Ration Card e-KYC: ಪಡಿತರ ಚೀಟಿ ಇ-ಕೆವೈಸಿ: ಅ.20ರವರೆಗೆ ವಿಸ್ತರಣೆ
ಹಗಲು ವೇಳೆಯಲ್ಲಿ ಕೂಲಿ-ನಾಲಿ ಮಾಡುವ ಶ್ರಮಿಕರು ಪಡಿತರ ಪಡೆಯಲು ಇಡೀ ದಿನದ ದುಡಿಮೆ ಕಳೆದುಕೊಳ್ಳುವುದನ್ನು ಸರಕಾರ ಸಹಿಸುವುದಿಲ್ಲ. ಪಡಿತರದಾರರ ಅನುಕೂಲಕ್ಕೆ ತಕ್ಕಂತೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲೇಬೇಕಿದೆ. ಬರುವ ಅ.1ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ತೆರೆಯಲು ಆದೇಶಿಸಲಾಗಿದೆ.
-
ನ್ಯಾಯಬೆಲೆ ಅಂಗಡಿಗಳ ಸಮಯವೂ ಬದಲಾವಣೆ ಬೆ.7ರಿಂದ 12, ಸಂಜೆ 4ರಿಂದ 8 ತೆರೆಯುವುದು ಕಡ್ಡಾಯ
ಬೆಂಗಳೂರು: ಪಡಿತರ ಚೀಟಿ ಇ-ಕೆವೈಸಿ(Ration Card KYC) ಗಡು ವನ್ನು ಅ.20ರವರೆಗೆ ವಿಸ್ತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಆದೇಶಿಸಿದ್ದಾರೆ. ಸರ್ವರ್ ಸಹಕರಿಸುತ್ತಿಲ್ಲವಾದ್ದರಿಂದ ಇ-ಕೆವೈಸಿ ಆಗುತ್ತಿಲ್ಲ ಎಂದು ರಾಜ್ಯಾದ್ಯಂತ ಆಕ್ಷೇಪಗಳು ಕೇಳಿಬಂದಿದ್ದವು. ರಾಜ್ಯದ ಬಡವರು, ಕೂಲಿ ಕಾರ್ಮಿಕರು ಹಾಗೂ ಜನಸಾ ಮಾನ್ಯರ ಆಹಾರ ಭದ್ರತೆಯ ಹಕ್ಕನ್ನು ಖಾತರಿಪ ಡಿಸಲು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ನ್ಯಾಯಬೆಲೆ ಅಂಗಡಿಗಳ ಅವಧಿ ಪರಿಷ್ಕರಣೆಗೆ ಹಾಗೂ ಇ-ಕೆವೈಸಿ ಗಡುವನ್ನು ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ration Card e-KYC: ಪಡಿತರದಾರರಿಗೆ ಗುಡ್‌ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಮಾಡಲು ವಾರದೊಳಗೆ ಮೊಬೈಲ್ ಆ್ಯಪ್ ಬಿಡುಗಡೆ
ಈ ಬಗ್ಗೆ ಮಾತನಾಡಿರುವ ಅವರು, ಹಗಲು ವೇಳೆಯಲ್ಲಿ ಕೂಲಿ-ನಾಲಿ ಮಾಡುವ ಶ್ರಮಿಕರು ಪಡಿತರ ಪಡೆಯಲು ಇಡೀ ದಿನದ ದುಡಿಮೆ ಕಳೆದುಕೊಳ್ಳುವುದನ್ನು ಸರಕಾರ ಸಹಿಸುವುದಿಲ್ಲ. ಪಡಿತರದಾರರ ಅನುಕೂಲಕ್ಕೆ ತಕ್ಕಂತೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲೇಬೇಕಿದೆ. ಬರುವ ಅ.1ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ತೆರೆಯಲು ಆದೇಶಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಅಂಗಡಿ ತೆರೆಯದೆ ಸಾರ್ವಜನಿಕ ರಿಗೆ ತೊಂದರೆ ಕೊಡುವ ನ್ಯಾಯಬೆಲೆ ಅಂಗಡಿ ಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು ಎಂದೂ ಎಚ್ಚರಿಸಿದ್ದಾರೆ.
ಕಠಿಣ ಕ್ರಮದ ಎಚ್ಚರಿಕೆ: ಅ.1ರಿಂದ ಕಡ್ಡಾಯ ಸಮಯ ಜಾರಿ. ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಂಜೆ 4 ಗಂಟೆ ಯಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲು ಆದೇಶಿಸಲಾಗಿದೆ. ಇದನ್ನು ಮೀರುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.