು ವೈದ್ಯರಿಗೆ ಬಹುದೊಡ್ಡ ಸವಾಲಾಗಿತ್ತು.ಇದನ್ನೂ ಓದಿ:Bangalore News: ಸರ್ವೋದಯ ಪಕ್ಷದ ಕಾರ್ಯಾಧ್ಯಕ್ಷರಾಗಿ ಶಾಸಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇಮಕ

ಜೊತೆಗೆ ವಿಷಕಾರಿ ಪದಾರ್ಥಗಳ ಹೊಗೆಯಿಂದ ಬಹುತೇಕ ನಿಷ್ಕ್ರಿಯಗೊಂಡಿದ್ದ ಶ್ವಾಸಕೋಶ ಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಗಿತ್ತು. ತೀವ್ರವಾಗಿ ಘಾಸಿಗೊಂಡಿದ್ದ ಕೈಗಳು ಇನ್ನಷ್ಟು ಹಾನಿಗೊಳಗಾಗುವುದನ್ನು ತಪ್ಪಿಸಬೇಕಾಗಿದ್ದು ತುರ್ತು ಚಿಕಿತ್ಸಾ ತಜ್ಞರಾದ ಡಾ.ಹೇಮಂತ್‌ ಹೆಚ್‌.ಆರ್‌, ಡಾ.ಟಿ.ಎಸ್‌.ಶ್ರೀನಾಥ್‌ ಕುಮಾರ್‌, ಮೂಳೆ ತಜ್ಞ ಡಾ.ರವಿಕುಮಾರ್‌ ಮುಖರ್ತಿಯಲ್‌, ಪ್ಲಾಸ್ಟಿಕ್‌ ಸರ್ಜನ್‌ ಡಾ.ಕಾರ್ತಿಕ್‌ ಆದಿತ್ಯ ವಿ.ಎಸ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕಿಶನ್‌ ನಾಗ್‌ ತಂಡ ಯುವಕನನ್ನು ಪ್ರಜ್ಞಾವಸ್ಥೆಗೆ ಮರಳಿಸಿ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ಇದೊಂದು ಅತ್ಯಂತ ಸಂಕೀರ್ಣವಾಗಿದ್ದ ಮತ್ತು ರೋಗಿಯ ಪ್ರಾಣಕ್ಕೆ ಕುತ್ತು ತರುವಂತಹ ಸ್ಥಿತಿಯಾಗಿದ್ದು ಬಹು ಅಂಗಾಂಗ ವ್ಯವಸ್ಥೆಯ ಮೇಲೆ ಸ್ಫೋಟದ ಗಂಭೀರ ಪರಿಣಾಮಗಳುಂಟಾ ಗಿದ್ದವು. ಸುಟ್ಟ ಗಾಯಗಳು,ಶ್ವಾಸಕೋಶಕ್ಕೆ ತೀವ್ರ ತರದ ಹಾನಿ, ಡಯಾಬಿಟಿಸ್‌ನಿಂದಾಗಿ ಚಯಾ ಪಚಯ ಪ್ರಕ್ರಿಯೆಗೆ ತೊಂದರೆ ಉಂಟಾಗಿತ್ತು.

ಮಧುಮೇಹವಿರುವುದರಿಂದ ದೇಹದ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಮೊದಲೇ ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸಾ ಕ್ರಮ ನಿರ್ಧರಿಸಿ ಬಹು ಅಂಗಾಂಗ ವೈಫಲ್ಯವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಿರಿಯ ಸಮಾಲೋಚಕ ಡಾ. ಹೇಮಂತ್‌ ಹೆಚ್‌.ಆರ್‌.ತಿಳಿಸಿದರು.

ತಜ್ಞ ವೈದ್ಯರ ಸಮೂಹ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಯುವಕನನ್ನು ಪ್ರಾಣಾಪಾಯ ದಿಂದ ಪಾರು ಮಾಡಿ ಸಹಜ ಸ್ಥಿತಿಗೆ ಮರಳಿಸುವುದು ಸಾಧ್ಯವಾಯಿತು ಎಂದು ಸ್ಪರ್ಶ್‌ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕಿಶನ್‌ ನಾಗ್‌ ಹೇಳಿದರು.