ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಿಫಾರಸ್ಸು ಪತ್ರಕ್ಕೆ ಬ್ರೇಕ್, ಹಣ ಕೇಳಿದ್ರೆ ತಿಳಿಸಿ: ಅಧಿಕಾರಿಗಳಿಗೆ ಸೂಚನೆ: ವರ್ಗಾವಣೆಗೆ ಕೈ ಹಾಕಬೇಡಿ, ಸಚಿವರಿಗೆ ಸಿಎಂ ಡಿಕೆ ಸೂಚನೆ

‘ನಿಮ್ಮ ಜಿಲ್ಲೆಗೆ ಯಾವ ಅಧಿಕಾರಿಗಳಿರಬೇಕು ಎನ್ನುವುದನ್ನು ನೀವು ನಿರ್ಧರಿಸ ಬೇಡಿ... ನಾನು ನಿರ್ಧಾರ ಮಾಡುತ್ತೇನೆ... ಈ ವಿಷಯದಲ್ಲಿ ಯಾವ ಶಿಫಾರಸು ಪತ್ರವನ್ನು ತರುವುದು ಬೇಡ..’ ಇಂತಹ ಸ್ಪಷ್ಟ ಹಾಗೂ ಖಡಕ್ ಸೂಚನೆಯನ್ನು ಸಚಿವರುಗಳಿಗೆ ನೀಡಿರುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar). ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಸಚಿವರು ಗಳೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿರುವ ಡಿ.ಕೆ.ಶಿವಕುಮಾರ್ ಅವರು, ಅಧಿಕಾರಿಗಳ ವರ್ಗಾವಣೆಯ ವಿಷಯದಲ್ಲಿ ‘ಕೈ’ ಹಾಕಬೇಡಿ ಎನ್ನುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ.

ವರ್ಗಾವಣೆಗೆ ಕೈ ಹಾಕಬೇಡಿ, ಸಚಿವರಿಗೆ ಸಿಎಂ ಡಿಕೆ ಸೂಚನೆ

-

Profile
Ashok Nayak Oct 8, 2026 8:45 AM

ಬೆಂಗಳೂರು: ‘ನಿಮ್ಮ ಜಿಲ್ಲೆಗೆ ಯಾವ ಅಧಿಕಾರಿಗಳಿರಬೇಕು ಎನ್ನುವುದನ್ನು ನೀವು ನಿರ್ಧರಿಸ ಬೇಡಿ... ನಾನು ನಿರ್ಧಾರ ಮಾಡುತ್ತೇನೆ... ಈ ವಿಷಯದಲ್ಲಿ ಯಾವ ಶಿಫಾರಸು ಪತ್ರವನ್ನು ತರುವುದು ಬೇಡ..’ ಇಂತಹ ಸ್ಪಷ್ಟ ಹಾಗೂ ಖಡಕ್ ಸೂಚನೆಯನ್ನು ಸಚಿವರುಗಳಿಗೆ ನೀಡಿರುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar).

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಸಚಿವರು ಗಳೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿರುವ ಡಿ.ಕೆ.ಶಿವಕುಮಾರ್ ಅವರು, ಅಧಿಕಾರಿಗಳ ವರ್ಗಾ ವಣೆಯ ವಿಷಯದಲ್ಲಿ ‘ಕೈ’ ಹಾಕಬೇಡಿ ಎನ್ನುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ.

ಅದರಲ್ಲಿಯೂ ಜಿಲ್ಲಾ ಉಸ್ತುವಾರಿ ಹೊತ್ತಿರುವ ಸಚಿವರು ತಮ್ಮ ಜಿಲ್ಲೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒಗಳು ಯಾರಿರಬೇಕು ಎನ್ನುವುದನ್ನು ನಾನೇ ನಿರ್ಧರಿಸು ತ್ತೇನೆ ಎಂದಿರುವ ಮುಖ್ಯಮಂತ್ರಿಗಳ ಮಾತು ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಜಿಲ್ಲಾ ಡಿಸಿ, ಎಸ್‌ಪಿ ಹಾಗೂ ಸಿಇಒಗಳ ಆಯ್ಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸು ನಡೆಯುತ್ತಿತ್ತು. ಆದರೀಗ ಕಿಚನ್ ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿಗಳಿಂದ ಈ ಸೂಚನೆ ಬಂದಿರುವುದು ಕೆಲ ಹಿರಿಯ ಸಚಿವರುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಸಭೆಯಲ್ಲಿ ಯಾವ ಸಚಿವರೂ ಪ್ರತಿಕ್ರಿಯೆ ನೀಡದೇ ‘ಮೌನ‘ಕ್ಕೆ ಶರಣಾಗಿದ್ದರು ಎಂದು ಸಂಪುಟದಲ್ಲಿ ಸಚಿವರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: CM DK Shivakumar: ಕಾನೂನು ಚೌಕಟ್ಟಿನಲ್ಲಿ ಬರಗಾಲ ಪರಿಸ್ಥಿತಿ ಪರಾಮರ್ಶೆ, ಬರ ಪರಿಹಾರಕ್ಕೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ನಾನು ತೀರ್ಮಾನಿಸುವೆ: ಯಾವ ಅಧಿಕಾರಿ ಯಾವ ಜಿಲ್ಲೆಯಲ್ಲಿ ಇದ್ದರೆ ‘ಒಳ್ಳೆಯದ್ದು’ ಎನ್ನುವುದು ನನಗೆ ಗೊತ್ತಿದೆ. ಆದ್ದರಿಂದ ಆ ‘ಮಾನದಂಡ’ವನ್ನು ನಾನೇ ತೀರ್ಮಾನಿಸುವೆ. ಉಸ್ತುವಾರಿ ಸಚಿವರು ಸುಮ್ಮನೆ ಶಿಫಾರಸು ಪತ್ರದೊಂದಿಗೆ ಬರಬೇಡಿ. ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಯಾವ ಶಿಫಾರಸು ಪತ್ರವೂ ನಡೆಯುವುದಿಲ್ಲ. ನಿಮ್ಮ ಜಿಲ್ಲೆಗೆ ‘ಯೋಗ್ಯ’ ಅಧಿಕಾರಿ ಯಾರು ಎನ್ನುವುದನ್ನು ತೀರ್ಮಾನಿಸಿ ಅವರನ್ನು ಅಲ್ಲಿಗೆ ವರ್ಗಾಯಿಸುವೆ. ಈ ವಿಷಯದಲ್ಲಿ ಯಾವುದೇ ಗೊಂದಲಗಳು ಬೇಡ ಎಂದಿರುವುದು ಇದೀಗ ಸಚಿವರನ್ನು ಪೀಕಲಾಟಕ್ಕೆ ಸಿಲುಕಿಸಿದೆ.

ಡಿಸಿ, ಎಸ್‌ಪಿ, ಸಿಇಒಗಳನ್ನು ಹಾಕಿಸಿಕೊಳ್ಳುವ ಅಥವಾ ವರ್ಗಾಯಿಸುವ ಅಧಿಕಾರ ತಮಗೆ ನೀಡದೇ ಹೋದರೆ, ಐಎಎಸ್ ಅಧಿಕಾರಿಗಳು ನಮ್ಮ ಮಾತನ್ನು ಎಲ್ಲಿ ಕೇಳುತ್ತಾರೆ? ಇದರಿಂದಾಗಿ ಜಿಲ್ಲೆಯ ಮೇಲಿನ ಹಿಡಿತ ಸಾಧಿಸಲು ಹೇಗೆ ಸಾಧ್ಯವಾಗುತ್ತದೆ ಎನ್ನುವ ಅಳಲನ್ನು ಕೆಲ ಸಚಿವರು ಹೊರ ಹಾಕಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ವಿಷಯವನ್ನು ಡಿ.ಕೆ. ಶಿವಕುಮಾರ್ ಎದುರಿಗೆ ಹೇಳಲಾಗದೇ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರುಗಳ ಮುಂದೆ ಸಚಿವರು ಬೇಸರ ವ್ಯಕ್ತಪಡಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಣ ಕೇಳಿದ್ರೆ ನನಗೆ ಹೇಳಿ: ಸಚಿವರಿಗೆ ಈ ರೀತಿಯ ಸೂಚನೆ ನೀಡುವುದಷ್ಟೇ ಅಲ್ಲದೇ, ಹಿರಿಯ ಅಧಿಕಾರಿಗಳಿಗೆ, ಜಿಲ್ಲೆಯ ಆಯಕಟ್ಟಿನ ಅಧಿಕಾರಿಗಳಿಗೆ, ಯಾವುದೇ ಸಚಿವರು ಅಥವಾ ಶಾಸಕರು ಹಣ ಕೇಳಿದರೆ ಈ ಬಗ್ಗೆ ತಮಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳು ಖುದ್ದಾಗಿ ಅಧಿಕಾರಿಗಳಿಗೆ ಹೇಳಿರುವುದು ಇದೀಗ ಸಂಪುಟದ ಹಲವು ಸಚಿವರಿಗೆ ಇರುಸು-ಮರುಸು ಉಂಟು ಮಾಡಿದೆ. ಅಧಿಕಾರಿಗಳಿಗೆ ಈ ರೀತಿ ಮುಖ್ಯಮಂತ್ರಿಗಳು ನೇರವಾಗಿ ಹೇಳಿದರೆ, ಅಧಿಕಾರಿಗಳು ಉಸ್ತುವಾರಿ ಸಚಿವರ ಮಾತನ್ನು ಹೇಗೆ ಕೇಳುತ್ತಾರೆ? ಎನ್ನುವ ಅಸಮಾಧಾನವನ್ನು ಕೆಲ ಸಚಿವರು ಹೊರ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಟಿಂಗ್‌ ಆಪರೇಷನ್‌ ಆತಂಕ

ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಲ ಸಂಘಟನೆ ಅಥವಾ ವ್ಯಕ್ತಿಗಳು ಸ್ಟಿಂಗ್ ಆಪರೇಶನ್ ಮೂಲಕ ಸಚಿವರನ್ನು ‘ಖೆಡ್ಡಾ’ಗೆ ಬೀಳಿಸುವ ಸಾಧ್ಯತೆ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಕೆಲ ಸಚಿವರನ್ನು ಗುರಿಯಾಗಿಟ್ಟುಕೊಂಡು ಸ್ಟಿಂಗ್ ಆಪರೇಷನ್ ಮಾಡಲಾಗುತ್ತಿದೆ. ತಮಗಿರುವ ಗುಪ್ತಚರ ಮಾಹಿತಿ ಪ್ರಕಾರ, ಪ್ರಸ್ತುತ ಎರಡು ವಿಭಿನ್ನ ತಂಡಗಳಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಖಾಸಗಿ ಸ್ಟಿಂಗ್ ಆಪರೇಷನ್ ಮೂಲಕ ಸಚಿವರ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತಿದೆ. ಅದರಲ್ಲಿಯೂ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಹೆಚ್ಚು ಮಾತನಾಡುತ್ತಿರುವವರು ಕುಟುಕು ಕಾರ್ಯಾಚರಣೆ ತಂಡದ ಮೊದಲ ಗುರಿಯಾಗಿದ್ದಾರೆ ಎಂದು ಪರೋಕ್ಷವಾಗಿ ಕೆಲ ಸಚಿವರಿಗೆ ಸಂದೇಶ ರವಾನಿಸಿದ್ದಾರೆ.

ಕಾಮಗಾರಿಗಳ ಗುತ್ತಿಗೆ ವಿಚಾರವಾಗಿ ಚರ್ಚೆಗೆ ಬರುವವರು, ವರ್ಗಾವಣೆ ಹಾಗೂ ಇತರ ಕೆಲಸಗಳ ನೆಪದಲ್ಲಿ ನಡೆಯುವ ಸಂಭಾಷಣೆಯ ವೇಳೆ ಸಚಿವರು ಎಚ್ಚರಿಕೆಯಿಂದ ಇರಬೇಕು ಎಂದು ಸಿಎಂ ಪ್ರತ್ಯೇಕವಾಗಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

image

ಸ್ಟಿಂಗ್ ಆಪರೇಷನ್ ನಡೆಸುವ ಮೂಲಕ ಅವರು ಎಲ್ಲಾ ಸಚಿವರ ಮೇಲೆ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ರಾಜಣ್ಣ ಕತೆ ಮುಗಿಸಿದ್ದು ಇವರೇ ಅಲ್ಲವೇ? ಅವರೇ ಎಲ್ಲ ಮಾಡಿ ಪ್ರತಿಪಕ್ಷದ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿzರೆ. ಸ್ಟಿಂಗ್ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದ ವ್ಯಕ್ತಿಯೇ ನಮ್ಮ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದ.

-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ