ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಶಿಕ್ಷಕಿಗೆ ರೇಪ್‌ ಬೆದರಿಕೆ, ದರ್ಶನ್‌ ಅಭಿಮಾನಿಗಳ ಹೆಸರಿನ ಕೇಡಿಗಳ ವಿರುದ್ಧ ದೂರು ದಾಖಲು

ಖದರ್ ಕನ್ನಡಿಗ ಫೇಸ್ಬುಕ್ ಪೇಜ್, ನವೀನ್, ಹರೀಶ್ ನಾಯ್ಕ, ಕೆಂಚ ತೂಗುದೀಪ, ಭೀಮ್ಸ್ ಬೋಸಾಯಮ್, ಮಾಕ್ಸ್ವೆಲ್ ಗೌತಮ್, ರವಿ ದರ್ಶನ್, ಪ್ರವೀನ್ ಶೆಟ್ಟಿ, ಇಡ್ಲಿ ಸೋಮ, ರಮೇಶ್ ನಾಗಪ್ಪ ಹಾಗೂ ಶಿವು ತೂಗುದೀಪ ಹೆಸರಿನ ಫೇಸ್‌ಬುಕ್ ಪೇಜ್‌ಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಶಿಕ್ಷಕಿಗೆ ರೇಪ್‌ ಬೆದರಿಕೆ, ದರ್ಶನ್‌ ಫ್ಯಾನ್‌ಗಳ ವಿರುದ್ಧ ದೂರು

-

ಹರೀಶ್‌ ಕೇರ ಹರೀಶ್‌ ಕೇರ Sep 29, 2025 6:52 AM

ಬೆಂಗಳೂರು : ಶಾಲಾ ಶಿಕ್ಷಕಿಯನ್ನು ಗುರಿಯಾಗಿಸಿ ಫೇಸ್ ಬುಕ್‌ನಲ್ಲಿ ಅಶ್ಲೀಲ ಸಂದೇಶದ ಪೋಸ್ಟ್ ಹಾಕಿ ರೇಪ್ ಬೆದರಿಕೆ (threat) ಒಡ್ಡಿದ ಆರೋಪದಡಿ ನಟ ದರ್ಶನ್ (Actor darshan) ಅಭಿಮಾನಿಗಳು ಎನ್ನಲಾದವರು ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಂಚಶೀಲ ನಗರದ ನಿವಾಸಿ ಅಜಿತ್ ಆನಂದ ಹೆಗಡೆ ಎಂಬವರು ದೂರು ನೀಡಿದ್ದಾರೆ.

ದೂರಿನ ಮೇರೆಗೆ ಖದರ್ ಕನ್ನಡಿಗ ಫೇಸ್ಬುಕ್ ಪೇಜ್, ನವೀನ್, ಹರೀಶ್ ನಾಯ್ಕ, ಕೆಂಚ ತೂಗುದೀಪ, ಭೀಮ್ಸ್ ಬೋಸಾಯಮ್, ಮಾಕ್ಸ್ವೆಲ್ ಗೌತಮ್, ರವಿ ದರ್ಶನ್, ಪ್ರವೀನ್ ಶೆಟ್ಟಿ, ಇಡ್ಲಿ ಸೋಮ, ರಮೇಶ್ ನಾಗಪ್ಪ ಹಾಗೂ ಶಿವು ತೂಗುದೀಪ ಹೆಸರಿನ ಫೇಸ್‌ಬುಕ್ ಪೇಜ್‌ಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.