ಫೈಜರ್‌ನ ‘ಪ್ರಾಜೆಕ್ಟ್ ಆಸ್ಥಾ’ ಮೂಲಕ 10 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಬೆಂಬಲ
ಈ ಉಪಕ್ರಮವು ರೋಗಿಗಳಿಗೆ ಆರೋಗ್ಯ ವ್ಯವಸ್ಥೆಯಲ್ಲಿ ಸೂಕ್ತ ಮಾರ್ಗದರ್ಶನ ಒದಗಿಸುವುದು, ಸರ್ಕಾರಿ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ನೆರವು ನೀಡುವುದು, ಸಮಾಲೋ ಚನಾ ಸೇವೆಗಳನ್ನು ಒದಗಿಸುವುದು ಹಾಗೂ ಚಿಕಿತ್ಸೆಯ ಸಂಪೂರ್ಣ ಅವಧಿಯಲ್ಲಿ ಅವರಿಗೆ ಅಗತ್ಯ ಬೆಂಬಲ ಸೇವೆಗಳ ಸಂಪರ್ಕ ಕಲ್ಪಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡುವತ್ತ ಗಮನಹರಿಸುತ್ತದೆ.
-
ಬೆಂಗಳೂರು: ಫೈಜರ್ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (CSR) ಪ್ರಮುಖ ಉಪಕ್ರಮವಾದ ‘ಪ್ರಾಜೆಕ್ಟ್ ಆಸ್ಥಾ’ ಅನ್ನು, ಡಾಕ್ಟರ್ಸ್ ಫಾರ್ ಯು' (DFY) ಸಂಸ್ಥೆಯ ಸಹಭಾಗಿತ್ವ ದಲ್ಲಿ 2022ರಲ್ಲಿ ಪ್ರಾರಂಭಿಸಿದ ದಿನದಿಂದ ಇಂದಿನವರೆಗೆ ಭಾರತದಾದ್ಯಂತ 10 ಲಕ್ಷಕ್ಕೂ ಹೆಚ್ಚು ರೋಗಿಗಳು ಮತ್ತು ಅವರ ಆರೈಕೆದಾರರಿಗೆ ಬೆಂಬಲ ನೀಡುವ ಮಹತ್ವದ ಮೈಲಿಗಲ್ಲನ್ನು ತಲುಪಿದೆ ಎಂದು ಇಂದು ಫೈಜರ್ ಸಂಷ್ಟೆಯು ಪ್ರಕಟಿಸಿದೆ.
ಈ ಉಪಕ್ರಮವು ರೋಗಿಗಳಿಗೆ ಆರೋಗ್ಯ ವ್ಯವಸ್ಥೆಯಲ್ಲಿ ಸೂಕ್ತ ಮಾರ್ಗದರ್ಶನ ಒದಗಿಸುವುದು, ಸರ್ಕಾರಿ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ನೆರವು ನೀಡುವುದು, ಸಮಾಲೋಚನಾ ಸೇವೆಗಳನ್ನು ಒದಗಿಸುವುದು ಹಾಗೂ ಚಿಕಿತ್ಸೆಯ ಸಂಪೂರ್ಣ ಅವಧಿಯಲ್ಲಿ ಅವರಿಗೆ ಅಗತ್ಯ ಬೆಂಬಲ ಸೇವೆಗಳ ಸಂಪರ್ಕ ಕಲ್ಪಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡುವತ್ತ ಗಮನಹರಿಸುತ್ತದೆ.
ಈ ಐತಿಹಾಸಿಕ ಮೈಲಿಗಲ್ಲನ್ನು ಬೆಂಗಳೂರಿನಲ್ಲಿ ನಡೆದ ‘ಆಸ್ಥಾ ಕೇರ್‌ಕನೆಕ್ಟ್ 2026’ ಸಮಾವೇಶ ದಲ್ಲಿ ನೆನಪಿಸಿಕೊಳ್ಳಲಾಯಿತು. ಈ ಕಾರ್ಯಕ್ರಮದ ಮೂಲಕ ಹಿರಿಯ ಸರ್ಕಾರಿ ಅಧಿಕಾರಿಗಳು, ಆರೋಗ್ಯ ಕ್ಷೇತ್ರದ ಪ್ರಮುಖರು, ನೀತಿ ನಿರೂಪಕರು, ವೈದ್ಯಕೀಯ ತಜ್ಞರು, ರೋಗಿಗಳ ಹಕ್ಕುಗಳ ಪ್ರತಿಪಾದಕರು ಹಾಗೂ ಅಭಿವೃದ್ಧಿ ಸಹಭಾಗಿತ್ವ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ, ರೋಗಿಗಳಿಗೆ ಸಿಗುವ ಆರೈಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ಎಲ್ಲರಿಗೂ ಸಮಾನವಾಗಿ ಆರೋಗ್ಯ ಸೇವೆಗಳು ದೊರೆಯುವಂತೆ ಮಾಡುವುದರ ಬಗ್ಗೆ ಒಟ್ಟುಗೂಡಿ ಚರ್ಚಿಸಿದರು.
ಭಾರತದಲ್ಲಿ ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೋಗಿ ಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಲು ಕೇವಲ ವೈದ್ಯಕೀಯ ಚಿಕಿತ್ಸೆ ಮಾತ್ರವಲ್ಲ ಅದಕ್ಕೂ ಮೀರಿ ಸಮಗ್ರವಾದ ಬೆಂಬಲದ ಅಗತ್ಯವಿರುತ್ತದೆ. ಆಸ್ಪತ್ರೆಗಳ ವ್ಯವಸ್ಥೆಯಲ್ಲಿ ಅಗತ್ಯ ಮಾರ್ಗದರ್ಶನ ಪಡೆಯುವುದು, ಚಿಕಿತ್ಸೆಯ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳುವುದು, ಸರ್ಕಾರಿ ಕಲ್ಯಾಣ ಯೋಜನೆಗಳು ಹಾಗೂ ಹಣಕಾಸಿನ ನೆರವು ಪಡೆಯುವುದು ಸೇರಿದಂತೆ ಅನೇಕ ಸಂಕೀರ್ಣ ಸವಾಲುಗಳನ್ನು ಚಿಕಿತ್ಸಾ ಪಯಣದ ಸಂದರ್ಭದಲ್ಲಿ ರೋಗಿಗಳು ಮತ್ತು ಅವರ ಆರೈಕೆ ದಾರರು ಎದುರಿಸುತ್ತಾರೆ.
ಇಲ್ಲಿಯವರೆಗೆ ಪೂರೈಸಲಾಗದ ಇಂತಹ ಅವಶ್ಯಕತೆಗಳನ್ನು ಗುರುತಿಸಿ, ರೋಗಿಗಳು ಮತ್ತು ಅವರ ಕುಟುಂಬದವರು ಇಂತಹ ಸಂಕೀರ್ಣ ಪ್ರಕ್ರಿಯೆಗಳನ್ನು ಸುಲಭವಾಗಿ ನಿಭಾಯಿಸಲು ಹಾಗೂ ಆತ್ಮವಿಶ್ವಾಸದೊಂದಿಗೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ರೋಗಿಗಳ ಆರೈಕೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ‘ಪ್ರಾಜೆಕ್ಟ್ ಆಸ್ಥಾ’ವನ್ನು ಸ್ಥಾಪಿಸಲಾಯಿತು.
ಕಳೆದ ನಾಲ್ಕು ವರ್ಷಗಳಲ್ಲಿ 'ಪ್ರಾಜೆಕ್ಟ್ ಆಸ್ಥಾ' ಭಾರತದಾದ್ಯಂತ ರೋಗಿಗಳ ಆರೈಕೆ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸುವ ಮೂಲಕ ಗಮನಾರ್ಹ ಪ್ರಗತಿ ಸಾಧಿಸಿದೆ.
ಯೋಜನೆಯ ಪ್ರಮುಖ ಮೈಲಿಗಲ್ಲುಗಳು ಹೀಗಿವೆ:
- ಕ್ಯಾನ್ಸರ್‌ನೊಂದಿಗೆ ಬದುಕುತ್ತಿರುವ 9.25 ಲಕ್ಷ ಜನರು ಹಾಗೂ ಅಪರೂಪದ ಕಾಯಿಲೆ ಗಳೊಂದಿಗೆ ಬದುಕುತ್ತಿರುವ 75,000 ಜನರು ಸೇರಿ ಒಟ್ಟು 10 ಲಕ್ಷಕ್ಕೂ ಅಧಿಕ ರೋಗಿಗಳು ಮತ್ತು ಅವರ ಆರೈಕೆದಾರರಿಗೆ ಬೆಂಬಲ ಒದಗಿಸಲಾಗಿದೆ.
- •ಆಸ್ಪತ್ರೆಗಳಲ್ಲಿ ರೋಗಿ ಮಾರ್ಗದರ್ಶನ ಮತ್ತು ಬೆಂಬಲ ಸೇವೆಗಳನ್ನು ಒದಗಿಸಲು 15 ಅತ್ಯುನ್ನತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಮತ್ತು 5 ಅಪರೂಪದ ಕಾಯಿಲೆಗಳ ಅತ್ಯುನ್ನತ ಚಿಕಿತ್ಸಾ ಕೇಂದ್ರಗಳ ಜಾಲವನ್ನು ಸ್ಥಾಪಿಸಲಾಗಿದೆ.
- 29,000ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಣಕಾಸಿನ ನೆರವು ಪಡೆಯಲು ಸಹಾಯ ಮಾಡಲಾಗಿದೆ ಮತ್ತು 33,000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸಾ ಬೆಂಬಲ ಲಭ್ಯವಾಗಲು ನೆರವಾಗಿದೆ.
- ಆನುವಂಶಿಕ ಮತ್ತು ಅಪರೂಪದ ಕಾಯಿಲೆಗಳೊಂದಿಗೆ ಬದುಕುತ್ತಿರುವ ಮಕ್ಕಳನ್ನು ಸೇರಿ ಸುಮಾರು 8,000 ಮಕ್ಕಳಿಗೆ ವಿಶೇಷ ವೈದ್ಯಕೀಯ ಬೆಂಬಲವನ್ನು ನೀಡಲಾಗಿದೆ.
ಕರ್ನಾಟಕದಲ್ಲಿಯೂ ಈ ಕಾರ್ಯಕ್ರಮವು ಮಹತ್ತರ ಕೊಡುಗೆಯನ್ನು ನೀಡಿದೆ:
- ತನ್ನ ರೋಗಿ ಆರೈಕೆ ಸೇವೆಗಳ ಮೂಲಕ 59,000ಕ್ಕೂ ಅಧಿಕ ರೋಗಿಗಳಿಗೆ ಬೆಂಬಲ ಒದಗಿಸ ಲಾಗಿದೆ.
- ಸರ್ಕಾರಿ ಆರೋಗ್ಯ ಸೇವೆಗಳ ಹಣಕಾಸಿನ ನೆರವು ಪಡೆಯಲು 38,000ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.
- ರಾಜ್ಯದಾದ್ಯಂತ 33,000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸಾ ಬೆಂಬಲ ದೊರೆಯುವಂತೆ ಮಾಡಲಾಗಿದ್ದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವ ಸೌಲಭ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಫೈಜರ್ ಇಂಡಿಯಾದ ಕಂಟ್ರಿ ಪ್ರೆಸಿಡೆಂಟ್ ಆದ ಮೀನಾಕ್ಷಿ ನೆವಾಟಿಯಾ ಅವರು ಮಾತನಾಡಿ, “ಸಕಾಲದಲ್ಲಿ ನೀಡುವ ಮಾರ್ಗದರ್ಶನ, ಸಮಾಲೋಚನೆ ಮತ್ತು ವೈದ್ಯಕೀಯೇತರ ಬೆಂಬಲವು ರೋಗಿಗಳು ಹಾಗೂ ಅವರ ಆರೈಕೆದಾರರು ಸಂಕೀರ್ಣ ಚಿಕಿತ್ಸಾ ಪಯಣವನ್ನು ಆತ್ಮವಿಶ್ವಾಸ ಮತ್ತು ಘನತೆಯಿಂದ ಎದುರಿಸಲು ಹೇಗೆ ನೆರವಾಗುತ್ತದೆ ಎಂಬುದಕ್ಕೆ ‘ಪ್ರಾಜೆಕ್ಟ್ ಆಸ್ಥ’ ಒಂದು ಉತ್ತಮ ಉದಾಹರಣೆಯಾಗಿದೆ ಹಾಗೂ ಸಂಕಷ್ಟದಲ್ಲಿರುವ 10 ಲಕ್ಷಕ್ಕೂ ಹೆಚ್ಚು ರೋಗಿಗಳು ಮತ್ತು ಅವರ ಆರೈಕೆದಾರರಿಗೆ ನಾವು ಬೆಂಬಲ ನೀಡಲು ಸಾಧ್ಯವಾಗಿದೆ ಎಂದು ತಿಳಿಸಲು ತುಂಬಾ ಸಂತೋಷ ವಾಗುತ್ತದೆ.
ನಮ್ಮ ಪಾಲುದಾರರಾದ 'ಡಾಕ್ಟರ್ಸ್ ಫಾರ್ ಯು' ಸಂಸ್ಥೆಯೊಂದಿಗೆ ಸೇರಿ, ನಾವು ಇನ್ನೂ ಹೆಚ್ಚಿನ ರೋಗಿಗಳಿಗೆ ಆರಂಭಿಕ ಹಂತದಲ್ಲೇ ಕಾಯಿಲೆಯನ್ನು ಪತ್ತೆಹಚ್ಚುವುದು ಮತ್ತು ಸರಳೀಕೃತ ಚಿಕಿತ್ಸಾ ಮಾರ್ಗಗಳು ಲಭ್ಯವಾಗುವಂತೆ ಮಾಡುವ ನಮ್ಮ ಬದ್ಧತೆಯನ್ನು ನಾವು ಮತ್ತಷ್ಟು ಬಲಪಡಿಸು ತ್ತಿದ್ದೇವೆ. ಅರ್ಥಪೂರ್ಣ ಪ್ರಭಾವ ಬೀರಿದ ಈ ನಾಲ್ಕು ವರ್ಷಗಳ ಯಶಸ್ಸನ್ನು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ, ನಾವು ನಮ್ಮ ಅನುಭವಗಳಿಂದ ಕಲಿತ ಪಾಠಗಳನ್ನು ಅಳವಡಿಸಿಕೊಳ್ಳಲು, ರೋಗಿಗಳ ಧ್ವನಿಗೆ ಆದ್ಯತೆ ನೀಡಲು ಮತ್ತು ದೇಶಾದ್ಯಂತ ಆರೋಗ್ಯ ಸೇವೆಗಳ ಲಭ್ಯತೆಯನ್ನು ಸತತವಾಗಿ ಸುಧಾರಿಸಲು ಉತ್ಸುಕರಾಗಿದ್ದೇವೆ,” ಎಂದು ಹೇಳಿದರು.
‘ಡಾಕ್ಟರ್ಸ್ ಫಾರ್ ಯು’ ಸಂಸ್ಥೆಯ ಅಧ್ಯಕ್ಷರಾದ ಡಾ. ರಜತ್ ಜೈನ್ ಅವರು ಮಾತನಾಡಿ, “ಪ್ರಾಜೆಕ್ಟ್ ಆಸ್ಥಾ ಮೂಲಕ ಸಾಧಿಸಿರುವ ಪ್ರಗತಿಯನ್ನು ಸಂಭ್ರಮಿಸುವುದರ ಜೊತೆಗೆ, ಭಾರತದಲ್ಲಿ ರೋಗಿಗಳ ಆರೈಕೆ ವ್ಯವಸ್ಥೆಯ ಮುಂದಿನ ಘಟ್ಟವನ್ನು ರೂಪಿಸುವ ಉದ್ದೇಶದಿಂದ ಫೈಜರ್‌ನೊಂದಿಗೆ ಆಸ್ಥಾ ಕೇರ್‌ಕನೆಕ್ಟ್ 2026' ವೇದಿಕೆಯನ್ನು ಆಯೋಜಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.
ರೋಗಿಗಳು ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ, ಆಸ್ಪತ್ರೆಯ ಪ್ರಕ್ರಿಯೆ ಗಳನ್ನು ಅರ್ಥಮಾಡಿಕೊಳ್ಳುವುದು, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದು ಹಾಗೂ ಚಿಕಿತ್ಸೆಯ ಅವಧಿಯಲ್ಲಿ ಭಾವನಾತ್ಮಕ ಧೈರ್ಯ ಮತ್ತು ಭರವಸೆಯನ್ನು ಪಡೆಯುವುದು ಸೇರಿದಂತೆ ವಿವಿಧ ರೀತಿಯ ಬೆಂಬಲದ ಅಗತ್ಯವಿರುತ್ತದೆ.
ನಮ್ಮ ಚರ್ಚೆಗಳು ಚಿಕಿತ್ಸೆಯ ನಿರಂತರತೆಯನ್ನು ಮತ್ತಷ್ಟು ಸುಧಾರಿಸುವ ನವೀನ ಕಾರ್ಯ ತಂತ್ರಗಳು ಹಾಗೂ ಸರ್ಕಾರದ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವಿಧಾನಗಳ ಮೇಲೆ ಕೇಂದ್ರೀಕೃತವಾಗಿದ್ದವು. ಮತ್ತಷ್ಟು ರೋಗಿಗಳನ್ನು ತಲುಪಲು, ಸಹಾಯ ಕೇಂದ್ರ ಆಧಾರಿತ ಮಾದರಿಗಳನ್ನು ಮತ್ತಷ್ಟು ವಿಸ್ತರಿಸಿ ಬಲಪಡಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ತಿಳಿಸಿದರು.
ಪ್ರಾಜೆಕ್ಟ್ ಆಸ್ಥಾ, ಸಾಧಿಸಿರುವ ಮಹತ್ವದ ಸಾಧನೆಯನ್ನು ಸ್ಮರಿಸುತ್ತಾ, ಆಸ್ಥಾ ಕೇರ್‌ಕನೆಕ್ಟ್ 2026 ವೇದಿಕೆಯಲ್ಲಿ ಫೈಜರ್ ಮತ್ತು ಡಾಕ್ಟರ್ಸ್ ಫಾರ್ ಯು ಸಂಸ್ಥೆಗಳು ಎಲ್ಲರಿಗೂ ಸುಲಭವಾಗಿ ಲಭ್ಯ ವಾಗುವ, ಸಮಾನ ಅವಕಾಶಗಳನ್ನು ಒದಗಿಸುವ ಹಾಗೂ ರೋಗಿ-ಕೇಂದ್ರಿತ ಆರೋಗ್ಯ ವ್ಯವಸ್ಥೆ ನಿರ್ಮಿಸುವ ತಮ್ಮ ಜಂಟಿ ಬದ್ಧತೆಯನ್ನು ಪುನರುಚ್ಚರಿಸಿದವು. ಜೊತೆಗೆ, ಭಾರತದಾದ್ಯಂತ ಆರೋಗ್ಯ ಫಲಿತಾಂಶಗಳನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ತಮ್ಮ ಪರಸ್ಪರ ಸಹಭಾಗಿತ್ವ ವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನೂ ವ್ಯಕ್ತಪಡಿಸಿದವು.