ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World Meditation Day 2025: ಡಿ.21ಕ್ಕೆ ಆಧ್ಯಾತ್ಮಿಕ ನಾಯಕ ದಾಜಿ ಮಾರ್ಗದರ್ಶನದಲ್ಲಿ ʻವಿಶ್ವ ಧ್ಯಾನ ದಿನ 2025ʼ

ಹಾರ್ಟ್‌ಫುಲ್‌ನೆಸ್‌ನ ಜಾಗತಿಕ ಮಾರ್ಗದರ್ಶಿ ಮತ್ತು ಶ್ರೀ ರಾಮಚಂದ್ರ ಮಿಷನ್‌ನ ಅಧ್ಯಕ್ಷ ಪೂಜ್ಯ ದಾಜಿ (ಕಮಲೇಶ್ ಡಿ. ಪಟೇಲ್) ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದು ಹಾರ್ಟ್‌ಫುಲ್‌ನೆಸ್‌ನ ವಿಶ್ವ ಪ್ರಧಾನ ಕಚೇರಿಯಾದ ಹೈದರಾಬಾದ್‌ನ ಕಾನ್ಹಾ ಶಾಂತಿ ವನಂನಿಂದ ಯೂಟ್ಯೂಬ್‌ ಲೈವ್‌ನಲ್ಲಿ ಪ್ರಸಾರವಾಗಲಿದೆ.

ಡಿ.21ಕ್ಕೆ ದಾಜಿ ಮಾರ್ಗದರ್ಶನದಲ್ಲಿ ʻವಿಶ್ವ ಧ್ಯಾನ ದಿನ 2025ʼ

ಆಧ್ಯಾತ್ಮಿಕ ನಾಯಕ ದಾಜಿ. -

Prabhakara R
Prabhakara R Dec 19, 2025 6:50 PM

ಹೈದರಾಬಾದ್: ಹಾರ್ಟ್‌ಫುಲ್‌ನೆಸ್ ಇನ್‌ಸ್ಟಿಟ್ಯೂಟ್ (Heartfulness) ವತಿಯಿಂದ ಡಿಸೆಂಬರ್ 21 ರಂದು ʻವಿಶ್ವ ಧ್ಯಾನ ದಿನ 2025ʼ (World Meditation Day 2025) ಹಮ್ಮಿಕೊಳ್ಳಲಾಗಿದೆ. ಇದು ಜಗತ್ತಿನಾದ್ಯಂತ ಎಲ್ಲ ಜನರಿಗೆ ಧ್ಯಾನ, ಆಂತರಿಕ ಸ್ಥಿರತೆ ಮತ್ತು ಸಾಮೂಹಿಕ ಸಾಮರಸ್ಯದ ಪಾಲುದಾರಿಕೆಯ ಅನುಭವದಲ್ಲಿ ಜತೆಗೂಡಲು ಆಹ್ವಾನಿಸುವ ಜಾಗತಿಕ ಉಪಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಹಾರ್ಟ್‌ಫುಲ್‌ನೆಸ್‌ನ ಜಾಗತಿಕ ಮಾರ್ಗದರ್ಶಿ ಮತ್ತು ಶ್ರೀ ರಾಮಚಂದ್ರ ಮಿಷನ್‌ನ ಅಧ್ಯಕ್ಷ ಪೂಜ್ಯ ದಾಜಿ (ಕಮಲೇಶ್ ಡಿ. ಪಟೇಲ್) ಅವರ ಮಾರ್ಗದರ್ಶನದಲ್ಲಿ ಉಚಿತವಾಗಿ, ನೇರಪ್ರಸಾರದ ಆನ್‌ಲೈನ್ ಧ್ಯಾನ ಅಧಿವೇಶನವಾಗಿ ನಡೆಸಲಾಗುತ್ತದೆ.

ವಿಶ್ವ ಧ್ಯಾನ ದಿನ 2025 ಅನ್ನು ಶಾಂತಿ ಮತ್ತು ಅವಲೋಕನದ ಏಕೀಕೃತ ಕ್ಷಣವನ್ನು ಸೃಷ್ಟಿಸಲು ಪ್ರಾದೇಶಿಕತೆ, ಸಂಸ್ಕೃತಿ ಮತ್ತು ನಂಬಿಕೆಯ ವ್ಯವಸ್ಥೆಗಳನ್ನು ಮೀರುವಂತೆ ವಿನ್ಯಾಸಗೊಳಿಸಲಾಗಿದೆ. ಈ ಜಾಗತಿಕ ನೇರಪ್ರಸಾರವು ಹಾರ್ಟ್‌ಫುಲ್‌ನೆಸ್‌ನ ವಿಶ್ವ ಪ್ರಧಾನ ಕಚೇರಿಯಾದ ಹೈದರಾಬಾದ್‌ನ ಕಾನ್ಹಾ ಶಾಂತಿ ವನಂನಿಂದ ಯೂಟ್ಯೂಬ್‌ ಲೈವ್‌ನಲ್ಲಿ ಪ್ರಸಾರವಾಗಲಿದೆ. 45 ನಿಮಿಷಗಳ ಈ ಅಧಿವೇಶನವು ಸಂಕ್ಷಿಪ್ತ ಪರಿಚಯ, ಮಾರ್ಗದರ್ಶೀ ವಿಶ್ರಾಂತಿ ವಿಧಾನ, ಯೌಗಿಕ ಪ್ರಾಣಾಹುತಿ ಬೆಂಬಲಿತ ಹಾರ್ಟ್‌ಫುಲ್‌ನೆಸ್ ಧ್ಯಾನ ಮತ್ತು ಸಾಮೂಹಿಕ ಮೌನದ ಅವಧಿಗಳನ್ನು ಒಳಗೊಂಡಿರುತ್ತದೆ.

ಕಾರ್ಯಕ್ರಮವು ಆರಂಭಿಗರು ಮತ್ತು ಅನುಭವಿ ಧ್ಯಾನಾಸಕ್ತರನ್ನೂ ಸೇರಿದಂತೆ, ಎಲ್ಲರಿಗೂ ಲಭ್ಯವಿದೆ. ಹಾರ್ಟ್‌ಫುಲ್‌ನೆಸ್ ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್‌ಗಳು, ಸಮುದಾಯ ಗುಂಪುಗಳು ಮತ್ತು ವಿಶ್ವದಾದ್ಯಂತದ ಪಾಲುದಾರ ಸಂಸ್ಥೆಗಳಿಗೆ ಈ ಉಪಕ್ರಮವನ್ನು ಬೆಂಬಲಿಸಲು, ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಅಧಿಕೃತ ಕಾರ್ಯಕ್ರಮದ ಸಾಮಗ್ರಿಗಳನ್ನು ತಮ್ಮ ಸಂಪರ್ಕಜಾಲಗಳ ಮೂಲಕ ಹಂಚಿಕೊಳ್ಳಲು ಆಹ್ವಾನಿಸಿದೆ. ಇದನ್ನು ಸುಗಮಗೊಳಿಸಲು, ಹಾರ್ಟ್‌ಫುಲ್‌ನೆಸ್ ಸಿದ್ಧಪಡಿಸಿದ ಡಿಜಿಟಲ್ ಕ್ರಿಯೇಟಿವ್‌ಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು, ಕ್ಯೂಆರ್-ಕೋಡ್ ಸಾಧನಗಳು ಮತ್ತು ಮಾದರಿ ಸಂದೇಶಗಳನ್ನು ಒದಗಿಸುತ್ತಿದೆ, ಈ ಮೂಲಕ ಎಲ್ಲ ವೇದಿಕೆಗಳಲ್ಲಿ ನಿರಂತರ ಮತ್ತು ಅಧಿಕೃತ ಪ್ರಚಾರವನ್ನು ಖಚಿತಪಡಿಸುತ್ತಿದೆ. ಇವೆಲ್ಲವೂ ಕೆಳಗಿನ ಲಿಂಕ್‌ನಲ್ಲಿ ಲಭ್ಯ: hfn.link/21decCreatives

ಜಾಗತಿಕ ನೇರಪ್ರಸಾರದ ಎಲ್ಲಾ ತಾಂತ್ರಿಕ ಮತ್ತು ಕಾರ್ಯನಿರ್ವಾಹಕ ಅಂಶಗಳನ್ನು ಹಾರ್ಟ್‌ಫುಲ್‌ನೆಸ್ ನಿರ್ವಹಿಸುತ್ತದೆ. ಸಭೆಯ ನಂತರ ನೋಂದಾಯಿಸಿ ವಿವರ ಸಲ್ಲಿಸಿದ ಭಾಗವಹಿಸಿದವರಿಗೆ ಪೂಜ್ಯ ದಾಜಿ ಅವರಿಂದ ಸಹಿ ಮಾಡಿದ ಡಿಜಿಟಲ್ ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುತ್ತದೆ.

ಕಾರ್ಯಕ್ರಮದ ತರುವಾಯ, ಭಾಗವಹಿಸುವವರಿಗೆ ಚಿತ್ರಿತ ಅಧಿವೇಶನಗಳು, ಉಚಿತ ಆನ್‌ಲೈನ್ ಧ್ಯಾನ ಸಂಪನ್ಮೂಲಗಳು, ಸ್ಥಳೀಯ ಹಾರ್ಟ್‌ಫುಲ್‌ನೆಸ್ ಕೇಂದ್ರಗಳು ಮತ್ತು ಹಾರ್ಟ್‌ಫುಲ್‌ನೆಸ್ ಅಪ್ಲಿಕೇಶನ್ ಮೂಲಕ ಮಾರ್ಗದರ್ಶಿತ ಅಭ್ಯಾಸಗಳಿಗೂ ಪ್ರವೇಶವಿರುತ್ತದೆ. ವಿಶ್ವ ಧ್ಯಾನ ದಿನ 2025 ಜಾಗತಿಕ ಯೋಗಕ್ಷೇಮ ಮತ್ತು ಆಂತರಿಕ ಪರಿವರ್ತನೆಗಾಗಿ ಹಾರ್ಟ್‌ಫುಲ್‌ನೆಸ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜತೆಗೆ ಧ್ಯಾನ ಮಾಡುವುದರಿಂದ, ವೈಯಕ್ತಿಕವಾಗಿ ಲಕ್ಷಾಂತರ ಜನರು ಸಂಪೂರ್ಣ ವಿಶ್ವದ ಶಾಂತಿ, ಸಹಾನುಭೂತಿ ಮತ್ತು ಐಕ್ಯತೆಗಾಗಿ ಪ್ರಬಲ ಸಾಮೂಹಿಕ ಸಂಕಲ್ಪದೊಂದಿಗೆ ಕೊಡುಗೆ ನೀಡಬಹುದು.

Meditation: ಒತ್ತಡದ ಮನಸ್ಸಿಗೆ ಬೇಕು ಧ್ಯಾನವೆಂಬ ದಿವ್ಯ ಮದ್ದು

ಕಾರ್ಯಕ್ರಮದ ವಿವರ:

ಕಾರ್ಯಕ್ರಮದ ದಿನಾಂಕ: 21 ಡಿಸೆಂಬರ್‌ 2025
ವಿನ್ಯಾಸ: ಜಾಗತಿಕ ನೇರಪ್ರಸಾರದ ಧ್ಯಾನ
(ಯೂಟ್ಯೂಬ್‌) ಭಾಗವಹಿಸುವಿಕೆ: ಉಚಿತ ಮತ್ತು ಎಲ್ಲರಿಗೂ ಮುಕ್ತ
ನೋಂದಣಿ: https://hfn.link/meditation
ನೇರಪ್ರಸಾರದ ಲಿಂಕ್‌ : https://www.youtube.com/c/heartfulness/live