ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat: ಭೈರಪ್ಪನವರ ಸಾಹಿತ್ಯದ ಮೌಲ್ಯ ಮಹತ್ತರವಾದುದು

ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಮೈಸೂರಿನ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿರಿಯ ಸಾಹಿತಿ ದಿವಂಗತ ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಕನ್ನಡ ಪತ್ರಿಕಾ ರಂಗದಲ್ಲಿ ಒಂದು ಗ್ಯಾಂಗ್ ಇತ್ತು.

ಭೈರಪ್ಪನವರ ಸಾಹಿತ್ಯದ ಮೌಲ್ಯ ಮಹತ್ತರವಾದುದು

-

Profile
Ashok Nayak Jun 22, 2026 6:59 AM

ಭೈರಪ್ಪನವರ ವಿಚಾರ, ಕಾದಂಬರಿಗಳು ನಮಗೆ ಆಸರೆ, ವಿಶ್ವ ಸಾಹಿತ್ಯದ ದೃಷ್ಟಿಯಿಂದ ಅವರನ್ನು ನೋಡಬೇಕಿದೆ: ವಿಶ್ವೇಶ್ವರ ಭಟ್

ಮೈಸೂರು: ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರ ಸಾಹಿತ್ಯದ ಮೌಲ್ಯ, ದ್ರವ್ಯ ಮಹತ್ತರವಾದುದು. ಅವರನ್ನು ವಿಶ್ವ ಸಾಹಿತ್ಯದ ದೃಷ್ಟಿಯಿಂದ ನಾವು ನೋಡಬೇಕಿದೆ ಎಂದು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಭಿಪ್ರಾಯ ಪಟ್ಟರು.

ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಮೈಸೂರಿನ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿರಿಯ ಸಾಹಿತಿ ದಿವಂಗತ ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಕನ್ನಡ ಪತ್ರಿಕಾ ರಂಗದಲ್ಲಿ ಒಂದು ಗ್ಯಾಂಗ್ ಇತ್ತು.

ಅನಂತಮೂರ್ತಿ, ಲಂಕೇಶ್ ಅವರ ಬಗ್ಗೆ ಚರ್ಚೆ, ವಿಮರ್ಶೆ ನಡೆಯುತ್ತಿತ್ತು. ಆದರೆ ಭೈರಪ್ಪನವರ ಬಗ್ಗೆ ಚಕಾರವೇ ಇಲ್ಲವಾಗಿತ್ತು. ಈ ಬಗ್ಗೆ ಭೈರಪ್ಪನವರು ಬೇಸರ ಮಾಡಿಕೊಳ್ಳಲಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಇದನ್ನೂ ಓದಿ: Vishweshwar Bhat Column: ಅಕ್ಷರಲೋಕದ ಆತ್ಮಸಂಗೀತವೂ, ಫಾಂಟ್‌ʼಗಳ ವಿಶಿಷ್ಟ ಲೋಕವೂ !

ನನಗೆ ಶನಿವಾರ ಕೋರ್ಟ್ ನೋಟಿಸ್ ಬಂತು. ಭೈರಪ್ಪನವರ ಬಗ್ಗೆ ಮಾತನಾಡದಂತೆ ತಾಕೀತು ಮಾಡಲಾಗಿತ್ತು. ನಂತರ ಕಾನೂನು ಪಂಡಿತರ ಸಲಹೆ ಪಡೆದೆ, ಅವರು ನೀಡಿದ ಭರವಸೆಯ ಬಳಿಕ ಬಂದೆ. ಭೈರಪ್ಪನವರು ಅಗಲಿ 9 ತಿಂಗಳು ಆಗಿದೆ. ಆದರೆ, ನಮ್ಮ ಚಿತ್ತ ಬಿತ್ತಿಯಲ್ಲಿ ಶಾಶ್ವತವಾಗಿ ನೆಲೆಸಿದವರು. ಅವರ ವಿಚಾರಗಳು ನಮಗೆ ಆಸರೆ, ಕಾದಂಬರಿ ಪಾತ್ರಗಳು ನೆರಳಾಗಿವೆ. ಚಿಂತನೆಗಳು ಆಶ್ರಯ ನೀಡಿವೆ. ಅವರ ಯೋಚನೆ ಇಲ್ಲದೆ ನಮಗೆ ದಿನ ಕಳೆಯಲ್ಲ ಎಂದು ಹೇಳಿದರು.

1996-97ರ ದಿನಗಳಲ್ಲಿ ಭೈರಪ್ಪನವರ ಮನೆಗೆ ಬಂದಿದ್ದೆ. ಪಿ.ವಿ.ಕಾಣೆ ಅವರ ಬಗ್ಗೆ ಕೇಳಿದರು. ಅವರ ನ್ಯಾಯಿಕ ಪ್ರವೇಶ ಕೃತಿ, ಓದಿದ್ದೇನೆ ಎಂದೆ. ಇದಕ್ಕೆ ಖುಷಿಗೊಂಡ ಅವರು, ಕಾಣೆ ಅವರ ಬದುಕಿನ ಒಂದು ಪ್ರಸಂಗ ಹೇಳಿದರು. ಕಾಣೆ ಅವರು ನೆಹರೂ ಅವರಿಗೆ ಬಹಳ ಹತ್ತಿರ ಆಗಿದ್ದರು. ಭಾಷಣ ಬರೆದುಕೊಡುತ್ತಿದ್ದರು ಎಂದು ತಿಳಿಸಿದರು ಎಂದು ಹಳೆಯ ಘಟನಾವಳಿ ಮೆಲುಕು ಹಾಕಿದರು.

ಭೈರಪ್ಪನವರು, ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಕನಿಷ್ಠ ಹತ್ತು ಜನ ಅದನ್ನು ಓದಬೇಕು. ಫ್ಯಾಕ್ಟ್ ಚೆಕ್ ಆಗಬೇಕು ಎಂದು ಸಲಹೆ ನೀಡಿದ್ದರು. ಅವಸರದ ಹಾಗೂ ಅವಸಾನದ ಸಾಹಿತ್ಯ ಎಂಬುದು ಪತ್ರಿಕೆಯಲ್ಲಿ ಇದೆ. ಅದನ್ನು ತೆಗೆದುಬಿಡಿ ಎಂದು ಸೂಚಿಸಿದರು.

ನಂತರ ವಿಜಯಕರ್ನಾಟಕದಲ್ಲಿ ಕ್ವಾಲಿಟಿ ಕಂಟ್ರೋಲ್ ವಿಭಾಗ ತೆರೆದೆ. ಭೈರಪ್ಪನವರು ನನಗೆ ತೋರಿದಷ್ಟು ಪ್ರೀತಿಯನ್ನು ಯಾರೂ ಕೂಡ ನನಗೆ ನೀಡಲಿಲ್ಲ. ಅವರು ಹೇಳಿದ ಹಾಗೆ ಆಗಬೇಕು. ಒಳದಾರಿ, ಶಾರ್ಟ್ ಕಟ್ ಅವರಿಗೆ ಆಗುತ್ತಿರಲಿಲ್ಲ ಎಂದು ಸ್ಮರಿಸಿದರು.

ಭೈರಪ್ಪನವರಿಂದ ಅಂಕಣ ಬರೆಸಲು ಆರಂಭಿಸಿದೆ. ಅವರು ಮಾತನಾಡಲು ಕುಳಿತರೆ ಕಾಡಹರಟೆ ಹೊಡೆಯುತ್ತಿರಲಿಲ್ಲ, ವಸ್ತುನಿಷ್ಟವಾಗಿ ಮಾತನಾಡುತ್ತಿದ್ದರು. ಅಂಕಣ ಪ್ರಾಕಾರ ನನ್ನಿಂದ ಆಗಲ್ಲ, ಕಾದಂಬರಿ ಪ್ರಾಕಾರ ನನ್ನದು ಎಂದರು. ಒಪ್ಪಲಿಲ್ಲ. ನಾನು ಸುಮ್ಮನೆ ಅವರ ಮನೆಯಿಂದ ಬಂದೆ. ಹದಿನೈದು ದಿನಗಳ ನಂತರ ಮತ್ತೆ ಹೋದೆ. ನಂತರ ಒಂಬತ್ತು ತಿಂಗಳು ಕಾಲಂ ಬರೆದರು. ಒತ್ತಾಸೆಯಿಂದ ಕಾಲಂ ಬರೆಸಿದೆ ಎಂದು ನೆನಪಿಸಿಕೊಂಡರು.

ಸಂತೇಶಿವರಕ್ಕೆ ನೀರು: ಅವರಿಗೆ ಸಂತೇಶಿವರಕ್ಕೆ ನೀರು ಒದಗಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿ ಸಿಎಂ ಬೊಮ್ಮಾಯಿ ಭೇಟಿ ಆಯಿತು. ಒಪ್ಪಿಗೆ ಸಿಕ್ಕತು. ಆದರೆ, ನಂತರ ಆರು ತಿಂಗಳಾದರೂ ಯಾವುದೇ ರೀತಿಯ ಕೆಲಸ ಆಗಲಿಲ್ಲ. ಮತ್ತೆ ಸಿಎಂಗೆ ಕರೆ ಮಾಡಿ ಹೇಳಿದೆ, ನಂತರ ಕೆಲಸ ಆಯಿತು. ಅವರ ಊರಿನ ಕೆರೆ ಬಳಿ ಮಕ್ಕಳಂತೆ ಖುಷಿ ಪಟ್ಟರು ಎಂದು ಹೇಳಿದರು.ಪ್ರತಿ ಪುಸ್ತಕದಿಂದ ಒಂದು ಕೋಟಿಗೂ ಹೆಚ್ಚಿನ ಸಂಭಾವನೆ ಬಂದಿದೆ. ಕನ್ನಡದ ಯಾವ ಲೇಖಕರಿಗೂ ಆ ರೀತಿ ಬಂದಿಲ್ಲ.

ಅವರ ನಿಧನದ ನಂತರ ಅವರ ಕೃತಿಗಳ ಮಾರಾಟದಿಂದ ನಾಲ್ಕು ಕೋಟಿ ರು.ಪಾಯಿ ಹಣ ಬಂದಿದೆ. ಫ್ರಾಂಕ್‌ಪರ್ಟ್ ಪುಸ್ತಕ ಮೇಳದಲ್ಲಿ ಭೈರಪ್ಪನವರ ಪುಸ್ತಕ ಸತತ ಏಳು ವರ್ಷಗಳ ಕಾಲ ಮೊದಲ ಸಾಲಿನಲ್ಲಿದೆ. ಅವರ ಸಾಹಿತ್ಯದ ಮೌಲ್ಯ, ದ್ರವ್ಯ ಮಹತ್ತರವಾದುದು. ಅವರನ್ನು ವಿಶ್ವ ಸಾಹಿತ್ಯದ ದೃಷ್ಟಿಯಿಂದ ನಾವು ನೋಡಬೇಕಿದೆ ಎಂದರು.

ವೇದಿಕೆಯಲ್ಲಿದ್ದ ಗಣ್ಯರು ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಕೃತ ವಿದ್ಯಾಲಯದ ಡಾ.ಎಚ್.ಎ. ನಾಗರಾಜರಾವ್, ವಿದ್ಯೋದಯ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್, ಚಿಂತಕ ಪ್ರೊ.ಅಜಕ್ಕಳ ಗಿರೀಶ್ ಭಟ್, ವಿದ್ವಾನ್ ಗ.ನಾ. ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಲ್ಲೂ ಆತ್ಮವಂಚನೆ ಮಾಡಿಕೊಳ್ಳದೆ ಬದುಕಿದರು: ಭೈರಪ್ಪನವರು ಮತ್ತು ಅವರ ರಾಷ್ಟ್ರೀಯತೆ ಕುರಿತು ಮಾತನಾಡಿದ ಚಿಂತಕ ಅಜಕ್ಕಳ ಗಿರೀಶ್ ಭಟ್, 1990ರಿಂದೀಚೆಗೆ ಕನ್ನಡದ ವಿದ್ವತ್ ವಲಯದಲ್ಲಿ ರಾಷ್ಟ್ರೀಯವಾದದ ವಿರುದ್ಧ ಕೆಲವರು ಅಪಪ್ರಚಾರ ಮಾಡಲು ಆರಂಭಿಸಿದರು. ನೆಹರೂ ಸೆಕ್ಯುಲರಿಸಂ ರಾಷ್ಟ್ರೀಯ ವಾದವನ್ನು ಅಪ್ರಜ್ಞಾಪೂರ್ವಕವಾಗಿ ಬಿತ್ತಲು ಪ್ರಾರಂಭಿಸಿದರು.

ನೆಹರೂ ಅವರನ್ನು ವಿಮರ್ಷಿಸಿದ ಭೈರಪ್ಪನವರು, ರಾಷ್ಟ್ರವಾದದವನ್ನು ಎತ್ತಿಹಿಡಿದರು. ಭೈರಪ್ಪ ನವರ ಬದುಕಿನಲ್ಲಿ ರಾಷ್ಟ್ರವಾದ ಇದೆ. ಅವರ ಬರಹ, ವೈಚಾರಿಕತೆ ಚಿಂತನೆಗಳು, ಅಂಕಣಗಳು ಅವರ ರಾಷ್ಟ್ರೀಯತೆಯನ್ನು ನಿರೂಪಿಸುತ್ತವೆ. ಅವರ ಕಾದಂಬರಿಗಳಲ್ಲಿ ನಿರ್ದಿಷ್ಟವಾದ ಭಾರತೀಯ ರಾಷ್ಟ್ರೀಯವಾದದ ನೆಲೆಗಟ್ಟಿನಲ್ಲಿ ರೂಪುಗೊಂಡಿವೆ ಎಂದರು.

ಇತಿಹಾಸದ ಬಗ್ಗೆ ಸುಳ್ಳುಗಳನ್ನು ಹರಡಿದ ಬಗ್ಗೆ ಭೈರಪ್ಪನವರು ಬಯಲು ಮಾಡಿದರು. ವಿಶೇಷ ವಾಗಿ ಟಿಪ್ಪು ಬಗ್ಗೆ ಹೇಳಿದರು. ಇಂತಹ ವಿಷಯದಲ್ಲಿ ಭೈರಪ್ಪನವರು ಪಾಲಿಸಿದ ಕಾರ್ಯವನ್ನು ಜಗತ್ತು ಅನುಸರಿಸಬೇಕಿದೆ ಎಂದ ಅವರು 70 ವರ್ಷಗಳ ಬದುಕಿನಲ್ಲಿ ಅವರು ಆತ್ಮವಂಚನೆ ಮಾಡಿಕೊಳ್ಳಲಿಲ್ಲ ಎಂದು ತಿಳಿಸಿದರು.

ಭೈರಪ್ಪನವರ ವೈಚಾರಿಕತೆ, ಚಿಂತನ-ಮಂಥನ ಕುರಿತು ಮಾತನಾಡಿದ ವಿದ್ವಾನ್ ಗ.ನಾ. ಭಟ್ಟ, ಭೈರಪ್ಪನವರು ಶುದ್ಧ ಸಾಹಿತಿ. ರಸತತ್ವ ಆಧರಿಸಿ ಸಾಹಿತ್ಯ ಕೆಲಸ ಮಾಡಿದರು, ಕೃತಿಗಳನ್ನು ಬರೆದರು. ಭಾರತದ ಆಧ್ಯಾತ್ಮ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲಿ ಬೋಧಿಸಬೇಕು, ದೇವಸ್ಥಾನ ಗಳನ್ನು ಕಟ್ಟಬೇಕು, ವಟುಗಳನ್ನು ಅಲ್ಲಿಗೆ ಕಳಿಸಬೇಕು ಎಂದು ಭೈರಪ್ಪನವರು ಪ್ರತಿಪಾದಿಸಿದರು ಎಂದು ಹೇಳಿದರು.

ಸನಾತನ ಮಠಗಳು ಸಂಕೋಲೆಯಿಂದ ಬಂಧಿತವಾಗಿವೆ ಎಂದ ಭೈರಪ್ಪನವರು, ಗೋಹತ್ಯಾ ನಿಷೇಧ ಕಾಯ್ದೆ ಜಾರಿ ಬಗ್ಗೆ ಅವರ ನಿಲುವು ಸ್ಪಷ್ಟವಾಗಿತ್ತು. ಭೈರಪ್ಪನವರು ಕಾದಂಬರಿಕಾರ ಮಾತ್ರವಲ್ಲದೆ, ಸಾಮಾಜಿಕ ಚಿಂತಕರಾಗಿದ್ದರು ಎಂದರು. ಭೈರಪ್ಪನವರು ಹಾಮಾ ನಾಯಕರು, ಗಂಗೂಬಾಯಿ ಹಾನಗಲ್ ಅವರ ವ್ಯಕ್ತಿ ಚಿತ್ರ ಬರೆದಿದ್ದಾರೆ. ದೊಡ್ಡ ದೊಡ್ಡ ಕಾದಂಬರಿ ಬರೆದಿದ್ದಾರೆ. ಅವರ ಮನಸ್ಸು ಪರಾಮರ್ಶನೀಯ. ಅವರು ದೊಡ್ಡದಾಗಿ ಬಾಳಿದರು, ದಾನ ಮಾಡಿದರು. ಅವರ ಸಂಸ್ಮರಣೆ ಎಲ್ಲರ ಪ್ರೇರಣೆ ಎಂದು ಹೇಳಿದರು.

ಪತ್ರಕರ್ತರು, ವಿದ್ಯಾರ್ಥಿಗಳಿಗೆ ಭೈರಪ್ಪನವರಿಂದ 80 ಲಕ್ಷ ರು. ಸಹಾಯ

ನನ್ನ ಬಳಿ ದುಡ್ಡಿದೆ. ಮಕ್ಕಳಿಗೆ ಎಲ್ಲವನ್ನೂ ಮಾಡಿದ್ದೇನೆ. ಹಾಗಾಗಿ ಅವರಿಗೆ ಬೇಕಿಲ್ಲ, ನನ್ನ ಗಳಿಕೆಯನ್ನು ಬಡ ವಿದ್ಯಾರ್ಥಿಗಳಿಗೆ, ಬಡ ರೋಗಿಗಳಿಗೆ ಕೊಡಬೇಕು ಎಂದರು. 25 ಲಕ್ಷ ರು.ಗಳನ್ನು ಬಡ ವಿದ್ಯಾರ್ಥಿಗಳಿಗೆ ಕೊಡುವ ಕೆಲಸ ಬೇಗ ಆಗಬೇಕು, ಅದನ್ನು ಪಟ್ಟಿ ಮಾಡಿಕೊಡಿ ಎಂದು ಹೇಳಿದರು. ಅವರು ಹೇಳಿದ ಯೋಗ್ಯ ಪತ್ರಕರ್ತರು, ವಿದ್ಯಾರ್ಥಿಗಳಿಗೆ ಸುಮಾರು 80 ಲಕ್ಷ ರುಪಾಯಿ ಕೊಟ್ಟರು. ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ದೇಣಿಗೆಯಾಗಿ ನೀಡಿದ ಕನ್ನಡದ ಮತ್ತೊಬ್ಬ ಲೇಖಕ ಸಿಗುವುದಿಲ್ಲ. ಪ್ರತಾಪ್ ಸಿಂಹ ಕೂಡ ಅವರಿಂದ ದೇಣಿಗೆ ಪಡೆದಿದ್ದಾರೆ. ಇಂತಹವರು ಅರ್ಹರು ಎಂದರೆ ಅವರನ್ನು ಗುರುತಿಸಿ ನೆರವು ನೀಡುತ್ತಿದ್ದರು ಎಂದು ಸ್ಮರಿಸಿದರು. ಅವರ ಸಂದರ್ಶನಕ್ಕೆ ಅವಕಾಶ ಕೇಳಿದಾಗ ವರದಿಗಾರರು ಪುಸ್ತಕ ಓದಿದವರು ಆಗಿರಬೇಕು. ಪ್ರಶ್ನೆ ಪಟ್ಟಿ ಕೊಡಬೇಕು, ಮುದ್ರಣಕ್ಕೆ ಹೋಗುವ ಮುನ್ನ ನಾನು ನೋಡಬೇಕು ಎಂದು ಷರತ್ತು ಹಾಕಿದರು. ಸಂದರ್ಶನ ಆಯಿತು, ಒಂದು ತಿಂಗಳ ನಂತರ ಕರೆಕ್ಷನ್ ಹಾಕಿಕೊಟ್ಟರು. ಭೈರಪ್ಪನವರು ಯಾವುದೇ ರೀತಿಯ ಗಿಮಿಕ್ ಅನ್ನು ಕೊನೆವರೆಗೆ ಮಾಡಲಿಲ್ಲ. ಅಂತಹ ಪ್ರಾಮಾಣಿಕತೆ ಇತ್ತು. ಅವರಲ್ಲಿ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಹೇಳಿದರು.

ನೆನಪಿನ ಶಕ್ತಿ ಅಪಾರ

ಕೊನೆಕ್ಷಣದವರೆಗೆ ತಾನು ನಂಬಿದ ವಿಚಾರ ಬಿಟ್ಟು ಭೈರಪ್ಪನವರು ಏನೂ ಮಾಡಲಿಲ್ಲ. ಅವರ ನೆನಪಿನ ಶಕ್ತಿ ಅಪಾರ. ಅದು ಕೊನೆಯ ದಿನಗಳಲ್ಲಿ ನ್ಯಾಯಾಲಯದಲ್ಲಿ ಸಾಬೀತು ಮಾಡಿದರು. ಅವರ ಆಸ್ತಿ ಹೊಡೆಯಲು ಕೆಲವರು ಹುನ್ನಾರ ಮಾಡಿದರು ಎಂಬ ಆರೋಪ ಎದುರಾಯಿತು. ಆ ಬಗ್ಗೆ ಇರುವ ಪತ್ರವೊಂದನ್ನು ಸಂದರ್ಭ ಬಂದಾಗ ಬಿಡುಗಡೆ ಮಾಡಿದರಾಯಿತು. 94 ವರ್ಷದ ವ್ಯಕ್ತಿ ಎಂಟು ಪುಟಗಳ ಪತ್ರ ಬರೆದಿದ್ದಾರೆ. ಅದರಲ್ಲಿ ಎಲ್ಲೂ ಕೂಡ ರಿಪೀಟ್ ಇಲ್ಲ. ಅಷ್ಟು ಸ್ಫು ಟವಾಗಿ ಬರೆದಿದ್ದಾರೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಹೇಳಿದರು.

image

ನಂಬಿದ ತತ್ವಗಳಿಗೆ ಬದ್ಧರಾದವರು ಭೈರಪ್ಪನವರು. ಅವರು ಕಾದಂಬರಿ ಬರೆಯುವ ವೇಳೆ ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳುತ್ತಿ ದ್ದರು. ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ್ದರು.

-ಡಾ.ಎಚ್.ವಿ.ನಾಗರಾಜರಾವ್, ಸಂಸ್ಕೃತ ವಿದ್ವಾನ್