ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶತದಿನೋತ್ಸವಕ್ಕೆ ಕರೆದಿಲ್ಲವೆಂದು ಮಾಧ್ಯಮಗಳೆದುರು ಹೇಳಿದ್ದೇಕೆ? ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್‌ಗೆ ಮಲ್ಲಿಕಾರ್ಜುನ್ ಖರ್ಗೆ ಖಡಕ್ ಪ್ರಶ್ನೆ

ಪಕ್ಷದ ರಾಜ್ಯಾಧ್ಯಕ್ಷರೇ ಸರಕಾರದ ವಿರುದ್ಧ ಹೇಳಿಕೆ ನೀಡಿದರೆ ಪಕ್ಷಕ್ಕೆ ಹಾಗೂ ಸರಕಾರಕ್ಕೆ ಹೊಡೆತ ಬೀಳುತ್ತದೆ. ಇದಿಷ್ಟೇ ಅಲ್ಲದೇ, ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯತೆ ಇಲ್ಲ ಎನ್ನುವ ಸಂದೇಶ ರವಾನೆಯಾದರೆ ಸಂಘಟನೆಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಮುಂದಿನ ದಿನದಲ್ಲಿ ಈ ರೀತಿಯ ಗೊಂದಲಗಳ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷರಿಗೇ ಹೈಕಮಾಂಡ್ ಶಿಸ್ತಿನ ಪಾಠ

-

Profile
Ashok Nayak Sep 18, 2026 9:49 AM

ಬೆಂಗಳೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಶತದಿನದ ಸಂಭ್ರಮದಲ್ಲಿ ನಡೆದ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿಲ್ಲ ಎನ್ನುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ ಸಾದ್ ಬಹಿರಂಗ ಹೇಳಿಕೆಗೆ ಪಕ್ಷದ ಹೈಕಮಾಂಡ್ ಆಕ್ಷೇಪ ವ್ಯಕ್ತಪಡಿಸಿದೆ. ಬುಧವಾರ ದಿನವಿಡೀ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ನಡೆದ ಸಭೆಯ ಬಳಿಕ ನಡೆದ ಸಭೆಯಲ್ಲಿ, ಈ ವಿಷಯವನ್ನು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಸ್ತಾಪಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರೇ ಸರಕಾರದ ವಿರುದ್ಧ ಹೇಳಿಕೆ ನೀಡಿದರೆ ಪಕ್ಷಕ್ಕೆ ಹಾಗೂ ಸರಕಾರಕ್ಕೆ ಹೊಡೆತ ಬೀಳುತ್ತದೆ. ಇದಿಷ್ಟೇ ಅಲ್ಲದೇ, ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯತೆ ಇಲ್ಲ ಎನ್ನುವ ಸಂದೇಶ ರವಾನೆಯಾದರೆ ಸಂಘಟನೆಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಮುಂದಿನ ದಿನದಲ್ಲಿ ಈ ರೀತಿಯ ಗೊಂದಲಗಳ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹರಿಪ್ರಸಾದ್ ಅವರ ನಡೆಗೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೇಸರ ವ್ಯಕ್ತಪಡಿಸಿದ್ದು, ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ ಲಾಭವಾಗುವುದಿಲ್ಲ. ಪ್ರತಿಪಕ್ಷ ಗಳಿಗೆ ಆಹಾರವಾ ಗುತ್ತದೆ. ಸಿಎಂ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಜೋಡೆತ್ತುಗಳಂತೆ ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಆದ್ದರಿಂದ ಮುಂದಿನ ದಿನದಲ್ಲಿ ಈ ರೀತಿಯ ತಪ್ಪನ್ನು ಮರುಕಳಿಸಬೇಡಿ ಎನ್ನುವ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mallikarjuna Kharge: ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’: ಮುನೀಂದ್ರ ಆಕ್ರೋಶ

ಸಮಸ್ಯೆಯಿದ್ದರೆ ನೀವೇ ಬಗೆಹರಿಸಿಕೊಳ್ಳಿ: ಕೆಪಿಸಿಸಿ ಅಧ್ಯಕ್ಷರೇ ತಮ್ಮ ಪಕ್ಷದ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದು ಬಹಿರಂಗವಾಗಿ ಹೇಳುವುದರಿಂದ ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗುತ್ತದೆ. ಈ ರೀತಿಯ ಗೊಂದಲಗಳಿದ್ದರೆ, ಅದನ್ನು ನೇರವಾಗಿ ಮುಖ್ಯಮಂತ್ರಿ ಅಥವಾ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ. ನಿಮಗೆ ಈ ವಿಷಯದಲ್ಲಿ ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಮಾಧ್ಯಮಗಳ ಮುಂದೆ ಈ ವಿಷಯದ ಬಗ್ಗೆ ಚರ್ಚಿಸುವುದು ಪಕ್ಷಕ್ಕೆ ಹೊಡೆತವಾಗುತ್ತದೆ. ಆದ್ದರಿಂದ ಅದನ್ನು ನೇರವಾಗಿ ಸಂಬಂಧಿಸಿ ದವರೊಂದಿಗೆ ಚರ್ಚಿಸಿ, ಒಂದು ವೇಳೆ ಅಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದರೆ ರಾಜ್ಯ ಉಸ್ತುವಾರಿ, ಅಥವಾ ನನ್ನ ಬಳಿಗೆ ಬನ್ನಿ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿದ್ದಾರೆ ಎನ್ನಲಾಗಿದೆ.

ಸಚಿವರ ವಿರುದ್ದವೂ ದೂರು

ಇನ್ನು ವೇಣುಗೋಪಾಲ್ ಹಾಗೂ ರಣ ದೀಪ್ ಸುರ್ಜೇವಾಲ ಅವರೇ ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬರ ನಿರ್ವಹಣೆ ವಿಚಾರದಲ್ಲಿ ಹಣಕಾಸು ಸೌಲಭ್ಯ ಒದಗಿಸುವ ಬದಲಾಗಿ ಬೇರೆ ಬೇರೆ ಯೋಜನೆಗಳತ್ತ ಗಮನಹರಿಸುವುದು ಅನಪೇಕ್ಷಣಿಯ. ಬರ ಪರಿಸ್ಥಿತಿಯಂತಹ ಸೂಕ್ಷ್ಮ ಸಂದರ್ಭದಲ್ಲಿ ಸರಕಾರ ಸಮರೋ ಪಾದಿಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಕೆಲ ಸಚಿವರು ಕಾರ್ಯನಿರ್ವಹಣೆಯನ್ನು ಆರಂಭಿಸಿಲ್ಲ. ಇನ್ನೂ ಕೆಲವರು ತಮ್ಮ ಕ್ಷೇತ್ರಕ್ಕೆ ಸೀಮಿತ ವಾಗಿzರೆ ಎಂದು ಶಾಸಕರು ಆರೋಪಿಸಿದ್ದಾರೆ ಎಂದು ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ನೀತಿಪಾಠಗಳೇನು?

ಪಕ್ಷದ ರಾಜ್ಯಾಧ್ಯಕ್ಷರೆ ಸಿಎಂ ವಿರುದ್ಧ ಹೇಳಿಕೆ ನೀಡಿದರೆ ಪಕ್ಷಕ್ಕೆ ಸಮಸ್ಯೆ

ಏನೇ ಸಮಸ್ಯೆ ಇದ್ದರೂ 4 ಗೋಡೆಗಳ ನಡುವೆ ಬಗೆಹರಿಸಿಕೊಳ್ಳಲು ತಾಕೀತು

ಅಲ್ಲಿ ಬಗೆಹರಿಯದಿದ್ದರೆ ರಾಜ್ಯ ಉಸ್ತುವಾರಿ ಅಥವಾ ನನ್ನ ಬಳಿಗೆ ಬನ್ನಿ: ಖರ್ಗೆ

ನೀವೇ ಸರ್ಕಾರದ ವಿರುದ್ಧ ಮಾತನಾಡಿದರೆ ತಪ್ಪುಸಂದೇಶ, ಪ್ರತಿಪಕ್ಷಗಳಿಗೆ ಆಹಾರ