ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಲ ಸಂಚಯ ಯೋಜನೆಯ 3ನೇ ಹಂತದಲ್ಲಿ ನೆಲಮಂಗಲದ ಐದು ಹಳ್ಳಿಗಳಿಗೆ ನೀರಿನ ಭದ್ರತೆ ಒದಗಿಸಿದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್

ಅಂತರ್ಜಲದ ಮಟ್ಟವನ್ನು ನಿರಂತರವಾಗಿ ಪತ್ತೆಹಚ್ಚಲು ಮತ್ತು ವೈಜ್ಞಾನಿಕವಾಗಿ ನೀರಿನ ನಿರ್ವಹಣೆ ಮಾಡಲು ‘ಪೀಜೋಮೀಟರ್’ ಉಪಕರಣವನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸಹಭಾಗಿತ್ವದೊಂದಿಗೆ ಜಾರಿಗೊಳಿಸಲಾದ ಈ ಯೋಜನೆಯು, ಗ್ರಾಮೀಣ ಭಾಗದ ರೈತರಿಗೆ ಮತ್ತು ಜನಸಾಮಾನ್ಯರಿಗೆ ನೀರಿನ ಸ್ವಾವಲಂಬನೆ ಸಾಧಿಸಲು ದೊಡ್ಡ ಮಟ್ಟದ ನೆರವು ನೀಡಲಿದೆ.

ಐದು ಹಳ್ಳಿಗಳಿಗೆ ನೀರಿನ ಭದ್ರತೆ ಒದಗಿಸಿದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್

-

Ashok Nayak
Ashok Nayak Mar 23, 2026 9:42 PM

ನೆಲಮಂಗಲ: ಹೈನೆಕೆನ್ ಸಮೂಹದ ಅಂಗಸಂಸ್ಥೆಯಾದ ಯುನೈಟೆಡ್ ಬ್ರೀವರೀಸ್ ಲಿಮಿಟೆಡ್ (ಯುಬಿಎಲ್) ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ, ಹಂಚಿಪುರ, ಕೊಡಪ್ಪನಹಳ್ಳಿ, ಬೈರೇಗೌಡನಹಳ್ಳಿ ಮತ್ತು ವರದನಾಯಕನಹಳ್ಳಿ ಎಂಬ ಐದು ಗ್ರಾಮಗಳಲ್ಲಿ ‘ಪ್ರಾಜೆಕ್ಟ್ ಜಲ ಸಂಚಯ’ದ ಮೂರನೇ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಮೂಲಕ ಐದು ಗ್ರಾಮಗಳಿಗೆ ನೀರಿನ ಭದ್ರತೆ ಒದಗಿಸಿದೆ.

ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ‘ಎಸ್ ಎಮ್ ಸೆಹಗಲ್ ಫೌಂಡೇಶನ್’ ಸಹಯೋಗದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಯೋಜನೆಯ ಭಾಗವಾಗಿ ಗ್ರಾಮದ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದ್ದು, ಮಳೆನೀರು ಸಂಗ್ರಹಣಾ ಸಾಮರ್ಥ್ಯ ವನ್ನು ಹೆಚ್ಚಿಸಲಾಗಿದೆ. ವಿಶೇಷವೆಂದರೆ, ಹೂಳೆತ್ತುವ ಸಂದರ್ಭದಲ್ಲಿ ಸಂಗ್ರಹವಾದ ಮಣ್ಣನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಮಣ್ಣಿನ ಫಲವತ್ತತೆ ಹೆಚ್ಚಿಸಲು ಸ್ಥಳೀಯ ರೈತರಿಗೆ ಉಚಿತವಾಗಿ ನೀಡಲಾಗಿದೆ. ಇದು ಕೃಷಿ ಇಳುವರಿ ಹೆಚ್ಚಿಸಲು ಸಹಕಾರಿಯಾಗಲಿದೆ.

ಅಂತರ್ಜಲ ಮಟ್ಟವನ್ನು ವೃದ್ಧಿಸುವ ಉದ್ದೇಶದಿಂದ ಈ ಐದು ಗ್ರಾಮಗಳಲ್ಲಿ ಒಟ್ಟು 30 ಮಳೆನೀರು ಕೊಯ್ಲು ಗುಂಡಿಗಳನ್ನು ನಿರ್ಮಿಸಲಾಗಿದೆ. ಇವು ಮಳೆನೀರು ವ್ಯರ್ಥವಾಗದೆ ಭೂಮಿಯೊಳಗೆ ಇಳಿಯುವಂತೆ ಮಾಡುತ್ತವೆ.

ಇದನ್ನೂ ಓದಿ: Nelamangala News: ನೆಲಮಂಗಲದಲ್ಲಿ ಭೋವಿ ಸಮುದಾಯದ ರೈತರ ಕೆಲಸ ಕಸಿದು 'ವರ್ಕ್ ಆರ್ಡರ್' ರದ್ದು; ಉಗ್ರ ಹೋರಾಟದ ಎಚ್ಚರಿಕೆ

ಅಲ್ಲದೆ, ಅಂತರ್ಜಲದ ಮಟ್ಟವನ್ನು ನಿರಂತರವಾಗಿ ಪತ್ತೆ ಹಚ್ಚಲು ಮತ್ತು ವೈಜ್ಞಾನಿಕ ವಾಗಿ ನೀರಿನ ನಿರ್ವಹಣೆ ಮಾಡಲು ‘ಪೀಜೋಮೀಟರ್’ ಉಪಕರಣವನ್ನು ಅಳವಡಿಸ ಲಾಗಿದೆ. ಸಾರ್ವಜನಿಕ ಸಹಭಾಗಿತ್ವದೊಂದಿಗೆ ಜಾರಿಗೊಳಿಸಲಾದ ಈ ಯೋಜನೆಯು, ಗ್ರಾಮೀಣ ಭಾಗದ ರೈತರಿಗೆ ಮತ್ತು ಜನಸಾಮಾನ್ಯರಿಗೆ ನೀರಿನ ಸ್ವಾವಲಂಬನೆ ಸಾಧಿಸಲು ದೊಡ್ಡ ಮಟ್ಟದ ನೆರವು ನೀಡಲಿದೆ.

ಈ ಕುರಿತು ಯುಬಿಎಲ್ ಸಂಸ್ಥೆಯ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ಗರಿಮಾ ಸಿಂಗ್ ಮಾತನಾಡಿ , "ನಮ್ಮ ವ್ಯವಹಾರ ಮತ್ತು ಸಮಾಜ ಎರಡಕ್ಕೂ ಜಲ ಸಂರಕ್ಷಣೆಯೇ ಜೀವಾಳ. 'ಜಲ ಸಂಚಯ'ದಂತಹ ಯೋಜನೆಗಳ ಮೂಲಕ ಸ್ಥಳೀಯ ಜಲಮೂಲಗಳನ್ನು ಪುನಶ್ಚೇತನಗೊಳಿಸಿ, ಸುಸ್ಥಿರ ನೀರು ನಿರ್ವಹಣೆ ಮಾಡುವ ಕಡೆಗೆ ನಾವು ಒತ್ತು ನೀಡು ತ್ತಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮೂಲಕ ಈ ಪ್ರದೇಶದ ನೀರಿನ ಭದ್ರತೆಯನ್ನು ಹೆಚ್ಚಿಸುವ ಗುರಿ ಇಟ್ಟುಕೊಂಡಿದ್ದೇವೆ" ಎಂದು ಹೇಳಿದರು.

ಎಸ್ ಎಮ್ ಸೆಹಗಲ್ ಫೌಂಡೇಶನ್‌ ನ (ಎಸ್ಎಂಎಸ್ಎಫ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಜಲಿ ಮಖಿಜಾ ಮಾತನಾಡಿ, "ಯಾವುದೇ ಜಲ ಸಂರಕ್ಷಣಾ ಯೋಜನೆಯ ಯಶಸ್ಸಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯವಾಗಿದೆ. ಯುಬಿಎಲ್ ಜೊತೆಗಿನ ಈ ಪಾಲುದಾರಿಕೆಯು ಸ್ಥಳೀಯ ಜಲ ಸಂಪನ್ಮೂಲಗಳನ್ನು ಬಲಪಡಿಸುವುದಲ್ಲದೆ, ಭವಿಷ್ಯ ಕ್ಕಾಗಿ ಈ ಜಲಮೂಲಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಗ್ರಾಮಸ್ಥರಲ್ಲಿ ಮೂಡಿಸಿದೆ" ಎಂದು ಹೇಳಿದರು.

ಜಲಮೂಲಗಳನ್ನು ದೀರ್ಘಕಾಲ ಕಾಪಾಡಿಕೊಳ್ಳಲು 'ಗ್ರಾಮಾಭಿವೃದ್ಧಿ ಸಮಿತಿ'ಯನ್ನು ರಚಿಸಲಾಗಿದೆ. ಈ ಸಮಿತಿಗೆ ಜಲಮೂಲಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಕುರಿತು ವಿಶೇಷ ತರಬೇತಿ ನೀಡಲಾಗಿದ್ದು, ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆ ಇರುವಂತೆ ನೋಡಿ ಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ ನ ಕರ್ನಾಟಕ ವಲಯ ಮುಖ್ಯಸ್ಥ ನಿಕೋಲಾಯ್ ಡೋಬ್ರೆವ್, ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಉಪ ನಿರ್ದೇಶಕಿ ಜಾನಕಿ ಪಿ, ಪ್ರಾಧಿಕಾರದ ಹಿರಿಯ ಭೂವಿಜ್ಞಾನಿ ಪಲ್ಲವಿ ಹಾಜರಿದ್ದರು. ಎಂಟಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಹುಲ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು, ಯುಬಿಎಲ್ ಸಂಸ್ಥೆ ಮತ್ತು ಸಾರ್ವಜನಿಕರ ಜಂಟಿ ಪ್ರಯತ್ನವನ್ನು ಶ್ಲಾಘಿಸಿದರು.